Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ತಿಂದ ಆಹಾರ ಸರಿಯಾಗಿ ಜೀರ್ಣವಾಗಲು ಊಟವಾದ ಮೇಲೆ ಇದನ್ನು ತಿನ್ನಿ..!

ಒಂದಂತು ಸತ್ಯ ನಾವು ಇದೀಗ ಸುಮಾರು ಐವತ್ತು ಪ್ರತಿಶತದಷ್ಟು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ನಾವು ಪಾಲಿಸುತ್ತಿರುವ ತಹ ಆಹಾರ ಪದ್ಧತಿಯಿಂದಾಗಿ ಹಾಗೆ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗದೆ ಇರುವುದರಿಂದಾಗಿ ಹೌದು ನಾವು ಯಾವುದೇ ಆಹಾರವನ್ನು ಸೇವಿಸಲಿ,

ಆದರೆ ಆ ಆಹಾರ ಸಂಪೂರ್ಣವಾಗಿ ಜೀರ್ಣ ಆಗಬೇಕು, ಇಲ್ಲವಾದಲ್ಲಿ ಆ ಅಪೂರ್ಣ ಜೀರ್ಣವಾದ ವಸ್ತುಗಳು ಕೆಲವೊಮ್ಮೆ ಅನಾರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ, ಇನ್ನು ಅನಗತ್ಯ ಬೊಜ್ಜನ್ನೂ ಕೂಡಾ ಉಂಟು ಮಾಡಿ ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಬಳಲುವ ಹಾಗೆ ಮಾಡಿಬಿಡುತ್ತದೆ.

ಇದೀಗ ಜನ ಎದುರಿಸುತ್ತಿರುವಂತಹ ಅಸಿಡಿಟಿ ಗ್ಯಾಸ್ಟ್ರಿಕ್ ಮಲಬದ್ಧತೆ ಮೂಲವ್ಯಾಧಿ ಹೊಟ್ಟೆ ನೋವು ಸ್ಥೂಲಕಾಯ ಇಂತಹ ಎಲ್ಲ ಸಮಸ್ಯೆಗಳಿಗೂ ನಾವು ತಿಂದ ಆಹಾರ ಪೂರ್ಣವಾಗಿ ಜೀರ್ಣವಾಗದೆ ಇರುವುದೇ ಕಾರಣ ಆಗಿರುತ್ತದೆ. ಹಾಗಾದರೆ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗಬೇಕು ಅಂದರೆ ಏನು ಮಾಡಬೇಕು, ನಾವು ಯಾವ ಒಂದು ಪದ್ಧತಿಯನ್ನು ಪಾಲಿಸಬೇಕು,

ಅಥವಾ ಈ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗಬೇಕೆಂದರೆ ಯಾವ ಒಂದು ಪದಾರ್ಥವನ್ನು ಸೇವಿಸಬೇಕು ಅನ್ನುವುದನ್ನು ತಿಳಿಯೋಣ, ಇವತ್ತಿನ ಮಾಹಿತಿಯಲ್ಲಿ ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದು ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿಯನ್ನ ಬೇರೆಯವರಿಗೂ ಕೂಡ ಶೇರ್ ಮಾಡಿ.

ಮೊದಲನೆಯದಾಗಿ ನಾವು ಊಟ ಆದ ನಲವತ್ತೈದು ನಿಮಿಷಗಳ ಬಳಿಕ ಒಂದು ಲೋಟ ಬಿಸಿ ನೀರನ್ನು ಸೇವಿಸಬೇಕಾಗುತ್ತದೆ ಇದರಿಂದ ನಾವು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ, ಅದು ಜಿಡ್ಡಿನ ಅಂಶವೆ ಆಗಿರಲಿ ಮಾಂಸಾಹಾರಿ ಪದಾರ್ಥಗಳ ಆಗಿರಲಿ, ನಾವು ತಿಂದ ಕೂಡಲೆ ನೀರನ್ನು ಕುಡಿಯುವುದಕ್ಕಿಂತ ನಾವು ಆಹಾರವನ್ನು ಸೇವಿಸಿದ ನಲವತ್ತೈದು ನಿಮಿಷಗಳ ಬಳಿಕ ಬಿಸಿನೀರನ್ನು ಸೇವಿಸಿದರೆ ನಾವು ತಿಂದಂತಹ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ.

ಜೀರ್ಣಕ್ರಿಯೆ ಉತ್ತಮವಾಗಬೇಕಾದರೆ ರಾತ್ರಿ ಎರಡು ಬೆಂಡೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ಶುದ್ಧ ಪಡಿಸಿ ಸಣ್ಣದಾಗಿ ಕತ್ತರಿಸಿ ಶುದ್ಧವಾದ ನೀರಿನಲ್ಲಿ ನೆನೆಯಲು ಬಿಡಿ ಮಾರನೆ ದಿವಸ ಈ ನೀರು ಮತ್ತು ಬೆಂಡೆಕಾಯಿಯನ್ನು ಸೇವಿಸಿರಿ ಇದರಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ ಅಷ್ಟೇ ಅಲ್ಲ ಹೊಟ್ಟೆ ಉಬ್ಬರ ದಂತಹ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.

ಊಟವಾದ ಅರ್ಧ ಗಂಟೆಯ ಬಳಿಕ ಹೊಟ್ಟೆ ಉಬ್ಬರ ಆಗುತ್ತಿದೆ ಅಥವಾ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತಿಲ್ಲ ಅನ್ನುವವರು ಚಿಟಕಿ ಒಪ್ಪಿಗೆ ಚಿಟಕಿ ಸೋಡಾ ಪುಡಿಯನ್ನು ಬೆರೆಸಿ, ಇದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಬೇಕು ನಂತರ ಇದಕ್ಕೆ ಒಂದು ಲೋಟ ನೀರನ್ನು ಮಿಶ್ರಣ ಮಾಡಿ ಈ ಒಂದು ಜ್ಯೂಸ್ನ ಕುಡಿಯುವುದರಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗುತ್ತದೆ.

ಪುದಿನ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಆ ಒಂದು ನೀರನ್ನು ಕೂಡ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ ಹಾಗೆ ಮಧ್ಯಾಹ್ನದ ಊಟದ ಬಳಿಕ ಒಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶ ಟಾಕ್ಸಿಕ್ ಅಂಶವೂ ಹೊರಹಾಕಲು ಈ ಬಾಳೆಹಣ್ಣು ಪ್ರಯೋಜನಕಾರಿಯಾಗಿರುತ್ತದೆ, ಮತ್ತು ಉತ್ತಮ ಆರೋಗ್ಯಕ್ಕೂ ಕೂಡ ಬಾಳೆಹಣ್ಣನ್ನು ಸೇವಿಸುವುದರಿಂದ ಒಳ್ಳೆಯದು.

ಈ ರೀತಿಯಾಗಿ ಕೆಲವೊಂದು ಪದಾರ್ಥಗಳನ್ನು ಊಟದ ನಂತರ ಸೇವಿಸುವುದರಿಂದ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ, ಹಾಗೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣ ಆಗುತ್ತದೆ, ನೀವು ಕೂಡ ಮಾಹಿತಿ ತಿಳಿದು ಬೇರೆಯವರಿಗು ಕೂಡ ಮಾಹಿತಿಯನ್ನು ಶೇರ್ ಮಾಡಿ ಶುಭ ದಿನ ಧನ್ಯವಾದ.