Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಾಲುಂಗುರವನ್ನು ಧರಿಸುವುದರ ಹಿಂದೆ ವೈಜ್ಞಾನಿಕವಾಗಿ ಏನು ಹಿನ್ನಲೆ ಇದೆ ಗೊತ್ತ ..!

ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತಿರುವ ಈ ಮಾಹಿತಿ ಏನು ಅಂದರೆ ಹೆಣ್ಣುಮಕ್ಕಳು ಕಾಲುಂಗುರವನ್ನು ಧರಿಸಿರುತ್ತಾರೆ ಈ ಒಂದು ಪದ್ಧತಿ ಇತ್ತೀಚಿನ ದಿನಗಳದ್ದು ಅಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ ಅಂತ ಹೇಳಬಹುದು ಆದರೆ ಈ ಒಂದು ಶಾಸ್ತ್ರಕ್ಕೆ ಇರುವ ವೈಜ್ಞಾನಿಕವಾದ ಕಾರಣ ಏನು ಅನ್ನೋದು ಇಂದಿನ ಕಾಲದ ಹೆಣ್ಣು ಮಕ್ಕಳಿಗೆ ತಿಳಿಸುವುದು ಅತ್ಯವಶ್ಯಕವಾಗಿ ಇರುತ್ತದೆ. ಜೊತೆಗೆ ಈ ಒಂದು ಕಾರಣವನ್ನು ಹೆಣ್ಣುಮಕ್ಕಳು ತಿಳಿಯಲೇ ಬೇಕು .

ಯಾಕೆಂದರೆ ಇತ್ತೀಚಿನ ಮಂದಿಗೆ ನಮ್ಮ ಸಂಪ್ರದಾಯಗಳ ಬಗ್ಗೆ ಅಷ್ಟೊಂದು ಅರಿವಿಲ್ಲ ಇಂದಿನ ಮಾಹಿತಿಯ ಮುಖಾಂತರ ನಮ್ಮ ಸಂಪ್ರದಾಯಗಳಿಗೂ ಅನೇಕ ವೈಜ್ಞಾನಿಕವಾದ ಕಾರಣಗಳಿವೆ ಎಂದು ತಿಳಿಸಿಕೊಡುವುದಕ್ಕಾಗಿಯೇ ಈ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ ಸಂಪೂರ್ಣವಾಗಿ ತಿಳಿಯಿರಿ. ಹಾಗೆ ಈ ಒಂದು ಸಂಪ್ರದಾಯವನ್ನು ತಪ್ಪದೇ ಪಾಲಿಸಿ ಹಾಗೆ ನೀವು ಗಮನಿಸಿರಬಹುದು ಮದುವೆಯಾದ ಹೆಣ್ಣು ಮಕ್ಕಳು ಮಾತ್ರ ಈ ಕಾಲುಂಗುರ ಧರಿಸಿರುತ್ತಾರೆ ಆದರೆ ಮದುವೆ ಆಗದ ಹೆಣ್ಣು ಮಕ್ಕಳು ಧರಿಸುವಂತಿಲ್ಲ ಈ ಕಾಲುಂಗುರವನ್ನು.

ಆದರೆ ಮದುವೆಯಾದ ಹೆಣ್ಣುಮಕ್ಕಳಿಗೆ ಯಾಕೆ ಈ ಕಾರು ಮೆರವಣ ಹಾಕುತ್ತಾರೆ ಅಂದರೆ ಇದಕ್ಕೆ 1ಕಾರಣ ಇದೆ ಮದುವೆಯಾದ ನಂತರ ಆ ಹೆಣ್ಣು ಮಗುವಿನ ಮೇಲೆ ಒತ್ತಡತೆ ಹೆಚ್ಚು ಆಗುತ್ತದೆ ಮತ್ತು ಮದುವೆಯ ನಂತರ ಹೆಣ್ಣುಮಕ್ಕಳಿಗೆ ಕೆಲಸವೂ ಕೂಡ ಹೆಚ್ಚುತ್ತದೆ. ಆ ಕೆಲಸವನ್ನು ಮಾಡುವಾಗ ಅವರಿಗೆ ಸಮತೋಲನದ ಶಕ್ತಿ ಅವಶ್ಯಕವಾಗಿರುತ್ತದೆ ಇನ್ನೂ ಹೆಣ್ಣು ಮಕ್ಕಳು ಮದುವೆಯಾಗಿ ಸ್ವಲ್ಪ ತಿಂಗಳಿನ ನಂತರ ತಾಯಿಯಾಗುತ್ತಾರೆ ಆಗ ಮಗುವನ್ನು 9ತಿಂಗಳುಗಳ ಕಾಲ ಹೊಟ್ಟೆಯಲ್ಲಿ ತಾಯಿ ಗರ್ಭದಲ್ಲಿ ಇರಬೇಕಾಗುತ್ತದೆ,

ಈ ಸಮಯದಲ್ಲಿ ತಾಯಿಯ ಗರ್ಭಕೋಶ ಜಾರಬಾರದು ಎಂದು ಮತ್ತು ಈ ಸಮಯದಲ್ಲಿ ಆಕೆಗೆ ಒಂದು ಸಂವೇದನೆ ಶಕ್ತಿಯ ಅವಶ್ಯಕತೆ ಇರುತ್ತದೆ. ಆಕೆಯ ದೇಹವನ್ನ ಸಮತೋಲನದಲ್ಲಿರಿಸಿ ಆಕೆಗೆ ತನ್ನ ಮಗುವನ್ನು ಹೊರುವುದಕ್ಕೆ ಒಂದು ಶಕ್ತಿ ಬೇಕಾಗಿರುತ್ತದೆ ಅದು ಆಕೆಗೆ ಆಕೆಯ ಪಾದಗಳಿಂದ ದೊರೆಯ ಬೇಕಾಗಿರುತ್ತದೆ. ಆದಕಾರಣವೇ ಆಕೆಗೆ ಒಂದು ಶಕ್ತಿಯ ರೀತಿ ಈ ಕಾಲುಂಗುರಗಳು ಆಕೆಗೆ ಸಹಾಯಕಾರಿಯಾಗಿರುತ್ತದೆ.

ಉದಾಹರಣೆಯ ಮುಖಾಂತರ ಹೇಳಬೇಕೆಂದರೆ ಯಾವುದೇ ಒಂದು ಕುರುಚಿ ಸರಿಯಾಗಿ ನಿಲ್ಲಬೇಕು ಅಂದರೆ ಅದಕ್ಕೆ 4ಕಾಲುಗಳ ಅವಶ್ಯಕತೆ ಇರುತ್ತದೆ. ಅದೇ ರೀತಿ ಹೆಣ್ಣು ಮಗುವಿಗೂ ಕೂಡ ಮದುವೆಯ ನಂತರ ಆಕೆಯ ಗರ್ಭಾವಸ್ಥೆಯ ಸಮಯದಲ್ಲಿ ಆಕೆಗೆ ಒಂದು ಸಪೋರ್ಟ್ ರೀತಿ ಈ ಕಾಲುಂಗುರ ಆಕೆಗೆ ಸಹಕಾರಿಯಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ಹೆಣ್ಣು ಮಕ್ಕಳಿಗೆ ಅದರಲ್ಲಿಯೂ ಮದುವೆಯಾದ ಹೆಣ್ಣುಮಕ್ಕಳಿಗೆ ಕಾಲುಂಗುರವನ್ನು ಧರಿಸುವುದಕ್ಕೆ ಹೇಳುವುದು.

ಮತ್ತೊಂದು ಕಾರಣವನ್ನ ಹೇಳುವುದಾದರೆ ಮದುವೆಯಾದ ಹೆಣ್ಣುಮಕ್ಕಳಿಗೆ ಲೈಂಗಿಕ ಪ್ರಕ್ರಿಯೆಯಲ್ಲಿ ದೇಹದಲ್ಲಿ ಹಾರ್ಮೋನ್ ಅಸಮತೋಲನ ಆಗಬಾರದು ಅಂತ ಕೂಡ ಪಾದಗಳಿಗೆ ಕಾಲುಂಗುರವನ್ನು ಧರಿಸುವುದುಂಟು ಪಾದಗಳಲ್ಲಿರುವ ಬೆರಳಿನ ನರಗಳು ಲೈಂಗಿಕ ಪ್ರಚೋದನೆ ಕಾರ್ಯಕ್ಕೆ ಸಹಕಾರಿಯಾಗಿರುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣುಮಕ್ಕಳ ಪಾದಗಳ ತೋರುಬೆರಳಿಗೆ ಈ ಉಂಗುರವನ್ನ ಧರಿಸಲಾಗುತ್ತದೆ.

ಈ ಎಲ್ಲಾ ವೈಜ್ಞಾನಿಕ ಕಾರಣಗಳೂ ಇರುತ್ತವೆ ಹೆಣ್ಣು ಮಕ್ಕಳು ಕಾಲುಂಗುರವನ್ನು ಧರಿಸುವದರ ಹಿಂದಿನ ಸಂಪ್ರದಾಯದಲ್ಲಿ. ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ 1ಲೈಕ್ ಮಾಡಿ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಅದೆಷ್ಟು ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶರ್ಮ ಡಿ ಮತ್ತು ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸಿ ಧನ್ಯವಾದ.