Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಎಸಳು ಅಗೆದು ತಿನ್ನುತ್ತಾ ಬನ್ನಿ ಸಾಕು … ಅವಾಗ ಏನಾಗುತ್ತೆ ಗೊತ್ತ ..!

ಹೌದು ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತಿರುವ ಈ ಮಾಹಿತಿ ಏನು ಅಂದರೆ ನಾವು ಬೆಳ್ಳುಳ್ಳಿಯನ್ನು ಹೇಗೆಲ್ಲ ಬಳಸಬೇಕು ಅಂತ. ಹೇಗೆ ನಾವು ಒಂದು ಸೇಬು ಹಣ್ಣನ್ನು ಪ್ರತಿ ದಿನ ಸೇವನೆ ಮಾಡುವುದರಿಂದ ವೈದ್ಯರುಗಳ ಅವಶ್ಯಕತೆ ನಮ್ಮ ಜೀವನದಲ್ಲಿ ಬರುವುದಿಲ್ಲ ಅಂತ ಹೇಳ್ತಾರೋ ಅದೇ ರೀತಿಯಲ್ಲಿ ನಾವು ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು ತಿಂದರೆ ಸಾಕು. ಇದರ ಗಾತ್ರ ಚಿಕ್ಕದಾಗಿರಬಹುದು ಆದರೆ ಇದರ ಒಂದು ಪ್ರಯೋಜನ ಅಪಾರವಾದದ್ದು.

ಎಷ್ಟೋ ಮಂದಿ ಇತ್ತೀಚಿನ ದಿನಗಳಲ್ಲಿ ತಮ್ಮ ತೂಕವನ್ನು ಇಳಿಸಿಕೊಳ್ಳಬೇಕು ಅಂತ ಹರಸಾಹಸ ಪಡುತ್ತಾ ಇರುತ್ತಾರೆ ಲಕ್ಷ ಲಕ್ಷ ಖರ್ಚು ಮಾಡಿ ಆಪರೇಷನ್ ಮಾಡಿಸಿಕೊಳ್ಳುವುದು ಅಥವಾ ಇನ್ಯಾವುದಾದರೂ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಮಾಡ್ತಾ ಇರ್ತಾರೆಮ ಆದರೆ ನೀವು ಕೇವಲ ಈ ಬೆಳ್ಳುಳ್ಳಿ ಎಸಳನ್ನು ಪ್ರತಿದಿನ ಒಂದು ಸೇವಿಸಿ ಬಿಸಿ ನೀರನ್ನು ಕುಡಿಯುತ್ತಾ ಬನ್ನಿ ಸಾಕು ಇದರಿಂದ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ನಿಮಗೆ ತಿಳಿಯುತ್ತದೆ.

ನಿಮ್ಮ ತೂಕ ಕೂಡ ಇಳಿಕೆ ಕಾಣುತ್ತದೆ ನೀವು ಮನೆಯಲ್ಲಿಯೇ ಈ ಒಂದು ಪರಿಹಾರವನ್ನು ಮಾಡಿಕೊಳ್ಳುತ್ತಾ ದಿನಕ್ಕೆ ಒಂದೆರಡು ಗಂಟೆಗಳ ಕಾಲ ಕ್ಯಾಲೊರಿಯನ್ನು ಮಾಡುವಂತಹ ವ್ಯಾಯಾಮಗಳನ್ನು ಮಾಡುತ್ತಾ ಬಂದರೆ ನಮ್ಮ ತೂಕ ಆರೋಗ್ಯಕರವಾಗಿ ಕಡಿಮೆಯಾಗುತ್ತದೆ ಮತ್ತು ನಮ್ಮ ದೇಹ ಫಿಟ್ ಆಗಿ ಕೂಡ ಇರುತ್ತದೆ. ಹಾಗಾದರೆ ದಿನಕ್ಕೆ ಒಂದು ಏಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಏನೂ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಅಂದರೆ ಮೊದಲಿಗೆ ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆಯನ್ನು ದೂರ ಇಡುತ್ತದೆ.

ಹೌದು ಇತ್ತೀಚಿನ ದಿನಗಳಲ್ಲಿಯಂತೂ ಯಾರಿಗೆ ಯಾವಾಗ ಕ್ಯಾನ್ಸರ್ ಬರುತ್ತದೆ ಅಂತಾನೆ ತಿಳಿಯುತ್ತಿಲ್ಲಾ. ಯಾಕೆಂದರೆ ಕ್ಯಾನ್ಸರ್ ಅನ್ನೋದು ನಮ್ಮ ದೇಹದಲ್ಲಿ ಉಂಟಾದಾಗ ಅದರ ಲಕ್ಷಣ ನಮಗೆ ಬೇಗ ತಿಳಿಯುವುದಿಲ್ಲ ಅದು ಕೊನೆಯ ಸ್ಟೇಜ್ ತಲುಪಿದಾಗಲೇ ನಮಗೆ ತಿಳಿಯುವುದು ಕ್ಯಾನ್ಸರ್ ಬಂದಿದೆ ಅಂತ ಆದಕಾರಣ ನಾವು ಕ್ಯಾನ್ಸರನ್ನು ತಡೆಗಟ್ಟುವುದಕ್ಕೆ ನಮ್ಮ ದೇಹಕ್ಕೆ ಕೆಲವನ್ನು ಪೋಷಕಾಂಶಗಳನ್ನು ನೀಡಬೇಕಾಗುತ್ತದೆ.

ಅ ಪೋಷಕಾಂಶ ಬೆಳ್ಳುಳ್ಳಿಯಲ್ಲಿ ಇದೆ ನಾವು ಈ ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದು ಬೇರೆ ಆದರೆ ಹಸಿಯಾಗಿ ಬೆಳ್ಳುಳ್ಳಿ ತಿನ್ನುವುದರಿಂದ ಇದರಿಂದ ನಮಗೆ ದೊರೆಯುವ ಲಾಭಗಳು ಮಾತ್ರ ಅಪಾರವಾದದ್ದು. ಆದಕಾರಣ ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುವುದು ಒಳ್ಳೆಯದು ನೀವು ದಿನಕ್ಕೆ ಒಂದೇ 1ಎಸಳು ಬೆಳ್ಳುಳ್ಳಿಯನ್ನು ಸೇವಿಸುತ್ತಾ ಬನ್ನಿ ಕ್ಯಾನ್ಸರ್ ನಂತಹ ಮಹಾಮಾರಿ ಕಾಯಿಲೆ ದೂರ ಉಳಿಯುತ್ತದೆ ಇನ್ನು ರಕ್ತದಲ್ಲಿ ಹೆಚ್ಚಾಗಿರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಬೆಳ್ಳುಳ್ಳಿ ರಕ್ತವನ್ನು ಶುದ್ಧಿ ಮಾಡುತ್ತದೆ.

ದಿನಕ್ಕೆ ಒಂದು ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೆ ಸಾಕು ನಾವು ನಮ್ಮ ಆರೋಗ್ಯವನ್ನು ಸಾಕಷ್ಟು ಹೆಚ್ಚು ಮಾಡಿಕೊಳ್ಳಬಹುದು ಹಾಗಾದರೆ ನೀವು ತಪ್ಪದೆ ಬೆಳ್ಳುಳ್ಳಿ ಎಸಳನ್ನು ಮತ್ತೊಂದು ವಿಚಾರ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸಿದರೆ ಹೊಟ್ಟೆ ಉರಿಯುವ ಸಾಧ್ಯತೆಯಿರುತ್ತದೆ ಆದಕಾರಣ ನೀವು ಆದಷ್ಟು ಮಸಾಲೆ ಪದಾರ್ಥಗಳನ್ನು ಸೇವಿಸುವುದಕ್ಕಿಂತ ತಂಪು ನೀಡುವ ಪದಾರ್ಥಗಳನ್ನು ಅಂದರೆ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡುವ ಆಹಾರಗಳನ್ನು ಪ್ರತಿದಿನ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಧನ್ಯವಾದ.