Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕೆಮ್ಮು, ನೆಗಡಿ, ಜ್ವರ, ತಲೆನೋವು ಇವೆಲ್ಲದರಿಂದ 3 ದಿನದಲ್ಲಿ ಪರಿಹಾರ ಕಂಡುಕೊಳ್ಳಬೇಕೇ ..!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿ ಅಲ್ಲಿ  ನಿಮಗೆ ತಿಳಿಸುತ್ತ  ಇರುವಂತಹ ಈ ಮಾಹಿತಿ ಏನು ಅಂದರೆ ಶೀತ ಕೆಮ್ಮು ಜ್ವರ ಇಂತಹ ಯಾವುದಾದರೂ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ನೀವು ಈ ಪರಿಹಾರವನ್ನು ಮಾಡಿ. ಯಾಕೆಂದರೆ ಕೆಲವರಿಗೆ ಶೀತ ಕೆಮ್ಮು ಜ್ವರ ಬಂದ ಕೂಡಲೆ ಅವರು ಮೊರೆ ಹೋಗುವುದು ಇಂಗ್ಲಿಷ್ ಮೆಡಿಸಿನ್ ಗೆ. ಯಾಕೆ ಅಂದರೆ ಕೆಲವರಿಗೆ ಇಂಗ್ಲಿಷ್ ಮೆಡಿಸಿನ್ ಬೇಗ ಅವರ ತೊಂದರೆಗಳಿಗೆ ಶಮನವನ್ನು ನೀಡುತ್ತಾ ಇರುತ್ತದೆ .

ಅನ್ನೋ ಮನೋಭಾವನೆಯಲ್ಲಿ ಇರುತ್ತಾರೆ. ಆದ ಕಾರಣ ಅವರು ತಕ್ಷಣವೇ ಮೊರೆ ಹೋಗುವುದು ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ. ಆದರೆ ಈ ಮಾತ್ರೆಗಳನ್ನು ನಾವು ತೆಗೆದುಕೊಳ್ಳುವುದರಿಂದ ನಮಗೆ ಇದು ಸ್ಲೋ ಪಾಯಿಸನ್ ರೀತಿ ಕೆಲಸ ಮಾಡಿ ನಮ್ಮ ಆರೋಗ್ಯದ ಮೇಲೆ ಬೇರೆ ರೀತಿಯ ಅಡ್ಡ ಪರಿಣಾಮಗಳನ್ನು ಬೀರ ಬಹುದು. ಆದರೆ ಈ ಒಂದು ಪರಿಹಾರ ಒಳ್ಳೆಯ ಚೇತರಿಕೆ ಅನ್ನು ನೀಡುತ್ತದೆ.

ಇದಕ್ಕಾಗಿ ನಿಮಗೆ ಬೇಕಾಗಿರುವುದು ಒಂದು ಲೋಟದಲ್ಲಿ ನೀರು ಅದನ್ನ ಪಾತ್ರೆಗೆ ಹಾಕಿ ಇದಕ್ಕೆ ಮೊದಲು ಒಂದು ಚಮಚ ಜೀರಿಗೆಯನ್ನು ಹಾಕಿ ನೀರನ್ನು ಕುದಿಸಬೇಕು. ನಂತರ 2 ಲವಂಗ ಮತ್ತು ಒಂದು ಅರ್ಧ ಇಂಚಿನಷ್ಟು ಚಕ್ಕೆ, ಚಕ್ಕೆ ಬಗ್ಗೆ ಹೇಳಬೇಕೆಂದರೆ ಬಹಳಷ್ಟು ಇದೆ ಯಾಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ ಗಂಟಲಿನಲ್ಲಿ ಕಟ್ಟಿರುವಂತಹ ಕಫವನ್ನು ಬೇಗ,

ಕರಗಿಸುತ್ತದೆ. ನಂತರ ಇದಕ್ಕೆ ನೀವು ಚಿಟಿಕೆ ಅರಿಶಿನವನ್ನು ಹಾಕಿ, ಅರ್ಧ ಇಂಚಿನಷ್ಟು ಹಸಿಶುಂಠಿಯನ್ನು ತುರಿದು ನೀರಿಗೆ ಹಾಕಿ ನೀರನ್ನು ಚೆನ್ನಾಗಿ ಕುದಿಸಬೇಕು. ಎಷ್ಟು ಅಂದರೆ ನೀರಿನ ಪ್ರಮಾಣ ಅರ್ಧದಷ್ಟು ಕಡಿಮೆ ಆಗಬೇಕು ಆ ರೀತಿ ನೀರನ್ನು ಕುದಿಸಿ. ಇದು ಸ್ವಲ್ಪ ಬೆಚ್ಚಗೆ ಆದಮೇಲೆ ನೀವು ಇದನ್ನು ಕುಡಿಯಬೇಕು. ಈ ರೀತಿಯ ಪರಿಹಾರ ನಿಮಗೆ ಶೀತ ಕೆಮ್ಮು ಕಫ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಯಾವುದೇ ಮಾತ್ರೆಗಳ ಅವಶ್ಯಕತೆ ಕೂಡ ಇರುವುದು ಇಲ್ಲ ನೀವು ಈ ಒಂದು ಔಷಧಿಗೆ ಒಂದೂವರೆ ಚಮಚ ಜೇನು ತುಪ್ಪವನ್ನು ಮಿಶ್ರ  ಮಾಡಿ ಕುಡಿಯಬಹುದು. ಮಧುಮೇಹಿಗಳು ಆದರೆ ಜೇನುತುಪ್ಪವನ್ನು ಬೆರೆಸುವುದು ಬೇಡ. ಆದರೆ ಬಿಸಿ ನೀರಿಗೆ ನೀವು ಜೇನು ತುಪ್ಪವನ್ನು ಮಿಶ್ರ ಮಾಡ ಬೇಡಿ. ಆದರೆ ಸ್ವಲ್ಪ ತಣ್ಣಗೆ ಆದಮೇಲೆ, ಆದಕ್ಕೆ ಜೇನು ತುಪ್ಪವನ್ನು ಬೆರೆಸಿ ಆಮೇಲೆ ಅದನ್ನು ನೀವು ಸೇವಿಸಿ. ಇದರಿಂದ ನಿಮಗೆ ಕೆಮ್ಮು ಕಫ ಆದಂತಹ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ. ಒಳ್ಳೆಯ ವಿಶ್ರಾಂತಿ ಕೂಡ ನಿಮಗೆ ದೊರೆಯುತ್ತದೆ ಆದರೆ ಮಾತ್ರೆಯನ್ನು ನೀವು ನುಂಗುವುದರಿಂದ ಇದು ನಿದ್ರೆಯ ಅನುಭವವನ್ನು ಉಂಟು ಮಾಡುತ್ತದೆ.

ಮತ್ತು ಆ ದಿನದಲ್ಲಿ ಯಾವ ಕೆಲಸ ಕಾರ್ಯಗಳನ್ನು ಕೂಡ ಮಾಡುವುದಕ್ಕೆ ಮನಸ್ಸು ಇರುವುದು ಇಲ್ಲ ಮತ್ತು ಮುಂದಿನ ದಿನಗಳಲ್ಲಿ ಈ ಮಾತ್ರೆಗಳಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನೀವು ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲಾರಿಗು ಶುಭವಾಗಲಿ ಶುಭ ದಿನ ಧನ್ಯವಾದ.