ಅರಬ್ ಹುಡುಗಿಯರಿಂತಲೂ ಸಕತ್ತಾಗಿ ಬೆಲ್ಲಿ ಡಾನ್ಸ್ ಮಾಡಿದ ವೈಷ್ಣವಿ ಗೌಡ… ಅಷ್ಟಕ್ಕೂ ಈ ಡಾನ್ಸ್ ನಲ್ಲಿ ಏನೆಲ್ಲಾ ನೋಡಬಹುದು… ಕುತೂಹಲ ಜಾಸ್ತಿ ಆಗ್ತಿದೆಯಾ…

97

ಹೌದು ಸ್ನೇಹಿತರೆ ಸನ್ನಿಧಿ ಅಂತಾನೆ ಕಿರುತೆರೆಯಲ್ಲೇ ಇವರು ಖ್ಯಾತಿ ಪಡೆದುಕೊಂಡಿದ್ದಾರೆ ಅಗ್ನಿಸಾಕ್ಷಿ ಧಾರಾವಾಹಿಯಿಂದ ಅತಿಹೆಚ್ಚು ಜನಪ್ರಿಯತೆ ಖ್ಯಾತಿಗಳಿಸಿಕೊಂಡ ಇವರು ಕರ್ನಾಟಕಾದ್ಯಂತ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಕೂಡ ಇವರ ಅಭಿನಯಕ್ಕೆ ಅಭಿಮಾನಿಗಳಿದ್ದಾರೆ.ನಟಿ ವೈಷ್ಣವಿ ಗೌಡ ಅವರನ್ನ ಇವತ್ತಿಗೂ ಸನ್ನಿಧಿ ಅಂತಾನೇ ಬಹಳಷ್ಟು ಮಂದಿ ಅವರನ್ನು ಗುರುತು ಹಿಡಿಯುತ್ತಾರೆ ಗುರುತು ಹಿಡಿದು ಮಾತನಾಡಿಸುತ್ತಾರೆ ಹಾಗಾಗಿ ಇವರ ಪಾತ್ರ ಎಲ್ಲರನ್ನು ಅದೆಷ್ಟು ಮೋಡಿ ಮಾಡಿದೆ ಅನ್ನೋದು ಇದರಿಂದ ಗೊತ್ತಾಗುತ್ತೆ ನೋಡಿ. ನಟಿ ವೈಷ್ಣವಿ ಗೌಡ ಅವರು ಒಂಥರಾ ಮಲ್ಟಿ ಟ್ಯಾಲೆಂಟ್ ಅನ್ನಬಹುದು ನಟನೆ ಮಾತ್ರವಲ್ಲ ಹಾಡಿಗೂ ಸೈ ಡ್ಯಾನ್ಸ್ ಗೂ ಸೈ ಎನ್ನುವ ಈಕೆಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಅಷ್ಟು ಮಾತ್ರವಲ್ಲ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ತೆರೆದು ಈಗಾಗಲೇ ಹೆಚ್ಚು ಸಬ್ ಸ್ಕ್ರೈಬರ್ಸ್ ಗಳನ್ನು ಕೂಡ ಹೊಂದಿದ್ದಾರೆ ನಟಿ ವೈಷ್ಣವಿ ಗೌಡ.

ಹೌದು ಉತ್ತಮ ಯೂಟ್ಯೂಬ್ ಚಾನೆಲ್ ಮೂಲಕ ಜನರಿಗೆ ಎಕ್ಸರ್ ಸೈಸ್ ಮಾಡೋದು ಡಯಟ್ ಪ್ಲಾನ್ ಬಗ್ಗೆ ತಿಳಿಸುವುದು ಯೋಗ ಧ್ಯಾನ ಮತ್ತು ಆರೋಗ್ಯಕರವಾದ ವಿಚಾರಗಳ ಬಗ್ಗೆ ಹಂಚಿಕೊಳ್ಳುವುದು ಇವುಗಳನ್ನು ಹೆಚ್ಚಾಗಿ ಮಾಡುವ ವೈಷ್ಣವಿ ಗೌಡ ಅವರು, ಯೂಟ್ಯೂಬ್ ಚಾನಲ್ ನಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ ಯಶಸ್ಸು ಪಡೆದುಕೊಂಡಿದ್ದಾರೆ ಸ್ವಲ್ಪ ದಿನಗಳಲ್ಲಿಯೇ ಹೆಚ್ಚಿನ ಸಬ್ ಸ್ಕ್ರೈಬರ್ಸ್ ಗಳನ್ನ ಹೊಂದಿರುವ ವೈಷ್ಣವಿ ಗೌಡ ಅವರು ಈ ಹಿಂದೆ ಹೊಸ ಮನೆಯನ್ನು ಗೃಹಪ್ರವೇಶ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಅಷ್ಟೆ ಅಲ್ಲಾ ನಟಿ ವೈಷ್ಣವಿ ಗೌಡ ಅವರೂ ದುಬಾರಿ ಕಾರನ್ನು ಖರೀದಿಸುವ ಮೂಲಕ ಕಿರುತೆರೆ ಹಿರಿತೆರೆ ಕಲಾವಿದರು ಗಳಿಗೂ ಕೂಡ ಅಚ್ಚರಿ ಪಡಿಸುವಂತಹ ಯಶಸ್ಸನ್ನು ಪಡೆದುಕೊಂಡಿದ್ದರು.

ಆಗಾಗ ರೀಲ್ಸ್ ಮಾಡುವ ಮೂಲಕವೂ ಅಭಿಮಾನಿಗಳ ನಿದ್ದೆ ಕದಿಯುವ ನಟಿ ವೈಷ್ಣವಿ ಗೌಡ ಸದ್ಯ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಹವಾ ಎಬ್ಬಿಸಿದ್ದಾರೆ ನೋಡಿ. ಹೌದು ವೈಷ್ಣವಿ ಗೌಡ ಅವರು ಈ ಮೊದಲೇ ಹೇಳಿದಂತೆ ಒಂಥರಾ ಮಲ್ಟಿ ಟ್ಯಾಲೆಂಟೆಡ್ ಇವರು ಟ್ರೆಂಡಿಂಗ್ ಹಾಡುಗಳಿಗೆ ಸ್ಟೆಪ್ ಹಾಕುವ ಮೂಲಕ ಆ ವೀಡಿಯೋಗಳನ್ನು ಇನ್ಸ್ಟಾ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹಾಗೆ ಇದೀಗ ನಟ ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಹೆಜ್ಜೆ ಹಾಕಿರುವ ಇಂದಿನ ಟ್ರೆಂಡಿಂಗ್ ಹಾಡು ಆಗಿರುವ ವಿಕ್ರಾಂತ್ ರೋಣ ಸಿನೆಮಾದ ರ ರಾ ರುಕಮ್ಮ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ಹೌದು ಸದ್ಯ ವೈಷ್ಣವಿ ಗೌಡ ಅವರ ಬೆಲ್ಲಿ ಡ್ಯಾನ್ಸ್ ಸ್ಟೆಪ್ ಎಲ್ಲರಿಗೂ ಇಷ್ಟವಾಗಿದೆ ಈ ವೀಡಿಯೋ ಹೆಚ್ಚು ಹೆಚ್ಚು ಮೆಚ್ಚುಗೆ ಪಡೆದುಕೊಳ್ಳುತ್ತಾ ಇದೆ.

ಹೌದು ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಯಶಸ್ಸು ಪಡೆದುಕೊಂಡರು ಆ ಹಿಂದೆ ದೇವಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು ಆದರೆ ಆ ಧಾರಾವಾಹಿಯ ಪಾತ್ರ ಅವರಿಗೆ ಅಷ್ಟು ಯಶಸ್ಸು ತಂದುಕೊಟ್ಟಿರಲಿಲ್ಲ ಸದ್ಯ ವೈಷ್ಣವಿ ಗೌಡ ಅವರು ಸಿನಿಮಾಗಳಲ್ಲಿ ಕೂಡ ಅಭಿನಯಿಸುವ ಪ್ಲಾನ್ ನಲ್ಲಿದ್ದು ಸೋಷಿಯಲ್ ಮೀಡಿಯಾದಲ್ಲಿ ಸದ್ಯ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ್ದಾರೆ ಮತ್ತು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿದ್ದ ಇವರು ಮನೆಯೊಳಗೆ ಉತ್ತಮವಾಗಿ ಆಟವಾಡುತ್ತಾ ಎಲ್ಲರ ಮೆಚ್ಚುಗೆಯನ್ನು ಕೂಡ ಪಡೆದುಕೊಂಡು, ಕರ್ನಾಟಕ ಜನತೆಯ ಫೇವರಿಟ್ ಕಂಟೆಸ್ಟೆಂಟ್ ಆಗಿ ಹೊರಹೊಮ್ಮಿದ್ದರು. ಸದ್ಯ ವೈರಲ್ ಆಗ್ತಿರುವ ನಟಿ ವೈಷ್ಣವಿ ಗೌಡ ಅವರ ಈ ಬೆಲ್ಲಿ ಡ್ಯಾನ್ಸ್ ವಿಡಿಯೋ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here