ಹಳ್ಳಿ ಹೈದ ಪ್ಯಾಟೆಗ್ ಬಂದ ರಾಜೇಶ್ ಗೆ ಅಪ್ಪು ಪ್ರೀತಿಯಿಂದ ಬೈದು, ಪುನೀತ್ ಮಾಡಿದ ಆ ಒಂದು ಸಹಾಯ ಈಗ ಬೆಳಕಿಗೆ ಬಂದಿದೆ.. ಏನು ನೋಡಿ

103

ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಎಂದು ನೆನಪು ಮಾತ್ರ ಆದರೆ ರಾಜೇಶ್ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವಿಚಾರ ಒಂದು ಹರಿದಾಡುತ್ತಿದ್ದು, ಇದನ್ನು ಈ ಪುಟದಲ್ಲಿ ನಿಮಗೂ ಕೂಡ ತಿಳಿಸಿಕೊಡುತ್ತದೆ ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸದ್ಯ ಎಲ್ಲಿ ನೋಡಿದರೂ ಸೋಷಿಯಲ್ ಮೀಡಿಯಾಗಳಲ್ಲಿ ನಾವು ಅಪ್ಪು ಅವರ ಕುರಿತೇ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ನಟ ಅಪ್ಪು ಅವರ ಬಹಳಷ್ಟು ಫೋಟೊಗಳು ಹಾಗೂ ಅವರ ಸಿನೆಮಾ ಪೋಸ್ಟರ್ಗಳು ಸಿನೆಮಾದ ಸೀನ್ ಗಳು ಹಾಗೆ ಅಪ್ಪು ಅವರು ಎಷ್ಟೊಂದು ಮಂದಿಗೆ ಸಹಾಯ ಮಾಡಿದ್ದರು ಅಂಥವರು ಈಗ ಅಪ್ಪು ಇಲ್ಲದ ನೋವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಸೋಷಿಯಲ್ ಮೀಡಿಯಾಗಳ ಮುಂದೆ ಬಂದು ಅಪ್ಪು ನಮಗೆ ಆ ಸಹಾಯ ಮಾಡಿದ್ದರು, ಈ ರೀತಿ ಸಹಾಯ ಮಾಡಿದ್ದರು ಎಂದು ಹೇಳಿಕೊಳ್ಳುತ್ತಿದ್ದಾರೆ.

ಹೌದು ನಟ ಪುನೀತ್ ರಾಜಕುಮಾರ್ ಇವರು ನಮ್ಮ ಕನ್ನಡ ಸಿನಿಮಾರಂಗದ ಒಬ್ಬ ಅತ್ಯದ್ಭುತ ನಟ ಕೇವಲ ಸಿನೆಮಾ ರಂಗಕ್ಕೆ ಮಾತ್ರ ಇವರು ಸೀಮಿತರಾಗಿರಲಿಲ್ಲ ಹೌದು ಕೆಲವರಂತೂ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದ್ದರೂ ತಾವಾಯಿತು ತಮ್ಮ ಪಾಡಾಯಿತು ತಮ್ಮ ಕೆರಿಯರ್ ಆಯ್ತು ಎಂದು ತಮ್ಮ ಜೀವನದ ಬಗ್ಗೆ ಮಾತ್ರ ಯೋಚಿಸುತ್ತಾ ಉತ್ತಮ ಜೀವನ ನಡೆಸುತ್ತಾ ಇದ್ದಾರೆ. ಆದರೆ ಅಪ್ಪು ಮಾತ್ರ ಎಲ್ಲಾ ಸ್ಟಾರ್ ಗಳಿಗೂ ಆದರ್ಶ ವ್ಯಕ್ತಿಯಾಗಿದ್ದರು ಅವರು. ಇವರೆ ಮೊದಲ ನಟ ಸ್ಟಾರ್ ವಾರ್ ಬೇಡ ಅಂದವರು ಅಲ್ವಾ ಸ್ನೇಹಿತರೆ ಇಂತಹ ಮುದ್ದಾದ ವ್ಯಕ್ತಿ ಅನ್ನೂ ಆ ದೇವರು ಅದೆಷ್ಟು ಬೇಗ ಕರೆದುಕೊಂಡು ಬಿಟ್ಟ.

ಅಪ್ಪು ಅವರು ಬದುಕಿದ್ದಾಗ ಎಷ್ಟೆಲ್ಲಾ ದಾನಧರ್ಮಗಳನ್ನು ಮಾಡಿದ್ದರು ಅಂತ ಈಗಾಗಲೇ ನಾವು ತಿಳಿದುಕೊಂಡಿದ್ದೇವೆ ಹಾಗೆ ಬಹಳಷ್ಟು ಮಂದಿ ಸ್ವತಃ ತಾವೇ ಒಪ್ಪಿಕೊಂಡು ಅಪ್ಪು ಅವರು ನಮಗೆ ಸಹಾಯ ಮಾಡಿದ್ದರು ಹೀಗೆ ನಮ್ಮ ಕಷ್ಟಕ್ಕೆ ಅಪ್ಪು ಅವರು ಆಗಿದ್ದರೂ ಅಂತ ಹೇಳಿಕೊಂಡಿದ್ದಾರೆ. ಆದರೆ ಈ ಮೊದಲೇ ಹೇಳಿದಂತೆ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಖ್ಯಾತಿಯ ರಾಜೇಶ್ ಅವರು ಸಹ ಅಪ್ಪು ಅವರಿಂದ ಸಹಾಯ ಪಡೆದಿದ್ದರಂತೆ ಅದನ್ನು ಸಹಾಯ ಅಂತ ಹೇಳುವುದಕ್ಕಿಂತ ಅಪ್ಪು ಅವರಿಂದ ಪ್ರಶಂಸೆ ಪಡೆದುಕೊಂಡಿದ್ದರು ಹಾಗೆ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಅಲ್ಲಿ ರಾಜೇಶ್ ಅವರು ಭಾಗವಹಿಸಿದ್ದಾಗ ಫೈನಲ್ ಲೆವೆಲ್ ಗೆ ಬಂದಿದ್ದರು ಮತ್ತು ಆ ಸಮಯದಲ್ಲಿ ರಾಜೇಶ್ ಅನ್ನು ಅಪ್ಪು ಅವರ ಬಳಿ ಕರೆದೊಯ್ದು ಭೇಟಿ ಮಾಡಿಸಲಾಗಿತ್ತು.

ಇದೇ ವೇಳೆ ಅಪ್ಪು ರಾಜೇಶ್ ಅವರ ಮುಗ್ಧತೆ ಕಂಡು ಆತ ಫೈನಲ್ ಹೆಗಲಿಗೆ ಬಂದಿದ್ದ ಕಾರಣ ಕೆಲವೊಂದು ಬುದ್ಧಿಮಾತುಗಳನ್ನು ಹೇಳುವ ಮೂಲಕ ರಾಜೇಶ್ ಅವರಿಗೆ ಅಪ್ಪು ಖುಷಿಯಿಂದ ಕೊಟ್ಟ ಉಡುಗೊರೆ ಏನು ಗೊತ್ತಾ. ಹೌದು ಸುಮಾರು ವರುಷಗಳ ಹಿಂದಿನ ಮಾತು ಇದು ಅಂದು ರಾಜೇಶ್ ಅವರು ಅಪ್ಪು ಅವರಿಂದ ಚಿನ್ನದ ಸರವೊಂದನ್ನು ಪಡೆದುಕೊಂಡಿದ್ದರಂತೆ. ಹೌದು ರಾಜೇಶ್ ಅವರ ಮುಗ್ಧತೆ ,

ಅನ್ನೋ ಇಷ್ಟಪಟ್ಟ ಅಪ್ಪು ತಮ್ಮ ಕತ್ತಿನಲ್ಲಿದ್ದ ಐವತ್ತು ಗ್ರಾಂ ಸರವನ್ನು ತೆಗೆದು ರಾಜೇಶ್ ಅವರಿಗೆ ಹಾಕಿದ್ದರಂತೆ, ಆದರೆ ಇಂದು ಆ ವಿಚಾರವನ್ನ ಹೇಳಿಕೊಳ್ಳಲು ನಮ್ಮ ಜೊತೆ ರಾಜೇಶ್ ಕೂಡ ಇಲ್ಲ ಅವರು ಅವರು ಕೂಡ ಈಗ ನಮಗೆ ನೆನಪು ಮಾತ್ರ ಆದರೆ ರಾಜೇಶ್ ಗೆ ಹಾಕಿದ ಚಿನ್ನದ ಸರ ಇಂದು ರಾಜೇಶ್ ಅವರ ಅಕ್ಕನ ಮಗುವಿನ ಕೊರಳಿನಲ್ಲಿ ಇದೆ. ಸದ್ಯ ಅಪ್ಪು ಅವರ ಆ ಪ್ರೀತಿಯ ಕಾಣಿಕೆ ರಾಜೇಶ್ ಅವರ ಅಕ್ಕನ ಮಗುವಿನ ಕತ್ತಿನಲ್ಲಿದ್ದು, ಅವರ ಆಶೀರ್ವಾದ ಆ ಮಗುವಿನ ಮೇಲೆ ಸದಾ ಇರಲಿ.

LEAVE A REPLY

Please enter your comment!
Please enter your name here