ಒಂದು ಶೋ ನಲ್ಲಿ ಮೂಗಲ್ಲಿ ಬಾಯಲ್ಲಿ ನೀರು ಬಾರೋ ಹಾಗೆ ಗೊಳೋ ಅಂತ ಬಿಕ್ಕಿ ಬಿಕ್ಕಿ ಅತ್ತ ನಟಿ ಕೃತಿ ಶೆಟ್ಟಿ ಇದಕ್ಕೆ ಕಾರಣ ಕೇಳಿದ್ರೆ ನೀವು ಕೂಡ ಅಳ್ತೀರಾ… ಅಯ್ಯೋ ದೇವರೇ ಅಷ್ಟಕ್ಕೂ ಏನಾಯಿತು..

Sanjay Kumar
2 Min Read

ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದ ಮೇಲೆ ಕೆಲವೊಂದು ವಿಚಾರ ಗಳಿಂದ ಸುದ್ದಿಯಲ್ಲಿರುತ್ತಾರೆ. ಹಾಗಾಗಿ ಸೆಲೆಬ್ರಿಟಿಗಳು ಅಥವಾ ಸಿನಿಮಾಗಳಲ್ಲಿ ಅಭಿನಯಿಸುವ ನಟ ನಟಿಯರು ಕೆಲವನ್ನು ವಿಚಾರಗಳಿಂದ ಗಾಸಿಪ್ ಆಗಿರುತ್ತಾರೆ ಏನೋ ಕೆಲವೊಂದು ಸಂದರ್ಶನದ ವೇಳೆ ಕೊಟ್ಟ ಹೇಳಿಕೆಯಿಂದ ಸುದ್ದಿಯಲ್ಲಿರುತ್ತಾರೆ ಇನ್ನೂ ಕೆಲವರು ತಮ್ಮ ಪ್ರೈವೇಟ್ ವಿಚಾರಗಳಿಂದ ಮೀಡಿಯಾ ಮುಂದೆ ಕಣ್ಣೀರು ಹಾಕಿರುತ್ತಾರೆ. ಆದರೆ ಇದ್ಯಾವುದಕ್ಕೂ ಕಾರಣ ಇಲ್ಲದೆ ನಟಿ ಕೃತಿ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಗೊಳೋ ಎಂದು ಅತ್ತು ಯಾಕೆ ಗೊತ್ತಾ ನೀವು ಕೂಡಾ ಕಾರಣ ಕೇಳಿದ್ರೆ ಅಯ್ಯೋ ಇದ್ಯಾಕಪ್ಪಾ ಅಂತೀರಾ ಇಲ್ಲಿದೆ ನೋಡಿ ನಟಿ ಕೃತಿ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದ ಹಾಗೆ ಗೊಳೋ ಎಂದು ಅಳುತ್ತಿದ್ದಕ್ಕೆ ಕಾರಣ.

ಹೌದು ಸೆಲೆಬ್ರಿಟಿಗಳು ಎಂದಮೇಲೆ ಅವರನ್ನು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸುವುದು ಅಥವಾ ಅವರ ನಟನೆಯ ಸಿನಿಮಾ ಪ್ರಮೋಷನ್ ಗಾಗಿ ಕಾರ್ಯಕ್ರಮಗಳಿಗೆ ನಟನಟಿಯರು ಬರುವುದು ಇದೆಲ್ಲವೂ ಇತ್ತೀಚನ ದಿನಗಳಲ್ಲಿ ಕಾಮನ್ ಆಗಿ ಹೋಗಿದೆ ಹಾಗೆ ನಟಿ ಶ್ರುತಿ ಶೆಟ್ಟಿ ಅವರು ಕೂಡ ಕಾರ್ಯಕ್ರಮವೊಂದಕ್ಕೆ ಹೋದಾಗ ನಡೆದಿರುವ ಘಟನೆಯಿದು. ನಟಿ ಕೃತಿ ಶೆಟ್ಟಿ ಅವರು ಮಾಡಿರುವ ಒಂದೇ ಸಿನಿಮಾದಿಂದ ಸದ್ಯ ಬಹು ಬೇಡಿಕೆಯ ನಟಿಯಾಗಿದ್ದಾರೆ. ಹೌದು ಉಪ್ಪೆನ ಎಂಬ ಸಿನಿಮಾ ಮೂಲಕ ದೊಡ್ಡ ಯಶಸ್ಸು ಪಡೆದುಕೊಂಡಿರುವ ನಟಿ ಕೃತಿ ಶೆಟ್ಟಿ ಅವರು ದಕ್ಷಿಣ ಭಾರತ ಚಿತ್ರರಂಗದ ಸದ್ಯ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ಕೃತಿ ಶೆಟ್ಟಿ ಸದ್ಯ ತಮಿಳು ತೆಲುಗು ಭಾಷೆಗಳಲ್ಲಿ ಬ್ಯುಸಿ ಆಗಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ.

ನಟಿ ಶ್ರುತಿ ಶೆಟ್ಟಿ ಅವರು ಉಪ್ಪೆನ ಸಿನಿಮಾದಲ್ಲಿ ಅಭಿನಯಿಸಿ ಯಶಸ್ಸು ಪಡೆದುಕೊಂಡಿದ್ದಾರೆ. ಆ ಬಳಿಕ ಸಾಕಷ್ಟು ಸಿನಿಮಾಗಳ ಆಫರ್ ಗಳು ಇವರನ್ನು ಕೈಬೀಸಿ ಕರೆದಿವೆ ತೆಲುಗು ತಮಿಳಿನಲ್ಲಿ ಸದ್ಯ ಬಹುಬೇಡಿಕೆಯ ನಟಿಯಾಗಿರುವ ಕೃತಿ ಶೆಟ್ಟಿ ಬಂಗಾರ ರಾಜು ಸಿನಿಮಾದಲ್ಲಿಯೂ ಕೂಡ ಅಭಿನಯ ಮಾಡಿ ಈಗಾಗಲೇ ಸಿನಿಮಾ ಟೀಸರ್ ಕೂಡ ರಿಲೀಸ್ ಆಗಿದೆ ಹಾಗೂ ಅಭಿಮಾನಿಗಳು ಸಹ ಕೃತಿ ಶೆಟ್ಟಿ ಅವರ ಅಭಿನಯಕ್ಕೆ ಫಿದಾ ಆಗಿದ್ದು ಆದರೆ ಇದ್ದಕ್ಕಿದ್ದ ಹಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಕೃತಿ ಶೆಟ್ಟಿ ಅವರು ಅಳುತ್ತಿರುವ ಇಂತಹ ವಿಡಿಯೋ ನೋಡಿ ಇವರಿಗೇನಾಯ್ತು ಚೆನ್ನಾಗಿಯೇ ಇದ್ರಲ್ಲ ಅಂತ ಶಾಕ್ ಆಗಿದ್ದಾರೆ.

ಅಷ್ಟಕ್ಕೂ ಆಗಿರುವುದೇನು ಅಂದರೆ ಸ್ನೇಹಿತರೇ ಕೃತಿ ಶೆಟ್ಟಿ ಅವರು ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಅಲ್ಲಿ ವೇದಿಕೆ ಮೇಲೆ ಕಾರ್ಯಕ್ರಮದ ಇಬ್ಬರು ನಿರೂಪಕರು ಕೃತಿ ಶೆಟ್ಟಿ ಅವರನ್ನು ಆಹ್ವಾನಿಸಿಕೊಂಡು ವೇದಿಕೆ ಮೇಲೆ ಅವರಿಗೆ ಪ್ರಶ್ನೆ ಕೇಳುವಾಗ ಇಬ್ಬರು ನಿರೂಪಕರ ನಡುವೆಯೇ ಜಗಳ ಆರಂಭವಾಗಿದೆ ನಾನು ಪ್ರಶ್ನೆ ಕೇಳುತ್ತೇನೆ ನಾನು ಪ್ರಶ್ನೆ ಕೇಳುತ್ತೇನೆ ಎಂದು ನಿರೂಪಕರು ಜಗಳ ಆಡುವುದನ್ನು ಕಂಡು ನಟಿ ಕೃತಿ ಶೆಟ್ಟಿ ಅವರಿಗೆ ಬೇಸರ ಆಗಿದೆ. ಆ ದುಃಖದಿಂದ ಕಣ್ಣಲ್ಲಿ ನೀರು ಬಂದಿದ್ದು ಬಳಿಕ ಈ ರಿಯಾಕ್ಷನ್ ಗೆ ನಿರೂಪಕರು ನಾವು ಮಾಡಿದ್ದೂ ಸುಮ್ಮನೆ ತಮಾಷೆಗಾಗಿ ಅಂತ ನಿರೂಪಕರೇ ಕೊನೆಗೆ ಕೃತಿ ಶೆಟ್ಟಿ ಅವರನ್ನು ಸಮಾಧಾನಪಡಿಸಿದ್ದಾರೆ.

ನನಗೆ ಜಗಳ ಆಡೋದನ್ನ ನೋಡಿದರೆ ಬಹಳ ಬೇಗ ಅಳು ಬಂದುಬಿಡುತ್ತದೆ ಎಂದು ಹೇಳಿಕೊಂಡಿರುವ ಕೃತಿ ಶೆಟ್ಟಿ ನಿರೂಪಕರು ಜಗಳ ಆಡುತ್ತಿರುವುದು ತಮಾಷೆಗಾಗಿ ಎಂಬುದನ್ನು ತಿಳಿಯದೆ ಕಣ್ಣೀರು ಇಟ್ಟಿದ್ದರೆ ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ನಟಿ ಕೃತಿ ಶೆಟ್ಟಿ ಅವರ ನಟನೆ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.