Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಾಳು ಮೆಣಸು ಹೀಗೆ ಮಾಡಿ ಬಳಸುವುದರಿಂದ ಏನೆಲ್ಲಾ ನಮ್ಮ ಆರೋಗ್ಯಕ್ಕೆ ಉಪಯೋಗ ಇದೆ ..!

ನಮಸ್ಕಾರ ಕಾಳುಮೆಣಸು ಅಂದಕೂಡಲೆ ನಮಗೆ ಅಡುಗೆಯಲ್ಲಿ ಬಳಕೆ ಮಾಡುವ ಖಾರದ ಕಾಳುಮೆಣಸೆ ನೆನಪಾಗುವುದು. ಮಾರುಕಟ್ಟೆಯಲ್ಲಿ 2ವಿಧಗಳಲ್ಲಿ ದೊರೆಯುವ ಈ ಕಾಳುಮೆಣಸು ಬಿಳಿ ಕಾಳುಮೆಣಸು ಮತ್ತು ಕಪ್ಪು ಕಾಳುಮೆಣಸು. ಈ ಎರಡೂ ವಿಧದಲ್ಲಿ ಈ ಕಾಳುಮೆಣಸು ದೊರೆಯುತ್ತದೆ. ನಮ್ಮ ಪೂರ್ವಜರು ಸುಮಾರು ವರ್ಷಗಳಿಂದ ಈ ಕಾಳುಮೆಣಸನ್ನು ಅಡುಗೆಗೆ ಬಳಕೆ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ನಮ್ಮ ಭಾರತ ದೇಶದ ಒಂದು ಶ್ರೀಮಂತ ಬೆಳೆ ಅಂತಾನೆ ಹೇಳಬಹುದು ಈ ಕಾಳುಮೆಣಸನ್ನು. ಈ ಕಾಳುಮೆಣಸಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಮತ್ತು ಬ್ಯಾಕ್ಟೀರಿಯಾ ನಿವಾರಕ ಉರಿಯೂತ ಶಮನಕಾರಿ ಅಂಶವೂ ಇದೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿರುವ ಕಾಳುಮೆಣಸನ್ನು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಕೆಲವರಿಗೆ ಅಜ್ಜಿ ಮಾಡಿದ ಮನೆ ಮದ್ದು ನೆನಪಿದ್ದರೆ, ಅಜ್ಜಿ ಮನೆಗೆ ಹೋದಾಗ ಶೀತ ಕೆಮ್ಮು ಜ್ವರದ ಸಮಸ್ಯೆ ಬಂದಾಗ ಅಜ್ಜಿ ಅದಕ್ಕಾಗಿ ಮನೆಮದ್ದನ್ನು ಮಾಡಿದಾಗ ಆ ಮನೆ ಮದ್ದು ಖಾರವಾಗೇ ಇರುತ್ತಿತ್ತು ಆ ಮನೆಮದ್ದನ್ನು ಬೆಳೆಸಿದಾಗ ಕಣ್ಣು ಮೂಗು ಬಾಯಿಯಿಂದ ನೀರು ಬರುತ್ತಿತ್ತು. ಇದಕ್ಕೆ ಕಾರಣ ಆ ಮನೆ ಮದ್ದಿನಲ್ಲಿ ಬಳಕೆ ಮಾಡಿರುವ ಕರಿಮೆಣಸಿನ ಕಾಳಿನ ಪುಡಿ ಆಗಿರುತ್ತಿತ್ತು. ಹೌದು ಹೆಚ್ಚಾಗಿ ಮನೆಮದ್ದುಗಳಲ್ಲಿ ಬಳಕೆ ಆಗುವ ಈ ಕರಿಮೆಣಸು ಆಹಾರಕ್ಕಿಂತ ಔಷಧಿಯಾಗಿ ಬಳಕೆ ಮಾಡುವುದೆ ಹೆಚ್ಚು. ಇನ್ನು ಈ ಕರಿಮೆಣಸಿನ ಕಾಳನ್ನು ನಾವು ಆಹಾರದಲ್ಲಿ ಬಳಕೆ ಮಾಡಿಕೊಂಡು ಬಂದದ್ದೇ ಆದಲ್ಲಿ ಅಜೀರ್ಣತೆ ದೂರವಾಗುತ್ತದೆ ಮತ್ತು ಗಂಟಲಿಗೆ ಹಿತನೀಡುವ ಕರಿಮೆಣಸಿನ ಕಾಳಿನ ಪುಡಿ ಗಂಟಲು ನೋವು ಬಂದಾಗ ಸಾಮಾನ್ಯವಾಗಿ ಕಷಾಯವನ್ನು ಮಾಡಿದಾಗ ಅದರಲ್ಲಿ ಕರಿಮೆಣಸಿನ ಕಾಳಿನ ಬಳಕೆ ಕಡ್ಡಾಯವಾಗಿ ಇರುತ್ತಿತ್ತು.

 

ಕೆಲವರು ಚಹಾಗೆ ಕೂಡ ಈ ಕರಿಮೆಣಸಿನ ಕಾಳಿನ ಪುಡಿಯನ್ನು ಮಿಶ್ರ ಮಾಡಿ ಸೇವಿಸುತ್ತಾರೆ ಇದರಿಂದ ಟೀ ರುಚಿ ಸ್ವಲ್ಪ ಖಾರವಾದರೂ ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ನೀಡುತ್ತದೆ. ಆ್ಯಂಟಿ ಆಕ್ಸಿಡೆಂಟ್ಸ್ ಹೊಂದಿರುವ ಮೆಣಸಿನ ಕಾಳಿನ ಪ್ರಯೋಜನವನ್ನು ಪಡೆದುಕೊಂಡು ಬಂದದ್ದೆ ಆದಲ್ಲಿ, ಯಾವ ಬ್ಯಾಕ್ಟೀರಿಯಾ ವೈರಸ್ ದಾಳಿ ಯಿಂದ ಎದುರಾದ ಶೀತ ಕೆಮ್ಮು ಮತ್ತು ಜ್ವರದ ಸಮಸ್ಯೆಯನ್ನು ಬೇಗ ಪರಿಹಾರ ಮಾಡಿಕೊಳ್ಳಬಹುದು.

ಖಿನ್ನತೆಗೆ ಒಂದು ಉತ್ತಮವಾದ ಅದ್ಭುತವಾದ ಮನೆ ಮದ್ದು ಕರಿಮೆಣಸಿನ ಕಾಳು. ಹೌದು ಖಿನ್ನತೆ ಅಲ್ಲಿದ್ದಾಗ ಅಂತಹವರು ಚಹಾಗೆ ಅಥವಾ ಕಷಾಯಕ್ಕೆ ಅಥವಾ ಹಾಲಿಗೆ ಈ ಕರಿಮೆಣಸಿನ ಕಾಳಿನ ಪುಡಿಯನ್ನು ಮಿಶ್ರಮಾಡಿ ಸೇವಿಸುತ್ತ ಬಂದದ್ದೆ ಆದಲ್ಲಿ ಖಿನ್ನತೆ ದೂರವಾಗುತ್ತದೆ. ಎಷ್ಟೋ ಮಂದಿ ಮಾವಿನಕಾಯಿಯನ್ನು ಉಪ್ಪು ಮತ್ತು ಖಾರದಪುಡಿಯ ಮಿಶ್ರಣದೊಂದಿಗೆ ಸೇವಿಸುತ್ತಾರೆ. ಆದರೆ ಮಾವಿನ ಕಾಯಿಯನ್ನು ಉಪ್ಪು ಕರಿಮೆಣಸಿನ ಕಾಳಿನ ಪುಡಿ ಜೀರಿಗೆ ಪುಡಿ ಮತ್ತು ನಿಂಬೆ ಹಣ್ಣಿನ ರಸದ ಮಿಶ್ರಣವನ್ನು ಮಾಡಿ ತಿನ್ನುತ್ತ ಬಂದದ್ದೆ ಆದಲ್ಲಿ ಅದರ ರುಚಿ ಇನ್ನೂ ಹೆಚ್ಚುತ್ತದೆ. ಇದರ ಜೊತೆಗೆ ಕೆಮ್ಮಿನ ಸಮಸ್ಯೆ ಪರಿಹಾರ ಆಗುತ್ತದೆ. ಸಾಮಾನ್ಯವಾಗಿ ಮಾವಿನ ಕಾಯಿಯನ್ನು ತಿನ್ನುವುದರಿಂದ, ಕೆಲವರಿಗೆ ಕೆಮ್ಮಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಈ ಮಾವಿನಕಾಯಿಯೊಂದಿಗೆ ಕರಿ ಮೆಣಸಿನಕಾಳಿನ ಪುಡಿಯನ್ನು ಮಿಶ್ರಮಾಡಿ ಸೇವಿಸಿದ್ದೆ ಆದಲ್ಲಿ ಇಂತಹ ಸಮಸ್ಯೆಗಳು ಕಾಡುವುದಿಲ್ಲ.