ಕೊನೆಗೂ ತನ್ನ ಮಗನ ಭವಿಷ್ಯಕ್ಕಾಗಿ ಗಟ್ಟಿ ಮನಸು ಮಾಡಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್ … ನೋಡಿ

105

ಮಗನ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ನಟಿ ಮೇಘನಾ ರಾಜ್, ಇದನ್ನು ಕೇಳಿ ಸರ್ಜಾ ಕುಟುಂಬ ಕೂಡಾ ಅಚ್ಚರಿಪಟ್ಟಿದೆ ಏನದು ಗೊತ್ತಾ ಮೇಘನಾ ರಾಜ್ ಅವರ ಆ ದೊಡ್ಡ ನಿರ್ಧಾರ ಇಲ್ಲಿದೆ ನೋಡಿ ಕುರಿತು ಹೆಚ್ಚಿನ ಮಾಹಿತಿ.

ಹೌದು ಪ್ರಿಯ ಸ್ನೇಹಿತರೆ ಚಿರು ಮತ್ತು ಮೇಘನಾ ರಾಜ್ ಅವರ ಪ್ರೇಮ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ ಹೌದು ಇವರು ಪ್ರೀತಿಸುವಾಗ ಮೊದಮೊದಲು ಅಷ್ಟಾಗಿ ಇವರ ಪ್ರೀತಿ ಕುರಿತು ಯಾರಿಗೂ ಗೊತ್ತಿರಲಿಲ್ಲ ಆದರೆ ಇವರ ಮದುವೆ ಫಿಕ್ಸ್ ಆದ ಮೇಲೆ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿತು ಚಿರು ಮತ್ತು ಮೇಘನಾ ರಾಜ್ ಕೆಲವೊಂದು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯ ಕೂಡ ಮಾಡಿದ್ದಾರೆ. ಕಲಾವಿದರ ಬದುಕು ಕೇವಲ ಸಿನೆಮಾ ರಂಗದಲ್ಲಿ ಮಾತ್ರವಲ್ಲ ನಿಜೀವನದಲ್ಲಿಯೂ ಕೂಡ ಸಿನೆಮಾಗಿಂತ ಅದ್ಭುತವಾಗಿರುತ್ತದೆ ಅನ್ನೋದಕ್ಕೆ ನಟಿ ಮೇಘನಾ ರಾಜ್ ಮತ್ತು ನಟ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಪ್ರೇಮಕಥೆ ಸಾಕ್ಷಿಯಾಗಿದೆ.

ಹೌದು ಯಾವ ಸಿನೆಮಾ ಪ್ರೇಮಕಥೆಗೂ ಕಡಿಮೆಯಿಲ್ಲದ ಇವರ ಪ್ರೇಮದ ಕಥೆ ಮೇಘನ ರಾಜ್ ಅವರ ಬಾಯಲ್ಲಿ ಚಿರು ಅವರ ಜೊತೆ ಕಳೆದ ಆ ಪ್ರೀತಿಯ ಕ್ಷಣಗಳ ಬಗ್ಗೆ ಕೇಳುತ್ತಿದ್ದರೆ ನಿಜಕ್ಕೂ ಕಣ್ತುಂಬಿ ಬರುತ್ತದೆ ಈ ಪ್ರೇಮಿಗಳನ್ನು ಯಾಕಿಷ್ಟು ಬೇಗ ದೂರ ಮಾಡಿದೆ ಎಂದು ದೇವರಲ್ಲಿ ಕೇಳುವ ಹಾಗೆ ಆಗುತ್ತದೆ. ಎಷ್ಟು ಚಂದ ಇದ್ದ ಜೋಡಿ ಫೋಟೋದಲ್ಲಿಯೇ ನೋಡುತ್ತಿದ್ದರೆ ದೃಷ್ಟಿ ತಗಲು ಅನ್ನುವಷ್ಟು ಸುಂದರವಾಗಿತ್ತು ಎನೋ ನೇರವಾಗಿ ನೋಡಿದರೆ ನಿಜವಾಗಿಯೂ ದೃಷ್ಟಿಯ ತಗುಲುತ್ತಿತ್ತೋ ಏನೊ, ಯಾರ ಕಪ್ಪು ನೆರಳು ಬಿತ್ತೋ ಈ ಜೋಡಿ ನೂರಾರು ವರುಷ ಸಂಸಾರ ನಡೆಸಬೇಕು ಎಂದಿದ್ದರು ಆದರೆ ವಿಧಿಯ ಆಟವೇ ಅವರ ಜೀವನದಲ್ಲಿ ಬೇರೆ ತರಹವೆ ಆಟವಾಡಿತ್ತು.

ಮೇಘನ ರಾಜ್ ಅವರ ಬದುಕಿನಲ್ಲಿ ಚಿರು ಅವರು ಇಲ್ಲವಾದಾಗ ಅವರ ಜೀವನ ಪೂರ್ಣ ಕತ್ತಲಾಗಿಬಿಟ್ಟಿತು ಆದರೆ ಮತ್ತೆ ಬಾಳಿಗೆ ಬೆಳಕಾಗಿ ಬಂದದ್ದು ಜ್ಯೂ ಚಿರು. ಹೌದು ರಾಯನ್ ಮೇಘನಾ ರಾಜ್ ಅವರ ಬದುಕಲ್ಲಿ ನಗುವಾಗಿ ಬಂದರೂ ಸಂತಸವಾಗಿ ಬಂದರು ಈಗ ಚಿರು ಇಲ್ಲವಾದ ದಿನಗಳನ್ನೂ ತಮ್ಮ ಮಗುವಾದ ರಾಯನ್ ಜೊತೆ ಕಳೆಯುತ್ತಿರುವ ಮೇಘನಾ ತಮ್ಮ ಮಗುವಿನ ಫೋಟೋ ಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರ್ತಾರೆ. ಅಷ್ಟೇ ಅಲ್ಲ ತಮ್ಮ ಮಗುವಿನ ಕುರಿತು ತಮ್ಮ ಮಧು ಮಗುವಿನ ಭವಿಷ್ಯದ ಕುರಿತು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿರುವ ಮೇಘನಾ ಈ ಕುರಿತು ಚಿರು ಅಭಿಮಾನಿಗಳು ಅಥವಾ ಮೇಘನಾ ಅಭಿಮಾನಿಗಳು ಕೇಳಿದರೆ ಖಂಡಿತವಾಗಿಯೂ ಸಂತಸಪಡುತ್ತಾರೆ.

ಹೌದು ಚಿರಂಜೀವಿ ಸರ್ಜಾ ಚಂದನವನಕ್ಕೆ ಮೊದಲು ಸಹ ನಿರ್ದೇಶಕರಾಗಿ ಬಂದರು ಗಾಂಧಿನಗರದಲ್ಲಿ ಇವರ ಒಳ್ಳೆಯತನದಿಂದಲೇ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡರು ಹಾಗೆ ಇಲ್ಲವಾದ ಈ ದಿನಗಳಲ್ಲಿ ಅವರ ಕೊನೆಯ ಸಿನಿಮಾವಾಗಿರುವ ರಾಜ ಮಾರ್ತಾಂಡ ಸಿನಿಮಾ ಕೂಡ ಬಿಡುಗಡೆ ಹಂತಕ್ಕೆ ಬಂದಿತು ಈ ಸಿನಿಮಾದಲ್ಲಿ ಚಿರು ಅವರಿಗೆ ಧ್ವನಿಯಾಗಿರುವುದು ಚಿರು ,

ಅವರ ತಮ್ಮ ಧ್ರುವ ಸರ್ಜಾ ಆದರೆ ಸಿನಿಮಾ ನಿರ್ದೇಶಕರಾಗಿರುವ ರಾಮ್ ನಾರಾಯಣ್ ಅವರು ತಿಳಿಸಿರುವ ಹಾಗೆ ಚಿರು ಅವರ ಕೊನೆಯ ಸಿನಿಮಾ ಆಗಿರುವ ರಾಜಮಾರ್ತಾಂಡ ಸಿನಿಮಾದಲ್ಲಿ ಚಿರು ಅವರ ಮಗ ರಾಯನ್ ಕೂಡ ಇದ್ದಾರೆ ಎಂಬುದನ್ನು ತಿಳಿಸಿದ್ದಾರೆ ನಿಜಕ್ಕೂ ಈ ವಿಚಾರ ಕರುನಾಡ ಜನತೆಗೆ ಸಂತಸದ ವಿಚಾರವಾಗಿದೆ.ಬಿಡುಗಡೆಗೆ ಸಿದ್ಧವಾಗಿರುವ ರಾಜಮಾರ್ತಾಂಡ ಸಿನೆಮಾಗೆ ಚಿರು ಅಭಿಮಾನಿಗಳಿಂದ ಗುಡ್ ಲಕ್ ತಿಳಿಸೋಣ. ನೀವು ಕೂಡ ಚಿರು ಅವರ ಕೊನೆಯ ಸಿನಿಮಾವಾಗಿರುವ ರಾಜಮಾರ್ತಾಂಡ ಸಿನಿಮಾಗಾಗಿ ಕಾಯುತ್ತಿದ್ದೀರಾ, ಹಾಗಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here