Categories
ಭಕ್ತಿ ಮಾಹಿತಿ ಸಂಗ್ರಹ

ಒಂದು ನಿಂಬೆ ಹಣ್ಣಿನಿಂದ ಹೀಗೆ ಶುದ್ಧಿ ಮಾಡಿದರೆ ನಿಮ್ಮ ನಗದುಪೆಟ್ಟಿಗೆ ಯಾವಾಗಲೂ ಹಣದಿಂದ ತುಂಬಿರುತ್ತದೆ

ವ್ಯಾಪಾರ ವಹಿವಾಟು ಎಂದರೆ ಲಾಭ ನಷ್ಟಗಳು ಸಾಮಾನ್ಯ ಆದರೆ ನಾವು ಎಷ್ಟು ಕಷ್ಟಪಟ್ಟು ಎಷ್ಟು ನಿಯತ್ತಾಗಿ ದುಡಿದರೂ ಕೂಡ ಕೆಲವೊಮ್ಮೆ ಲಾಭ ಆಗುತ್ತಿರುವುದಿಲ್ಲ ಲಾಭ ಆದರೂ ಕೂಡ ಅದರಿಂದ ನಮಗೆ ಏನೂ ಪ್ರಯೋಜನ ಆಗುತ್ತಿರುವುದಿಲ್ಲ ಸಾಮಾನ್ಯವಾಗಿ ಅಂಗಡಿಗಳಲ್ಲಿ ಈ ಮಾತುಗಳನ್ನು ನಾವು ಕೇಳಿರುತ್ತೇವೆ ಎಷ್ಟು ದುಡಿದರೂ ಕೂಡ ಗಲ್ಲಾ ಪೆಟ್ಟಿಗೆ ತುಂಬುತ್ತಿಲ್ಲ .

ಅಂದರೆ ಹಣವನ್ನು ಇಡುವಂತಹ ಪೆಟ್ಟಿಗೆ ತುಂಬುವುದಿಲ್ಲ ಇದರಲ್ಲಿ ಏನೋ ದೋಷವಿದೆ ಎಂದೆಲ್ಲಾ ಹೇಳುವ ಮಾತುಗಳನ್ನು ನಾವು ಕೇಳಿರುತ್ತೇವೆ ಆದರೆ ಅಲ್ಲಿ ಏನು ಸಮಸ್ಯೆಯಾಗಿದೆ ಮತ್ತು ಅದರಿಂದ ನಾವು ಹೊರಬರುವುದು ಹೇಗೆ ಎಂದು ಮಾತ್ರ ಯೋಚಿಸಿರುವುದಿಲ್ಲ ಕೆಲವೊಂದು ಬಾರಿ ಬೇರೆಯವರ ಕಣ್ಣು ಬಿದ್ದು ಕೂಡ ಗಲ್ಲ ಪೆಟ್ಟಿಗೆ ತುಂಬುತ್ತಿರುವುದಿಲ್ಲ .

ಗಲ್ಲಾಪೆಟ್ಟಿಗೆ ತುಂಬಿದರೂ ಕೂಡ ಬೇರೆಯವರ ಕಣ್ಣು ಬಿದ್ದು ಗಲ್ಲಾಪೆಟ್ಟಿಗೆ ತುಂಬಾ ಬೇಗ ಖಾಲಿ ಯಾಗುತ್ತಿರುತ್ತದೆ ಆ ರೀತಿ ಸಮಸ್ಯೆಗಳಿಂದ ನೀವೇನಾದರೂ ಬಳಲುತ್ತಿದ್ದರೆ ಅಥವಾ ನಿಮ್ಮ ಪರಿಚಯ ಎದುರು ಪರಿಚಯದವರು ಅಥವಾ ಸ್ನೇಹಿತರು ಆ ಸಮಸ್ಯೆಗೆ ಒಳಗಾಗಿದ್ದರೆ ನಾವು ಈ ದಿನ ನಿಮಗೆ ಅದಕ್ಕೊಂದು ಸರಳವಾದಂತಹ ಮತ್ತು ಅತ್ಯಂತ ಫಲಕಾರಿ ಯಾದಂತಹ ಪರಿಹಾರ ವಿಧಾನವನ್ನು ತಿಳಿಸಿಕೊಡುತ್ತೇವೆ .

ಈ ವಿಧಾನವನ್ನು ಮಾಡುವುದರಿಂದಾಗಿ ನಿಮ್ಮ ಗಲ್ಲಾ ಪೆಟ್ಟಿಗೆಗೆ ಆಗಿರುವಂಥ ದೃಷ್ಟಿ ಅಥವಾ ನಿಮ್ಮ ವ್ಯಾಪಾರ ಕೇಂದ್ರಕ್ಕೆ ಆಗಿರುವಂಥ ದೃಷ್ಟಿಯನ್ನು ಬೇಗ ನಿವಾರಣೆ ಮಾಡಿಕೊಳ್ಳಬಹುದು ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ ಅಲ್ಲವೇ ಮೊದಲು ಅದಕ್ಕೆ ಬೇಕಾದಂತಹ ಸಾಮಗ್ರಿಗಳನ್ನು ತೆಗೆದಿಟ್ಟು ಕೊಳ್ಳೋಣ .

ಮೊದಲನೆಯದಾಗಿ ಮೆಣಸು ಅಂದರೆ ಕಾಳುಮೆಣಸು ಎಂಟು ಕಾಳು ಮೆಣಸುಗಳಾದರೆ ಸಾಕ್ಕೂ ನಾಲ್ಕು ಅರಿಶಿಣ ಕೊಂಬು ಅದರ ಜೊತೆಯಲ್ಲಿ ಮುಖ್ಯವಾಗಿ ಏಕದಾರಿ ನಿಂಬು ಅಂದರೆ ಮಾಮೂಲಿ ನಿಂಬೆ ಹಣ್ಣಿಗಿಂತ ಅದು ಒಂದು ಸ್ವಲ್ಪ ವಿಭಿನ್ನವಾಗಿರುತ್ತದೆ ಆ ನಿಂಬೆಹಣ್ಣಿನಲ್ಲಿ ಮದ್ಯ ಗೆರೆ ಮೂಡಿರುತ್ತದೆ ಅದಕ್ಕೆ ಏಕ ದಾರಿ ನಿಂಬು ಎಂದು ಕರೆಯುತ್ತಾರೆ ಈ ನಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು .

ನೀವು ವ್ಯಾಪಾರ ಮಾಡುವಂತಹ ಅಂಗಡಿಯ ಮುಂದೆ ಸಂಜೆ ಸಮಯ ಅದರಲ್ಲೂ ಕೂಡ ಶುಕ್ಲಪಕ್ಷದ ದಿನಗಳಲ್ಲಿ ಯಾವುದಾದರೂ ಒಂದು ಶನಿವಾರದಂದು ಈ ಪೂಜೆ ಮಾಡುವುದು ಉತ್ತಮ ಶನಿವಾರ ಆಗಲಿಲ್ಲ ಎಂದರೆ ಬೇರೆ ದಿನವೂ ಕೂಡ ಪೂಜೆಯನ್ನು ಮಾಡಬಹುದು ನಿಮ್ಮ ಅಂಗಡಿಯ ಮುಂದೆ ಅಂಗಡಿ ಬಾಗಿಲು ಹಾಕುವ ಮುಂಚೆ ಈ ನಿಂಬೆ ಹಣ್ಣನ್ನು ನಾಲ್ಕು ಭಾಗಗಳಾಗಿ ಮಾಡಿಕೊಳ್ಳಬೇಕು ಆ ಭಾಗಗಳನ್ನು ನಾಲ್ಕು ಪೇಪರ್ ಗಳನ್ನು ತೆಗೆದುಕೊಂಡು ಅದರ ಮೇಲೆ ಒಂದೊಂದು ಭಾಗಗಳನ್ನು ಇಡಬೇಕು .

ಅದರ ಜೊತೆಯಲ್ಲಿ ಆ ಪೇಪರ್ ಮೇಲೆ ಎರಡು ಕಾಳುಮೆಣಸು ಮತ್ತು ಒಂದು ಅರಿಶಿಣದ ಕೊಂಬು ಈ ಮೂರು ವಸ್ತುಗಳನ್ನು ಕೂಡ ಒಂದೊಂದು ಪೇಪರ್ ರೀತಿಯಲ್ಲಿ ನಾಲ್ಕು ಪೇಪರ್ ನಲ್ಲಿ ಹಾಕಬೇಕು ಇದನ್ನು ಅಂಗಡಿಯ ನಾಲ್ಕು ಮನೆ ಮೂಲೆಯಲ್ಲಿ ಈಶಾನ್ಯ ವಾಯುವ್ಯ ಆಗ್ನೇಯ ನೈರುತ್ಯ ಈ ನಾಲ್ಕು ಮೂಲೆಯಲ್ಲಿ ಈ ಪೇಪರ್ ಗಳನ್ನು ಇಡಬೇಕು ಅದಾದ ನಂತರ ಅಂಗಡಿಯ ಬಾಗಿಲು ಮುಚ್ಚುವ ಸಮಯದಲ್ಲಿ ನಿಮ್ಮ ಗಲ್ಲಾ ಪೆಟ್ಟಿಗೆಯನ್ನು ಸಂಪೂರ್ಣವಾಗಿ ಮುಚ್ಚಬಾರದು,

ಈ ರೀತಿ ನಿಯಮಿತವಾಗಿ ಮಾಡುತ್ತಾ ಬರುವುದರಿಂದಾಗಿ ನಿಮ್ಮ ಅಂಗಡಿಗೆ ಯಾವುದೇ ರೀತಿಯಾದಂತ ದೃಷ್ಟಿ ಆಗಿದ್ದರೂ ಕೂಡ ಸಾಧ್ಯವಾದಷ್ಟು ಬೇಗ ನಿವಾರಣೆಯಾಗುವ ಸಾಧ್ಯತೆಯಿದೆ ಇದನ್ನು ನಿಯಮಿತವಾಗಿ ಮಾಡುತ್ತಾ ಬನ್ನಿ ಮತ್ತು ನೀವೇ ಅದರ ಪರಿಹಾರವನ್ನು ನೋಡುತ್ತೀರಾ ಅದಾದ ನಂತರ ನಿಮ್ಮ ಸ್ನೇಹಿತರಿಗೂ ಕೂಡ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.