Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಫ ಕೆಮ್ಮು ಎದೆ ಉರಿಯಾ , ಸರಳ ಮನೆ ಮದ್ದು ,ಒಂದೆ ದಿನದಲ್ಲಿ ಕಫ ಕರಗುತ್ತೇ..!

ಹೆಚ್ಚಾಗಿ ದೊಡ್ಡವರಲ್ಲಿ ಕಾಣಿಸಿಕೊಳ್ಳುವ ಈ ಕೆಮ್ಮು ಎದೆ ಉರಿಯನ್ನು ಉಂಟುಮಾಡುತ್ತದೆ ಹೌದು ಕೆಮ್ಮಿ ಕೆಮ್ಮಿ ಎದೆ ಕೂಡ ನೋವಾಗುತ್ತದೆ ಈ ರೀತಿ ಕೆಮ್ಮು ಕಫ ಉಂಟುಮಾಡಿ ಎದೆನೋವನ್ನು ಕೂಡ ಉಂಟು ಮಾಡಿದೆ ಅನ್ನುವವರು ಈ ಕೆಮ್ಮಿನ ಸಮಸ್ಯೆಗೆ ಇಲ್ಲಿದೆ ಪರಿಹಾರ ನೈಸರ್ಗಿಕವಾದ ಈ ಪರಿಹಾರವನ್ನು ಮಾಡುವುದಕ್ಕೆ ನಿಮಗೆ ಹಣ ಬೇಕಿಲ್ಲ. ಆದರೆ ನಿಮಗೆ ಬೇಕಾಗಿರುವುದು ಕೇವಲ ಒಂದೇ ಒಂದು ಪದಾರ್ಥ, ಆ ಪದಾರ್ಥದಿಂದ ನೀವು ಒಣ ಕೆಮ್ಮಿನಿಂದ ಹಿಡಿದು ಕಫ ಮತ್ತು ಕೆಮ್ಮಿನಿಂದ ಕಫ ಉಂಟಾಗಿದೆ.

ಅನ್ನೋರು, ಹಾಗೆ ಶೀತ ಬಂದಾದ ಕೂಡ ಕೆಲವರಿಗೆ ಕೆಮ್ಮು ಮತ್ತು ಕಫ ಉಂಟಾಗುತ್ತದೆ ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲ ಈ ಮನೆ ಮದ್ದನ್ನು ನೀವು ಪಾಲಿಸುತ್ತ ಬಂದರೆ ಕೇವಲ ಎರಡು ಅಥವಾ ಮೂರು ದಿನಗಳಲ್ಲಿಯೆ ಕೆಮ್ಮಿನಿಂದ ಶಮನವನ್ನು ಪಡೆದುಕೊಳ್ಳಬಹುದು. ಹಾಗಾದರೆ ತಿಳಿಯೋಣ ಬನ್ನಿ ಆ ಪರಿಹಾರವನ್ನು ಹೇಗೆ ಮಾಡಿಕೊಳ್ಳುವುದು ಯಾವ ಸಮಯದಲ್ಲಿ ಮಾಡಿದರೆ ಉತ್ತಮ ಎಂಬ ಮಾಹಿತಿಯನ್ನು.

ಮೊದಲನೆಯದಾಗಿ ನಿಮಗೆ ಬೇಕಾಗಿರುವುದು ದೊಡ್ಡಪತ್ರೆ ಎಲೆ ಹೌದು ಇದನ್ನು ಸಂಬಾರಬಳ್ಳಿ ಅಂತ ಕೂಡ ಕರಿತಾರೆ ಫ್ರೆಂಡ್ಸ್ ನಿಮಗೆ ಈ ದೊಡ್ಡಪತ್ರೆ ಎಲೆ ತಿಳಿಯದೇ ಇದ್ದರೆ ನೀವು ಮನೆಯಲ್ಲಿ ದೊಡ್ಡವರಿದ್ದರೆ ಅವರ ಬಳಿ ಕೇಳಿ ತಿಳಿದುಕೊಳ್ಳಬಹುದು ದೊಡ್ಡಪತ್ರೆ ಎಲೆ ಬಹಳ ಪ್ರಯೋಜನಕಾರಿ ಈ ದೊಡ್ಡಪತ್ರೆ ಎಲೆಯಿಂದ ಚಟ್ನಿ ಕೂಡ ಮಾಡುವುದುಂಟು. ಆರೋಗ್ಯಕ್ಕೆ ತುಂಬ ಒಳ್ಳೆಯದು ಈ ದೊಡ್ಡಪತ್ರೆ ಎಲೆ. ದೊಡ್ಡಪತ್ರೆಯ ಎಲೆಯನ್ನು ನೀವು ಹಾಗೆ ಹಸಿಯಾಗಿ ಸೇವಿಸಬಹುದು. ಆದರೆ ಇನ್ನೂ ಪರಿಣಾಮಕಾರಿ ಆದ ಫಲಿತಾಂಶಕ್ಕಾಗಿ ಈ ರೀತಿ ಪರಿಹಾರವನ್ನು ಮಾಡಬಹುದು.

ಆ ಪರಿಹಾರ ಏನು ಅಂದರೆ ದೊಡ್ಡಪತ್ರೆಯ ಎಲೆಯನ್ನು ತೆಗೆದುಕೊಳ್ಳಿ ಅದನ್ನು ಹಂಚಿನ ಮೇಲೆ ಸ್ವಲ್ಪ ಸಮಯ ಇಟ್ಟು ಬಿಸಿ ಮಾಡಬೇಕು ಒಂದು ನಿಮಿಷಗಳ ಕಾಲ ಬಿಸಿ ಮಾಡಿದರೆ ಸಾಕು. ನಂತರ ಇದಕ್ಕೆ ನೀವು ಅರ್ಧ ಚಮಚದಷ್ಟು ಉಪ್ಪನ್ನು ಬೆರೆಸಬೇಕು ಹೌದು ದೊಡ್ಡಪತ್ರೆ ಎಲೆ ಮೇಲೆ ಅರ್ಧ ಚಮಚ ಉಪ್ಪನ್ನು ಬೆರೆಸಿ ಅದನ್ನು ಮಡಚಿ ನೀವು ಸೇವಿಸಬೇಕು ಈ ರೀತಿ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪರಿಹಾರವನ್ನು ಮಾಡುವುದರಿಂದ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ. ಕಫಾ ಕೂಡ ಬೇಗ ಕರಗಿ ನಿಮಗೆ ಕೆಮ್ಮು ಮತ್ತು ಕಫ ರಿಂದ ಶಮನವನ್ನು ನೀಡುತ್ತದೆ.

ಈ ರೀತಿಯ ಒಂದು ಪರಿಹಾರ ಹಣ ಇಲ್ಲದೆ ಪರಿಣಾಮಕಾರಿ ಆದ ಫಲಿತಾಂಶವನ್ನು ನಿಮಗೆ ನೀಡುತ್ತದೆ. ಹಾಗಾದರೆ ನಿಮಗೆ ಉಪಯುಕ್ತವಾಗಿದ್ದಲ್ಲಿ ಕೆಮ್ಮು ಬಂದಾಗ ತಪ್ಪದೆ ಈ ಮನೆಮದ್ದನ್ನು ಮಾಡಿ ಆರಂಭದಲ್ಲಿಯೇ ಮನೆ ಮದ್ದನ್ನು ಮಾಡಿದರೆ, ನಿಮಗೆ ಬೇಗ ಕೆಮ್ಮು ಮತ್ತು ಕಫ ನಿವಾರಣೆಯಾಗುತ್ತದೆ. ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ 1ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭದಿನ ಆರೋಗ್ಯದಿಂದಿರಿ ಧನ್ಯವಾದ.