Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಚಳಿಗಾಲದಲ್ಲಿ ಒಣ ಚರ್ಮದ ಸಂರಕ್ಷಣೆಗೆ ಮಾಡೋದಕ್ಕೆ ಇಲ್ಲಿದೆ ಮನೆ ಮದ್ದು..!

ಚಳಿಗಾಲದಲ್ಲಿ ತ್ವಚೆಯ ಆರೈಕೆಯನ್ನು ನಾವು ಹೇಗೆ ಮಾಡಬೇಕು ಅನ್ನುವ ಒಂದು ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ಕೆಲವರಿಗೆ ಚಳಿಗಾಲದಲ್ಲಿ ತ್ವಚೆಯ ಬಣ್ಣ ಕಡಿಮೆಯಾದ ಹಾಗೆ ಮತ್ತು ತ್ವಚೆಯು ಒರಟಾದ ಹಾಗೆ ಅನಿಸುತ್ತ ಇರುತ್ತದೆ ಇನ್ನು ಕೆಲವರಿಗೆ ಮುಖದ ಮೇಲೆ ಈ ಚಳಿಗಾಲದಲ್ಲಿ ಬಿಳಿಯ ಬಣ್ಣದ ಪದರ ಉಂಟಾಗುವ ಹಾಗೆ ಅನಿಸುತ್ತ ಇರುತ್ತದೆ ಹಾಗಾಗಿ ನಾವು ಚಳಿಗಾಲದಲ್ಲಿ ನಮ್ಮ ತ್ವಚೆಗೆ ಕೆಲವೊಂದು ಘೋಷಣೆಗಳನ್ನು ಮಾಡುವುದು ಅತ್ಯವಶ್ಯಕವಾಗಿರುತ್ತದೆ ಕೇವಲ ತ್ವಚೆ ಮಾತ್ರ ಅಲ್ಲ ನಮ್ಮ ಕೈಕಾಲುಗಳು ಕೂಡ ಈ ಗಾಳಿಯಿಂದ ಒಡೆಯುತ್ತಾ ಇರುತ್ತದೆ ಕಾರಣ ನಮ್ಮ ತ್ವಚೆಯಲ್ಲಿ ನೀರಿನ ಅಂಶ ಕಡಿಮೆಯಾದ ಕಾರಣ ಈ ರೀತಿ ಸಮಸ್ಯೆಗಳು ಎದುರಾಗುತ್ತ ಇರುತ್ತದೆ.

ಹಾಗಾದರೆ ನಾವು ಚಳಿಗಾಲದಲ್ಲಿ ಏನು ಮಾಡಬೇಕು ಚಳಿಗಾಲದಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಮತ್ತು ಚಳಿಗಾಲದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಯಾವ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸುತ್ತದೆ ಇದೇ ರೀತಿ ನೀವು ನಿಮ್ಮ ತ್ವಚೆಗೆ ಆರೈಕೆ ಮಾಡುತ್ತ ಬಂದದ್ದೇ ಆದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ತ್ವಚೆಯ ಕಾಂತಿಯನ್ನು ಕೂಡ ಕಾಪಾಡಿಕೊಳ್ಳಬಹುದು. ಇನ್ನು ನಾವು ಚಳಿಗಾಲದಲ್ಲಿ ಬರುವ ಸಂಕ್ರಾಂತಿಯ ಸಮಯದಲ್ಲಿ ತಿನ್ನುತ್ತೇವೆ, ಯಾಕೆ ಅಂದರೆ ಇದರ ಹಿಂದೆ ಕಾರಣವಿದೆ ಎಳ್ಳು ಮತ್ತು ಬೆಲ್ಲದ ಎಣ್ಣೆಯ ಅಂಶ ಇದೆ ಇದು ನಮ್ಮ ದೇಹಕ್ಕೆ ತೇವಾಂಶವನ್ನು ನೀಡಿದ ಹಾಗೆ ಮಾಡಿ ತ್ವಚೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮತ್ತು ಚಳಿಗಾಲದಲ್ಲಿ ಕೂಡಾ ನಾವು ಬೇಸಿಗೆ ಸಮಯದಲ್ಲಿ ಎಷ್ಟು ನೀರನ್ನು ಕುಡಿಯುತ್ತಾ ಇರುತ್ತೇವೆ ಅಷ್ಟೇ ಕುಡಿಯಬೇಕು ಮತ್ತು ಹೆಚ್ಚು ಬಿಸಿ ನೀರನ್ನು ಬಳಸಿ ಸ್ನಾನ ಮಾಡುವ ಅವಶ್ಯಕತೆಯಿಲ್ಲ ಯಾಕೆಂದರೆ ವಾತಾವರಣ ತಣ್ಣಗಿದೆ ಎಂದು ಕೆಲವರು ಬಿಸಿನೀರಿನ ಸ್ನಾನ ಮಾಡಲು ಇಷ್ಟಪಡುತ್ತಾರೆ ಆದರೆ ನಾವು ಚಳಿಗಾಲದಲ್ಲಿಯೂ ಕೂಡ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕಾಗುತ್ತದೆ.

ಇನ್ನೂ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳುವುದಕ್ಕೆ ಯಾವಾಗಲೂ ಮಾಯಿಶ್ಚರೈಸರ್ ಹತ್ತುತ್ತಲೇ ಇರಬೇಕು ಜೊತೆಗೆ ಕೈಕಾಲುಗಳಿಗೂ ಕೂಡ ಬಾಡಿ ಲೋಷನ್ ಹಚ್ಚಿ ತೊಳೆಯಿರಿ ಇದರಿಂದ ತ್ವಚೆ ಹೊಡೆಯುವುದಿಲ್ಲ ಮತ್ತು ವಾರಕ್ಕೆ ಒಮ್ಮೆ ಎಣ್ಣೆಯ ಸ್ನಾನ ಮಾಡುವುದನ್ನು ಮರೆಯದಿರಿ ಎಣ್ಣೆ ಸ್ನಾನ ಮಾಡುವುದರಿಂದ ತ್ವಚೆಗೆ ಒಳ್ಳೆಯ ಪೋಷಕಾಂಶ ದೊರೆಯುತ್ತದೆ. ಸಾಧ್ಯವಾದಲ್ಲಿ ಪ್ರತಿದಿನ ಸ್ನಾನ ಮಾಡುವ ಮುನ್ನ ಬಾದಾಮಿ ಎಣ್ಣೆ ಇದ್ದರೆ ಬಾದಾಮಿ ಎಣ್ಣೆಯನ್ನು ಕೈಕಾಲುಗಳಿಗೆ ಲೇಪನ ಮಾಡಿ ನಂತರ ಸ್ನಾನ ಮಾಡುವುದರಿಂದ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ತ್ವಚೆ ಮೃದುವಾಗಿರುತ್ತದೆ.

ಈ ಚಳಿಗಾಲದಲ್ಲಿ ಯಾವೊಂದು ಫೇಸ್ ಪ್ಯಾಕ್ ಹಾಕಿಕೊಂಡರೆ ಒಳ್ಳೆಯದು ಅಂದರೆ, ಈ ಒಂದು ಫೇಸ್ ಪ್ಯಾಕ್ ಅನ್ನು ನೀವು ಮಾಡಬಹುದು ಅದೇನೆಂದರೆ ಒಂದು ಚಮಚ ಕಡಲೆ ಹಿಟ್ಟಿಗೆ ಕಾಲು ಚಮಚ ಅರಿಶಿನವನ್ನು ಹಾಕಿ ಅರ್ದ ಚಮಚ ನಿಂಬೆಹಣ್ಣಿನ ರಸವನ್ನು ಹಾಕಬೇಕು. ನಂತರ ಒಂದು ಚಮಚ ಹಸಿ ಹಾಲನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಅರಿಶಿಣ ತ್ವಚೆಗೆ ಆಗುವುದಿಲ್ಲ ಅನ್ನುವವರು ಅರಿಶಿಣವನ್ನು ಬಳಸದಿರುವುದು ಉತ್ತಮ ನಂತರ ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಲೇಪನ ಮಾಡಿ ಕೊಳ್ಳಬೇಕು. ಇದನ್ನು ವಾರದಲ್ಲಿ 2ಬಾರಿ ಮಾಡುತ್ತಾ ಬರುವುದರಿಂದ ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳಬಹುದು.