Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಆಗುವ 7 ಅಚ್ಚರಿಯ ಆರೋಗ್ಯ ಲಾಭಗಳು…!

ನಮ್ಮ ದೇಹ ರಚನೆಯಾಗಿರುವುದು ಎಪ್ಪತ್ತು ಭಾಗದಷ್ಟು ನೀರಿನಿಂದಾಗಿ, ಹೀಗೆ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ದೊರೆಯದೇ ಹೋದಲ್ಲಿ ನಮ್ಮ ದೇಹದಲ್ಲಿರುವ ಸೆಲ್ಗಳು ಸತ್ತು ಹೋಗುತ್ತವೆ,

ಆದ್ದರಿಂದ ಕನಿಷ್ಠ ಪಕ್ಷ ಪ್ರತಿದಿನ ನಾವು ಎರಡರಿಂದ ಮೂರು ಲೀಟರ್ ಅಷ್ಟು ನೀರನ್ನು ಕುಡಿಯಲೇಬೇಕು ಆಗ ನಮ್ಮ ದೇಹದಲ್ಲಿ ಪ್ರತಿ ಅಂಗಾಂಗಗಳಲ್ಲಿಯು ಸರಿಯಾದ ಪ್ರಮಾಣದಲ್ಲಿ ನೀರು ದೊರೆತು ಜೀವಕೋಶಗಳು ಸರಿಯಾಗಿ ಕೆಲಸವನ್ನು ನಿರ್ವಹಿಸುತ್ತವೆ.

ನೀರು ಕುಡಿಯುವುದರಲ್ಲಿ ಕೂಡ ವಿಧಾನವಿದೆ, ಹೌದು ನಾವು ಕುಡಿಯುವ ನೀರಿನಲ್ಲಿ ಮೂರು ರೀತಿಯ ನೀರುಗಳನ್ನು ಕಾಣಬಹುದಾಗಿದ್ದು ಸಾಮಾನ್ಯ ತಣ್ಣಗಿನ ಮತ್ತು ಬಿಸಿ ನೀರು ವಿಂಗಡಿಸಲಾಗಿದ್ದು ಬೇಸಿಗೆಯಲ್ಲಿ ತಣ್ಣಗಿನ ಮತ್ತು ಸಾಮಾನ್ಯ ನೀರನ್ನು ಕುಡಿಯುತ್ತೇವೆ,

ಆದರೆ ಚಳಿಗಾಲ ಮತ್ತು ಮಳೆಗಾಲದಲ್ಲಿ ಬಿಸಿ ನೀರನ್ನು ಕುಡಿಯುವುದಕ್ಕೆ ನಮಗೆ ಇಷ್ಟವಾಗುತ್ತದೆ. ಆದರೆ ಪ್ರತಿದಿನ ಮುಂಜಾನೆ ಎದ್ದು ಬಿಸಿ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಲವಾರು ಉಪಯೋಗಗಳು ದೊರೆಯುತ್ತದೆ.

ಹಾಗಾದರೆ ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಕುಡಿಯುವುದರಿಂದ ಯಾವೆಲ್ಲ ಪ್ರಯೋಜನಗಳು ನಮಗೆ ದೊರೆಯುತ್ತದೆ ಎಂಬುದನ್ನು ತಿಳಿಯೋಣ, ಸ್ನೇಹಿತರೆ ಇದೊಂದು ಉಪಯುಕ್ತ ಆರೋಗ್ಯ ಮಾಹಿತಿ ಆಗಿರುವುದರಿಂದ ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ.

* ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ …
ನೀನೇನಾದರೂ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಪ್ಪದೇ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಬಿಸಿ ನೀರನ್ನು ಸೇರಿಸಿ ಈ ರೀತಿಯಾಗಿ ನೀವು ಪ್ರತಿದಿನ ಒಂದು ಗ್ಲಾಸ್ ನೀರನ್ನು ಮುಂಜಾನೆ ಎದ್ದು ಕುಡಿಯುತ್ತಾ ಬಂದರೆ ನಿಮಗೆ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಯಾವ ಸಮಸ್ಯೆಗಳಾದರೂ ಪರಿಹಾರಗೊಳ್ಳುತ್ತವೆ ಹಾಗೂ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಕೂಡ ಪರಿಹಾರವಾಗುತ್ತದೆ.

* ಮಲಬದ್ಧತೆ ದೂರವಾಗುತ್ತದೆ …
ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಈ ರೀತಿಯಾಗಿ ಜೀರ್ಣಕ್ರಿಯೆ ಸರಾಗವಾಗಿ ನಡೆದರೆ ನಮ್ಮ ದೇಹದಲ್ಲಿ ಯಾವುದೇ ಸಮಸ್ಯೆಯಾಗಲಿ ಉದಾಹರಣೆಗೆ ಮಲಬದ್ಧತೆ ಸಮಸ್ಯೆಯೂ ಕೂಡ ದೂರವಾಗುತ್ತದೆ, ಹೇಗೆ ಅಂದರೆ ಬಿಸಿನೀರನ್ನು ಕುಡಿಯುವುದರಿಂದ ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು ಈ ಬಿಸಿನೀರು, ಆದ್ದರಿಂದ ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಹಾಗೂ ಪ್ರತಿ ದಿನ ಬೆಳಗ್ಗೆ ಸರಾಗವಾಗಿ ಮಲ ವಿಸರ್ಜನೆ ಮಾಡಲು ಈ ಬಿಸಿ ನೀರು ಸಹಕಾರಿಯಾಗುತ್ತದೆ.

* ತೂಕ ಇಳಿಕೆಗೆ ರಾಮಬಾಣ …
ಹೌದು ತೂಕವನ್ನು ಇಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವವರು ಪ್ರತಿ ದಿನ ಯಾವಾಗಲೂ ಬಿಸಿ ನೀರನ್ನು ಬಳಸುತ್ತಲೇ ಇರಿ, ಈ ರೀತಿ ಬಿಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಿ ತೂಕ ಸರಾಗವಾಗಿ ಬೇಗ ಇಳಿಯುತ್ತದೆ ಹಾಗೂ ಅನಗತ್ಯ ಕೊಬ್ಬು ಕೂಡ ಶೇಖರಣೆಯಾಗುವುದಿಲ್ಲ ಬೊಜ್ಜು ಕರಗುತ್ತದೆ.

* ಶೀತ ಕೆಮ್ಮು ನಿವಾರಿಸುತ್ತದೆ …
ಹೌದು ಬಿಸಿ ನೀರನ್ನು ಸೇವಿಸುವುದರಿಂದ ಮುಚ್ಚಿರುವಂತಹ ಸೈನಸ್ ತೆರೆದುಕೊಳ್ಳುವಂತೆ ಮಾಡುತ್ತದೆ ಬಿಸಿನೀರು, ಹಾಗೆಯೇ ಈ ಬಿಸಿ ನೀರನ್ನು ಸೇವಿಸುವುದರಿಂದ ಗಂಟಲಿನಲ್ಲಿ ಕಟ್ಟಿರುವಂತಹ ಕಫ ಕೂಡ ಕರಗುತ್ತದೆ, ಈ ರೀತಿಯಾಗಿ ಶೀತ ಕೆಮ್ಮು ನಿವಾರಣೆಯಾಗಿಸುತ್ತದೆ ಬಿಸಿನೀರು.

* ರಕ್ತ ಸಂಚಾರವನ್ನು ಸುಗಮವಾಗಿಸುತ್ತದೆ…
ದೇಹದಲ್ಲಿ ರಕ್ತ ಸಂಚಾರವು ಸರಾಗವಾಗಿ ಆದರೆ ದೇಹದಲ್ಲಿ ಎಲ್ಲ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತವೆ ಈ ರೀತಿಯಾಗಿ ಹೃದಯ ರೋಗ ಸಂಬಂಧಿ ಕೂಡ ದೂರವಾಗುತ್ತದೆ ಆದ್ದರಿಂದ ಬಿಸಿ ನೀರನ್ನು ಕುಡಿಯುವುದರಿಂದ ರಕ್ತ ಸಂಚಾರ ಕೂಡ ಸುಗಮವಾಗುತ್ತದೆ.

ಆದ್ದರಿಂದ ಬಿಸಿನೀರನ್ನು ಕುಡಿಯಿರಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಮತ್ತೊಂದು ವಿಚಾರವೇನು ಅಂದರೆ ಬಿಸಿ ನೀರು ಅಂದರೆ ಕುದಿಯುವ ನೀರು ಅಲ್ಲ, ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು ಹೆಚ್ಚು ಬಿಸಿ ನೀರನ್ನು ಕೂಡ ಕುಡಿಯುವುದು ದೇಹಕ್ಕೆ ಒಳ್ಳೆಯದಲ್ಲ.