Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಕೂದಲ ಬೆಳವಣಿಗೆಗೆ ಸೊಪ್ಪಿನ ಪೋಷಣೆ l ಸೊಪ್ಪಿನ ತಂಪು ಕೂದಲನ್ನು ಉದ್ದವಾಗಿ ದಟ್ಟವಾಗಿ ಬೆಳೆಸುತ್ತದೆ.

ಉದ್ದವಾದ ಕಪ್ಪಾದ ಕೇಶರಾಶಿಯನ್ನು ಪಡೆದುಕೊಳ್ಳುವುದಕ್ಕಾಗಿ ಕೇರಳ ಮಾದರಿಯಲ್ಲಿ ಹೆಣ್ಣುಮಕ್ಕಳು ಯಾವ ಮನೆ ಮದ್ದನ್ನು ಬಳಸುತ್ತಾರೋ ಅದನ್ನು ನಾವು ನಿಮಗೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ, ನೀವು ಇದನ್ನು ಪಾಲಿಸಿ ಹಾಗೆಯೇ ಈ ಮನೆ ಮದ್ದನ್ನು ಪಾಲಿಸಿದ ನಂತರ ನೀವೇ ಉತ್ತಮ ಫಲಿತಾಂಶವನ್ನು ಕಣ್ಣೆದುರು ಕಾಣಬಹುದಾಗಿದೆ.

ಹೌದು ಸಾಮಾನ್ಯವಾಗಿ ಎಲ್ಲರಿಗೂ ಕೂಡ ತಿಳಿದೇ ಇದೆ ಸೊಪ್ಪುಗಳಲ್ಲಿ ಸಾಕಷ್ಟು ಪೋಷಕಾಂಶಗಳು ವಿಟಮಿನ್ಸ್ಗಳು ಪ್ರೊಟೀನ್ಸ್ ಗಳು ಖನಿಜಾಂಶಗಳು ಇರುತ್ತವೆ ಎಂದು ಈ ಸೊಪ್ಪುಗಳನ್ನು ತಿನ್ನುವುದರಿಂದ ಅದೆಷ್ಟೋ ಲಾಭಗಳು ದೊರೆಯುತ್ತದೆ ಹಾಗೂ ಆರೋಗ್ಯ ಕೂಡ ಚೆನ್ನಾಗಿರುತ್ತದೆ,

ಈ ರೀತಿಯಲ್ಲಿ ಸೊಪ್ಪುಗಳನ್ನು ಬಳಸಿ ಕೂದಲನ್ನು ಹಾರೈಕೆ ಮಾಡುವುದರಿಂದ ಕೂಡ ಕೂದಲು ದಟ್ಟವಾಗಿ ಕಪ್ಪಾಗಿ ಬೆಳೆಯುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ ಹಾಗೂ ಕೂದಲುದುರುವ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತದೆ.

ಇನ್ನು ನಾವು ಈ ದಿನದ ಮಾಹಿತಿ ಅಲ್ಲಿ ನಿಮಗೆ ತಿಳಿಸಿಕೊಡಲು ಹೊರಟಿರುವುದು ಸೊಪ್ಪುಗಳನ್ನು ಬಳಸಿ ಹೇಗೆ ಕೂದಲು ಉದುರುವ ಸಮಸ್ಯೆಯನ್ನು ಕೂದಲು ಬಿಳಿಯಾಗಿದ್ದರೆ ಅದನ್ನು ಹೇಗೆ ಪರಿಹರಿಸಿಕೊಳ್ಳುವುದು ಅನ್ನುವುದನ್ನು ತಿಳಿಸಿಕೊಡುತ್ತೇವೆ, ಇದಕ್ಕಾಗಿ ಬೇಕಾಗಿರುವಂತಹ ಸೊಪ್ಪುಗಳು ಕೊತ್ತಂಬರಿ ಸೊಪ್ಪು ಕರಿಬೇವಿನ ಸೊಪ್ಪು ದಂಟಿನ ಸೊಪ್ಪು ಮೆಂತೆ ಸೊಪ್ಪು ಮತ್ತು ಸಬ್ಸಿಗೆ ಸೊಪ್ಪು.

ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಕೂದಲಿಗೆ ಸಾಕಷ್ಟು ಪೋಷಕಾಂಶಗಳನ್ನು ನೀಡುತ್ತದೆ ಹಾಗೂ ಕರಿಬೇವಿನ ಸೊಪ್ಪಿನಲ್ಲಿ ಸಾಕಷ್ಟು ಕೂದಲಿಗೆ ಬೇಕಾಗಿರುವಂತಹ ಅಂಶಗಳು ಇರುವುದರಿಂದ ಈ ಎರಡು ಸೊಪ್ಪುಗಳು ಕೂದಲಿಗೆ ಸಾಕಷ್ಟು ಪೋಷಕಾಂಶಗಳನ್ನು ನೀಡಿ ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುವುದಕ್ಕೆ ಸಹಕರಿಸುತ್ತದೆ.

ಹಾಗೂ ದಂಟಿನ ಸೊಪ್ಪು ಮೆಂತೆ ಸೊಪ್ಪು ಮತ್ತು ಸಬ್ಸಿಗೆ ಸೊಪ್ಪು ಈ ಮೂರು ಸೊಪ್ಪುಗಳನ್ನು ಬಳಸುತ್ತಿರುವುದು ಯಾಕೆ ಅಂದರೆ ಈ ಮೂರು ಸೊಪ್ಪುಗಳು ಕೂದಲಿನ ಬುಡಕ್ಕೆ ಒಳ್ಳೆಯ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ತಲೆಯ ನೆತ್ತಿ ಕೂಡ ತಂಪಾಗಿರುವಂತೆ ಇದು ಕಾಪಾಡುತ್ತದೆ.

ಇದೀಗ ತಿಳಿಯೋಣ ಈ ಐದು ಸೊಪ್ಪುಗಳನ್ನು ಹೇಗೆ ಕೂದಲಿಗೆ ಲೇಪಿಸಿಕೊಳ್ಳುವುದು ಎಂದು ಮೊದಲಿಗೆ ಈ ಎಲ್ಲಾ ಸೊಪ್ಪುಗಳನ್ನು ಪೇಸ್ ಕೃತಿ ಮಾಡಿಕೊಳ್ಳಿ ನಂತರ ಇದನ್ನು ಕೂದಲಿನ ಪ್ರತಿಯೊಂದು ಬುಡಕ್ಕೆ ಹಚ್ಚುತ್ತಾ ಬನ್ನಿ ನಂತರ ಸ್ವಲ್ಪ ಸಮಯ ಮಸಾಜ್ ಮಾಡಿಕೊಂಡು ಅರ್ಧ ಗಂಟೆಗಳ ಬಳಿಕ ಬೆಚ್ಚಗಿನ ನೀರನಿಂದ ಕೂದಲನ್ನು ಸ್ವತ್ಛ ಪಡಿಸಿಕೊಳ್ಳಿ ಹಾಗೂ ಯಾವುದೇ ರಾಸಾಯನಿಕ ಗುಣಗಳಿರುವ ಶಾಂಪುವನ್ನು ಬಳಸಬೇಡಿ.

ಈ ರೀತಿ ಕೂದಲಿಗೆ ಸೊಪ್ಪಿನ ಪೇಸ್ಟ್ ಅನ್ನು ಹಚ್ಚಿಕೊಂಡರೆ ಕೂದಲನ್ನು ಸ್ವಚ್ಛ ಮಾಡಿಕೊಳ್ಳುವುದಕ್ಕೇ ಕಷ್ಟ ಆಗುತ್ತದೆ ಅನ್ನುವವರು ಈ ಸೊಪ್ಪನ್ನು ಪೇಸ್ಟ್ ಮಾಡಿಕೊಂಡು ಅದರಿಂದ ರಸವನ್ನು ತೆಗೆದು ಕೊಬ್ಬರಿ ಎಣ್ಣೆಯೊಂದಿಗೆ ಅಥವಾ ಆಲಿವ್ ಆಯಿಲ್ ನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ ನಂತರ ಎರಡು ಗಂಟೆಗಳ ಬಳಿಕ ಕೂದಲನ್ನು ತಣ್ಣೀರು ಅಥವಾ ಬೆಚ್ಚಗಿನ ನೀರಿನಿಂದ ಸ್ವಚ್ಛ ಮಾಡಿಕೊಳ್ಳಿ.

ಈ ರೀತಿ ವಾರಕ್ಕೊಮ್ಮೆ ಮಾಡುವುದರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ವಯಸ್ಕರರಿಗೆ ಬಿಳಿ ಕುದಲಿನ ಸಮಸ್ಯೆ ಕಾಡುತ್ತಾ ಇರುತ್ತದೆ ಅಂಥವರಿಗೆ ಈ ಮನೆ ಮದ್ದು ಹೆಚ್ಚು ಉತ್ತಮವಾಗುತ್ತದೆ ಮತ್ತು ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಉಪಯುಕ್ತವಾದ ಅಲ್ಲಿ ತಪ್ಪದೆ ಮಾಹಿತಿಯನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಮತ್ತು ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.