Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕೇವಲ 5 ನಿಮಿಷದಲ್ಲಿ ಹೇಗೆ ನಿಮ್ಮ ಹಲ್ಲನ್ನ ಬೆಳ್ಳಗೆ ಮಾಡಿಕೊಳ್ಳಬಹುದು ಗೊತ್ತ ..!

ಫ್ರೆಂಡ್ಸ್ ಕೇವಲ ಐದು ನಿಮಿಷಗಳಲ್ಲಿ ಹೊಳೆಯುವ ಹಲ್ಲುಗಳನ್ನು ಪಡೆದುಕೊಳ್ಳುವುದು ಹೇಗೆ ಅಂತ ಹೇಳ್ತೇವೆ ಕೇಳಿ. ಕೇವಲ ನಾವು ಪ್ರತಿ ದಿನ ಬಳಸುವ ಟೂತ್ ಪೇಸ್ಟ್ ಅನ್ನು ಬಳಸಿ ನಿಮ್ಮ ಹಲ್ಲುಗಳನ್ನು ಉಜ್ಜುತ್ತಾ ಇದ್ದರೆ ಅದರಿಂದ ಯಾವುದೇ ತರಹದ ಫಲಿತಾಂಶವನ್ನಾಗಲಿ ಪರಿಣಾಮಕಾರಿ ಆದ ಫಲಿತಾಂಶವನ್ನು ಆಗಲಿ ನಾವು ಗಮನಿಸಿರುವುದಿಲ್ಲ ಅಥವಾ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಂಡಿರುವುದಿಲ್ಲಾ ಕೂಡ.

ಹಾಗಾದರೆ ನಾವು ಇಂದಿನ ಮಾಹಿತಿಯಲ್ಲಿ ಹೊಳಪಾದ ಹಲ್ಲುಗಳನ್ನ ಪಡೆದುಕೊಳ್ಳುವುದಕ್ಕಾಗಿ ಈ ಟೂತ್ ಪೇಸ್ಟ್ ನೊಂದಿಗೆ ಯಾವ ಕೆಲವೊಂದು ಪದಾರ್ಥಗಳನ್ನು ಮಿಶ್ರಣ ಮಾಡಿದರೆ ಹೊಳಪಾದ ಹಲ್ಲುಗಳನ್ನು ಪಡೆದುಕೊಳ್ಳಬಹುದು ಆರೋಗ್ಯಕರವಾದ ಹಲ್ಲುಗಳನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿಯೋಣ ಈ ದಿನದ ಲೇಖನದಲ್ಲಿ.

ಹೌದು ಸಾಮಾನ್ಯವಾಗಿ ನಾವು ನಕ್ಕಾಗ ನಮ್ಮ ನಗುವಿನ ಅಂದವನ್ನು ಇನ್ನೂ ಹೆಚ್ಚು ಮಾಡುವುದು ನಮ್ಮ ಹಲ್ಲುಗಳು ಹಲ್ಲುಗಳೇ ಕಳೆಗುಂದಿ ಹಳದಿಗಟ್ಟಿದ್ದರೆ ಆ ನಗುವಿಗೆ ಯಾವ ಅಂದವು ಇರುವುದಿಲ್ಲಾ ಆದಕಾರಣ ಹಲ್ಲುಗಳನ್ನ ಹೊಳಪಾಗಿ ಅವಶ್ಯಕವಾಗಿ ಇರುತ್ತದೆ. ಕೆಲವರಂತೂ ನಗುವುದೆ ಕಮ್ಮಿ ನಕ್ಕಾಗ ಅವರ ಹಲ್ಲುಗಳು ಈ ರೀತಿ ಹಳದಿಯಾಗಿದ್ದರೆ. ಆ ನಗು ಇನ್ನೂ ಚೆನ್ನಾಗಿ ಇರುವುದಿಲ್ಲ. ಇನ್ನು ಹಲ್ಲು ಹಳದಿ ಕಟ್ಟುವುದಕ್ಕೆ ಕಾರಣಗಳನ್ನು ಹೇಳಬೇಕೆಂದರೆ ಕಾಫಿ ಟೀ ಹೆಚ್ಚಾಗಿ ಕುಡಿಯುವುದರಿಂದ ಮತ್ತು ಕೆಲವರು ಪ್ರತಿ ದಿನ ಸರಿ ಆಗಿ ಹಲ್ಲುಗಳನ್ನು ಸ್ವಚ್ಛ ಕೂಡ ಮಾಡುತ್ತಿರುವುದಿಲ್ಲಾ. ಇನ್ನೂ ಕೆಲವರಿಗೆ ಧೂಮಪಾನ ಮದ್ಯಪಾನ ಗುಟುಕಾ ಅಭ್ಯಾಸದಿಂದ ಕೂಡ ಹಲ್ಲುಗಳು ಹಳದಿ ಕಟ್ಟುತ್ತದೆ.

ಇಂದಿನ ಪರಿಹಾರದಲ್ಲಿ ನಾವು ಪ್ರತಿ ದಿನ ಬಳಸುವ ಟೂತ್ ಪೇಸ್ಟ್ ನೊಂದಿಗೆ ಬಳಸುತ್ತಿರುವ ಈ ಎರಡೂ ಪದಾರ್ಥ ಯಾವುದು ಅಂದರೆ ಅಡುಗೆ ಸೋಡ ಮತ್ತು ನಿಂಬೆ ಹಣ್ಣಿನ ರಸ. ಈ ಎರಡು ಪದಾರ್ಥಗಳು ಕೂಡ ಬ್ಲೀಚಿಂಗ್ ಏಜೆಂಟ್ ಆಗಿರುತ್ತದೆ ಅಂದರೆ ನೈಸರ್ಗಿಕವಾಗಿ ಬ್ಲೀಚಿಂಗ್ ಅಂಶವನ್ನು ಹೊಂದಿರುತ್ತದೆ. ಆದಕಾರಣ ನಾವು ಟೂತ್ ಪೇಸ್ಟ್ ನೊಂದಿಗೆ ಈ ಪದಾರ್ಥಗಳನ್ನು ಬಳಸಿ ಹಲ್ಲುಗಳನ್ನು ಸ್ವಚ್ಛ ಪಡಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಆಗಲಿ ಅಥವಾ ಹಲ್ಲಿನ ಮೇಲೆ ಇರುವ ಪದರ ಅಂತೇನು ಹೇಳ್ತೇವೊ ಅಂದರೆ ಎನಾಮಲ್ ಮೇಲೆ ಆಗಲಿ ಯಾವ ಅಡ್ಡ ಪರಿಣಾಮ ಆಗುವುದಿಲ್ಲ.

ಇದನ್ನು ತಿಂಗಳಿಗೆ 4ಬಾರಿ ಮಾತ್ರ ಮಾಡಬೇಕು ಅಂದರೆ ವಾರಕ್ಕೆ ಒಮ್ಮೆ ಈ ಪರಿಹಾರವನ್ನು ಮಾಡಿಕೊಂಡರೆ ಸಾಕು ಹೆಚ್ಚಾಗಿ ಮಾಡುವುದರಿಂದ ಕೂಡ ಹಲ್ಲು ಸೆನ್ಸಿಟಿವ್ ಆಗುವುದು ಇಂತಹ ಸಮಸ್ಯೆಗಳು ಕಾಡಬಹುದು. ಇನ್ನು ಈ ಪರಿಹಾರದಲ್ಲಿ ನೀವು ಯಾವುದೇ ಫ್ಲೇವರ್ ಇರುವ ಟೂತ್ಪೇಸ್ಟನ್ನು ಬಳಸುವುದು ಪರಿಣಾಮಕಾರಿಯಾಗಿ ಇರುವುದಿಲ್ಲ ಆದಕಾರಣ ಬಿಳಿ ಬಣ್ಣದ ಪೇಸ್ಟ್ ಅನ್ನು ಆದಷ್ಟು ಬಳಕೆ ಮಾಡಿ. ಇದರೊಂದಿಗೆ ಬಳಸಿರುವ ನಿಂಬೆಹಣ್ಣಿನ ರಸ ಹಲ್ಲಿನ ಮೇಲಿರುವ ಹಳದಿ ಪದರವನ್ನು ತೆಗೆದು ಹಾಕಲು ಸಹಕರಿಸುತ್ತದೆ. ಅಡುಗೆ ಸೋಡ ಕೂಡ ಬ್ಲೀಚಿಂಗ್ ಏಜೆಂಟ್ ರೀತಿ ಕೆಲಸ ಮಾಡಿ ಹಲ್ಲುಗಳನ್ನು ಹೊಳಪಾಗಿಸುತ್ತದೆ.

ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಅನೇಕ ಪ್ರಸಿದ್ಧ ಮಾಹಿತಿಗಳಿಗಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಶುಭ ದಿನ ಧನ್ಯವಾದ.