Categories
ಮಾಹಿತಿ ಸಂಗ್ರಹ

ಓದಿರೋದು ಬರೀ 7ನೇ ತರಗತಿ,ಸಾಧನೆ ವಿಶ್ವ ಬೆರಗಾಗುವಂತಾದದ್ದು.. ಈತನೇ ರೈತ ವಿಜ್ಞಾನಿ ಮಂಜೇಗೌಡ!

ಈ ರೈತನ ಸಾಧನೆಯ ಕತೆಯನ್ನು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಹೌದು ಸ್ನೇಹಿತರೆ ಕೇವಲ ಏಳನೇ ತರಗತಿಯನ್ನು ಓದಿರುವ ತಹ ಈ ರೈತ ಮಾಡಿರುವಂತಹ ಸಾಧನೆ ಒಂದಲ್ಲ ಎರಡಲ್ಲ,

ಹಾಗೆಯೇ ಆರು ಎಕರೆ ಜಮೀನಿನಲ್ಲಿ ವರುಷಕ್ಕೆ ಆರರಿಂದ ಏಳು ಲಕ್ಷ ರೂಪಾಯಿ ಲಾಭವನ್ನು ಪಡೆದುಕೊಳ್ಳುತ್ತಿರುವ ಇವರ ಹೆಸರು ಮಂಜೇಗೌಡ ಎಂದು, ಆದರೆ ಇವರು ಮಾತ್ರ ಪ್ರಖ್ಯಾತಿ ಹೊಂದಿರುವಂತಹ ಹೆಸರು ಅಂದರೆ ರೋಬೋ ಮಂಜೇಗೌಡ ಎಂದು.

ಮಂಜೇಗೌಡ ಅವರು ತಮ್ಮ ರೈತಪಿ ಜೀವನದಲ್ಲಿ ಸಾಕಷ್ಟು ಸಾಹಸಗಳನ್ನು ಮಾಡಿದ್ದು ಇವರು ರೋಬೋ ಮಂಜೇಗೌಡ ಎಂದು ಪ್ರಖ್ಯಾತಿ ಹೊಂದಿದ್ದು ಯಾಕೆ ಅಂತ ಹೇಳುವುದಾದರೆ ಇದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ, ಹೌದು ಅದೇನು ಅಂತ ಹೇಳ್ತೀವಿ ಕೇಳಿ ಸ್ನೇಹಿತರೇ,

ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ಕೊಳವೆ ಬಾವಿಗಳು ಹೆಚ್ಚಾಗುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ಕಳೆದ ವರುಷ ಸಾಕಷ್ಟು ಚಿಕ್ಕಮಕ್ಕಳು ಈ ಕೊಳವೆ ಬಾವಿಯ ಒಳಗೆ ಸಿಲುಕಿ ಹಾಕಿಕೊಂಡಿರುವ ವಿಚಾರವನ್ನು ಕೂಡ ನೀವು ಕೇಳಿರುತ್ತೀರಿ.

ಆ ಸಂದರ್ಭದಲ್ಲಿಯೇ ಮಂಜೇಗೌಡ ಅವರು ಕೊಳವೆ ಬಾವಿಯಲ್ಲಿ ಬಿದ್ದಂತಹ ಮಕ್ಕಳನ್ನು ಮೇಲೆತ್ತುವುದಕ್ಕಾಗಿ ಒಂದು ಸಾಧನವನ್ನು ಕಂಡು ಹಿಡಿದರು ಅಂದರಿಂದ ಇವರು ಹೆಚ್ಚು ಪ್ರಖ್ಯಾತಿ ಹೊಂದಿದ್ದರು.

ಮತ್ತು ಇವರ ಈ ಒಂದು ಅನ್ವೇಷಣೆಯು ಕೂಡ ಸಾಕಷ್ಟು ಉಪಯುಕ್ತವಾಯಿತು ಹಾಗೂ ಕೇವಲ ಕೊಳವೆ ಬಾವಿಯಿಂದ ಮಕ್ಕಳನ್ನು ಎತ್ತುವಂತಹ ಒಂದು ಅನ್ವೇಷಣೆಯ ಜೊತೆಗೆ ಮಂಜೇಗೌಡ ಅವರು ಸುಲಭವಾಗಿ ಯಾರ ಸಹಾಯವಿಲ್ಲದೇ ನಾಟಿ ಮಾಡುವಂತಹ ಒಂದು ಸಾಧನವನ್ನು ಕೂಡ ಕಂಡು ಹಿಡಿದಿದ್ದರು.

ಈ ರೀತಿಯ ಹಾಗೆಯೇ ಮಂಜೇಗೌಡರು ಏಳನೇ ತರಗತಿಯನ್ನು ಓದಿದ್ದರೂ ಕೂಡ ಇಂತಹ ಹೊಸ ಹೊಸ ಅನ್ವೇಷಣೆ ಯೊಂದಿಗೆ ಸಮಾಜಕ್ಕೆ ಒಂದು ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ ಹಾಗೂ ಇವರು ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಒಂದು ಗ್ರಾಮಕ್ಕೆ ಸೇರಿದವರಾಗಿದ್ದು, ಆರು ಎಕರೆ ಭೂಮಿಯಲ್ಲಿ ಒಂದು ಎಕರೆ ಭೂಮಿಯನ್ನು ರಾಗಿ ಮತ್ತು ತೆಂಗು ಬೆಳೆಯುವುದಕ್ಕಾಗಿ ಮೀಸಲಿಟ್ಟು, ಉಳಿದ ಭೂಮಿಯಲ್ಲಿ ಅಡಿಕೆ ತೆಂಗು ಬಾಳೆ ಇಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ರೋಬೊ ಮಂಜೇಗೌಡರ ಕೇವಲ ಕೊಳವೆ ಬಾವಿಯಿಂದ ಮಕ್ಕಳನ್ನು ಎತ್ತುವಂತಹ ಒಂದು ಯಂತ್ರವಾಗಲೀ ಅಥವಾ ನಾಟಿ ಮಾಡುವಂತಹ ಒಂದು ಯಂತ್ರವಾಗಲೀ ಮಾತ್ರ ಕಂಡು ಹಿಡಿದಿಲ್ಲ ಇವರು ಇನ್ನು ಅನೇಕ ಸಾಧನೆಗಳನ್ನು ಕೂಡ ಮಾಡಿದ್ದಾರೆ ಹೌದು ಇವರು ನಮ್ಮ ಭಾರತ ಕಾಯುವಂತಹ ಯೋಧರಿಗೆ ಸಹಾಯವಾಗಲಿ.

ಅನ್ನೋ ಕಾರಣಕ್ಕಾಗಿ ಒಂದು ಸೈನಿಕ ರೋಬೋ ಯಂತ್ರವನ್ನು ಕೂಡ ಕಂಡು ಹಿಡಿದಿದ್ದಾರೆ, ಜೊತೆಗೆ ಇವರು ವ್ಯರ್ಥವಾಗುವ ನೀರನ್ನು ಬಳಸಿ ಪವರ್ ಪ್ರೊಡಕ್ಷನ್ ಮಾಡುವುದು ಹೇಗೆ ಅಂತ ಕೂಡ ಕಂಡು ಹಿಡಿದು ಸ್ವತಃ ತಾವೇ ತಮ್ಮ ಭೂಮಿಗೆ ಈ ಒಂದು ಅನ್ವೇಷಣೆಯಿಂದ ಪವರ್ ಪ್ರೊಡಕ್ಷನ್ ಮಾಡಿ ಬೋರ್ವೆಲ್ನಿಂದ ನೀರನ್ನು ಹಾಯಿಸಿಕೊಳ್ಳುತ್ತಿದ್ದಾರೆ.

ನಮ್ಮ ಕರ್ನಾಟಕಕ್ಕೆ ಸೇರಿದಂತಹ ಈ ಒಬ್ಬ ರೋಬೊ ಮಂಜೇಗೌಡರ ಇಷ್ಟೆಲ್ಲ ಸಾಧನೆಯನ್ನು ಮಾಡಿ ಇದೀಗ ಇವರ ಈ ಒಂದು ಸಂಶೋಧನೆಯ ಪ್ರಾಜೆಕ್ಟ್ ಅನ್ನು ದೆಹಲಿಯವರು ಕೂಡ ಮೆಚ್ಚಿ ಅಲ್ಲಿಯೂ ಕೂಡ ಇಂದು ಅನ್ವೇಷಣೆಯನ್ನು ಅಳವಡಿಸಿಕೊಳ್ಳಲು ಒಪ್ಪಿದ್ದಾರೆ, ಸಾಧ್ಯವಾದರೆ ನೀವೂ ಕೂಡ ಒಮ್ಮೆಯಾದರೂ ರೋಬೊ ಮಂಜೇಗೌಡರ ಈ ಸಾಧನೆಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ ಹಾಗೂ ಮಾಹಿತಿಯನ್ನು ಬೇರೆಯವರೊಂದಿಗೂ ಕೂಡ ಶೇರ್ ಮಾಡಿ ಮತ್ತು ಈ ಮಾಹಿತಿಯ ಮುಖಾಂತರ ನಮ್ಮ ದೇಶದ ರೈತರಿಗೆ ಒಂದು ಸೆಲ್ಯೂಟ್ ಹೇಳೋಣ.