Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಕೇವಲ ಪೂಜೆಗೆ ಮಾತ್ರ ಅಲ್ಲ ಅದೆಷ್ಟೋ ರೋಗಗಳಿಗೆ ಮನೆ ಮದ್ದು ಕೂಡ ಹೌದು ಈ ಗಿಡ … ತಿಳಿದುಕೊಳ್ಳಿ ಇದರ ಬಗ್ಗೆ ಹೆಚ್ಚಿನ ಮಾಹಿತಿ

ಬಿಲ್ವ ಪತ್ರೆಯಲ್ಲಿ ಇರುವಂತಹ ಈ ಔಷಧೀಯ ಗುಣವನ್ನು ತಿಳಿದರೆ ನೀವು ಕೂಡ ಈ ಬಿಲ್ವಪತ್ರೆಯ ಗಿಡದ ಪ್ರತಿಯೊಂದು ಭಾಗದ ಪ್ರಯೋಜನಗಳನ್ನು ಪಡೆದುಕೊಳ್ಳಲು ಮುಂದಾಗುತ್ತೀರಿ,

ಹೌದು ಇಷ್ಟೆಲ್ಲಾ ಪ್ರಯೋಜನಗಳು ಇರುವಂತಹ ಈ ಬಿಲ್ವಪತ್ರೆಯ ಗಿಡವನ್ನು ದೈವ ಸ್ವರೂಪಿ ಎಂದು ಭಾವಿಸಿ ನಮ್ಮ ಪೂರ್ವಜರು ದೇವಸ್ಥಾನಗಳ ಮುಂದೆ ಬೆಳೆಯುತ್ತಿದ್ದರಂತೆ.

ಹಾಗಾದರೆ ತಿಳಿಯೋಣ ಬನ್ನಿ ಬಿಲ್ವ ಪತ್ರೆಯ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಮತ್ತು ನೀವು ಕೂಡ ಈ ಬಿಲ್ವಪತ್ರೆಯ ಎಲೆಗಳ ಪ್ರಯೋಜನಗಳನ್ನು ತಿಳಿದುಕೊಂಡ ನಂತರ ಇದನ್ನು ನೇರವಾಗಿ ಬಳಸುವುದರ ಬದಲು ಆಯುರ್ವೇದ ತಜ್ಞರ ಬಳಿ ಹೋಗಿ ಸಲಹೆಯನ್ನು ಪಡೆದು ನಂತರ ಬಿಲ್ವ ಪತ್ರೆ ಎಲೆ ತೊಗಟೆ ಇದರ ತಿರುಳುಗಳ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಬಿಲ್ವಪತ್ರೆಯೊಂದು ಪವಿತ್ರವಾದ ಗಿಡಮೂಲಿಕೆ ಆಗಿರುವುದರಿಂದ ಇದನ್ನು ಶಿವನಿಗೆ ಅರ್ಪಿಸುವುದರಿಂದ ಪುಣ್ಯವನ್ನು ಸಂಪಾದಿಸಬಹುದು ಎಂಬ ವಾಕ್ಯವಿದೆ ಹಾಗೂ ಈ ಬಿಲ್ವಪತ್ರೆ ಎಲೆಯನ್ನು ಶಾಸ್ತ್ರೀಯ ಭಾಷೆಯಲ್ಲಿ ಹೆಗೆಲ್ ಮಾರ್ಮಲಸ್ ಎಂದು ಕರೆಯಲಾಗುತ್ತದೆ ಮತ್ತು ಗೋಲ್ಡನ್ ಆಪಲ್ ಬೆಂಗಾಲ್ ಕ್ವೀನ್ ಸ್ಟೋನ್ ಆಪಲ್ ವುಡ್ ಆ್ಯಪಲ್ ಶಿಫಾನಿಸ್ ಬಿಲ್ಡರ್ ಇಂತಹ ಹೆಸರುಗಳಿಂದ ಕೂಡ ಕರೆಯುವುದುಂಟು.

ಬಿಲ್ವಪತ್ರೆಯ ಎಲೆಯನ್ನು ಬಳಸುವುದರಿಂದ ವಾತ ಗುಣ ಕಡಿಮೆಯಾಗುತ್ತದೆ ಹಾಗೂ ಆಯುರ್ವೇದದಲ್ಲಿ ಈ ವಾತವನ್ನು ಗುಣ ಪಡಿಸುವುದಕ್ಕಾಗಿ ಬಿಲ್ವಪತ್ರೆಯ ಪ್ರಯೋಜನಗಳನ್ನು ಪಡೆದುಕೊಳ್ಳುವುದುಂಟು ಹಾಗೂ ಬಿಲ್ವದ ಹಸಿ ಕಾಯಿಯನ್ನು ಕಫದ ನಿವಾರಣೆಗಾಗಿ ಬಳಸಲಾಗುತ್ತದೆ ಮತ್ತು ಹಸಿವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಿಲ್ವಪತ್ರೆಯ ಪ್ರಯೋಜನಗಳನ್ನು ಪಡೆದುಕೊಳ್ಳುವುದರಿಂದ ಈ ಸಮಸ್ಯೆ ಕೂಡ ದೂರವಾಗುತ್ತದೆ.

ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ಭೇದಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಬಿಲ್ವಪತ್ರೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಹಾಗೂ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿದ್ದರೆ ಅಲರ್ಜಿಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರು ಈ ಬಿಲ್ವ ಎಲೆಗಳ ರಸವನ್ನು ತೆಗೆದುಕೊಂಡು ಲೇಪಿಸಿಕೊಳ್ಳುವುದರಿಂದ ಚರ್ಮ ರೋಗ ಸಮಸ್ಯೆ ದೂರವಾಗುತ್ತದೆ.

ಬಿಲ್ವದ ತಿರುಳನ್ನು ಬೇಯಿಸಿ ಕುದಿಸಿ ಅದನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಹೊಟ್ಟಿನ ಸಮಸ್ಯೆ ದೂರವಾಗುತ್ತದೆ ಹಾಗೂ ಎರಡು ಟೇಬಲ್ ಸ್ಪೂನ್ ಈ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ನಿಶಕ್ತಿ ದೂರವಾಗುತ್ತದೆ.

ಕಣ್ಣಿನಲ್ಲಿ ಉರಿ ಇದ್ದರೆ ಆಗ ಬಿಲ್ವದ ಎಲೆಯನ್ನು ಬಿಸಿ ಮಾಡಿ ಅದನ್ನು ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ಉರಿ ಕಮ್ಮಿಯಾಗುತ್ತದೆ ಹಾಗೂ ಈ ಬಿಲ್ವದ ಹೂವುಗಳನ್ನುನೀರಿನಲ್ಲಿ ನೆನೆಸಿಟ್ಟು ಅದನ್ನು ಕಣ್ಣಿಗೆ ಎರಡೆರಡು ಹನಿ ಬಿಡುವುದರಿಂದ ಕಣ್ಣಿನ ಸೋಂಕು ನಿವಾರಣೆಯಾಗುತ್ತದೆ.

ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರೆ ಹೊಟ್ಟೆ ಉರಿಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರು ಎರಡು ಟೇಬಲ್ ಸ್ಪೂನ್ ಬಿಲ್ವಪತ್ರೆಯ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುತ್ತಾ ಬಂದರೆ ಇಂತಹ ಸಮಸ್ಯೆಗಳು ದೂರವಾಗುತ್ತದೆ.

ನೆಗಡಿಯಿಂದ ಬಳಲುತ್ತಿದ್ದಾರೆ ಬಿಲ್ವ ಪತ್ರೆಯ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಆ ನೀರನ್ನು ಬಿಸಿ ಮಾಡಿ ಶಾಖವನ್ನು ತೆಗೆದುಕೊಳ್ಳುವುದರಿಂದ ನೆಗಡಿ ಸಮಸ್ಯೆ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ, ಇನ್ನು ಈ ಬಿಲ್ವಪತ್ರೆಯ ಎಳೆಯನ್ನು ತೆಗೆದುಕೊಂಡು ಅದನ್ನು ಪಟ್ಟು ಹಾಕುವುದರಿಂದ ಕಾಂಗ್ರೆಸ್ ಸಮಸ್ಯೆ ದೂರವಾಗುತ್ತದೆ ಹಾಗೂ ಸುಟ್ಟ ಗಾಯಕ್ಕೆ ಈ ಎಲೆಯ ರಸವನ್ನು ಹಾಕಿಕೊಳ್ಳುವುದರಿಂದ ಕೂಡ ನೋವು ನಿವಾರಣೆಯಾಗುತ್ತದೆ ಕಲೆಯೂ ಕೂಡ ಬೇಗ ಮಾಯವಾಗುತ್ತದೆ.

ಈ ಎಲೆಗಳಿಂದ ಕಷಾಯ ಮಾಡಿ ಸೇವಿಸುವುದರಿಂದ ಜ್ವರದ ಸಮಸ್ಯೆ ದೂರವಾಗುತ್ತದೆ ಮತ್ತು ಮಲೇರಿಯ ಅಂತ ಸಮಸ್ಯೆಗೂ ಕೂಡ ಈ ಎಳೆ ರಾಮಬಾಣವಾಗಿದೆ, ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದ.