Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಗ್ಯಾಸ್ಟ್ರಿಕ್ ಅಸಿಡಿಟಿ ಆಮಶಂಕೆಗೆ ಹಾಗು ಲೂಸಮೋಷನ್ ಸಮಸ್ಸೆಗೆ ಉತ್ತಮವಾಗಿ ಈ ಹಣ್ಣು ತುಂಬ ಚೆನ್ನಾಗಿ ಕೆಲಸ ಮಾಡುತ್ತದೆ ..

ಸ್ನೇಹಿತರೇ ಸಾಮಾನ್ಯವಾಗಿ ನಾವು ದಿನನಿತ್ಯ ಎಷ್ಟೊಂದು ಹಣ್ಣು ತರಕಾರಿಗಳನ್ನು ಸೇವಿಸುತ್ತೇವೆ ಅದರಿಂದ ಏನು ಉಪಯೋಗ ಎಂದು ಎಷ್ಟೊಂದು ಬಾರಿ ನಾವು ತಿಳಿದುಕೊಂಡಿರುವುದಿಲ್ಲ ಮತ್ತು ಯಾವ ಹಣ್ಣನು ಯಾವ ಸಮಯದಲ್ಲಿ ಸೇವಿಸಬೇಕು ಅದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಪೋಷಕಾಂಶಗಳು ದೊರೆಯುತ್ತದೆ ಮತ್ತು ಏನು ಉಪಯೋಗಗಳಿವೆ.

ಎಂಬುದರ ಬಗ್ಗೆ ಅರಿವು ಕೂಡ ನಮಗಿರುವುದಿಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ಪ್ರಯತ್ನ ಕೂಡ ನಾವು ಮಾಡುವುದಿಲ್ಲ, ಸಾಮಾನ್ಯವಾಗಿ ನಮ್ಮ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಸಾಕು ಹಣ್ಣು ತರಕಾರಿಗಳನ್ನು ತಿನ್ನುವುದು ಸಾಮಾನ್ಯ ಅದರಲ್ಲೂ ಕೂಡ ಹೆಚ್ಚಾಗಿ ಹಣ್ಣುಗಳನ್ನು ಸೇವಿಸುವುದು ಕಾಣಬಹುದು.

ಅದರಲ್ಲೂ ನಮಗೆ ವೈದ್ಯರು ಅತಿ ಹೆಚ್ಚು ಸಲಹೆ ಮಾಡುವುದು ಹಣ್ಣುಗಳನ್ನು ತಿನ್ನಿ ಎಂದು ಅದರಲ್ಲಿ ಮುಖ್ಯವಾದ ಹಣ್ಣೆಂದರೆ ದಾಳಿಂಬೆ ಇದನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಸೇವಿಸಿರುತ್ತಾರೆ, ಅದನ್ನು ಸೇವಿಸಲು ಕಾರಣ ಇರುವುದೇ ಇಲ್ಲ .

ಕೆಲವೊಬ್ಬರು ರಕ್ತ ಹೆಚ್ಚಾಗಲಿ ಎಂದು ಸೇವಿಸುತ್ತಾರೆ ಇನ್ನು ಕೆಲವರು ಬೇರೆ ಕಾರಣಗಳಿಂದಾಗಿ ಸೇವಿಸುತ್ತಾರೆ ಆದರೆ ಯಾರಿಗೂ ಕೂಡ ನಿಖರವಾಗಿ ದಾಳಿಂಬೆ ಹಣ್ಣನ್ನು ಏತಕ್ಕಾಗಿ ಸೇವಿಸುತ್ತಾರೆ ಮತ್ತು ಅದನ್ನು ಸೇವಿಸುವುದರಿಂದ ಏನೆಲ್ಲ ಉಪಯೋಗಗಳಿವೆ ಎಂಬುದರ ಬಗ್ಗೆ ಸ್ವಲ್ಪವೂ ಮಾಹಿತಿ ಇರದೇ ಇರುವುದನ್ನು ಗಮನಿಸಬಹುದಾಗಿದೆ.

ಆದ್ದರಿಂದಾಗಿ ನಾನು ಈ ದಿನ ನಿಮಗೆ ಈ ದಾಳಿಂಬೆ ಹಣ್ಣನು ಯಾವ ಸಮಯದಲ್ಲಿ ಸೇವಿಸಬೇಕು ಮತ್ತು ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ನೀವೂ ಕೂಡ ಈ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ಈ ಮಾಹಿತಿಯ ಅವಶ್ಯಕತೆ ಇರುವವರಿಗೂ ಕೂಡ ಶೇರ್ ಮಾಡಿ.

ಸಾಮಾನ್ಯವಾಗಿ ದಾಳಿಂಬೆ ಹಣ್ಣನ್ನು ಶೀತ ವೀರ್ಯ ದ್ರವ್ಯ ಎಂದು ಕರೆಯುತ್ತಾರೆ, ಅಂದರೆ ಯಾರ ದೇಹದಲ್ಲಿ ಶೀತಾಂಶ ಹೆಚ್ಚಾಗಿ ಇರುತ್ತದೆಯೋ ಅವರು ಹೆಚ್ಚಾಗಿ ತಿನ್ನುವುದು ಉತ್ತಮ ಏಕೆಂದರೆ ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶ ಅಧಿಕ ವಾಗುವುದನ್ನು ಕಾಣಬಹುದಾಗಿದೆ ಉಷ್ಣಾಂಶ ಅಧಿಕವಾದರೆ ಪಿತ್ತವೂ ಕೂಡ ಅಧಿಕವಾಗುತ್ತದೆ ಅದ್ದರಿಂದ ಶೀತ ಕಡಿಮೆಯಾಗುವುದನ್ನು ನಾವು ಗಮನಿಸಬಹುದಾಗಿದೆ.

ದಾಳಿಂಬೆ ಹಣ್ಣನ್ನು ಹೇಗೆ ಉಪಯೋಗಿಸುವುದು ದಾಳಿಂಬೆ ಹಣ್ಣನ್ನು ನೇರವಾಗಿ ಸಿಪ್ಪೆಯನ್ನು ಸುಲಿದು ಕೂಡ ತಿನ್ನಬಹುದು, ಅದರ ಬದಲು ಜ್ಯೂಸನ್ನು ಕೂಡಾ ಸೇವಿಸಬಹುದಾಗಿದೆ ಆದರೆ ಸಾಧ್ಯವಾದಷ್ಟು ಇದನ್ನು ಶೀತ ಹೆಚ್ಚಾಗಿರುವವರು ಸೇವಿಸುವುದು .

ಉತ್ತಮ ಮತ್ತು ಅಸಿಡಿಟಿ ಅಂದರೆ ಗ್ಯಾಸ್ಟಿಕ್ ಇರುವವರು ದಾಳಿಂಬೆ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು ಅದರಿಂದ ಗ್ಯಾಸ್ಟಿಕ್ ಕೂಡ ಕಡಿಮೆಯಾಗುತ್ತದೆ ತಿಂಡಿ ತಿಂದ ನಂತರ ಊಟ ಆದ ನಂತರ ಈ ದಾಳಿಂಬೆ ಹಣ್ಣನ್ನು ಸೇವಿಸುವುದು ಉತ್ತಮ ಖಾಲಿ ಹೊಟ್ಟೆಯಲ್ಲಿ ಸೇವಿಸುವುದನ್ನು ಕಡಿಮೆ ಮಾಡಬೇಕು.

ದಾಳಿಂಬೆ ಹಣ್ಣಿನಲ್ಲಿ ಎರಡು ರೀತಿಯಾದಂತಹ ದಾಳಿಂಬೆ ಹಣ್ಣುಗಳಿರುತ್ತವೆ ಒಂದು ಸಿಹಿಯಾದ ದಾಳಿಂಬೆಯನ್ನು ಮತ್ತೊಂದು ಹೊಗರಿನ ದಾಳಿಂಬೆ.
ಸಿಹಿಯಾಗಿ ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಕಫಾ ವೃದ್ಧಿಯಾಗುತ್ತದೆ ಮತ್ತು ಹೊಗರಿನ ದಾಳಿಂಬೆ ಹಣ್ಣು ಇದು ಎಳೆ ದಾಳಿಂಬೆ ಹಣ್ಣಾಗಿರುವುದರಿಂದ ಇದರಲ್ಲಿ ಕಷಾಯ ಅಂಶ ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ ಯಾರಿಗಾದರೂ ಲೂಸ್ ಮೋಷನ್ ಅಂತಹ ಸಮಸ್ಯೆಗಳಿದ್ದರೆ, ಈ ಒಗರಿನ ದಾಳಿಂಬೆ ಹಣ್ಣನ್ನು ತಿನ್ನುವುದರಿಂದಾಗಿ ಆದಷ್ಟು ಬೇಗ ಈ ಲೂಸ್ ಮೋಷನ್ ಕಡಿಮೆಯಾಗುವುದನ್ನು ಕಾಣಬಹುದು.

ದಾಳಿಂಬೆ ಹಣ್ಣುನ ಜೊತೆ ದಾಳಿಂಬೆ ಹೂವು ನಲ್ಲೂ ಕೂಡ ಔಷಧಿ ಗುಣಗಳಿರುವುದನ್ನು ಕಾಣಬಹುದಾಗಿದೆ ಹೂವಿನ ಎಸಳನ್ನು ತುಟಿಗೆ ತಿಕ್ಕುವುದರಿಂದ ಅದನ್ನು ಲಿಪ್ಸ್ಟಿಕ್ ರೀತಿಯಲ್ಲಿ ಬಳಸಬಹುದು ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ ಮತ್ತು ಸೌಂದರ್ಯದ ದೃಷ್ಟಿಯಿಂದ ಆವಶ್ಯಕವಾಗಿರುವುದನ್ನು ಕಾಣಬಹುದಾಗಿದೆ,
ಈ ದಾಳಿಂಬೆ ಹಣ್ಣಿನ ಉಪಯೋಗವನ್ನು ತಿಳಿದುಕೊಂಡ ನಂತರ ಇದನ್ನು ಎಷ್ಟು ಉಪಯೋಗಿಸಬೇಕು ಯಾವ ಸಮಯದಲ್ಲಿ ಉಪಯೋಗಿಸಬೇಕು ಎಂದು ತಿಳಿದುಕೊಂಡಿರಿ ಅಲ್ಲವೆ ಧನ್ಯವಾದಗಳು.