Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕೊತ್ತಂಬರಿ ನೆನೆಸಿದ ನೀರು ಕುಡಿದ್ರೆ ಸಿಗುವ ಆರೋಗ್ಯಕರ ಲಾಭ ಒಂದಾ ಎರಡಾ !

ನಿಮಗಿದು ಗೊತ್ತಾ ಫ್ರೆಂಡ್ಸ್ ಕೊತ್ತಂಬರಿ ಬೀಜವನ್ನು ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಏನಾಗುತ್ತದೆ ಎಂದು? ಹೌದು ಸಾಮಾನ್ಯವಾಗಿ ನಾವು ಮನೆಯಲ್ಲಿ ಅಡುಗೆಗೆ ಅಂದರೆ ಹೆಚ್ಚಾಗಿ ಮಸಾಲ ಪದಾರ್ಥಗಳನ್ನು ಬಳಕೆ ಮಾಡುವಾಗಲೇ ಕೊತ್ತಂಬರಿ ಬೀಜಗಳನ್ನು ಬಳಕೆ ಮಾಡಿರುತ್ತೇವೆ ಅಡುಗೆಗೆ ಕೊತ್ತಂಬರಿ ಬೀಜವನ್ನು ಬಳಸೋದ್ರಿಂದ ಇದು ಕೇವಲ ರುಚಿ ಅನ್ನು ಹೆಚ್ಚು ಮಾಡುವುದಿಲ್ಲ.

ಹೇಗೆ ಮೆಣಸು ಏಲಕ್ಕಿ ಲವಂಗ ಚೆಕ್ಕೆ ಇವೆಲ್ಲವೂ ಅಡುಗೆಯಲ್ಲಿ ರುಚಿ ಹೆಚ್ಚು ಮಾಡುವುದರೊಂದಿಗೆ ನಮಗೆ ಅನೇಕ ರೀತಿಯ ಆರೋಗ್ಯಕರ ಲಾಭಗಳನ್ನು ನೀಡುತ್ತದೆ, ಅದೇ ರೀತಿಯಲ್ಲಿ ಈ ಕೊತ್ತಂಬರಿ ಬೀಜಗಳು ಕೂಡ. ನಾವು ಇದನ್ನ ಅಡುಗೆಯಲ್ಲಿ ಬಳಕೆ ಮಾಡೋದ್ರಿಂದ ಬೇರೆ ರೀತಿಯ ಆರೋಗ್ಯಕರ ಲಾಭಗಳು ಲಭವನ್ನು ನಾವು ಪಡೆದುಕೊಳ್ಳಬಹುದು. ಇನ್ನು ಕೊತ್ತಂಬರಿಸೊಪ್ಪು ಅಂತೂ ನಮ್ಮ ದೇಹಕ್ಕೆ ಬಹಳಷ್ಟು ತಂಪು ಮಾಡುತ್ತದೆ ಎನ್ನುವ ಆರೋಗ್ಯವನ್ನು ವೃದ್ಧಿಸುತ್ತದೆ.

ಮಜ್ಜಿಗೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿ ಕುಡಿಯೋದ್ರಿಂದ ಅದರ ರುಚಿಯೇ ಬೇರೆ ಏನೋ ಈ ಮಜ್ಜಿಗೆಯಿಂದ ನಮ್ಮ ಅಜೀರ್ಣತೆ ದೂರವಾಗುತ್ತದೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ ಅಸಿಡಿಟಿಯಂತಹ ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಇನ್ನೂ ಅನೇಕ ಲಾಭಗಳನ್ನು ನಾವು ಈ ಕೊತ್ತಂಬರಿ ಬೀಜ ಮತ್ತು ಕೊತ್ತಂಬರಿ ಸೊಪ್ಪಿನಿಂದ ಕೂಡ ಪಡೆದುಕೊಳ್ಳಬಹುದು.

ಅಗ್ಗವಾಗಿ ದೊರೆಯುವ ಈ ಕೊತ್ತಂಬರಿ ಬೀಜಗಳು ಆರೋಗ್ಯವಂತ ಅದೆಷ್ಟೋ ಮೇಲು ಮಾಡುತ್ತದೆ. ಈ ಕೊತ್ತುಂಬರಿ ಬೀಜದಲ್ಲಿ ಪೋಷಕಾಂಶಗಳು ಹಲವು ಪೊಟ್ಯಾಶಿಯಂ ಕ್ಯಾಲ್ಶಿಯಂ ಮೆಗ್ನೇಷಿಯಂ ವಿಟಮಿನ್ ಸಿ ಅಂಶ ಇರುವ ಈ ಕೊತ್ತಂಬರಿಬೀಜಗಳನ್ನು ನೆನೆಸಿಟ್ಟು ನಂತರ ಆ ನೀರನ್ನು ಕುಡಿಯುವುದರಿಂದ ನಮ್ಮ ದೇಹದ ತೂಕ ಇಳಿಯುತ್ತದೆ ಬೊಜ್ಜು ಕರಗುತ್ತದೆ.

3ಟೇಬಲ್ ಸ್ಪೂನ್ ಕೊತ್ತಂಬರಿ ಬೀಜವನ್ನು 1ಲೋಟ ನೀರಿಗೆ ಹಾಕಿ ಕುದಿಸಿ ನಂತರ ಅದನ್ನು ಶೋಧಿಸಿ ಕುಡಿಯುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಸಮತೋಲನಕ್ಕೆ ಬರುತ್ತದೆ. ಹಾಗೆ ಹೊಟ್ಟೆಗೆ ಸಂಬಂಧಿಸಿದಂತಹ ಅನೇಕ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ, ಅಷ್ಟೇ ಅಲ್ಲ ಈ ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮನ್ನು ಕಾಡುತ್ತಾ ಇದ್ದರೆ ಅರ್ಧ ಚಮಚ ಕೊತ್ತಂಬರಿ ಬೀಜಗಳನ್ನು ನೀರಿಗೆ ಹಾಕಿ ಆ ನೀರನ್ನು ಕುಡಿಯಬೇಕು, ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಮಾಡಿ ನೀವು ಕುಡಿಯುತ ಬರುವುದರಿಂದ ಉದರಕೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ಹೊಟ್ಟೆ ನೋವು ಕೂಡ ಪರಿಹಾರವಾಗುತ್ತದೆ.

1ಪಾತ್ರೆಗೆ 1ಲೋಟ ನೀರನ್ನು ಹಾಕಿ ಅರ್ಧ ಚಮಚ ಜೀರಿಗೆ 1ಚಮಚ ಸಕ್ಕರೆ ಚಹಾ ಎಲೆ ಮತ್ತು ಅರ್ಧ ಚಮಚ ಕೊತ್ತಂಬರಿ ಬೀಜವನ್ನು ಹಾಕಿ, ಈ ನೀರನ್ನು ಕುದಿಸಬೇಕು. ನಂತರ ನೀರನ್ನು ಶೋಧಿಸಿ ಇದನ್ನು ಕುಡಿಯಿರಿ, ಇದರಿಂದ ಅಜೀರ್ಣತೆ ಬೇಗ ನಿವಾರಣೆಯಾಗುತ್ತದೆ. ಹಾಗೆ ಈ ಕೊತ್ತಂಬರಿ ಬೀಜವನ್ನು ನೆನೆಸಿಟ್ಟು ಕುಡಿಯುವುದರಿಂದ ಇನ್ಸುಲಿನ್ ಉತ್ಪತ್ತಿಯನ್ನು ಕೂಡ ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ಸಕ್ಕರೆ ಕಾಯಿಲೆ ನಿವಾರಣೆಯಾಗುವುದಲ್ಲದೆ ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ ಉತ್ತಮ ಆರೋಗ್ಯ ಲಭಿಸುತ್ತದೆ.

ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ಈ ಕೊತ್ತಂಬರಿಬೀಜಗಳನ್ನು ನೆನೆಸಿಟ್ಟು ಆ ನೀರನ್ನು ಕುಡಿಯಬೇಕು ಇದರಿಂದ ಅಧಿಕ ರಕ್ತಸ್ರಾವ ಕಡಿಮೆಯಾಗುತ್ತದೆ ಮತ್ತು ಹೊಟ್ಟೆನೋವಿನಂತಹ ಸಮಸ್ಯೆಯು ಪರಿಹಾರ ಆಗುತ್ತದೆ. ಈ ರೀತಿಯಾಗಿ ನೀವು ಕೊತ್ತಂಬರಿ ಬೀಜಗಳಿಂದ ಕೂಡ ಇಷ್ಟೆಲ್ಲ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.