Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ತಲೆ ಹೊಟ್ಟು ಶ್ಯಾಸ್ವತವಾಗಿ ನಿವಾರಣೆ ಆಗಬೇಕಾ ಹಾಗಾದರೆ ಮನೆಯಲ್ಲೇ ಈ ಸಿಂಪಲ್ ಕೆಲಸ ಮಾಡಿ ಸಾಕು ..!

ಇತ್ತೀಚಿನ ಧೂಳು ಪ್ರದೂಷಣೆ ವಾತಾವರಣದಲ್ಲಿ ಡ್ಯಾಂಡ್ರಫ್ ಸಮಸ್ಯೆ ಆಗುವುದು ಖಚಿತ ಹಾಗೆಯೇ ಈ ಡ್ಯಾಂಡ್ರಫ್ ಸಮಸ್ಯೆಗೆ ಸಾಕಷ್ಟು ಜನ ಈಗಾಗಲೇ ತುತ್ತಾಗಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು ಡ್ಯಾಂಡ್ರಫ್ ಸಮಸ್ಯೆ ಉಂಟಾದರೆ ಮೊದಲನೆಯದಾಗಿ ಪರಿಣಾಮ ಬೀರುವುದೆ ಕೂದಲಿನ ಬೆಳವಣಿಗೆಯ ಮೇಲೆ ಅಥವಾ ಈ ಕೂದಲು ಉದುರುವ ಸಮಸ್ಯೆಯನ್ನು ಉಂಟು ಮಾಡುವುದಲ್ಲದೆ ಈ ಕೂದಲು ಉದುರುವ ಸಮಸ್ಯೆ ಸೊಸೆಯ ಜೊತೆ ಈ ಡ್ಯಾಂಡ್ರಫ್ ಮೊಕದ ಮೇಲೆ ಮೊಡವೆಯನ್ನು ಕೂಡ ಉಂಟು ಮಾಡುತ್ತದೆ ಮತ್ತು ಕೂದಲಿನ ಬುಡದಲ್ಲಿ ತುಂಬಾ ತುರಿಕೆ ಅನ್ನು ಉಂಟು ಮಾಡುತ್ತದೆ ಈ ಒಂದು ಡ್ಯಾಂಡ್ರಫ್ ಸಮಸ್ಯೆ.

ಡ್ಯಾಂಡ್ರಫ್ ಸಮಸ್ಯೆ ಉಂಟಾಗುವುದಕ್ಕೆ ದೂಳು ಪ್ರದೂಷಣೆಯ ವಾತಾವರಣ ಒಂದಾದರೆ ಪದೇ ಪದೇ ನೀರು ಬದಲಾವಣೆ ಆದರೂ ಪದೇಪದೆ ಶಾಂಪೂ ಬದಲಾವಣೆ ಮಾಡುತ್ತಿದ್ದರು ಮತ್ತು ನಾವು ಕೂದಲನ್ನು ಸರಿಯಾಗಿ ಸ್ವಚ್ಚ ಮಾಡದೆ ಇದ್ದಾಗಲೂ ಈ ಡ್ಯಾಂಡ್ರಫ್ ಸಮಸ್ಯೆ ಉಂಟಾಗುತ್ತದೆ ಮತ್ತೊಂದು ಮುಖ್ಯ ಕಾರಣ ಅಂದರೆ ಡ್ಯಾಂಡ್ರಫ್ ಸಮಸ್ಯೆ ಉಂಟಾಗುವುದಕ್ಕೆ ಎಣ್ಣೆಯನ್ನು ಹಾಕಿ ದೂಳಿಗೆ ಹೋದಾಗ ಈ ಡ್ಯಾಂಡ್ರಫ್ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ.

ಡ್ಯಾಂಡ್ರಫ್ ಸಮಸ್ಯೆ ಉಂಟಾದಾಗ ನೀವು ಅದಕ್ಕಾಗಿ ಸೂಕ್ತ ಶಾಂಪೂವನ್ನು ಬಳಕೆ ಮಾಡಬೇಕಾಗುತ್ತದೆ ಅಥವಾ ನೈಸರ್ಗಿಕವಾದ ಕೆಲವೊಂದು ವಿಧಾನಗಳನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಆದರೆ ಪದೇಪದೆ ಶಾಂಪೂ ಬದಲಾವಣೆ ಮಾಡುತ್ತಾ ಇದ್ದಲ್ಲಿ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚುತ್ತದೆ. ಇದರ ಜೊತೆಗೆ ಡ್ಯಾಂಡ್ರಫ್ ಸಮಸ್ಯೆ ಕೂಡ ಹೆಚ್ಚುತ್ತದೆ.

ಇಂದಿನ ಮಾಹಿತಿಯಲ್ಲಿ ಡ್ಯಾಂಡ್ರಫ್ ಸಮಸ್ಯೆಗೆ 1ಸುಲಭವಾದ ಪರಿಹಾರವನ್ನು ತಿಳಿಸಿಕೊಡುತ್ತವೆ ಅದೇನೆಂದರೆ ಇದಕ್ಕಾಗಿ ಬೇಕಾಗಿರುವುದು ಕಹಿ ಬೇವಿನ ಸೊಪ್ಪು ಹೌದು ಬೇವಿನ ಸೊಪ್ಪು ನಿಮಗೆ ಇದಕ್ಕಾಗಿ ಬೇಕಾಗಿರುತ್ತದೆ. ಈ ಕಹಿ ಬೇವಿನ ಸೊಪ್ಪನ್ನು ನೀವು ಹೇಗೆ ಬಳಕೆ ಮಾಡಬೇಕು ಅಂದರೆ ಸಾಮಾನ್ಯವಾಗಿ ಎಲ್ಲರೂ ಹೇಳ್ತಾರೆ, ಈ ಕಹಿ ಬೇವಿನ ಸೊಪ್ಪನ್ನು ಪೇಸ್ಟ್ ಮಾಡಿ ಕೂದಲಿಗೆ ಲೇಪನ ಮಾಡಿ ಅಂತ ಆದರೆ ಇದು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ನೀವು ಮನೆಯಲ್ಲಿ ಮಣ್ಣಿನ ಮಡಕೆಯನ್ನು ಬಳಕೆ ಮಾಡುತ್ತಾ ಇದ್ದರೆ ಅದನ್ನು ಈ ಪರಿಹಾರಕ್ಕಾಗಿ ಬಳಸಿ ಒಂದು ಚಿಕ್ಕ ಮಡಿಕೆ ಆದರು ಪರವಾಗಿಲ್ಲ. ಈ ಮಡಿಕೆಯಲ್ಲಿ ನೀರನ್ನು ಹಾಕಿ ಒಂದು ಹಿಡಿ ಬೇವಿನ ಸೊಪ್ಪನ್ನು ಒಮ್ಮೆಲೆ ಸ್ವಚ್ಛ ಮಾಡಿ, ಈ ನೀರಿಗೆ ಹಾಕಿ ಚೆನ್ನಾಗಿ ಕುದಿಸ ಬೇಕು ಈ ರೀತಿ ಕುದಿಸಿದ ನೀರನ್ನು ಬಳಸಿ ನಿಮ್ಮ ಕೂದಲು ತೊಳೆಯಬಹುದು ಅಥವಾ ಕೂದಲಿಗೆ ಸ್ವಲ್ಪ ಸಮಯ ಸ್ಪ್ರೇ ಮಾಡಿ ಅರ್ಧ ಗಂಟೆಯ ಬಳಿಕ ಕೂದಲನ್ನು ತೊಳೆಯುವುದರಿಂದ, ಕೂದಲು ಉದುರುವ ಸಮಸ್ಯೆಯಿಂದ ಹಿಡಿದು ಕೂದಲು ಡ್ಯಾಂಡ್ರಫ್ ಆಗಿರುವ ಸಮಸ್ಯೆ ಯವರೆಗೂ ಪರಿಹಾರ ಆಗುತ್ತದೆ. ತುಂಬ ಸುಲಭವಾದ ಪರಿಹಾರ, ಆದರೆ ನೀವು ಈ ಪರಿಹಾರವನ್ನು ಮಣ್ಣಿನ ಮಡಕೆಯಲ್ಲಿ ಮಾಡಬೇಕು ಇದರಿಂದ ತುಂಬ ಉಪಯುಕ್ತ ಲಾಭಗಳನ್ನು ನೀವು ಪಡೆದುಕೊಳ್ಳಬಹುದು. ಮಾಹಿತಿ ಇಷ್ಟವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ ಶುಭ ದಿನ.