ರಿಯಲ್ ಸ್ಟಾರ್ ಉಪೇಂದ್ರ ಹಾಗು ಪ್ರಿಯಾಂಕಾ ನಡುವಿನ ನಿಜವಾದ ವಯಸ್ಸಿನ ಅಂತರ ಎಷ್ಟು ಗೊತ್ತಾ…ಒಂದು ಬಾರಿ ನೋಡಿ …

136

ಇವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು, ಮಂಜುನಾಥ್ ರಾವ್ ಮತ್ತು ಅನಸೂಯ ದಂಪತಿಗಳಿಗೆ ಜನಿಸಿದ ಇವರು ಸೆಪ್ಟೆಂಬರ್ 18 1968ರಲ್ಲಿ ಕುಂದಾಪುರದ ಸಮೀಪದ ಕೋಟೇಶ್ವರದಲ್ಲಿ ಜನಿಸಿದ ಇವರಿಗೆ ಸುಧೀಂದ್ರ ಎಂಬ ಸಹೋದರನಿದ್ದಾರೆ. ಹೌದು ಸ್ನೇಹಿತರೆ ಇವರು ಇಂದು ವಿಶ್ವದ ಟಾಪ್ ಇಪ್ಪತ್ತು ನಿರ್ದೇಶಕರುಗಳಲ್ಲಿ ಸ್ಥಾನ ಪಡೆದುಕೊಂಡಿರುವವರು ಇವರು ನಮ್ಮ ಕನ್ನಡಿಗರು ಅಂತ ಹೇಳಿಕೊಳ್ಳುವುದಕ್ಕೆ ನಮ್ಮ ಹೆಮ್ಮೆಯಾಗುತ್ತದೆ. ಇವರು ಕೇವಲ ನಿರ್ದೇಶಕ ಮಾತ್ರವಲ್ಲ ನಮ್ಮ ಕನ್ನಡ ಸಿನಿಮಾರಂಗದ ಹೆಮ್ಮೆಯ ನಟ ಕೂಡ ಹೌದು. ಹವ್ಯಾಸ ನಟ ಕಮ್ ನಿರ್ದೇಶಕ ಅನ್ನುತ್ತಿದ್ದ ಹಾಗೆ ನಿಮಗೆ ಇವರ್ಯಾರು ಎಂದು ಗೊತ್ತಾಗಿರಬಹುದು ಹೌದು ಸ್ನೇಹಿತರೆ ನಾವು ಈ ದಿನದ ಮಾಹಿತಿಯಲ್ಲಿ ಮಾತನಾಡುತ್ತಿರುವುದು ರಿಯಲ್ ಹೀರೋ ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ.

ಹೌದು ಸ್ನೇಹಿತರೆ, ನಟ ಉಪೇಂದ್ರ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಇಷ್ಟು ದಿನದವರೆಗೂ ಕೇವಲ ಸಿನೆಮಾ ರಂಗದಲ್ಲಿ ಮಹತ್ತರ ಸಾಧನೆ ಯಶಸ್ಸು ಪಡೆದುಕೊಳ್ಳುತ್ತಿದ್ದ ಇವರು 2018ರಲ್ಲಿ ಪ್ರಜಾಕೀಯ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಬಡವರಿಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ದೇಶದ ಕುರಿತು ರಾಜಕೀಯದ ಕುರಿತು ಜನರು ತಿಳಿದುಕೊಳ್ಳಬೇಕಾದ ವಿಚಾರಗಳ ಬಗ್ಗೆಯೂ ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಉಪೇಂದ್ರ.

ಸಿನಿಮಾರಂಗದಲ್ಲಿ ಉಪ್ಪಿಯ ಸಾಧನೆ ;ಬಡ ಕುಟುಂಬದಲ್ಲಿ ಜನಿಸಿದ ಉಪ್ಪಿ, ತಾವು ಡಿಗ್ರಿ ಓದುವಾಗ ನಿರ್ದೇಶಕರಾಗಬೇಕೆಂಬ ಕನಸು ಅವರಲ್ಲಿ ಹುಟ್ಟಿತು ಆಗ ಕಾಶಿನಾಥ್ ಅವರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಲು ಉಪ್ಪಿ ಮುಂದಾಗಿದ್ದರು ಬಳಿಕ 1998ರಲ್ಲಿ ತರ್ಲೆ ನನ್ಮಗ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರೂ ಉಪ್ಪಿ. ಹೌದು ಉಪ್ಪಿ ಅವರ ವಿಶೇಷ ಏನೆಂದರೆ ಕೇವಲ ನಿರ್ದೇಶನ ಮತ್ತು ನಟನೆ ಮಾತ್ರವಲ್ಲ ಕೆಲವು ಸಿನಿಮಾಗಳಿಗೆ ಹಾಡುಗಳನ್ನು ಕೂಡ ಬರೆದಿದ್ದಾರೆ ಹಾಡುಗಳನ್ನ ಹಾಡಿದ್ದಾರೆ ಕೂಡಾ ಬಸವನಗುಡಿಯ ಎಪಿಎಸ್ ಕಾಲೇಜ್ ನಲ್ಲಿ ವಾಣಿಜ್ಯ ಪದವಿ ಪಡೆದಿರುವ ಇವರು 1998ರಲ್ಲಿ ಎ ಚಿತ್ರದ ನಿರ್ದೇಶನ ಮಾಡುವುದರ ಜೊತೆಗೆ ತಾವೇ ನಟನೆಯನ್ನು ಹೌದು ಈ ಸಿನಿಮಾ ಉಪ್ಪಿ ಅವರಿಗೆ ಅಪಾರ ಯಶಸ್ಸು ತಂದುಕೊಟ್ಟಿತ್ತು.

ಉಪೇಂದ್ರ ಅವರಿಗೆ ಓಂ ಮತ್ತು ಶ್ ಸಿನಿಮಾ ಕೂಡ ದೊಡ್ಡ ಯಶಸ್ಸು ತಂದು ಕೊಟ್ಟಂತಹ ಸಿನಿಮಾ, 2010 ಮತ್ತು 2015ರಲ್ಲಿ ಸೂಪರ್ ಮತ್ತು ಉಪ್ಪಿ 2 ಸಿನಿಮಾಗಳನ್ನ ನಿರ್ದೇಶನ ಮಾಡಿದಲ್ಲದೆ ಅವರೇ ಸ್ವತಃ ನಟನೆ ಮಾಡಿದ್ದರು ಈ ಸಿನಿಮಾಗಳು ಕೂಡ ಉಪ್ಪಿ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು.

ಉಪ್ಪಿ ಅವರ ವೈವಾಹಿಕ ಜೀವನಕ್ಕೆ ಬರುವುದಾದರೆ 2003ರಲ್ಲಿ ಪ್ರಿಯಾಂಕಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿಗಳು ಪ್ರೀತಿಸಿ ಮದುವೆಯಾದರು. ಹೌದು ಈ ದಂಪತಿಗಳಿಗೆ ಆಯುಷ್ ಉಪೇಂದ್ರ ಮತ್ತು ಐಶ್ವರ್ಯ ಉಪೇಂದ್ರ ಎಂಬ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಸುಖ ದಾಂಪತ್ಯ ಜೀವನದಲ್ಲಿ ಸುಖಮಯವಾಗಿ ಸಂಸಾರ ನಡೆಸುತ್ತಿರುವ ಈ ಜೋಡಿಯು ಕಳೆದ ವರುಷ ತಮ್ಮದೇ ಸ್ವಂತ ಮನೆಯನ್ನು ಕೂಡ ಕಟ್ಟಿಕೊಂಡು ಗೃಹಪ್ರವೇಶ ಕೂಡ ಮಾಡಿದ್ದಾರೆ.

ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟ ಉಪೇಂದ್ರ ಮತ್ತು ನಟಿ ಪ್ರಿಯಾಂಕಾ ಉಪೇಂದ್ರ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂಬುದು ಎಲ್ಲರಿಗೂ ತಿಳಿದುಕೊಳ್ಳುವ ಕುತೂಹಲವಿದೆ. ಹೌದು ಈ ದಂಪತಿಗಳನ್ನು ನೋಡಿದರೆ ಖುಷಿಯಾಗುತ್ತದೆ ಸದಾ ನಗುತ್ತಲೆ ಇರುವ ಈ ಜೋಡಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೌದು ಪ್ರಿಯಾಂಕಾ ಅವರು ನವೆಂಬರ್ 9 1977 ರಲ್ಲಿ ಜನಿಸಿದ್ದು ಇದೀಗ ಅವರಿಗೆ 43 ವಯಸ್ಸಾಗಿದ್ದು, ಉಪೇಂದ್ರ ಅವರಿಗೆ ಇಂದು 52 ವಯಸ್ಸು ಅಲ್ಲಿಗೆ ಈ ದಂಪತಿಗಳ ವಯಸ್ಸಿನ ಅಂತರ 9 ವರುಷ.

LEAVE A REPLY

Please enter your comment!
Please enter your name here