ಕೊನೆಗೂ ಮಹತ್ವದ ನಿರ್ಧಾರ ತಿಳಿಸಿದ ಕರ್ನಾಟಕದ ದೊಡ್ಮನೆ ಸೊಸೆ ಅಶ್ವಿನಿ…ನೋಡಿ ದೊಡ್ಡ ತಿರುವು ಯಾರು ವೂಹೆ ಕೂಡ ಮಾಡೋದಕ್ಕೆ ಸಾಧ್ಯ ಇಲ್ಲ…

Sanjay Kumar
2 Min Read

ನಟ ಪುನೀತ್ ರಾಜ್ ಕುಮಾರ್ ಅವರು ಕನ್ನಡ ಸಿನಿಮಾರಂಗದ ಒಬ್ಬ ಅತ್ಯದ್ಭುತ ನಟರಾಗಿದ್ದರು ಇವರು ಒಬ್ಬ ಉತ್ತಮ ಕಲಾವಿದ ಮಾತ್ರ ಆಗಿರಲಿಲ್ಲ ಹೊಸಬರಿಗೆ ಅವಕಾಶ ಸಿಗಬೇಕು ಹೊಸಬರು ಕನ್ನಡ ಸಿನಿಮಾರಂಗಕ್ಕೆ ಬರಬೇಕು ಒಳ್ಳೆಯ ಅವಕಾಶ ಪಡೆದು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿ ಅವರ ಪ್ರತಿಭೆಗೆ ತಕ್ಕ ಫಲ ಸಿಗಬೇಕು ಅಂತ ಆಶಿಸುತ್ತಿದ್ದರು ಹಾಗೂ ಅದಕ್ಕಾಗಿ ಪಿಆರ್ ಕೆ ಪ್ರೊಡಕ್ಷನ್ಸ್ ಅನ್ನು ಸ್ಥಾಪಿಸಿ ಹಲವರಿಗೆ ಉತ್ತಮ ಅವಕಾಶವನ್ನು ನೀಡಿ ಪುನೀತ್ ರಾಜ್ ಕುಮಾರ್ ಅವರು ಹಲವು ಪ್ರತಿಭೆಗಳನ್ನು ಕನ್ನಡ ಸಿನಿಮಾರಂಗ ಕ್ಕೆ ಉಡುಗೊರೆಯಾಗಿ ನೀಡಿದ್ದಾರೆ ಅಷ್ಟೇ ಅಲ್ಲ ಬಹಳಷ್ಟು ಉತ್ತಮ ಸಿನಿಮಾಗಳನ್ನು ಕೂಡ ಕನ್ನಡ ಸಿನಿಮಾರಂಗಕ್ಕೆ ಉಡುಗೊರೆಯಾಗಿ ನೀಡಿದ್ದಾರೆ ನಟ ಪುನೀತ್ ರಾಜ್ ಕುಮಾರ್ ಈ ಮಹತ್ವಕರವಾದ ಕಾರ್ಯಕ್ಕೆ ಪುನೀತ್ ರಾಜ್ ಕುಮಾರ್ ಅವರಿಗೆ ಸಾಥ್ ಆಗಿ ಇದ್ದದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್.

ಹೌದು ಅಪ್ಪು ಅವರನ್ನ ಕಳೆದುಕೊಂಡು ಈಗಾಗಲೇ 7 ತಿಂಗಳುಗಳು ಕಾಲ ಮುಗಿದಿದೆ, ಅಪ್ಪು ಅವರು ಇನ್ನು ನೆನಪು ಮಾತ್ರ ಆದರೆ ಅವರ ಅಗಲಿಕೆಯ ಅದೆಷ್ಟು ನೋವು ನೀಡಿದೆ ಅಂದರೆ ಆ ನೋವು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅಪ್ಪು ನಮಗೆಲ್ಲರಿಗೂ ಆ ದೇವರು ಕೊಟ್ಟ ಉಡುಗೊರೆ ನಮ್ಮ ಕರುನಾಡ ರಾಜಕುಮಾರ ಅಪ್ಪು ಮತ್ತು ಅವರಿರುವಾಗ ಎಷ್ಟು ಒಳ್ಳೆಯ ಯೋಜನೆಗಳನ್ನು ಆಲೋಚನೆಗಳನ್ನು ಹಮ್ಮಿಕೊಂಡಿದ್ದರು ಅವರ ಕನಸುಗಳು ಇನ್ನೂ ಬಹಳಷ್ಟು ಇತ್ತು. ಆದರೆ ಅವರ ಅಗಲಿಕೆಯ ನಂತರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, ಅವರು ಇದೀಗ ಮಹತ್ವ ಕರವಾದ ನಿರ್ಧಾರವನ್ನ ತೆಗೆದುಕೊಳ್ಳುವ ಮೂಲಕ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ.

ಹೌದು ಪಿಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಈಗಾಗಲೇ ಬಹಳಷ್ಟು ಉತ್ತಮ ಸಿನೆಮಾಗಳು ಮೂಡಿ ಬಂದಿದೆ ಫ್ರೆಂಚ್ ಬಿರಿಯಾನಿ ಸಿನೆಮಾದಲ್ಲಿ ಉತ್ತಮ ಪಾತ್ರವನ್ನು ನಿರ್ವಹಿಸಿದ ಸಿಂಧು ಶ್ರೀನಿವಾಸ್ ಮೂರ್ತಿ ಅವರು ಇದೀಗ ನಿರ್ದೇಶನಕ್ಕೆ ಇಳಿದಿದ್ದು ಈ ಮೊದಲೇ ಪುನೀತ್ ರಾಜ್ ಕುಮಾರ್ ಅವರ ಬಳಿ ತಾವು ನಿರ್ದೇಶನ ಮಾಡಬೇಕು ಅಂತ ಅಂದಿದ್ದರು. ಈ ಹೊಸ ಪ್ರತಿಭೆಗೆ ನಿರ್ದೇಶನ ಮಾಡುವ ಅವಕಾಶ ನೀಡಬೇಕು ಅಂತ ಅಪ್ಪು ಅವರು ಕೂಡ ಅಂದು ಕೊಂಡಿದ್ದರು ಅದರಂತೆ ಇದೀಗ ಅಶ್ವಿನಿ ಅವರು ಒಂದು ಹೆಜ್ಜೆ ಮುಂದೆ ಇಟ್ಟು, ಪಿಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಂದಹಾಗೆ ಈ ಸಿನಿಮಾದ ಮತ್ತೊಂದು ವಿಶೇಷತೆಯನ್ನು ಅಂದರೆ ಈ ಸಿನಿಮಾದ ಬಹುತೇಕ ಕೆಲಸಗಳು ಮಹಿಳೆಯರೆ ಮಾಡುತ್ತಿದ್ದು ಸಿನಿಮಾದ ನಿರ್ದೇಶನವನ್ನು ಸಿಂಧು ಶ್ರೀನಿವಾಸ್ ಮೂರ್ತಿ ಅವರು ಮಾಡಲಿದ್ದಾರೆ.

ಅಪ್ಪು ಅವರು ಇರುವಾಗಲೇ ಫ್ರೆಂಚ್ ಬಿರ್ಯಾನಿ ಚಿತ್ರೀಕರಣದ ವೇಳೆ ಸಿಂಧು ಶ್ರೀನಿವಾಸ್ ಮೂರ್ತಿ ಅವರು ಕಥೆಯೊಂದನ್ನು ಹೇಳಿ ಆ ಕತೆಯ ಕಿರುಚಿತ್ರವನ್ನು ಕೂಡ ಅಪ್ಪು ಅವರಿಗೆ ತೋರಿಸಿದ್ದರು 1960 ರ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮೂಡಿಬರಲಿದ್ದು ಸಿನಿಮಾ ಉತ್ತಮವಾಗಿ ಮೂಡಿ ಬರಲಿದೆ ಹಾಗೂ ಈಗಾಗಲೇ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇದೆ. ಈ ಸಿನೆಮಾ ಹೆಸರು ಆಚಾರ್ಯ & ಕೋ. ಎಂಬುದಾಗಿದ್ದು ಸಿನಿಮಾ ಪಿಆರ್ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರವಾಗಿದೆ. ಈ ಸಿನೆಮಾ ಗೆ ಆಲ್ ದಿ ಬೆಸ್ಟ್ ತಿಳಿಸುತ್ತಾ ಅಶ್ವಿನಿ ಅವರ ಈ ದಿಟ್ಟ ನಿರ್ಧಾರಕ್ಕೆ ಶುಭವಾಗಲಿ ಎಂದು ನಾವು ಆಶಿಸೋಣ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.