Categories
ಮಾಹಿತಿ ಸಂಗ್ರಹ

ಜನರನ್ನು ನೋಡಿದರು ಕೂಡ ಟ್ರೈನ್ ನಿಲ್ಲಿಸಬಾರದು ಅನ್ನುವ ನಿಯಮ ಇದೆಯಂತೆ …! ಅದು ಯಾಕೆ ಗೊತ್ತ

ನಾವು ಈಗಾಗಲೇ ಸಾಕಷ್ಟು ಮಾಹಿತಿಯನ್ನು ರೈಲಿನ ಬಗ್ಗೆ ನಿಮಗೆ ತಿಳಿಸಿಕೊಟ್ಟಿದ್ದೆವೆ ಹಾಗೂ ನಿಮಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳು ಬೇಕೆಂದರೆ ಮತ್ತು ಆಸಕ್ತಿಕರ ವಿಚಾರಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ .

ಇಂದಿನ ಮಾಹಿತಿಯಲ್ಲಿಯೂ ಕೂಡ ರೈಲುಗಳಿಗೆ ಸಂಬಂಧಪಟ್ಟಂತಹ ಕೆಲವಷ್ಟು ವಿಚಾರಗಳನ್ನು ತಿಳಿಯೋಣ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಯಾಕೆ ರೈಲುಗಳು ಯಾರನ್ನು ಕಂಡರೂ ಕೂಡಾ ಬ್ರೇಕ್ ಹಾಕುವುದಿಲ್ಲ ಎಂಬ ವಿಚಾರದ ಬಗ್ಗೆ .

ಹೌದು ಸ್ನೇಹಿತರೇ ರೈಲುಗಳು ಸಂಚಾರ ಮಾಡುವಾಗ ರಸ್ತೆಗಳೇನಾದರೂ ಹಳಿಗಳ ಮೇಲೆ ಹಾದು ಹೋಗಿದ್ದರೆ ಆ ಹಳಿಗಳ ಅಕ್ಕಪಕ್ಕದಲ್ಲಿ ಗೇಟನ್ನು ಮಾಡಿರುತ್ತಾರೆ ಆ ಗೇಟನ್ನು ಕ್ಲೋಸ್ ಮಾಡುತ್ತಾರೆ.

ಆದರೆ ಕೆಲವೊಂದು ಬಾರಿ ರೈಲು ಹಳಿಗಳ ಮೇಲೆ ಪ್ರಾಣಿಗಳು ಅಥವಾ ಮನುಷ್ಯರೇ ನಿಂತಿದ್ದರೂ ಕೂಡ ಆ ರೈಲುಗಳು ಸಡನ್ ಬ್ರೇಕ್ ಹಾಕುವುದಿಲ್ಲ . ಇದಕ್ಕೂ ಕೂಡ ಕಾರಣವಿದೆ ಹಾಗೂ ಇನ್ನು ಕೆಲವರು ಈ ವಿಚಾರದ ಬಗ್ಗೆ ತಪ್ಪು ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ ಅದೆಷ್ಟು ನಿಜ ಅದೆಷ್ಟು ಸುಳ್ಳು ಅನ್ನೋದನ್ನು ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ಸಂಕ್ಷಿಪ್ತವಾಗಿ ವಿವರಿಸಿ ಹೇಳುತ್ತೇವೆ .

ಮೊದಲಿಗೆ ತಿಳಿಯ ಬೇಕಾದಂತಹ ವಿಚಾರವೇನು ಅಂದರೆ ರೈಲುಗಳಲ್ಲಿ ಎಮರ್ಜೆನ್ಸಿ ಬ್ರೇಕ್ ಅಂದರೆ ಸಡನ್ ಬ್ರೇಕ್ ಇರುತ್ತದೆ ಆದರೆ ಅದನ್ನು ಲೋಕೋ ಪೈಲೆಟ್ಗಳು ಸುಮ್ಮನೆ ಬಳಸುವಂತಿಲ್ಲ .

ಲೋಕೋಪೈಲೆಟ್ ಅಂದರೆ ರೈಲುಗಳನ್ನು ಚಲಾಯಿಸುವ ಚಾಲಕರಿಗೆ ಕೆಲವೊಂದು ನಿಯಮಗಳನ್ನು ಹಾಕಿರುತ್ತಾರೆ ಅದೇನೆಂದರೆ ಹಸಿರು ಬಣ್ಣದ ಸಿಗ್ನಲ್ ಕಂಡರೆ ರೈಲನ್ನು ಚಲಾಯಿಸಬೇಕು ಹಳದಿ ಬಣ್ಣದ ಸಿಗ್ನಲ್ ಕಂಡರೆ ರೈಲುಗಳನ್ನು ನಿಧಾನವಾಗಿ ಚಲಿಸಬೇಕು ಇನ್ನು ಕೆಂಪು ಬಣ್ಣದ ಸಿಗ್ನಲ್ ಕಂಡರೆ ರೈಲನ್ನು ನಿಲ್ಲಿಸಬೇಕು ಎಂಬ ನಿಯಮವೂ ಇರುತ್ತದೆ .

ಈ ಮೇಲೆ ತಿಳಿಸಿದ ಹಾಗೆ ರೈಲುಗಳಲ್ಲಿ ಲೋಕೋ ಪೈಲೆಟ್ಗಳು ಎಮರ್ಜೆನ್ಸಿ ಬ್ರೇಕನ್ನು ಹಾಕಿದರೆ ರೈಲುಗಳ ಬೋಗಿ ಉಲ್ಟಾ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಆದರೆ ನಿಜವಾದ ಕಾರಣವೆ ಬೇರೆ . ಅದೇನೆಂದರೆ ಲೋಕೋ ಪೈಲೆಟ್ ಗಳು ಈ ಸಡನ್ ಬ್ರೇಕ್ ಅನ್ನು ಬಳಸಿದ ನಂತರವೂ ಕೂಡ ರೈಲುಗಳು ಎಂಟು ನೂರು ಮೀಟರ್ ಮುಂದೆ ಹೋಗಿಯೆ ನಿಲ್ಲುವುದು .

ಈ ಕಾರಣಕ್ಕಾಗಿ ಲೋಕೋ ಪೈಲೆಟ್ಗಳು ರೈಲುಗಳನ್ನು ವೇಗವಾಗಿ ಓಡಿಸುವಾಗ ಎಮರ್ಜೆನ್ಸಿ ಬ್ರೇಕ್ ಹಾಕಿದರೂ ಕೂಡ ಅದು ಎಂಟು ನೂರು ಮೀಟರ್ ಮುಂದೆ ಹೋಗಿ ನಿಲ್ಲುವುದು .ಇನ್ನು ಲೋಕೋ ಪೈಲೆಟ್ಗಳು ಹಳಿಗಳ ಮೇಲೆ ಇರುವಂತಹ ಪ್ರಾಣಿಗಳನ್ನು ಪಕ್ಷಿಗಳನ್ನು ಅಥವಾ ವ್ಯಕ್ತಿಗಳೇ ಆಗಲಿ ದೂರದಿಂದ ಸ್ಪಷ್ಟವಾಗಿ ಕಾಣಿಸುವುದಿಲ್ಲ ಆ ಹಳಿಯ ಮೇಲೆ ಯಾರಾದರೂ ಇದ್ದರೂ ಕೂಡ ಲೋಕೋ ಪೈಲೆಟ್ಗಳು ಮಾಡಲು ಸಾಧ್ಯವಾಗುವ ಕೆಲಸವೇನು ಅಂದರೆ ಜೋರಾಗಿ ಹಾರ್ನ್ ಮಾಡೋದು ಒಂದೇ .

ಇದನ್ನು ಬಿಟ್ಟು ಲೋಕೋ ಪೈಲೆಟ್ಗಳು ಏನನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ , ಕಳೆದ ವರ್ಷ ಅಮೃತ್ಸರದಲ್ಲಿ ನಡೆದಂತಹ ರೈಲು ಅಪಾಯದ ಘಟನೆಯಲ್ಲಿ ಕೂಡಾ ಇದೇ ರೀತಿ ಆಗಿದ್ದು ಜನರು ಪಟಾಕಿ ಹೊಡೆಯುವ ಸದ್ದಿನಲ್ಲಿ ರೈಲು ಹಾರ್ನ್ ಮಾಡ್ತಿರೋದು ತಿಳಿಯದೆ ಆ ಅಪಘಾತ ನಡೆದು ಹೋಯಿತು ಅಷ್ಟೇ . ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ಈ ಮಾಹಿತಿಯನ್ನು ಕೊರೆದು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ .