Categories
ಮಾಹಿತಿ

ಕಾರಿನಲ್ಲಿ ಮಲಗಿದ್ದ ಮಹಿಳೆ ಬೆಳಗಾದ ನಂತರ ಎಲ್ಲಿ ಇದ್ಲು ಗೊತ್ತ … ವಿಚಿತ್ರ ಸುದ್ದಿ ..

ಅಮೆರಿಕ ದೇಶದ ಹಿಮಲ್ಟನ್ ಎಂಬ ಪ್ರದೇಶದಲ್ಲಿ ನಡೆದಂತಹ ಈ ಒಂದು ಘಟನೆ ಬಗ್ಗೆ ನೀವೇನು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ ಹೀಗೂ ಇರ್ತಾರಾ ಅಂತ ಅನ್ನಿಸುತ್ತದೆ ನಮ್ಮ ಭಾರತ ದೇಶದಲ್ಲಿ ಇಂತಹ ಘಟನೆಯನ್ನು ನಾವು ಕೇಳಿರುತ್ತೀರಿ ನೋಡಿರುತ್ತೀರಿ ಆದರೆ ಅಮೇರಿಕಾದಂತಹ ದೇಶದಲ್ಲಿ ಕೂಡ ಇಂಥದ್ದೆಲ್ಲ ನಡೆಯುತ್ತಾ ಅಂತ ನೀವು ಅಚ್ಚರಿ ಪಡುತ್ತೀರ.

ಹಾಗಾದರೆ ಆ ಒಂದು ಘಟನೆಯಾದರೂ ಏನು ಅಂತ ಈ ಲೇಖನದಲ್ಲಿ ತಿಳಿಯೋಣ ಸ್ನೇಹಿತರೇ ಲೇಖನವನ್ನು ಓದಿದ ನಂತರ ಮಾಹಿತಿ ಇಷ್ಟವಿದ್ದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ತಪ್ಪದೇ ಲೈಕ್ ಮಾಡಿ . ಒಮ್ಮೆ ಅಮೆರಿಕಾ ದೇಶದ ಮಿಲ್ಟನ್ ಗೆ ಸೇರಿದ ಮಹಿಳೆ ಬೇರೊಂದು ಪ್ರದೇಶಕ್ಕೆ ಹೋಗುವಾಗ ಕಾರ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಳು.

ಆಗ ತುಂಬಾ ದೂರ ಕಾರನ್ನು ಓಡಿಸಿದ ಮಹಿಳೆಗೆ ಸುಸ್ತಾದ ಕಾರಣ ಆಕೆ ಇನ್ನೇನು ಸಿಟಿ ಹತ್ತಿರ ಬಂದಿತೆಂದು ಕಾರನ್ನು ಬದಿಗೆ ಹಾಕಿ ಸ್ವಲ್ಪ ಹೊತ್ತು ಕೊಳ್ಳುವುದಕ್ಕೆ ಮುಂದಾಗುತ್ತಾಳೆ ನಂತರ ಆಕೆ ಬೆಳಗಿನ ಜಾವ ಎದ್ದು ನೋಡಿದಾಗ ಆಕೆಗೆ ಒಂದು ಶಾಕ್ ಕಾದಿತ್ತು ಅದೇನು ಅಂತೀರಾ ಹೌದು ಸ್ನೇಹಿತರೆ ಮಲಗಿ ಎದ್ದಾಗ ಮಹಿಳೆಗೆ ಶಾಕ್ ಅದೇನೆಂದರೆ ಆಕೆ ಮಲಗುವಾಗ ಕಾರಿನಲ್ಲಿ ಮಲಗಿದ್ದಳು ಎದ್ದಾಗ ಆಕೆ ಫುಟ್ ಪಾತ್ ನಲ್ಲಿ ಮಲಗಿದ್ದಳು ಇದನ್ನು ಕಂಡು ಆಕೆಗೆ ಸಖತ್ ಶಾಕ್ ಆಗುತ್ತದೆ ತಾನು ಇಲ್ಲಿಗೆ ಹೇಗೆ ಬಂದೆ ಹೀಗೆ ಆಗಿದ್ದಾದರೂ ಹೇಗೆ ಅಂತೆಲ್ಲಾ ಯೋಚಿಸುವುದರಲ್ಲಿ ಆಕೆಗೆ ಸಾಕಾಗಿ ಹೋಯಿತು ನಂತರ ಪೊಲೀಸ್ ಬಳಿ ಹೋಗಿ ಕಂಪ್ಲೇಂಟನ್ನು ದಾಖಲಿಸುತ್ತಾಳೆ .

ಪೊಲೀಸ್ ಅಧಿಕಾರಿಗಳು ಕಳ್ಳರಿಗಾಗಿ ಹುಡುಕಾಟ ನಡೆಸಿದ್ದರೂ ಕೂಡ , ಆಕೆಗೆ ಕಾರಿನಲ್ಲಿ ಮಲಗಿ ಬೆಳಗಿನ ಜಾವ ನಾಲ್ಕು ಗಂಟೆಗೆ ಫುಟ್ ಪಾತ್ ನಲ್ಲಿ ಎದ್ದಿದ್ದು ನಿಜಕ್ಕೂ ದೊಡ್ಡ ಶಾಕ್ ಆಗಿಯೇ ಇತ್ತು . ಮಹಿಳೆ ರಾತ್ರಿ ಮಲಗುವಾಗ ಕಾರನ್ನು ಲಾಕ್ ಮಾಡಿ ಮಲಗಿದ್ದಳು ಆಗ ಕಳ್ಳನೊಬ್ಬ ಡೂಪ್ಲಿಕೇಟ್ ಕೀ ಅನ್ನು ಬಳಸಿ ಕಾರಿನ ಡೋರ್ ನ್ನು ತೆಗೆದು ಮಹಿಳೆಯನ್ನು ಜೋಪಾನವಾಗಿ ಎತ್ತಿ ಫುಟ್ ಪಾತ್ ನಲ್ಲಿ ಮಲಗಿಸಿ ಕಾರನ್ನು ದೋಚಿಕೊಂಡು ಹೋಗಿರುತ್ತಾನೆ , ಈ ಎಲ್ಲಾ ಘಟನೆ ನಡೆದಾಗಲೂ ಕೂಡ ಆಕೆಗೆ ಸ್ವಲ್ಪವೂ ಕೂಡ ತಿಳಿಯದೆ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ನೋಡಿದಾಗ ಆಕೆ ಫುಟ್ ಪಾತ್ ನಲ್ಲಿ ಇದ್ದಳು ನಿಜಕ್ಕೂ ಇದು ಶಾಕ್ ಸಂಗತಿಯೇ ಹೌದು .

ಜನರು ನಿಯತ್ತಿನಿಂದ ಸಂಪಾದಿಸಿದ ದುಡ್ಡೇ ಅವರ ಬಳಿ ಇರುವುದಿಲ್ಲ ಆದರೆ ಇಂತಹ ಅಡ್ಡ ಮಾರ್ಗವನ್ನು ಹಿಡಿದು ದುಡ್ಡನ್ನು ಸಂಪಾದಿಸುವುದಕ್ಕೆ ಮುಂದಾದರೆ ಆ ಹಣ ಎಷ್ಟು ದಿನ ನಮ್ಮ ಬಳಿ ಇರುತ್ತದೆ ಅಲ್ವಾ ಸ್ನೇಹಿತರೇ . ಅಮೆರಿಕದಂಥ ದೇಶದಲ್ಲಿಯೂ ಕೂಡ ಇಂತಹ ಸ್ಮಾರ್ಟ್ ಕಳ್ಳರು ಇದ್ದಾರೆ ಅಂದರೆ ಬುದ್ಧಿವಂತರು ಇರುವಂತಹ ಅಂತಹ ದೇಶದಲ್ಲಿಯೇ ಹೀಗೆಲ್ಲ ನಡೆದದ್ದು ನಿಜಕ್ಕೂ ಶಾಕ್ ಇದರಿಂದ ಜನರು ತಿಳಿಯಬೇಕಾದದ್ದು ಏನು ಅಂದರೆ ಕಾರಿನಲ್ಲಿ ಮಲಗುವ ಮುಂಚೆ ಈ ಒಂದು ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು ಮಲಗಬೇಕು ಯಾವಾಗ ಏನು ಜರುಗುವುದು ಎಂದು ಯಾರಿಗೂ ಗೊತ್ತಿರುವುದಿಲ್ಲ .

ಕಾರನ್ನು ಓಡಿಸಿ ಸುಸ್ತಾಗಿರುತ್ತದೆ ಆಗ ನಾವು ಬೇಗನೆ ನಿದ್ರೆಗೆ ಜಾರಿ ಬಿಡುತ್ತೇವೆ ನಮ್ಮ ಮೇಲೆ ನಮಗೇ ಪ್ರಜ್ಞೆ ಇರುವುದಿಲ್ಲ ಈ ರೀತಿಯಾಗಿ ರಸ್ತೆಯ ಬದಿಯಲ್ಲಿ ಕಾರನ್ನು ಹಾಕಿ ಮಲಗಿದರೆ ದರೋಡೆಕೋರರು ಬಂದು ನಮ್ಮ ವಸ್ತುಗಳನ್ನು ದೋಚಿಕೊಂಡು ಹೋದರೂ ನಮಗೆ ತಿಳಿಯುವುದಿಲ್ಲ ಆದ್ದರಿಂದ ಸ್ನೇಹಿತರೇ ಕಾರನ್ನು ರಸ್ತೆ ಬದಿಯಲ್ಲಿ ಹಾಕಿ ಮಲಗುವ ಮುನ್ನ ಎಚ್ಚರವಿರಲಿ .
ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಶುಭವಾಗಲಿ ಧನ್ಯವಾದಗಳು .

Leave a Reply