Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಚಳಿಗಾಲದಲ್ಲಿ ಹೆಚ್ಚಾಗಿ ಉಂಟಾಗುವ ಗಂಟಲು ನೋವಿಗೆ ಇಲ್ಲಿದೆ ನೋಡಿ ಸೂಪರ್ ರಾಮಬಾಣ…

ಚಳಿಗಾಲದಲ್ಲಿ ವಾತಾವರಣದ ಬದಲಾವಣೆಯಿಂದಾಗಿ ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಾಗುವ ಕಾರಣದಿಂದಾಗಿ ಶೀತ ಕೆಮ್ಮು ಉಂಟಾಗುವುದು ಸಹಜ ಈ ಶೀತ ಕೆಮ್ಮಿಗೆ ಲ್ಲ ಮಾತ್ರೆಗಳ ಮೊರೆ ಹೋಗುವುದು ಅಷ್ಟೊಂದು ಸರಿ ಏನೂ ಅಲ್ಲ ಆದ ಕಾರಣ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಈ ಶೀತ ಕೆಮ್ಮನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳುವಂತಹ ಕೆಲವೊಂದು ಮನೆಮದ್ದುಗಳನ್ನು ಶೀತ ಕೆಮ್ಮು ಗಂಟಲಿನಲ್ಲಿ ಕಫ ಕಟ್ಟುವುದು ಇಂತಹ ಎಲ್ಲ ಸಮಸ್ಯೆಗಳು ಸಹಜವೆ.

ಆದರೆ ಈ ಸಹಜವಾದ ಅನಾರೋಗ್ಯ ಸಮಸ್ಯೆಗಳಿಗೆ ಎಷ್ಟು ಬಾರಿ ಅಂತ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ಆಗುತ್ತೆ ಹೇಳಿ ಅಲ್ವಾ. ಆದ ಕಾರಣ ಈ ಶೀತ ಕೆಮ್ಮು ಜ್ವರದ ಸಮಸ್ಯೆಗೆ ಗಂಟಲಿನಲ್ಲಿ ಕಟ್ಟಿರುವಂತಹ ಕಫದ ಸಮಸ್ಯೆಗೆ ಒಂದು ಉತ್ತಮವಾದ ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ ಈ ಕೆಲವೊಂದು ಪರಿಹಾರಗಳನ್ನು ನೀವು ಮಾಡಿಕೊಂಡರೆ ಸಾಕು.

ನಿಮ್ಮ ಶೀತಕ್ಕೆ ಗಂಟಲಿನ ಸಮಸ್ಯೆ ಸಹಜವಾಗಿ ಬಂದರೂ ಆ ಸಮಸ್ಯೆಗಳನ್ನು ನೀವು ಅತ್ಯಂತ ಬೇಗನೆ ಪರಿಹರಿಸಿಕೊಳ್ಳಬಹುದು ಆ ಪರಿಹಾರಗಳು ಏನು ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಇನ್ನೇನು ಚಳಿಗಾಲ ಬರ್ತಾ ಇದೆ ಅಲ್ವಾ ಈ ಚಳಿಗಾಲದಲ್ಲಿ ಶೀತ ಕೆಮ್ಮು ಜ್ವರ ಉಂಟಾಗುವುದು ಸಹಜ ಯಾಕೆ ಎಂದರೆ ವಾತಾವರಣದಲ್ಲಿ ಬದಲಾವಣೆ ಆಗುವುದು ಸಹಜ. ಆದ ಕಾರಣ ಈ ಬದಲಾವಣೆ ಆಗುವ ವಾತಾವರಣಕ್ಕೆ ನಾವು ಕೂಡ ಹೊಂದಿಕೊಳ್ಳಬೇಕು. ಆದ ಕಾರಣ ಇದಕ್ಕಾಗಿ ನಾವು ಒಂದೊಳ್ಳೆ ಉಪಾಯವನ್ನು ಮಾಡೋಣ, ಅಂದರೆ ಈ ಚಳಿಗಾಲದಲ್ಲಿ ಉಂಟಾಗುವ ಶೀತ ಕೆಮ್ಮಿಗೆ ಸುಲಭವಾದ ಮನೆಮದ್ದುಗಳನ್ನು ತಿಳಿಯೋಣ ಮೊದಲಿಗೆ ಶೀತ ಕೆಮ್ಮಿನಿಂದ ಎದೆ ನೋವು ಅಥವಾ ಗಂಟಲಿನಲ್ಲಿ ಕಫ ಕಟ್ಟಿದ್ದರೆ ಅದಕ್ಕಾಗಿ ಸುಲಭ ಪರಿಹಾರವನ್ನು ಮಾಡಿಕೊಳ್ಳಿ.

ಅದೇನೆಂದರೆ ವೀಳ್ಯದೆಲೆ ಸಾಮಾನ್ಯವಾಗಿ ದೊರೆಯುತ್ತದೆ ಆ ವೀಳ್ಯದೆಲೆಯನ್ನು ನೀವು ಪೇಸ್ಟ್ ಮಾಡುವುದಕ್ಕೆ ಕುಟ್ಟಾಣಿಯನ್ನೆ ಬಳಸಿ ಈ ಕುಟ್ಟಾಣಿ ಯಲ್ಲಿ ಎಲೆಯನ್ನು ಕುಟ್ಟಿ ಪೇಸ್ಟ್ ಮಾಡಿದ ನಂತರ. ಅದರಲ್ಲಿ ಸಿಗುವ ರಸವನ್ನು ಸ್ವಲ್ಪ ಸೇವಿಸಿ ನಂತರ ಆ ರಸವನ್ನು ಎದೆ ಭಾಗ ಮತ್ತು ಗಂಟಲಿನ ಭಾಗಕ್ಕೆ ಹಚ್ಚಬೇಕು ಈ ಎಲೆಯಲ್ಲಿರುವ ಘಾಟತನ ಗಂಟಲಿನಲ್ಲಿ ಕಟ್ಟಿರುವ ಕಫವನ್ನು ಕರಗಿಸಲು ಸಹಕರಿಸುತ್ತದೆ.

ಇನ್ನು ಈರುಳ್ಳಿಯ ರಸವನ್ನು ಕೂಡ ಸೇವಿಸುವುದರಿಂದ ಈ ಗಂಟಲಿನಲ್ಲಿ ಕಟ್ಟಿರುವ ಕಫ ಕೆಮ್ಮು ಶೀತ ನಿವಾರಣೆಯಾಗುತ್ತದೆ. ಇದರ ಜೊತೆಗೆ ಈರುಳ್ಳಿಯನ್ನು ಮಾತ್ರ ಅಲ್ಲ ಈರುಳ್ಳಿಯೊಂದಿಗೆ ಬೆಳ್ಳುಳ್ಳಿಯನ್ನು ಕೂಡ ಬೆರೆಸಿ ಅದರಿಂದ ರಸವನ್ನು ತೆಗೆದು ಆ ರಸವನ್ನು ಕೂಡ ನುಂಗುವುದರಿಂದ ಕೆಮ್ಮು ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ. ಇನ್ನು ಬಾಳೆಹಣ್ಣಿನಲ್ಲಿ ಯಾವುದೇ ತರಹದ ಆಮ್ಲಿಯತೆ ಇರುವುದಿಲ್ಲ ಈ ಬಾಳೆಹಣ್ಣನ್ನ ತಿನ್ನುವುದರಿಂದ ಕೂಡ ಗಂಟಲು ಬ್ಯಾನಿ ಕಡಿಮೆ ಆಗುತ್ತದೆ.

ಓಟ್ಸ್ ರವೆ, ಈ ಓಟ್ಸ್ ರವೆ ಅನ್ನು ಕೂಡ ನೀವು ಸೇವಿಸುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೇ ಕ್ಯಾರೆಟ್ ಸೂಪ್ ಅನ್ನಾ ಕುಡಿಯುವುದರಿಂದ ಈ ಗಂಟಲು ನೋವು ಶಮನವಾಗುತ್ತದೆ. ಮಾಂಸಾಹಾರಿಗಳು ಚಿಕನ್ ಸೂಪ್ ಅನ್ನು ಕುಡಿಯುವುದರಿಂದ ಗಂಟಲು ನೋವು ಬೇಗನೆ ಶಮನಗೊಳ್ಳುತ್ತದೆ ಒಳ್ಳೆಯ ರಿಲೀಫ್ ಸಿಗುತ್ತದೆ.

ಈ ರೀತಿಯಾಗಿ ಚಳಿಗಾಲದಲ್ಲಿ ಬರುವಂತಹ ಶೀತ ಕೆಮ್ಮು ಗಂಟಲಿನ ಸಮಸ್ಯೆಗೆ ಈ ಮೇಲೆ ತಿಳಿಸಿದ ಆ ಮನೆ ಮದ್ದುಗಳನ್ನು ತಪ್ಪದೇ ಪಾಲಿಸಿ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಿ ಉತ್ತಮ ಆರೋಗ್ಯವನ್ನು ಕೂಡ ಪಡೆದುಕೊಳ್ಳಿ ಧನ್ಯವಾದ.