Categories
ಭಕ್ತಿ ಮಾಹಿತಿ ಸಂಗ್ರಹ

ಕೆಂಪು ಮತ್ತು ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳುವವರು ತಪ್ಪದೆ ಈ ಲೇಖನ ನೋಡಿ …

ಕೆಂಪು ದಾರ ಮತ್ತು ಕಪ್ಪು ದಾರವನ್ನು ವ್ಯಕ್ತಿ ಕಟ್ಟಿಕೊಳ್ಳುವುದರಿಂದ ತನ್ನ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತದೆ ಅನ್ನುವುದನ್ನು ನೀವೇನಾದರೂ ತಿಳಿದುಕೊಂಡಿದ್ದೀರಾ ಮತ್ತು ಈ ಒಂದು ಕಪ್ಪು ದಾರ ಮತ್ತು ಕೆಂಪು ದಾರವನ್ನು ಯಾವ ರಾಶಿಯ ವ್ಯಕ್ತಿಗಳು ಕಟ್ಟಿಕೊಳ್ಳುವುದರಿಂದ ಅವನಿಗೆ ಏಳಿಗೆಯಾಗುತ್ತದೆ.

ಮತ್ತು ಯಾವ ರಾಶಿಯವರು ಕಟ್ಟಿಕೊಳ್ಳಬಾರದು ಕಪ್ಪು ಮತ್ತು ಕೆಂಪು ದಾರವನ್ನು ಹೇಗೆ ಧರಿಸಬೇಕು ಯಾವ ದಿನ ಧರಿಸಬೇಕು ಅನ್ನೋದರ ಎಲ್ಲಾ ಒಂದು ಮಾಹಿತಿಯನ್ನು ನಾನು ನಿಮಗೆ ಇಂದು ಈ ಒಂದು ಲೇಖನದಲ್ಲಿ ಪೂರ್ತಿಯಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೇ ಆದ್ದರಿಂದ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ಓದಿ ಮತ್ತು ತಪ್ಪದೇ ನಮ್ಮ ಈ ಉಪಯುಕ್ತ ಮಾಹಿತಿಗೆ ಲೈಕ್ ಮಾಡಿ .

ಇಂದಿನ ದಿನಗಳಲ್ಲಿ ಹುಡುಗ ಮತ್ತು ಹುಡುಗಿಯರು ಕೈಗೆ ಕಪ್ಪು ಮತ್ತು ಕೆಂಪು ದಾರವನ್ನು ಕಟ್ಟಿಕೊಂಡಿರುವುದನ್ನು ಕೇಳಿರುತ್ತೀರಾ ಮತ್ತು ನೋಡಿರುತ್ತೀರಾ ನಿಮ್ಮ ಸುತ್ತಮುತ್ತಲೂ ಇರುವವರು ಕೂಡ ಕೈಗೆ ಈ ರೀತಿ ದಾರವನ್ನು ಉತ್ತರಿಸಿರುತ್ತಾರೆ ಆದರೆ ಈ ರೀತಿ ದಾರವನ್ನು ಕಟ್ಟಿಕೊಳ್ಳುವುದರ ಹಿಂದೆ ಕೆಲವೊಂದು ಮಹತ್ವವಿದೆ ಮಹತ್ವಗಳನ್ನು ತಿಳಿದು ಈ ದಾರಗಳನ್ನು ಕಟ್ಟಿಕೊಳ್ಳುವುದರಿಂದ ತುಂಬಾನೇ ಪ್ರಯೋಜನವನ್ನು ವ್ಯಕ್ತಿ ಪಡೆದುಕೊಳ್ಳಬಹುದು .

ಹಾಗಾದರೆ ಈ ಒಂದು ಕಪ್ಪು ಮತ್ತು ಕೆಂಪು ದಾರವನ್ನು ಯಾರು ಯಾವಾಗ ಎಲ್ಲಿ ಧರಿಸಬೇಕು ಅನ್ನೋದನ್ನ ಮೊದಲು ತಿಳಿಯೋಣ .** ಸ್ನೇಹಿತರೇ ಕಪ್ಪು ಮತ್ತು ಕೆಂಪು ದಾರವನ್ನು ಎಲ್ಲ ರಾಶಿಯ ವ್ಯಕ್ತಿಗಳು ಕೂಡ ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ ಕೇವಲ ವೃಷಭ ಮೇಷ ಧನಸ್ಸು ಕನ್ಯಾ ಮತ್ತು ಮಕರ ಈ ರಾಶಿಯ ಜನರು ಗಳು ಕಟ್ಟಿಕೊಂಡರೆ ಹೆಚ್ಚಿನ ಪ್ರಯೋಜನವನ್ನು ಈ ರಾಶಿಯಲ್ಲಿ ಹುಟ್ಟಿಸುವಂತಹ ವ್ಯಕ್ತಿಗಳು ಪಡೆದುಕೊಳ್ಳಬಹುದು .

ಹಾಗೆಯೇ ಇಂತಹ ಅವರು ಕಪ್ಪು ಮತ್ತು ಕೆಂಪು ದಾರಗಳನ್ನು ಕಟ್ಟಿಕೊಳ್ಳಬೇಕು ಅಂತ ಎಂದುಕೊಂಡಲ್ಲಿ ಅವರು ಕೆಂಪು ಮತ್ತು ಕಪ್ಪು ದಾರಗಳನ್ನು ಶನಿವಾರದಂದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅದಕ್ಕೆ ಪೂಜೆ ಮಾಡಿಸಿಕೊಂಡು ಕಟ್ಟಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ .

** ಹಿರಿಯರು ಯಾಕೆ ಕೈಗಳಿಗೆ ಕಪ್ಪು ಮತ್ತು ಕೆಂಪು ದಾರವನ್ನು ಕಟ್ಟಿಕೊಳ್ಳಬೇಕು ಅಂತ ಹೇಳುತ್ತಿದ್ದರು ಅನ್ನೇ ಈ ರೀತಿ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ವ್ಯಕ್ತಿಗೆ ದೃಷ್ಟಿ ಆಗುವುದಿಲ್ಲ ಮತ್ತು ಕೆಟ್ಟ ನಕಾರಾತ್ಮಕ ಶಕ್ತಿಯೂ ಅವರಿಗೆ ತಟ್ಟುವುದಿಲ್ಲ ಅನ್ನೋ ಒಂದು ಕಾರಣಕ್ಕಾಗಿ ಕೈಗೆ ದಾರವನ್ನು ಕಟ್ಟಬೇಕು ಅನ್ನೋ ಒಂದು ಪದ್ಧತಿಯನ್ನು ಪಾಲಿಸುತ್ತಿದ್ದರು .

ಒಂದು ಕಪ್ಪು ದಾರವನ್ನು ತೆಗೆದುಕೊಂಡು ಅದಕ್ಕೆ ಒಂಬತ್ತು ಗಂಟುಗಳನ್ನು ಹಾಕಬೇಕು ನಂತರ ಅದನ್ನು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬಂದು ಮನೆಗೆ ಮುಖ್ಯದ್ವಾರದಲ್ಲಿ ಕಟ್ಟುವುದರಿಂದ ಯಾವುದೇ ನಕಾರಾತ್ಮಕ ಶಕ್ತಿ ಮನೆಗೆ ಬರುವುದಿಲ್ಲ ಮತ್ತು ಮನೆಗೆ ಯಾವುದೇ ದೃಷ್ಟಿ ತಗುಲುವುದಿಲ್ಲ ಅನ್ನೋ ಒಂದು ನಂಬಿಕೆ ಕೂಡ ಇದೆ .

ಈ ರೀತಿ ಕಪ್ಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ರಕ್ತದೊತ್ತಡವು ಸಮತೋಲನದಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ ಮತ್ತು ವ್ಯಕ್ತಿಯ ತೂಕ ಕೂಡ ಹೆಚ್ಚಾಗುವುದಿಲ್ಲ ಅಂತ ಕೂಡ ನಂಬಲಾಗುವುದು . ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಕಲಹ ಉಂಟಾಗುತ್ತಿದ್ದರೆ ,

ಅಂತಹವರು ಕೆಂಪು ದಾರವನ್ನು ಕಟ್ಟಿಕೊಳ್ಳುವುದರಿಂದ ಮನೆಯಲ್ಲಿ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ ಅಂತ ಹೇಳಲಾಗುವುದು ಈ ರೀತಿ ಕೆಂಪು ದಾರವನ್ನು ಕಟ್ಟಿಕೊಂಡು ಆಸ್ತಿ ಕಲಹಕ್ಕೆ ಹೋಗುವುದರಿಂದ ಅವರ ದೃಷ್ಟಿ ಬೇರೆ ಕಡೆ ಹೋಗುತ್ತದೆ ಆದ ಕಾರಣದಿಂದಾಗಿ ಸಮಸ್ಯೆ ಬೇಗಾನೆ ಪರಿಹಾರವಾಗುವುದು ಎಂದು ನಂಬಲಾಗುತ್ತದೆ .