Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಗಂಟಲು ನೋವು, ಕಫ, ಗಂಟಲಿನ ಇನ್ಫೆಕ್ಷನ್ ಇದ್ರೆ ಕೇವಲ ಹೀಗೆ ಮಾಡಿ ನೋಡಿ ..!

ಇವತ್ತಿನ ಮಾಹಿತಿ ತಿಳಿಯೋಣ ಗಂಟಲು ನೋವಿನ ಸಮಸ್ಯೆಗೆ ಪರಿಣಾಮಕಾರಿಯಾದ ಕೆಲವೊಂದು ಮನೆಮದ್ದುಗಳನ್ನು ಹೌದು ಈ ಗಂಟಲು ನೋವು ಎಂಬುದು ಕೆಲವೊಮ್ಮೆ ನೀರಿನ ವ್ಯತ್ಯಾಸದಿಂದ ವಾತಾವರಣದ ವ್ಯತ್ಯಾಸದಿಂದ ಎದುರಾಗುತ್ತದೆ ಇನ್ನೂ ಕೆಲವರಿಗೆ ಕೆಲ ಪದಾರ್ಥಗಳನ್ನು ತಿಂದಾಗ ಲುಕ್ ಕೂಡ ಈ ಗಂಟಲು ಕೆರೆಯುವುದು ಗಂಟಲು ನೋಯುವುದು ಆಗುತ್ತದೆ ಗಂಟಲು ನೋವಿನ ಸಮಸ್ಯೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಕೂಡ ಕಾಡುತ್ತದೆ.

ಹಾಗಾದರೆ ಈ ಗಂಟಲು ನೋವಿನ ಸಮಸ್ಯೆ ಅನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಮಾಡಿಕೊಳ್ಳಬಹುದಾದ ಪರಿಹಾರಗಳೇನು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಮನೆಮದ್ದನ್ನು ಪಾಲಿಸಿ ಮಕ್ಕಳಿಗೆ ಗಂಟಲು ನೋವು ಬಂದಾಗ ಕೂಡ ಈ ಒಂದು ಪರಿಹಾರವನ್ನು ಮಾಡಬಹುದು.

ಮೊದಲನೆಯ ಮನೆ ಮದ್ದಿಗಾಗಿ ಬೇಕಾಗಿರುವುದು ಚಂದನ ಹೌದು ಗಂಧದ ತುಂಡು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ನೀವು ತೇಯ್ಫು ಗಂಧದ ರಸವನ್ನ ತೆಗೆದುಕೊಳ್ಳಬೇಕು ನಂತರ ಇದಕ್ಕೆ ನೀವು ಬೆಲ್ಲದ ಪುಡಿಯನ್ನು ಬೆರೆಸಿ ಕೊಳ್ಳಬೇಕು ಮನೆ ಮದ್ದಿಗಾಗಿ ಬಳಸುವುದಕ್ಕೆ ಜೋನಿಬೆಲ್ಲವನ್ನೂ ಬಳಸಿದರೆ ತುಂಬಾ ಪರಿಣಾಮಕಾರಿಯಾದ ಫಲಿತಾಂಶವನ್ನು ನೀವು ಪಡೆದುಕೊಳ್ಳಬಹುದು. ಆದಕಾರಣ ನಿಮ್ಮ ಮನೆಯಲ್ಲಿ ಜೋನಿಬೆಲ್ಲ ಇದ್ದರೆ ಅದನ್ನು ಈ ಮನೆ ಮದ್ದಿಗಾಗಿ ಬಳಸಿ. ನಂತರ ಈ 2ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ದಿನಕ್ಕೆ 3ಬಾರಿ ಈ ರಸವನ್ನು ಸ್ವಲ್ಪ ಸ್ವಲ್ಪವೇ ಸೇವಿಸುತ್ತಾ ಬನ್ನಿ ಈ ರೀತಿ ಮಾಡುವುದರಿಂದ ಗಂಟಲು ನೋವು ಗಂಟಲು ಸೋರುವುದು ಇಂತಹ ಸಮಸ್ಯೆ ಕಾಡುತ್ತಾ ಇದ್ದರೆ ಆ ಸಮಸ್ಯೆ ಪರಿಹಾರ ಆಗುತ್ತದೆ.

ಇನ್ನು ಎರಡನೆಯ ಪರಿಹಾರದ ಬಗ್ಗೆ ತಿಳಿಯೋಣ ಈ ಮನೆ ಮದ್ದಿಗಾಗಿ ಬೇಕಾಗಿರುವುದು ಮೆಣಸಿನ ಕಾಳು ಶುಂಠಿ ಬೆಲ್ಲ ನಿಂಬೆ ಹಣ್ಣಿನ ರಸ ಜೇನು ತುಪ್ಪ. ಮೊದಲನೆಯದಾಗಿ 8ಮೆಣಸಿನಕಾಳುಗಳನ್ನು ತೆಗೆದುಕೊಳ್ಳಬೇಕು. ಈ ಮೆಣಸಿನ ಕಾಳುಗಳನ್ನು ಕುಟ್ಟಿ ಪುಡಿ ಮಾಡಬೇಕು, ನಂತರ ಎರಡು ಲೋಟ ನೀರನ್ನು ತೆಗೆದುಕೊಂಡು ಪಾತ್ರೆಗೆ ಹಾಕಿ ನೀರನ್ನು ಬಿಸಿ ಮಾಡಬೇಕು, ಇದಕ್ಕೆ ಕುಟ್ಟಿ ಪುಡಿ ಮಾಡಿ ಇಟ್ಟುಕೊಂಡಂತಹ ಮೆಣಸಿನ ಪುಡಿಯನ್ನು ಹಾಕಿ ನೀರನ್ನು ಕುದಿಸುತ್ತಾ ಇರಬೇಕು. ನಂತರ ಇದಕ್ಕೆ ಅರ್ಧ ಇಂಚಿನಷ್ಟು ಬೆಲ್ಲವನ್ನು ಹಾಕಿ ಬೆಲ್ಲವನ್ನು ಪುಡಿ ಮಾಡಿ ಹಾಕ ಬಹುದು ಅಥವಾ ಹಾಗೆ ಹಾಕಬಹುದು ನೀವು ಜೋನಿಬೆಲ್ಲ ಇದ್ದರೆ ಅದನ್ನು ಕೂಡ ಬಳಸಬಹುದು.

ಇದೀಗ ಈ ನೀರು ಚೆನ್ನಾಗಿ ಕುದಿಸಬೇಕು ನಂತರ ಇದನ್ನು ಶೋಧಿಸಿ ದಿನಕ್ಕೆ 1ಬಾರಿ ಕುಡಿಯಿರಿ ನೀವು ಒಂದು ಲೋಟ ಈ ಕಷಾಯವನ್ನು ಕುಡಿಯಬಹುದು ಅಂದರೆ ಕಾಫಿ ಲೋಟದ ಅಳತೆಯಲ್ಲಿ ಈ ಕಷಾಯವನ್ನು ಕುಡಿಯಬೇಕು. ಇದರ ಅರ್ಧದಷ್ಟು ಕಷಾಯವನ್ನು ಮಕ್ಕಳಿಗೆ ನೀಡಿದರೆ ಸಾಕು ಇದರಿಂದ ಗಂಟಲು ನೋಯುವುದು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಯಾವ ಮಾತ್ರೆಗಳು ಚಿಕಿತ್ಸೆಯೂ ಬೇಡ ಈ ಮನೆ ಮದ್ದು ಗಂಟಲು ನೋವಿನ ಸಮಸ್ಯೆಗೆ ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ. ಈ ಎರಡೂ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಯಾವುದಾದರೂ ಒಂದು ಮನೆ ಮದ್ದನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇನ್ನು ಇವತ್ತಿನ ಮಾಹಿತಿಗೆ ತಪ್ಪದೆ ಒಂದು ಲೈಕ್ ಮಾಡುವುದನ್ನು ಮರೆಯದಿರಿ ಶುಭವಾಗಲಿ ಧನ್ಯವಾದ.