Categories
ಭಕ್ತಿ ಮಾಹಿತಿ ಸಂಗ್ರಹ

ಗುಲಗಂಜಿ ಬೀಜಗಳನ್ನು ಕೆಂಪು ಬಟ್ಟೆಯಲ್ಲಿ ಹಾಕಿ ರಾತ್ರಿ 12 ಗಂಟೆಗೆ ಹೀಗೆ ಮಾಡಿದರೆ ಜೀವನದುದ್ದಕ್ಕೂ ಬೇಕಾದಷ್ಟು ದುಡ್ಡು

ಸ್ನೇಹಿತರೇ ಸಾಮಾನ್ಯವಾಗಿ ಹಣದ ಸಮಸ್ಯೆ ಎಂಬುದು ಪ್ರತಿಯೊಬ್ಬರಿಗೂ ಕೂಡ ಎಲ್ಲ ಸಮಯದಲ್ಲೂ ಇರುತ್ತದೆ ಎಷ್ಟು ಹಣವಿದ್ದರೂ ಕೆಲವೊಂದು ಬಾರಿ ಸಾಕಾಗುವುದಿಲ್ಲ ನಮ್ಮ ಹಣವೇ ನಮ್ಮ ಬಳಿ ಉಳಿಯುವುದಿಲ್ಲ ಆದರೆ ಕೆಲವೊಂದು ಬಾರಿ ಎಷ್ಟೇ ದುಡಿದರೂ ಕೂಡ ನಮ್ಮ ಕೈಯಲ್ಲಿ ಹಣ ಉಳಿಯುತ್ತಿರುವ ಮತ್ತು ಮಾಡಿದ ವ್ಯವಹಾರಗಳೆಲ್ಲಾ ನಷ್ಟ ಕಾಣುವಂತಹ ಸಾಧ್ಯತೆ ಇರುತ್ತದೆ .

ಈ ರೀತಿಯ ದಂತಹ ಪರಿಸ್ಥಿತಿಗೆ ನಾವು ಕೆಲವೊಂದು ಬಾರಿ ಬಂದಿರುತ್ತೇವೆ ಏಕೆಂದರೆ ಜೀವನದಲ್ಲಿ ಹಣದ ಸಮಸ್ಯೆ ಎಂಬುದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಕಾಡುತ್ತಿರುತ್ತದೆ ಈ ಹಣದ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲು ನಾವು ಕೆಲವೊಂದು ಬಾರಿ ಸಾವಿರಾರು ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡುತ್ತೇವೆ ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಣವನ್ನು ಕಳೆಯುತ್ತೇವೆ .

ಆದರೆ ಈ ದಿನ ನಾವು ನಿಮಗೆ ಸರಳವಾಗಿ ಮನೆಯಲ್ಲಿಯೇ ಕೆಲವೊಂದು ಪರಿಹಾರವನ್ನು ಮಾಡಿಕೊಂಡು ನಿಮ್ಮ ಹಣದ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವ ಮಾರ್ಗವನ್ನು ತಿಳಿಸುತ್ತೇವೆ ಈ ಪರಿಹಾರ ಮಾರ್ಗವನ್ನು ತಿಳಿದರೆ ನೀವು ಅಚ್ಚರಿ ಪಡುತ್ತೀರಿ ಕಾರಣ ಇದಕ್ಕೆ ಹೆಚ್ಚಿನ ಖರ್ಚಿನ ಅವಶ್ಯಕತೆ ಇಲ್ಲ ಯಾವುದೇ ರೀತಿಯ ದಂತಹ ನಷ್ಟ ಆಗುವ ಸಾಧ್ಯತೆಗಳು ಇರುವುದಿಲ್ಲ ಆದ್ದರಿಂದ ಇದೊಂದು ಸುಲಭವಾದ ವಿಧಾನವಾಗಿದೆ .

ಈ ವಿಧಾನವನ್ನು ಅನುಸರಿಸಿ ನಿಮ್ಮ ಹಣಕಾಸಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದು ಉತ್ತಮ ಈ ವಿಧಾನವನ್ನು ಮಾಡಲು ನಿಮಗೆ ಬೇಕಾದಂತಹ ಸಾಮಗ್ರಿಗಳ ಪಟ್ಟಿಯನ್ನು ಮೊದಲು ತಿಳಿದುಕೊಳ್ಳೋಣ ಅದಾದ ನಂತರ ಪರಿಹಾರವನ್ನು ಹೇಗೆ ಮಾಡುವುದು ಎಂದು ತಿಳಿಯೋಣ .
ಒಂದು ಒಣಕೊಬ್ಬರಿ ಗೋಮತಿ ಲಕ್ಷ್ಮೀ ಚಕ್ರ ಏಲಕ್ಕಿ ಮೆಣಸು ಗುಲಗಂಜಿ ಅಂದರೆ ಕೆಂಪು ಗುಲಗಂಜಿ ಇಷ್ಟು ಸಾಮಾಗ್ರಿಗಳನ್ನು ತೆಗೆದುಕೊಳ್ಳಬೇಕು.

ಮೊದಲಿಗೆ ಒಣ ಕೊಬ್ಬರಿಯನ್ನು ಸರಿಯಾಗಿ ಅರ್ಧ ಭಾಗಕ್ಕೆ ಸೀಳಬೇಕು ಅಂದರೆ ಅದು ಮೊಳಕೆ ಇರುತ್ತಲ್ಲ ಆ ಭಾಗಕ್ಕೆ ಸೀಳಬೇಕು ಅದರ ಒಳಗೆ ಮೆಣಸು ಏಲಕ್ಕಿ ಗುಲಗಂಜಿ ಗೋಮತಿ ಲಕ್ಷ್ಮೀ ಚಕ್ರ ಎಲ್ಲವನ್ನೂ ಹಾಕಬೇಕು ಅದಾದ ನಂತರ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಈ ಎಲ್ಲ ಸಾಮಗ್ರಿಗಳನ್ನು ಅದಕ್ಕೆ ಹಾಕಬೇಕು. ಇದನ್ನ ನೀವು ಪೂಜೆ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇವೆ ಈ ಎಲ್ಲವನ್ನೂ ಕೂಡ ಕೆಂಪು ವಸ್ತ್ರದಲ್ಲಿ ಹಾಕಿ ಕಟ್ಟಿ ಅದನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಇಡಬೇಕು.

ದೇವರ ಮನೆಯಲ್ಲಿ ಇಡುವ ಸಮಯ ಶುಕ್ರವಾರ ರಾತ್ರಿ ಹನ್ನೊಂದೂವರೆ ಸಮಯಕ್ಕೆ ಇಡಬೇಕು ಹನ್ನೆರಡು ಗಂಟೆಯ ಬಳಿಕ ಇಡಬಾರದು ಏಕೆಂದರೆ ಅದು ಮರುದಿನಕ್ಕೆ ಬಿದ್ದ ಲೆಕ್ಕ ವಾಗುತ್ತದೆ ಹನ್ನೊಂದುವರೆ ಸಮಯದಿಂದ ಹನ್ನೆರಡು ಗಂಟೆ ಸಮಯದ ಒಳಗೆ ಇದನ್ನು ನಿಮ್ಮ ದೇವರ ಮನೆಯಲ್ಲಿ ಇಟ್ಟು ನೀವು ಯಾವ ಕೆಲಸಕ್ಕೋಸ್ಕರ ಲಕ್ಷ್ಮೀಯನ್ನು ಪೂಜೆ ಮಾಡುತ್ತಿದ್ದೀರಾ ಎಂದುಕೊಳ್ಳುತ್ತೀರಿ ಆ ಸಂಕಲ್ಪವನ್ನು ಮಾಡಿಕೊಂಡು ಅದಾದ ನಂತರ ಲಕ್ಷ್ಮಿಯ ಶತನಾಮಾವಳಿಯನ್ನು ಹೇಳಬೇಕು .

ಈ ರೀತಿ ಶತನಾಮಾವಳಿ ಹೇಳಿ ಗಂಟನ್ನು ಪೂಜೆ ಮಾಡಿದ ನಂತರ ಅದನ್ನು ರಾತ್ರಿ ದೇವರ ಮನೆಯಲ್ಲಿ ಇಟ್ಟು ಮರುದಿನ ನೀವು ಅಂಗಡಿಯಲ್ಲಿ ಕಟ್ಟುವುದಾದರೆ ಅಂಗಡಿಯಲ್ಲಿ ಕಟ್ಟಬಹುದು ಅಥವಾ ಮನೆಯ ಮುಖ್ಯದ್ವಾರದಲ್ಲಿ ಕಟ್ಟಬಹುದು ಈ ರೀತಿ ಮಾಡುವುದರಿಂದಾಗಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ದಂತಹ ಹಣಕಾಸಿನ ಸಮಸ್ಯೆ ಇದ್ದರೂ ಕೂಡ ನೀವು ಸಾಧ್ಯವಾದಷ್ಟು ಬೇಗ ಮುಕ್ತಿಯನ್ನು ಪಡೆಯಬಹುದು ಇದನ್ನು ಮಾಡುವುದರಿಂದಾಗಿ ನಿಮಗೆ ಯಾವುದೇ ರೀತಿಯ ದಂತಹ ನಷ್ಟವಾಗುವುದಿಲ್ಲ ಸಾಧ್ಯವಾದಷ್ಟು ಒಮ್ಮೆ ಇದನ್ನು ಪ್ರಯತ್ನಿಸಿ ಅದಾದ ನಂತರ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.