Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಿಡ್ನಿಯಲ್ಲಿ ಕಲ್ಲು ಇದ್ದವರು ತಿಳಿದುಕೊಳ್ಳಲೇ ಬೇಕಾದ ಮನೆಮದ್ದು ಇದು ..!

ಕಿಡ್ನಿಯಲ್ಲಿ ಕಲ್ಲು ಇದ್ದವರು ಈ ಪರಿಹಾರವನ್ನು ಮಾಡಬಹುದು ಹೌದು ಆಯುರ್ವೇದ ಮೂಲದ ಈ 1ಪರಿಹಾರವನ್ನು ನೀವು ಮಾಡುವುದರಿಂದ ಯಾವ ಅಡ್ಡಪರಿಣಾಮಗಳು ಕೂಡ ನಿಮ್ಮ ಆರೋಗ್ಯದ ಮೇಲೆ ಆಗುವುದಿಲ್ಲ ಹಾಗದರೆ ತಿಳಿಯೋಣ ಬನ್ನಿ ಈ ಒಂದು ಪರಿಹಾರವನ್ನು ಕುರಿತು. ಈ ಪರಿಹಾರಕ್ಕಾಗಿ ನಿಮಗೆ ಬೇಕಾಗಿರುವಂತಹ ಪದಾರ್ಥಗಳು ನೆಗ್ಗಿನಮುಳ್ಳು ವಾಯುವಳಂಗ ಮತ್ತು ಜೀರಿಗೆ. ನೆಗ್ಗಿನ ಮುಳ್ಳು ನೋಡುವುದಕ್ಕೆ ಹೇಗಿರುತ್ತದೆ ಅಂತ ನಿಮಗೆ ತಿಳಿಯದೆ ಇದ್ದರೆ ಆಯುರ್ವೇದ ಅಂಗಡಿಗಳಲ್ಲಿ ಈ ನೆಗ್ಗಿನಮುಳ್ಳು ದೊರೆಯುತ್ತದೆ.

ನೀವು ಅದನ್ನು ತಂದು ಬಳಸ ಬಹುದು ಇನ್ನು ಜೀರಿಗೆ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ ಹಾಗೆ ವಾಯುವಳಂಗ ಅಂದರೆ ಇದನ್ನು ಹೆಚ್ಚಾಗಿ ಆಯುರ್ವೇದದಲ್ಲಿ ಅಸಿಡಿಟಿ ಗ್ಯಾಸ್ಟ್ರಿಕ್ ಅಂತಹ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಬಳಸಲಾಗುತ್ತದೆ. ಈ ಪರಿಹಾರಕ್ಕಾಗಿ ಬೇಕಾಗಿರುವುದು ಈ ಮೂರೇ ಪದಾರ್ಥ ಇದನ್ನು ಹೇಗೆ ಬಳಕೆ ಮಾಡಬೇಕು ಅಂತ ಕೆಳಗಿನ ಮಾಹಿತಿಯಲ್ಲಿ ನೀಡ್ತೇವೆ.

ಮೊದಲಿಗೆ ನೆಗ್ಗಿನ ಮುಳ್ಳು ಮತ್ತು ಜೀರಿಗೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ನಂತರ 2ಟೇಬಲ್ ಸ್ಪೂನ್ ವಾಯುವಳಂಗ ವನ್ನು ತೆಗೆದುಕೊಂಡು ಈ ಪದಾರ್ಥಗಳನ್ನ ಹುರಿಯುವ ಅವಶ್ಯಕತೆ ಇಲ್ಲ ನೀವು ಹಾಗೆಯೇ ಈ ಮೂರೂ ಪದಾರ್ಥಗಳನ್ನ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಈ ಪುಡಿ ಮಾಡಿದ ಮಿಶ್ರಣವನ್ನು ಅಂದರೆ ಚೂರ್ಣವನ್ನು ನೀವು ಒಂದು ಬಾಕ್ಸ್ ನಲ್ಲಿ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ. ಇದೀಗ ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1ಲೋಟ ಬೆಚ್ಚಗಿನ ನೀರಿಗೆ ಈ ತಯಾರಿ ಮಾಡಿ ಇಟ್ಟುಕೊಂಡಂತಹ ಪುಡಿಯನ್ನು ಅರ್ಧ ಚಮಚ ಹಾಕಿದರೆ ಸಾಕು. ನೀವು ಅರ್ಧ ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಮಿಶ್ರಣ ಮಾಡಿ ಇದನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರಬೇಕು.

ಈ ಚೂರ್ಣದ ಪ್ರಯೋಜನವನ್ನು ನೀವು ದಿನಕ್ಕೆ ಒಂದು ಬಾರಿ ಮಾತ್ರ ಪಡೆದುಕೊಳ್ಳಬೇಕು. ಇದೀಗ ಈ ಕಷಾಯವನ್ನು ಮಾಡಿ ಕುಡಿಯುವುದರಿಂದ ನಿಮಗೆ ಆಗುವ ಲಾಭ ಅಂದರೆ ಕಿಡ್ನಿ ಸೋಂಕು ಅಥವಾ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸುವ ಒಂದು ಸಾಮರ್ಥ್ಯ ಈ ಕಷಾಯಕ್ಕೆ ಇದೆ. ಹಾಗಾದರೆ ಈ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಅಂದರೆ ಕಿಡ್ನಿಯಲ್ಲಿ ಕಲ್ಲು ಸಮಸ್ಯೆಯಿಂದ ಬಳಲುತ್ತಾ ಇದ್ದರೆ .

ಈ 1ಪರಿಹಾರವನ್ನು ಮಾಡಿಕೊಳ್ಳಿ ಚಿಕಿತ್ಸೆ ಇಲ್ಲದೆ ನೀವು ಆಯುರ್ವೇದದ ಮೂಲಕ ನಿಮ್ಮ ಸಮಸ್ಯೆ ಅನ್ನು ಪರಿಹಾರ ಮಾಡಿಕೊಳ್ಳಬಹುದು. ನೀವು ಕೂಡ ಉಪಯುಕ್ತ ಮಾಹಿತಿ ತಿಳಿದ ನಂತರ ಪ್ರತಿಯೊಬ್ಬರಿಗೂ ಈ ವಿಚಾರವನ್ನು ಶೇರ್ ಮಾಡುವುದನ್ನು ಮರೆಯದಿರಿ ಮತ್ತು ಈ ಲೇಖನವನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಇವತ್ತಿನ ಮಾಹಿತಿ ಉಪಯುಕ್ತವಾಗಿದೆ ದಲಿತ ಪದ ಮಾಹಿತಿಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಜೊತೆಗೆ ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಧನ್ಯವಾದ.