Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಒಣಕೆಮ್ಮು ಇದ್ದರೆ ರಾತ್ರಿ ಇದನ್ನು ಸೇವಿಸಿ ಬೆಳಿಗ್ಗೆ ಕೆಮ್ಮು ಇರೋದೇ ಇಲ್ಲ ..!

ಸಾಮಾನ್ಯವಾಗಿ ವಾತಾವರಣದಲ್ಲಿ ಬದಲಾವಣೆ ಆದರೆ ಚಿಕ್ಕಪುಟ್ಟ ಸಮಸ್ಯೆಗಳು ಎದುರಾಗುವುದನ್ನು ನಾವು ಗಮನಿಸಿರುತ್ತೆವೆ. ಹಾಗೆ ನಾವು ಕುಡಿಯುವ ನೀರಿನಿಂದ ಕೂಡ ನಮಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ ಕಾರಣವೆ ನಾವು ಆದಷ್ಟು ಶುದ್ಧವಾದ ನೀರನ್ನು ಕುಡಿಯುವುದು ಅತ್ಯವಶ್ಯಕವಾಗಿರುತ್ತದೆ ಮತ್ತು ಆಚೆ ನೀರನ್ನು ಕುಡಿಯುವಾಗ ಆದಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು.

ಯಾಕೆಂದರೆ ಆಚೆಯಿರುವ ನೀರಿನಲ್ಲಿ ಬ್ಯಾಕ್ಟೀರಿಯಾಗಳ ಉತ್ಪತ್ತಿ ಹೆಚ್ಚಾಗಿರಬಹುದು ಅಥವಾ ಬ್ಯಾಕ್ಟೀರಿಯಾಗಳು ಕೂಡ ನೀರಿನಲ್ಲಿ ಇರಬಹುದು. ನೀವು ಆಚೆ ನೀರು ಕುಡಿಯುವ ಮುನ್ನ ಒಮ್ಮೆ ಯೋಚಿಸಿ ಹೀಗೆ ನಮಗೆ ವಾತಾವರಣ ಬದಲಾವಣೆಗೊಂಡರು ಸಹ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ ಮತ್ತು ನೀರಿನ ಬದಲಾವಣೆ ಆದರೂ ಕೂಡ ಈ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.

ಹೆಚ್ಚಾಗಿ ನೀರಿನ ಬದಲಾವಣೆಯಾದಾಗ ನಮಗೆ ಕೆಮ್ಮಿನ ಸಮಸ್ಯೆ ಉಂಟಾಗುತ್ತದೆ ಈ ಕೆಮ್ಮಿನ ಸಮಸ್ಯೆ ಒಣ ಕೆಮ್ಮು ಬಂದರೆ ಪಜೀತಿ ಪಡಬೇಕಾಗುತ್ತದೆ. ಈ ಒಣ ಕೆಮ್ಮಿನ ಸಮಸ್ಯೆಯನ್ನು ಬೇಗ ಪರಿಹಾರ ಮಾಡಿಕೊಳ್ಳಬಹುದು ಹೇಗೆಂದರೆ ಕೆಲವೊಂದು ಸುಲಭವಾಗ ಮನೆಮದ್ದುಗಳಿಂದ. ಹಾಗಾದರೆ ನಿಮಗೂ ಕೂಡ ಈ ಕೆಲವೊಂದು ಮನೆಮದ್ದುಗಳು ಉಪಯುಕ್ತವಾಗುತ್ತದೆ ಅಂದಲ್ಲಿ ತಪ್ಪದೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಒಣ ಕೆಮ್ಮು ಆದಾಗ ತಕ್ಷಣವೇ ಈ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮಗೆ ಈ ಒಣಕೆಮ್ಮು ಒಂದೆರಡು ದಿನಗಳಲ್ಲಿಯೇ ಸಮಸ್ಯೆ ಪರಿಹಾರ ಆಗುತ್ತದೆ. ನಿಮಗೆ ಒಣಕೆಮ್ಮು ಕಾಡುತ್ತಾ ಇದ್ದರೆ ಆಗ ನೀವು ಪದೇ ಪದೇ ನೀರನ್ನು ಕುಡಿಯುತ್ತಿರ ಬೇಕು.

ಯಾಕೆಂದರೆ ಆಗ ಗಂಟಲು ಒಣಗುವುದಿಲ್ಲ ಮತ್ತು ಒಣ ಕೆಮ್ಮು ಕೂಡ ಉಂಟಾಗುವುದಿಲ್ಲ. ಗಂಟಲು ನೋವು ಆದಾಗ ಒಣ ಕೆಮ್ಮು ಬಂದಾಗ ನೀವು ಬಿಸಿ ನೀರನ್ನು ಕುಡಿಯುವುದು ಅತ್ಯವಶ್ಯಕವಾಗಿರುತ್ತದೆ. ತಣ್ಣೀರನ್ನು ಬಳಸೋದನ್ನ ಆದಷ್ಟು ಕಡಿಮೆ ಮಾಡಿ. ಒಣ ಕೆಮ್ಮಿಗೆ ಉತ್ತಮ ಪರಿಹಾರ ಅಂದರೆ ಈರುಳ್ಳಿಯ ರಸ ಈ ಈರುಳ್ಳಿಯ ರಸದೊಂದಿಗೆ ಕಲ್ಲುಸಕ್ಕರೆ ಅಥವಾ ಬೆಲ್ಲವನ್ನು ಮಿಶ್ರ ಮಾಡಿ ರಾತ್ರಿ ಮಲಗುವ ಮುನ್ನ ತಿಂದು ನೀರನ್ನು ಕುಡಿಯದೆ ಹಾಗೆ ಮಲಗಬೇಕು.

ಇದು ಒಣ ಕೆಮ್ಮನ್ನು ಬೇಗ ಪರಿಹಾರ ಮಾಡುತ್ತದೆ. ಒಣ ಕೆಮ್ಮಿಗೆ ಶುಂಠಿ ಕೂಡ ಉತ್ತಮ ಪ್ರಯೋಜನವಾಗಿರುತ್ತದೆ ಶುಂಠಿಯ ರಸವನ್ನು ಆಗಾಗ ನುಂಗುವುದರಿಂದ ಅಥವಾ ಶುಂಠಿಯನ್ನು ದಿನದಲ್ಲಿ ಸ್ವಲ್ಪ ಸಮಯ ಬಿಟ್ಟು ಬಿಟ್ಟು ತಿನ್ನುವುದರಿಂದ ಕೂಡ ಒಣಕೆಮ್ಮು ಬೇಗ ನಿವಾರಣೆ ಆಗುತ್ತದೆ. ಆದರೆ ಮಿತಿಮೀರಿ ಶುಂಠಿಯನ್ನ ತಿನ್ನಬೇಡಿ ಇದರಿಂದ ಹೊಟ್ಟೆ ಉರಿಯುವ ಸಾಧ್ಯತೆಯಿರುತ್ತದೆ. ಜೇನುತುಪ್ಪವನ್ನು ಸವೆಯುವುದರಿಂದ ಕೂಡ ಒಣ ಕೆಮ್ಮು ದೂರವಾಗುತ್ತದೆ. ಬೆಳ್ಳುಳ್ಳಿಯನ್ನು ಜಗಿದು ನುಂಗಬಹುದು ಇದರ ರಸ ಒಣ ಕೆಮ್ಮನ್ನು ನಿವಾರಣೆ ಮಾಡುತ್ತದೆ.

ಇನ್ನೂ ಒಣ ಕೆಮ್ಮು ಆದಾಗ ಕಷಾಯಗಳನ್ನು ಮಾಡಿ ಕುಡಿಯುತ್ತಾರೆ ಒಣ ಕೆಮ್ಮು ಇರುವ ಸಮಯದಲ್ಲಿ ಮಾತ್ರ ಈ ಕಷಾಯವನ್ನು ಮಾಡಿ ಕುಡಿಯಿರಿ ಕಪ್ ಬಿಸಿ ಬಿಸಿ ಊಟವನ್ನು ಮಾಡಿ ಈ ರೀತಿಯ ಪರಿಹಾರಗಳಿಂದ ಒಣಕೆಮ್ಮು ನಿವಾರಣೆಯಾಗುತ್ತದೆ. ಊಟದ ನಂತರ ಸ್ವಲ್ಪ ಬೆಲ್ಲವನ್ನು ಚಪ್ಪರಿಸಿ ತಿನ್ನುವುದರಿಂದ ಒಣಕೆಮ್ಮು ಬೇಗ ನಿವಾರಣೆ ಆಗುತ್ತದೆ ಆದಷ್ಟೂ ಒಣ ಕೆಮ್ಮು ಬಂದಾಗ ಗಂಟಲು ಒಣಗುವುದಕ್ಕೆ ಬಿಡಬೇಡಿ, ಈ ರೀತಿಯ ಪರಿಹಾರಗಳಿಂದ ಒಣ ಕೆಮ್ಮು ಬೇಗ ಪರಿಹಾರ ಆಗುತ್ತದೆ.