Categories
ಭಕ್ತಿ ಮಾಹಿತಿ ಸಂಗ್ರಹ

ಗಣೇಶನನ್ನು ನೀರಿಗೆ ಯಾಕೆ ಬಿಡುತ್ತಾರೆ ? ವಿಘ್ನ ವಿನಾಶಕ ಗಣಪನ ಮೂವತ್ತನಾಲ್ಕು ಅವತಾರ ಗಳು ಯಾವುವು , ಇದರ ಹಿಂದೆ ಇರುವಂತಹ ಕುತೂಹಲಕಾರಿ ಕಾರಣವೇನಾದರೂ ನೀವು ತಿಳಿದುಕೊಂಡರೆ ಬೆಚ್ಚಿ ಬಿಳ್ತೀರಾ !!!

ಗಣಪತಿಗೆ 32  ಹೆಸರುಗಳು ಇದೆ ಎಂದರೆ ನೀವು ನಂಬ್ತೀರಾ, ಆದರೆ ನೀವು ನಂಬಲೇ ಬೇಕಾದಂತಹ ವಿಚಾರ ಗಣಪತಿಗೆ  32 ಹೆಸರುಗಳು ಇವೆ , ಅವು ಯಾವ್ಯಾವು ಹಾಗೂ ಗಣಪತಿಯ 32 ಅವತಾರಗಳ ಬಗ್ಗೆ ಇವತ್ತು ನಾವು ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ,

ಹಾಗೆ ಗಣಪತಿಯನ್ನು ಪೂಜೆ ಮಾಡಿದ ನಂತರ ನೀರಿಗೆ ಯಾಕೆ ಬಿಡಬೇಕು ಅನ್ನೋದರ ಬಗ್ಗೆ ಕೂಡ ಕುತೂಹಲ ಮಾಹಿತಿಯ ಬಗ್ಗೆ ಇವತ್ತು ಸಂಪೂರ್ಣವಾಗಿ ನಿಮಗೆ ಎದುರಿಸಿ ಕೊಡುತ್ತೇವೆ ಮುಂದೆ ಓದಿ.

ಮೊದಲನೇದಾಗಿ ಗಣಪತಿಗೆ ಇರುವಂತಹ 32 ಹೆಸರುಗಳನ್ನು ತಿಳಿದುಕೊಳ್ಳೋಣ ಬನ್ನಿ, ಬಾಲ ಗಣಪತಿ, ಭಕ್ತಿ ಗಣಪತಿ, ವೀರ ಗಣಪತಿ, ದ್ವಜ ಗಣಪತಿ, ಉಚ್ಚಿಷ್ಟ ಗಣಪತಿ, ಹೇರಂಬ, ಲಕ್ಷ್ಮಿ, ಸೃಷ್ಟಿ ಗಣಪತಿ, ಏಕಾಕ್ಷರ ಗಣಪತಿ, ಪ್ರಸನ್ನ ಗಣಪತಿ, ಅಕ್ಷರ ಗಣಪತಿ, ಏಕದಂತ ಗಣಪತಿ, ಸೃಷ್ಟಿ ಗಣಪತಿ, ವಿಮುಖ,

ತ್ರಿ ಮುಖ ಗಣಪತಿ, ಗಣಪತಿ, ದುರ್ಗ ಗಣಪತಿ, ಮುಕುಟ ಹರ ಗಣಪತಿ, ದುರ್ಗ ಗಣಪತಿ, ವರಸಿದ್ಧಿ ಗಣಪತಿ, ನಗರ ಗಣಪತಿ, ಪ್ರ ಯಕ್ಷರ ಗಣಪತಿ,  ಪಂಚಮುಖಿ ಗಣಪತಿ, ಋಣ ವಿಮೋಚನ ಗಣಪತಿ, ವಿಜ್ಞಾನ ಗಣಪತಿ,ವಿದ್ಯಾ ಗಣಪತಿ, ಜಲ ಗಣಪತಿ, ಹರಿದ್ರ ಗಣಪತಿ, ಲಕ್ಷ್ಮಿ ವಲ್ಲಭ ಗಣಪತಿ, ಉದ್ವ ಗಣಪ, ಧೀರ ಗಣಪತಿ ಹೀಗೆ ಸಾಕಷ್ಟು ಹೆಸರಿನಿಂದ ಗಣಪತಿಯನ್ನು ಕರೆಯುತ್ತಾರೆ.

ನಿಮಗೆ ಗೊತ್ತಾ ಆ ಶನಿ ದೇವರು ಯಾವ ದೇವರನ್ನು ಬಿಡದೆ ಕಾಡಿದ್ದಾನೆ ಆದರೆ ಶನಿದೇವರಿಗೆ ಗಣಪತಿ ಹಾಗೂ ಹನುಮಂತ ದೇವರನ್ನು ಇಲ್ಲಿವರೆಗೂ ಕಾಡುವುದಕ್ಕೆ ಆಗಿಲ್ಲ, ಆದ್ದರಿಂದ ಯಾರಿಗಾದರೂ ಶನಿ ದೋಷ ಅಥವಾ ಸಾಡೆಸಾತ್ ಶನಿ ಅಂತ ಕೇಳಿ ಬಂದರೆ ಮೊದಲನೇದಾಗಿ ಹೋಗುವುದು ಗಣಪತಿ ದೇವಸ್ಥಾನಕ್ಕೆ ಹಾಗೂ ಆಂಜನೇಯನ ದೇವಸ್ಥಾನಕ್ಕೆ. ಶನಿದೇವರ ದೋಷ ಇದ್ದಲ್ಲಿ ಗಣಪತಿಯ ಹತ್ತಿರ ಹೋದರೆ ನಿಮಗೆ ಇದರಿಂದ ಪರಿಹಾರವಾಗುತ್ತದೆ.

ಗಣಪತಿಯನ್ನು ಪೂಜೆ ಮಾಡಿ ನಂತರ ಯಾಕೆ ನೀರಿಗೆ ಬಿಡುತ್ತಾರೆ ಎನ್ನುವ ಕಟುಸತ್ಯವನ್ನು  ಇವತ್ತು ತಿಳಿದುಕೊಳ್ಳೋಣ?

ಆನೆಯ ಮುಖವನ್ನು ಹೊಂದಿರುವಂತಹ ಗಣಪತಿಯನ್ನು ನೀರಿಗೆ ಯಾಕೆ ಬಿಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ, ಆನೆಗೆ ನೀರು ಎಂದರೆ ಬಲು ಇಷ್ಟ ಹಾಗೆಯೇ ಗಣಪತಿಗೂ ಕೂಡ ನೀರು ಎಂದರೆ ಬಲು ಇಷ್ಟ , ಆದ್ದರಿಂದ ಗಣಪತಿಯನ್ನು ಪೂಜೆ ಮಾಡಿದ ನಂತರ ನೀರಿಗೆ ಬಿಡುತ್ತಾರೆ.

ನಿಮಗೆ ಗೊತ್ತಿರಬಹುದು ಹಳೆ ಕಾಲದಲ್ಲಿ ಒಂದು ಗಾದೆಯನ್ನು ಮಾಡಿದ್ದಾರೆ ಗಾದೆಯ ಪ್ರಕಾರ ಚಿಕ್ ಕೆರೆಯಲ್ಲಿ ಬಿದ್ದ ದೊಡ್ಡ ಕೆರೆಯಲ್ಲಿ ಎದ್ದ ಎನ್ನುವ ಗಾದೆ.ಇದರ ಅರ್ಥ ಚಿಕ್ಕ ಮೂರ್ತಿಯನ್ನು ಮಾಡಿ ನೀವು ಪೂಜೆ ಮಾಡಿ ಕೆರೆಯಲ್ಲಿ ಬಿಡುವುದರಿಂದ, ಅವನು ದೊಡ್ಡ ಅವತಾರವನ್ನು ಎತ್ತಿ ನಿಮಗೆ ಇರುವಂತಹ ಎಲ್ಲಾತರದ ನೋವು ಹಾಗೂ ಕಷ್ಟಗಳ ನಿವಾರಣೆ ಮಾಡುತ್ತಾನೆ ಎನ್ನುವ ಇದರ ಅರ್ಥ.

ನಿಮಗೆ ಗಣಪತಿಯ ಒಳ ಅರ್ಥ ಏನಾದರೂ ಗೊತ್ತಾ, ಗಣಪತಿ ಹೆಸರಿಂದ ಸ್ಟಾರ್ಟ್ ಆಗುವಂತಹ ಗ ಅಂದರೆ ಬುದ್ಧಿ, ನಾ ಎಂದರೆ ಜ್ಞಾನ, ಪತಿ ಎಂದರೆ ಹಿಡಿತದಲ್ಲಿ ಹಿಡಿದು ಕೊಳ್ಳುವವನು,  ಸಂಪೂರ್ಣವಾಗಿ ಗಣಪತಿ ಎನ್ನುವ ಹೆಸರಿನ ಸಂಪೂರ್ಣ ಅರ್ಥ ಜ್ಞಾನವನ್ನು ತನ್ನ ಕೈಯಲ್ಲಿ ಹಿಡಿದು ಕೊಳ್ಳುವವನು ಎಂದು ಅರ್ಥ. ಆದುದರಿಂದ ಗಣಪತಿಯನ್ನು ಯಾರು ಹೆಚ್ಚಾಗಿ ಈ ಪೂಜೆ ಮಾಡುತ್ತಾರೆಯೋ ಅವರಿಗೆ ಜ್ಞಾನ ಕೂಡ ಹೆಚ್ಚಾಗುತ್ತದೆ, ಹಾಗೆಯೇ ಈ ಕೆಲವೊಂದು ರಾಶಿಯವರು ಗಣಪತಿ ನ ಹೆಚ್ಚಾಗಿ ಪೂಜೆ ಮಾಡಬೇಕು,ಕಟಕ ವೃಶ್ಚಿಕ ಹಾಗೂ ಮೀನ ರಾಶಿಯವರು. ಹೀಗೆ ಹೆಚ್ಚಾಗಿ ಪೂಜೆ ಮಾಡು ವಂತಹ ಈ ರಾಶಿಯವರಿಗೆ ಗಣಪತಿ ಬೇಗ ಒಲಿಯುತ್ತಾನೆ.

ಇವಾಗ ಅರ್ಥ ಆಯ್ತಲ್ಲ ಸ್ನೇಹಿತರೆ ಯಾಕೆ ಗಣಪತಿಯನ್ನು ಪೂಜೆ ಮಾಡಬೇಕು ಹಾಗೆ ಗಣಪತಿಯನ್ನು ಪೂಜೆ ಮಾಡಿದ ನಂತರ ಯಾಕೆ ನೀರಿಗೆ ಬಿಡುತ್ತಾರೆ ಎನ್ನುವ ಸಂಪೂರ್ಣವಾದ ಮಾಹಿತಿ, ನೀವ್ ಇನ್ನು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ ಹಾಗೆ ನಮ್ಮನ್ನು ಪ್ರೋತ್ಸಾಹ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.