Categories
ಭಕ್ತಿ ಮಾಹಿತಿ ಸಂಗ್ರಹ

ಕರ್ಪೂರವನ್ನು ರಾತ್ರಿ ಅಲ್ಲಿ ಇಟ್ಟು ಹೀಗೆ ಮಲಗಿದರೆ ಏನಾಗುತ್ತೆ ಗೊತ್ತ..!

ಕರ್ಪೂರವನ್ನು ಈ ರೀತಿ ನೀವು ಬಳಸುವುದರಿಂದ ನಿಮಗೆ ಅನೇಕ ಪ್ರಯೋಜನಗಳಿವೆ ಅನೇಕ ಆರೋಗ್ಯಕರ ಲಾಭಗಳಿವೆ ಈ ಕರ್ಪೂರು ದೇವರ ಪೂಜೆಯಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದ್ದು ಪೂಜೆಯ ಕೊನೆಯಲ್ಲಿ ಮಾಡುವ ಈ ಕರ್ಪೂರದ ಆರತಿ ಬಹಳಾನೇ ವಿಶೇಷತೆ ಇದೆ ಮತ್ತು ಈ ಕರ್ಪೂರದ ಹೊಗೆಯನ್ನು ಮನೆಯಲ್ಲಿ ಹಾಕುವುದರಿಂದ ಅಥವಾ ಮನೆಯ ಮೂಲೆ ಮೂಲೆಗಳಲ್ಲಿಯೂ ಕರ್ಪೂರವನ್ನು ಹಚ್ಚಿ ಇಡುವುದರಿಂದ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ನಕಾರಾತ್ಮಕ ಶಕ್ತಿ ಋುಣಾತ್ಮಕ ಶಕ್ತಿಯು ನಾಶವಾಗುತ್ತದೆ.

ಈ ರೀತಿಯಾಗಿ ಕರ್ಪೂರದ ಮಹತ್ವ ಅನೇಕ ಇದೆ ಅದರಲ್ಲಿಯೂ ಇಂದಿನ ಮಾಹಿತಿಯಲ್ಲಿ ಕರ್ಪೂರಕ್ಕೆ ಸಂಬಂಧಪಟ್ಟ ಆರೋಗ್ಯಕರ ವಿಚಾರಗಳನ್ನು ತಿಳಿದುಕೊಳ್ಳೋಣ ಈ ಒಂದು ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಕರ್ಪೂರವನ್ನು ಒಂದು ಬಟ್ಟೆಯಲ್ಲಿ ಕಟ್ಟಬೇಕು ನಂತರ ಇದನ್ನು ಕುತ್ತಿಗೆಯ ಭಾಗದಲ್ಲಿ ಕಟ್ಟಿಕೊಳ್ಳುವುದರಿಂದ ಇದು ನಮ್ಮ ಶರೀರಕ್ಕೆ ಹತ್ತಿರ ಇರುತ್ತದೆ ಇದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರವೂ ಸರಾಗವಾಗಿ ಆಗುತ್ತದೆ ಹಾಗೆ ರಕ್ತವನ್ನು ಪರಿಶುದ್ಧಿಕರಣ ಮಾಡುವುದರಲ್ಲಿ ಹೆಚ್ಚಿನ ಪಾತ್ರವನ್ನು ಪಡೆದುಕೊಂಡಿರುವ ಕರ್ಪೂರವನ್ನು ಈ ರೀತಿ ಕುತ್ತಿಗೆಗೆ ಒಂದು ಬಟ್ಟೆಯ ಸಹಾಯದಿಂದ ಕಟ್ಟಿಕೊಳ್ಳುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.

ಇನ್ನು ಮತ್ತೊಂದು ವಿಚಾರವನ್ನು ಕರ್ಪೂರವನ್ನು ಕುರಿತು ಹೇಳಬೇಕಾದರೆ ಇದನ್ನು ಲಾರಿಯಲ್ ವುಡ್ ಎಂಬ ಮರದ ಬುಡದಿಂದ ಈ ಕರ್ಪೂರವನ್ನು ತಯಾರಿಸಲಾಗಿರುತ್ತದೆ, ಈ ನೈಸರ್ಗಿಕವಾದ ಪದಾರ್ಥವು ನಮಗೆ ಎಷ್ಟು ಪ್ರಯೋಜನವನ್ನು ನೀಡುತ್ತದೆ ಅಂದರೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ ಹೌದು ಮನೆಯಲ್ಲಿ ಕರ್ಪೂರವನ್ನು ಹಚ್ಚುವುದರಿಂದ ಇದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಶ್ವಾಸಕೋಶ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆ ಆಗುತ್ತಾ ಬರುತ್ತದೆ.

ನೀವು ತಿಳಿದುಕೊಳ್ಳ ಬೇಕಾಗಿರುವ ಮತ್ತೊಂದು ವಿಚಾರವೇನು ಅಂದರೆ ಈ ಕರ್ಪೂರು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಕೂಡ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ ಆದ ಕಾರಣ ಮನೆಯಲ್ಲಿ ಯಾವುದಾದರೂ ರೂಪದಲ್ಲಿ ಕರ್ಪೂರವನ್ನು ಬಳಸುತ್ತಾ ಬನ್ನಿ .

ಅಂದರೆ ದೇವರ ಪೂಜೆಯ ಕೊನೆಯಲ್ಲಿ ಕರ್ಪೂರವನ್ನು ಬೆಳಗುವುದು ಅಥವಾ ಸಂಜೆ ಸಮಯದಲ್ಲಿ ಕರ್ಪೂರವನ್ನು ಬಳಸಿ ಮನೆಯಲ್ಲಿ ಧೂಪ ಹಾಕುವುದು ಇವೆಲ್ಲವೂ ಕೂಡಾ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನವನ್ನು ನೀಡುತ್ತದೆ ಹಾಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಮನೆಯಲ್ಲಿರುವ ಸದಸ್ಯರ ಮನಸ್ಸಿನಲ್ಲಿ ಶಾಂತಿಯನ್ನು ಮೂಡಿಸುತ್ತದೆ.

ಹೊಟ್ಟಿನ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಹಾಗೆ ಹೇನಿನ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಕೂಡ ಕರ್ಪೂರ ಪ್ರಯೋಜನಗಳನ್ನು ಹೊಂದಿದ್ದು ಮುಖದ ಸೌಂದರ್ಯವನ್ನು ವೃದ್ಧಿ ಮಾಡುವುದರಲ್ಲಿ ಕೂಡ ಸಹಾಯ ಮಾಡುತ್ತದೆ ಈ ಕರ್ಪೂರ. ಹೌದು ಮೊಡವೆಗಳ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಕೊಬ್ಬರಿ ಎಣ್ಣೆಯೊಂದಿಗೆ ಕರ್ಪೂರದ ಪುಡಿಯನ್ನು ಬೆರೆಸಿ ಆ ಭಾಗಕ್ಕೆ ಹಚ್ಚುತ್ತಾ ಬರುವುದರಿಂದ ಮೊಡವೆಗಳು ಕಡಿಮೆಯಾಗುವುದಲ್ಲದೆ ಮೊಡವೆ ಕಲೆಗಳು ಕೂಡ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಇದಿಷ್ಟು ಇವತ್ತಿನ ಉಪಯುಕ್ತ ಮಾಹಿತಿಯಾಗಿದ್ದು ಕರ್ಪೂರವನ್ನು ನೀವು ಮನೆಯಲ್ಲಿ ಬಳಸಿ ಕಡಿಮೆ ಬೆಲೆಯಲ್ಲಿ ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಈ ಒಂದು ಪ್ರಯೋಗವನ್ನು ನೀವು ಇಂದೆ ಕೈಗೊಳ್ಳಿ ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಎಲ್ಲರಿಗೂ ಶುಭ ದಿನ ಧನ್ಯವಾದ.