Categories
ಭಕ್ತಿ ಮಾಹಿತಿ ಸಂಗ್ರಹ

ಕೈ ತುಂಬಾ ಸಂಪಾದಿಸಿಕೊಂಡು, ಎಲ್ಲವನ್ನು ಕಳೆದುಕೊಂಡಿದ್ದೀರಾ..! ಬೆಳ್ಳುಳ್ಳಿಯಿಂದ ಹೀಗೆ ಮಾಡಿದರೆ ಹಣ ಮತ್ತೆ ಗಳಿಸುತ್ತೀರಿ..!

ಸ್ನೇಹಿತರೇ ಸಾಮಾನ್ಯವಾಗಿ ನಾವು ದಿನನಿತ್ಯ ಎಂತಹ ಸಮಸ್ಯೆಗಳನ್ನು ಎದುರಿಸುತ್ತೇವೆ ಎಂಬುದು ನಮಗೆ ತಿಳಿದಿದೆ ಆರೋಗ್ಯ ಹಣಕಾಸು ಹೀಗೆ ಎಷ್ಟೊಂದು ಸಮಸ್ಯೆಗಳನ್ನು ನಾವು ದಿನನಿತ್ಯ ಎದುರಿಸುತ್ತಿರುತ್ತೆವೆ ಅದರಲ್ಲೂ ಹಣಕಾಸಿನ ಸಮಸ್ಯೆ ಎಂದು ಪ್ರತಿಯೊಬ್ಬರಿಗೂ ಕೂಡ ಪ್ರತಿದಿನ ಕಾಡುವಂಥದ್ದೇ ಆಗಿರುತ್ತದೆ .

ಆದರೆ ಕೆಲವೊಬ್ಬರು ಚೆನ್ನಾಗಿ ಹಣವನ್ನು ದುಡಿದಿರುತ್ತಾರೆ ಆದರೆ ಹಣ ಅವರ ಕೈಯಲ್ಲಿ ನಿಲ್ಲುವುದಿಲ್ಲ ಬೇಗ ಖರ್ಚಾಗಿ ತಮ್ಮ ಕೈಯಿಂದ ಖಾಲಿ ಯಾಗುತ್ತಿರುತ್ತದೆ ಎಷ್ಟೇ ಹಣವನ್ನು ದುಡಿದರೂ ಕೂಡ ಅದು ಅವರ ಮನೆಯಲ್ಲಿ ಉಳಿಯುತ ಇರುವುದಿಲ್ಲ ಹೇಗೋ ಜನರು ಅವರಿಂದ ಮೋಸ ಮಾಡಿ ಹಣವನ್ನು ಕಸಿದು ಕೊಳ್ಳುತ್ತಿರುತ್ತಾರೆ.

ಆದರೆ ಹಣ ಮನೆಯಲ್ಲಿ ಉಳಿಯಲಿ ಮನೆಯಿಂದ ಯಾವುದೇ ಕಾರಣಕ್ಕೂ ಹೋಗಬಾರದು ನಾವು ಕಷ್ಟಪಟ್ಟು ದುಡಿದಂತಹ ಹಣವು ಯಾವಾಗಲೂ ನಮ್ಮ ಬಳಿಯೇ ಇರಲಿ ಎಂದು ಎಷ್ಟೊಂದು ಜನ ಏನೆಲ್ಲ ಪೂಜೆ ಪುನಸ್ಕಾರಗಳನ್ನು ಮಾಡಿರುತ್ತಾರೆ ಎಂದು ಗಮನಿಸಿರುತ್ತೇವೆ ಆದರೆ ಆ ಪೂಜೆ ಪುನಸ್ಕಾರಗಳನ್ನು ಮೀರಿ ಕೆಲವೊಂದು ಬಾರಿ ಹಣವೂ ನಮ್ಮಿಂದ ದೂರವಾಗುತ್ತಲೇ ಇರುತ್ತದೆ ಅದಕ್ಕೆ ಈ ದಿನ ನಾವು ಒಂದು ಪರಿಹಾರವನ್ನು ನೀಡುತ್ತೇವೆ ಇದು ಒಂದು ಸರಳವಾದಂತಹ ನೀವೇ ಮನೆಯಲ್ಲಿ ಮಾಡಬಹುದಾದಂಥ ಪರಿಹಾರವಾಗಿದೆ ಅದಕ್ಕೆ ಬೇಕಾದಂತಹ ಸಾಮಗ್ರಿಗಳನ್ನು ಮೊದಲು ತೆಗೆದಿಟ್ಟುಕೊಳ್ಳಿ.

ಲವಂಗ ಕರ್ಪೂರ ಬೆಳ್ಳುಳ್ಳಿ ಈ ಮೂರು ಸಾಮಗ್ರಿಗಳಿಂದ ನಿಮ್ಮ ಮನೆಯಿಂದ ಯಾವುದೇ ಹಣ ಹೊರ ಹೋಗಿದ್ದರೂ ಕೂಡ ಸಾಧ್ಯವಾದಷ್ಟು ಬೇಗ ನಿಮ್ಮ ಮನೆಗೆ ನೀವು ವಾಪಸ್ ತರಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಈ ಪರಿಹಾರ ವಿಧಾನವನ್ನು ಮಾಡುವ ಮಾರ್ಗವನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ ಈ ಪರಿಹಾರ ಪೂಜೆಯನ್ನು ಮಾಡಬೇಕಾದರೆ ಅದು ಶುಕ್ಲಪಕ್ಷದ ದಿನಗಳಲ್ಲಿ ಮಾಡಬೇಕು ಅಂದರೆ ಅಮವಾಸ್ಯೆಯಿಂದ ಹುಣ್ಣಿಮೆಯವರೆಗೆ ಬರುವಂತಹ ದಿನಗಳನ್ನು ಶುಕ್ಲಪಕ್ಷ ಎನ್ನುತ್ತಾರೆ .

ಆ ಶುಕ್ಲ ಪಕ್ಷದ ಯಾವುದಾದರೂ ಒಂದು ಮಂಗಳವಾರದಂದು ಈ ಪೂಜೆಯನ್ನು ಮಾಡುವುದು ಉತ್ತಮ ಈ ಪೂಜೆಯನ್ನು ಮಾಡಬೇಕು ಎಂದರೆ ಮೊದಲನೆಯದಾಗಿ ಒಂದು ಕೆಂಪು ಬಣ್ಣದ ವಸ್ತ್ರವನ್ನು ಚೀಲದ ರೀತಿಯಲ್ಲಿ ಮಾಡಿಕೊಳ್ಳಬೇಕು ಅಂದರೆ ಮೊದಲೆಲ್ಲ ಅಜ್ಜಿಯರು ಚೀಲವನ್ನು ಇಟ್ಟುಕೊಳ್ಳುತ್ತಿದ್ದರಲ್ಲ ಆ ರೀತಿ ಒಂದು ಚೀಲವನ್ನು ಮಾಡಿಟ್ಟುಕೊಂಡು ಅದಕ್ಕೆ ಎರಡು ಬಿಲ್ಲೆ ಕರ್ಪೂರ ಎರಡು ಲವಂಗ ಎರಡು ಬೆಳ್ಳುಳ್ಳಿ ಎಸಳು ಈ ಮೂರನ್ನೂ ಹಾಕಿ ದೇವರ ಮನೆಯಲ್ಲಿ ಹಿಂದಿನ ದಿನ ಇಡಬೇಕು ಅದಾದ ನಂತರ ಮರುದಿನ ಅಂದರೆ ಮಂಗಳವಾರದಂದು ಬೆಳಗ್ಗೆ ಎದ್ದು ಮನೆಯಲ್ಲಿ ಒಬ್ಬಟ್ಟನ್ನು ನೈವೇದ್ಯವಾಗಿ ಮಾಡಬೇಕು .

ಮೂರು ಐದು ಅಥವಾ ಒಂಬತ್ತು ಒಬ್ಬಟ್ಟನ್ನು ಮಾಡಿ ಅದನ್ನು ಯಾವುದಾದರೂ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಸ್ವಲ್ಪ ದೇವರಿಗೆ ದಾನವನ್ನು ನೀಡಿ ಅಂದರೆ ಅಲ್ಲಿರುವ ಭಕ್ತರಿಗೆ ದಾನವನ್ನು ಕೊಟ್ಟು ಇನ್ನೂ ಉಳಿದದ್ದನ್ನು ಮನೆಗೆ ತರಬೇಕು ತಂದು ನಾವು ಒಂದು ಕೆಂಪು ವಸ್ತ್ರದಲ್ಲಿ ಅಥವಾ ಕೆಂಪು ಚೀಲದಲ್ಲಿ ಇಟ್ಟಿದ್ದ ಈ ಮೂರು ವಸ್ತುಗಳನ್ನು ಪೂಜೆ ಮಾಡಬೇಕು ಪೂಜೆಯೆಲ್ಲ ಮಾಡಿಯಾದ ಮೇಲೆ ನೈವೇದ್ಯದ ಕೆಲಸವೆಲ್ಲ ಮುಗಿದ ಮೇಲೆ,

ಮನೆಯ ಮುಂದಿನ ಬಾಗಿಲು ಅಂದರೆ ಮುಖ್ಯ ದ್ವಾರದ ಮೇಲೆ ಒಂದು ಮೊಳೆಯನ್ನು ಹಾಕಿ ಈ ಚೀಲವನ್ನು ನೇತು ಹಾಕಬೇಕು ಇದರಿಂದ ನೀವು ಅಂದುಕೊಳ್ಳದೇ ಇರುವ ಮಟ್ಟಿಗೆ ಪರಿಹಾರವಾಗುತ್ತದೆ ನಿಮ್ಮ ಮನೆಯಿಂದ ಹೋಗಿರುವ ಎಲ್ಲ ದುಡ್ಡು ಕೂಡ ಸಾಧ್ಯವಾದಷ್ಟು ಬೇಗ ನಿಮ್ಮ ಮನೆಗೆ ಬರುವ ಎಲ್ಲ ಸಾಧ್ಯತೆಯೂ ಇದೆ ಇದೊಂದು ಸರಳವಾದಂತಹ ವಿಧಾನವಾಗಿದೆ ಮತ್ತು ಹೆಚ್ಚಿಗೆ ಖರ್ಚಿನ ಅವಶ್ಯಕತೆಯೂ ಇಲ್ಲ ಒಮ್ಮೆ ಮಾಡಲು ಪ್ರಯತ್ನಿಸಿ ಇದರ ಫಲವನ್ನು ಅನುಭವಿಸಿ ಧನ್ಯವಾದಗಳು.