2ವಿದೇಶಿ ತಳಿ ರಾಂಬುಲೆಟ್ ಹಾಗು ಡಾರ್ಪರ್ 2ತಿಂಗಳಲ್ಲಿ 25ಕೆಜಿ ಬರುತ್ತೆ ಈ ತಳಿ ಕುರಿಗಳಿಂದ ತಿಂಗಳಿಗೆ 5 ಲಕ್ಷದವರೆಗೂ ಸಂಪಾದನೆ ಮಾಡುತ್ತಿರೋ ರೈತ…

22

ನಮಸ್ಕಾರ ಸ್ನೇಹಿತರೆ ಇವರ ಹೆಸರು ರೇಣುಕಪ್ಪ ಎಂದು ಇವರು ಮೇಕೆ ಸಾಕಾಣಿಕೆ ಮಾಡುವ ಮೂಲಕ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಾ ಇದ್ದಾರೆ ಹೌದು ಇವರು ನಾಟಿ ಕುರಿಗಳ ನ ಸಾಕುವುದಕ್ಕಿಂತ ವಿದೇಶಿ ಮೇಕೆ ಸಾಕಾಣಿಕೆ ಮಾಡುವ ಮೂಲಕ ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡುವ ಮೂಲಕ ಹಲವರಿಗೆ ಮಾದರಿ ಆಗಿದ್ದಾರೆ ಹಾಗಾದರೆ ಬನ್ನಿ ಇವರು ಮೇಕೆ ಸಾಕಾಣಿಕೆ ಶುರು ಮಾಡುವುದಕ್ಕೆ ಕಾರಣವೇನು ಮತ್ತು ಹೇಗೆ ಮೇಕೆ ಸಾಕಾಣಿಕೆ ಮಾಡುತ್ತ ಹೆಚ್ಚು ಆದಾಯ ಗಳಿಸುತ್ತಾ ಇದ್ದರೆ ಇದನೆಲ್ಲ ತಿಳಿಯೋಣ ಬನ್ನಿ ಈ ಮಾಹಿತಿಯಲ್ಲಿ ಹಾಗೂ ನಿಮಗೂ ಸಹ ಮೇಕೆ ಸಾಕಣಿಕೆ ಮಾಡಬೇಕು ಅಂತ ಇದ್ದಲ್ಲಿ ಖಂಡಿತವಾಗಿಯೂ ಮೇಕೆ ಸಾಕಾಣಿಕೆ ಮಾಡುವುದರಿಂದ ಲಾಭ ಇದೆಯೋ ಇಲ್ಲವೋ ಇದನ್ನೆಲ್ಲ ಹೇಳ್ತವೆ ಬನ್ನಿ ಇಂದಿನ ಲೇಖನದಲ್ಲಿ ಹಾಗೆ ಮೇಕೆ ಸಾಕಾಣಿಕೆ ಮಾಡಬೇಕೆಂದರೆ ಏನೆಲ್ಲಾ ನಿಮಗೆ ಅವಶ್ಯಕತೆ ಇರುತ್ತದೆ ಇದನ್ನು ಸಹ ತಿಳಿಯೋಣ ಇಂದಿನ ಮಾಹಿತಿಯಲ್ಲಿ.

ಯಾವುದೇ ಬ್ಯುಸಿನೆಸ್ ಶುರು ಮಾಡಬೇಕು ಅಂದರೂ ಅದಕ್ಕೆ ಪ್ಲಾನ್ ಇಲ್ಲದೆ ಖಂಡಿತವಾಗಿಯೂ ಅದರಲ್ಲಿ ನಾವು ಯಶಸ್ಸು ಕಾಣಲು ಸಾಧ್ಯವಿಲ್ಲ ಅದೇ ರೀತಿ ರೇಣುಕಪ್ಪ ಅವರು ಸಹ ಮೊದಲು ಹಸು ಗಳನ್ನ ಕಟ್ಟಿಹಾಕುತ್ತಾ ಇದ್ದ ಜಾಗವಾಗಿರುವ ಕೊಟ್ಟಿಗೆಯಲ್ಲಿ ಮೇಕೆಗಳನ್ನು ತಂದು ಬಿಟ್ಟಿದ್ದರಂತೆ ಆದರೆ ಈ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕಟ್ಟುವುದರಿಂದ ಹೆಚ್ಚು ಗಲೀಜು ಆಗುತ್ತಾ ಇತ್ತು ಎಂಬ ಕಾರಣಕ್ಕಾಗಿ ಸ್ವಚ್ಚತೆ ಕಾಪಾಡಿದರೆ ಮೇಕೆಗಳ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಆಲೋಚನೆ ಮಾಡಿ ತಾವೇ ಸ್ವತಃ ತಮ್ಮ ಬಳಿ ಇದ್ದ ಮರದಿಂದ ಆ ಮರಗಳ ಕಟ್ಟಿಗೆಯನ್ನು ಬಳಸಿ ತಯಾರು ಮಾಡುತ್ತಾರೆ. ಈ ರೀತಿ ತಯಾರಿ ಮಾಡಿದ ಬಳಿಕ ಆ ಅಟ್ಟದ ಮೇಲೆ ಮೇಕೆಗಳನ್ನ ಬಿಡುತ್ತಾರೆ ನಂತರ ಆ ಮೇಕೆಗಳ ಗಲೀಜು ಕೆಳಗೆ ಬರುತ್ತದೆ ಮತ್ತು ಆ ಮೇಕೆಗಳು ಇರುವ ಜಾಗ ಬಹಳ ಸ್ವಚ್ಚವಾಗಿ ಇರುತ್ತದೆ ಎಂದು ಆಲೋಚನೆ ಮಾಡಿದ ಇವರು ಇನ್ನಷ್ಟು ದೊಡ್ಡದಾದ ಮೇಕೆಗಾಗಿ ಜಾಗವನ್ನ ನಿರ್ಮಾಣ ಮಾಡ್ತಾರೆ ಹಾಗೆ ಮೊದಮೊದಲು ಕೇವಲ 10ಮೇಕೆಗಳಿಂದ ತಮ್ಮ ಬಿಸಿನೆಸ್ ಶುರು ಮಾಡಿದ ಇವರು ಯಾವುದೇ ಕಾರಣಕ್ಕೂ ನಾವು ಕಟಾವು ಮಾಡುವವರಿಗೆ ಅಂದರೆ ಮೇಕೆಗಳನ್ನ ಕಡಿದು ಮಾಂಸವನ್ನು ಮಾರುವವರಿಗೆ ಮೇಕೆಗಳನ್ನ ಮಾರುವುದಿಲ್ಲ ನಾವು ಸಾಕುವವರಿಗೆ ಈ ಮೇಕೆ ಅನ್ನೋ ಮಾರುತ್ತೇವೆ ಎಂದು ಹೇಳಿಕೊಂಡಿದ್ದಾರೆ ರೇಣುಕಪ್ಪ ರವರು.

ವಿದೇಶಿ ತಳಿ ಆಗಿರುವ ಕಾರಣ ಸುಮಾರು 90ಕೆಜಿಯ ವರೆಗೂ ಕುರಿಗಳ ತೂಕ ಬರುತ್ತದೆ ಹಾಗೂ ವಿದೇಶಿ ತಳಿ ಆಗಿರುವ ಕಾರಣ ಹದಿನಾಲ್ಕು ತಿಂಗಳಿನಲ್ಲಿಯೇ ಇದು ಮರಿಮಾಡುವ ಕಾರಣ ಹೆಚ್ಚು ಕುರಿಗಳನ್ನು ಮತ್ತು ಮೇಕೆಗಳನ್ನು ಕೂಡ ಮಾಡಬಹುದು ಹಾಗೆ ಈ ಕುರಿಗಳನ್ನು ಮಾರಾಟ ಮಾಡುವುದರಿಂದ ಹೆಚ್ಚು ಲಾಭವನ್ನು ಗಳಿಸಬಹುದು ನಮ್ಮಲ್ಲಿ ಕೇವಲ 1ನಾಟಿ ಗುರಿ ಇದೆ ಆದರೆ ಉಳಿದ ಗುರಿಯಲ್ಲ ನಮ್ಮ ಬಳಿ ಇರುವುದು ವಿದೇಶಿ ತಳಿ ಅಂತಾನೆ ಹೇಳಿಕೊಂಡಿರುವ ಇವರು ಡಾಂಬರ್ ಎಂಬ ವಿದೇಶಿ ತಳಿಯ ಜೊತೆಗೆ ಇನ್ನೂ ಬೇರೆ ಬೇರೆಯ ವಿದೇಶಿ ತಳಿಯ ಮೇಕೆಗಳನ್ನು ಸಾಕಣೆ ಮಾಡುತ್ತ ಇದ್ದಾರೆ.

ರೇಣುಕಪ್ಪ ಅವರು ಕುರಿಗಳಿಗೆ ಆರೋಗ್ಯ ಕೆಟ್ಟಾಗ ಯಾವುದೇ ತರಹದ ವ್ಯಾಕ್ಸಿನ್ ಇವರೇ ಸ್ವತಃ ಮನೆಯಲ್ಲಿಯೇ ಮಾಡಿದಂತಹ ಔಷಧಿಯನ್ನು ಕುರಿಗಳಿಗೆ ನೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ನಾಟಿ ಕುರಿ ಆದರೆ ಇದನ್ನು ಆಚೆ ಹೋಗಿ ಜಮೀನಿನಲ್ಲಿ ಅಥವಾ ಕಾಡುಗಳಲ್ಲಿ ಮೇಯಿಸಿಕೊಂಡು ಬರಬೇಕು ಆದರೆ ವಿದೇಶಿ ತಳಿ ಕುರಿಗಳ ಆದರೆ ಮನೆಯಲ್ಲಿಯೇ ಮಾಡಿದ ತಿಂಡಿಗಳನ್ನು ಸಹ ಹಾಕಿದರೆ ಅವುಗಳು ತಿನ್ನುತ್ತದೆ ಮತ್ತು ಫುಡ್ ಹಾಗೂ ಹುಲ್ಲನ್ನು ಹಾಕಿದರೆ ಈ ಕುರಿಗಳು ಮೇಕೆಗಳು ಚೆನ್ನಾಗಿ ಬೆಳೆಯುತ್ತದೆ ಮತ್ತು ಒಳ್ಳೆಯ ತೂಕ ಕೂಡ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ ರೇಣುಕಪ್ಪ ನವರು. ಒಟ್ಟಾರೆಯಾಗಿ ಹೇಳಬೇಕೆಂದರೆ ಯಾವ ಕೆಲಸಗಾರರ ಸಹಾಯವಿಲ್ಲದೆ ಈ ಮೇಕೆ ಸಾಕಾಣಿಕೆ ಮಾಡಬಹುದು ಎಂದು ರೇಣುಕಪ್ಪ ರವರು ಹೇಳ್ತಾರೆ ಅದೇ ರೀತಿ ಇಂದಿನ ಯುವಕರು ಆಚೆ ಹೋಗಿ ಆದಾಯ ಇಲ್ಲದಿರುವ ಕೆಲಸ ಮಾಡುವುದಕ್ಕಿಂತ ಇರಿಟಿ ಮೇಕೆ ಸಾಕಾಣಿಕೆ ಮಾಡಿ ಹೆಚ್ಚು ಲಾಭ ಗಳಿಸುವುದು ಉತ್ತಮ ಎಂದು ಹೇಳಬಹುದು…

LEAVE A REPLY

Please enter your comment!
Please enter your name here