Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಒಂದು ರೂಪಾಯಿ ಖರ್ಚು ಮಾಡದೆ, ನಿಮ್ಮ ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಸರಳ ಉಪಾಯ..!!

ಯಾವುದೇ ಕಾರ್ಯದಲ್ಲಾಗಲಿ ಅಥವಾ ಹೊಸ ಆಯೋಜನೆಗಳಿಗೆ ಹೊಸ ವ್ಯಕ್ತಿಗಳನ್ನು ಸಂಪರ್ಕಿಸಲು ಹೊರಟಾಗ ಮೊದಲು ನಿಮ್ಮ ಚಹರೆ ಅವರನ್ನ ತುಂಬಾ ಆಕರ್ಷಿಸುತ್ತದೆ,

ನಿಮ್ಮ ಮುಖದ ಬಣ್ಣ ಹಾಗು ಶುಬ್ರತೆ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ, ಕೆಲವರಿಗೆ ಇಂತಹ ಅನುಭವ ಇರುತ್ತದೆ, ಇನ್ನು ನಾವು ತಿಳಿಸುವ ಸುಲಭ ಸಣ್ಣ ಸಲಹೆಗಳನ್ನ ಪಾಲಿಸುವುದರ ಮೂಲಕ, ಯಾವುದೇ ಹೆಚ್ಚಿನ ವ್ಯಯ ಮಾಡದೆ, ನಿಮ್ಮ ಸೌಂದರ್ಯವವನ್ನ ಕಾಪಾಡಿಕೊಳ್ಳಿ.

ಮನಸ್ಸು ಯಾವಾಗಲೂ ಶಾಂತವಾಗಿರ ಬೇಕು ಮಾನಸಿಕ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಂಡಲ್ಲಿ ಮನುಜನ ಚರ್ಮವು ಸುಕ್ಕಾಗದಂತೆ ಉತ್ತವಾಗಿರುತ್ತದೆ.

ಬೇಕರಿ ತಿಂಡಿಗಳು ಹಾಗು ಎಣ್ಣೆಯಲ್ಲಿ ಮಾಡುವಂತಹ ಆಹಾರ ಮತ್ತು ನಾವು ತಿನ್ನುವ ಆಹಾರದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ಜಾಗ್ರತೆ ವಹಿಸುವುದುರಿಂದಲೂ ನಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ.

ದೇಹದ ತೂಕದ ಮೇಲು ನಿಮ್ಮ ಚರ್ಮದ ಸೌಂದರ್ಯ ಅಡಗಿರುತ್ತದೆ ಅದರಂತೆ ತೂಕವನ್ನು ಕಡಿಮೆ ಮಾಡುವುದರಿಂದಲೂ ನಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ.

ಪರಿಸರದಲ್ಲಿನ ಕಲ್ಮಶ ನಿಮಗೆ ತಿಳಿಯದೆ ನಿಮ್ಮ ಚರ್ಮದ ಮೇಲೆ ಪ್ರತಿ ದಿನವೂ ಬೀಳುವುದರಿಂದ ಪ್ರತಿ ನಿತ್ಯ ಸ್ನಾನ ಮಾಡುವುದರಿಂದ ನಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ.

ಧೂಮಪಾನ ಹಾಗು ಮಧ್ಯಪಾನ ದಂತಹ ಕೆಟ್ಟ ಚಟಗಳಿಗೆ ಒಳಗಾಗದೆ ಇರುವುದರಿಂದ ನಮ್ಮ ಚರ್ಮ ಸೌಂದರ್ಯವು ರಕ್ಷಿಸಲ್ಪಡುತ್ತದೆ.

ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟುವುದು ಮುಂದೂಡಲ್ಪಡುತ್ತದೆ ಹಾಗೂ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ ಅವಶ್ಯಕತೆಗಿಂತಲೂ ಕಡಿಮೆ ನೀರನ್ನು ಸೇವಿಸುತ್ತಿದ್ದಲ್ಲಿ ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯ ಪದಾರ್ಥಗಳು ಸರಿಯಾಗಿ ಹೊರದೂಡಲು ಆಗುವುದಿಲ್ಲ ಇದರ ಫಲವಾಗಿ ಆರೋಗ್ಯ ಕೆಡುತ್ತದೆ ದಿನಕ್ಕೆ ಕನಿಷ್ಟ 8 ಲೋಟ ನೀರನ್ನಾದರೂ ಸೇವಿಸುವುದು ಅವಶ್ಯಕ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.