Categories
ಮಾಹಿತಿ ಸಂಗ್ರಹ

ದಿನಕ್ಕೆ 1/2 ಪೀಸ್ ಅನಾನಸ್ ಹಣ್ಣು 5 ದಿನ ತಿಂದರೆ ನಿಮ್ಮ ಆರೋಗ್ಯಕ್ಕೆ ಏನಾಗುತ್ತೆ ಗೊತ್ತಾ..!

ಪ್ರತಿದಿನ ನೀವು ಅನಾನಸ್ ತಿನ್ನುವುದ್ರಿಂದ ಏನಾಗುತ್ತದೆ ಗೊತ್ತಾ ಹೌದು ಅನಾನಸ್ ಹಣ್ಣಿನ ಬಗ್ಗೆ ನಾವು ಇವತ್ತಿನ ಈ ಲೇಖನದಲ್ಲಿ ವಿಶೇಷವಾದ ಮಾಹಿತಿಯನ್ನು ತಿಳಿಸುತ್ತೇವೆ. ಈ ಅನಾನಸ್ ಹಣ್ಣು ಮೂಲತಃ ನಮ್ಮ ಭಾರತ ದೇಶದ ಹಣ್ಣು ಅಲ್ಲಾ. ಇದನ್ನು ಸಾವಿರದ ಐನೂರ ತೊಂಬತ್ತ ನಾಲ್ಕರಲ್ಲಿ ಪೋರ್ಚುಗನ್ ನರು ನಮ್ಮ ದೇಶಕ್ಕೆ ತಂದರು. ಅನಾನಸ್ ಹಣ್ಣನ್ನು ಅನಾನಸ್ ಎಂದು ನಾಮಕರಣ ಮಾಡಿದ್ದು ಪೋರ್ಚುಗನ್ ನರು. ಜೊತೆಗೆ ಈ ಅನಾನಸ್ ಅನ್ನು ನಾನ ಎಂದು ಮೊದಲು ಕರೆಯುತ್ತಿದ್ದರು ಹೌದು ಬ್ರೆಜಿಲ್ ಇದರ ಮೂಲ ಆಗಿದ್ದು ಅನಾನಸ್ ಹಣ್ಣನ್ನು ಈ ಬ್ರೆಜಿಲ್ ನವರು ನಾನ ಅಂತ ಕರೆಯುತ್ತಿದ್ದರು ನಂತರ ಇದು ಭಾರತ ದೇಶಕ್ಕೆ ಪರಿಚಯವಾಗಿದ್ದು ಪೋರ್ಚುಗನ್ನ ರಿಂದ.

ಈ ಅನಾನಸ್ ಹಣ್ಣಿನ ಬಗ್ಗೆ ಹೇಳಬೇಕೆಂದರೆ ಎಲ್ಲರೂ ಇಷ್ಟಪಡುವ ಈ ಅನಾನಸ್ ಹಣ್ಣನ್ನು ನಾವು ಕನ್ನಡದಲ್ಲಿ ಪರಂಗಿ ಹಣ್ಣು ಅನಾನಸ್ ಹಣ್ಣು ಮತ್ತು ಇದನ್ನು ಮುಳ್ಳು ಹಲಸು ಅಂತ ಕೂಡ ಕರೆಯುವುದುಂಟು ಈ ಅನಾನಸ್ ಹಣ್ಣನ್ನು ನಾವು ಪ್ರತಿದಿನ ಅರ್ಧ ಕಪ್ ನಷ್ಟು ತಿಂದರೆ ಸಾಕು ನಮ್ಮ ಆರೋಗ್ಯಕ್ಕೆ ಬಹಳಾನೆ ಲಾಭಗಳು ಇವೆ ಅದನ್ನು ನಿಮಗೆ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ಅದೇನೆಂದರೆ ಅನಾನಸ್ ಹಣ್ಣಿನಲ್ಲಿ ಸಾಕಷ್ಟು ಬಗೆಯ ತಿನಿಸುಗಳು ಪೋಷಕಾಂಶಗಳು ಖನಿಜಾಂಶಗಳು ಇವೆ ಇದರಲ್ಲಿ ಹೇರಳವಾದ ನಾರಿನಾಂಶ ಕೂಡ ಇದೆ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಅನಾನಸ್ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಕೂಡ ದೂರವಾಗುತ್ತದೆ.

ಅನಾನಸ್ ಹಣ್ಣಿನಲ್ಲಿ ಉತ್ತಮವಾದ ವಿಟಮಿನ್ಸ್ ಅಂಶ ಇದ್ದು, ನಿಶ್ಯಕ್ತಿ ತಲೆಸುತ್ತು ಅಥವಾ ಬಿಸಿಲಿನ ತಾಪಮಾನದಿಂದ ತಲೆಸುತ್ತು ಬಂದಿದ್ದರೆ ಅಂಥವರು ಅನಾನಸ್ ಹಣ್ಣಿಗೆ ಸಕ್ಕರೆಯನ್ನು ಮಿಶ್ರ ಮಾಡಿ ಸೇವಿಸಬಹುದು ಈ ರೀತಿ ದಾಳಿಂಬೆ ಹಣ್ಣಿನ ಸೇವನೆ ಮಾಡುವುದರಿಂದ ನಿಶ್ಯಕ್ತಿ ಕೂಡ ದೂರವಾಗುತ್ತದೆ. ಇನ್ನೂ ಉತ್ತಮ ಆರೋಗ್ಯಕರ ಲಾಭಗಳನ್ನು ನೀಡುವ ಅನಾನಸ್ ಹಣ್ಣನ್ನು ತಿನ್ನುವುದರಿಂದ ಇದರಲ್ಲಿ ಇರುವಂತಹ ನಾರಿನ ಅಂಶವು ಜೀರ್ಣ ಶಕ್ತಿಯನ್ನು ವೃದ್ಧಿ ಮಾಡುತ್ತದೆ.

ಅನಾನಸ್ ಹಣ್ಣಿನಿಂದ ಆಗುವ ಮತ್ತೊಂದು ಲಾಭ ಅಂದರೆ ಇದನ್ನು ನಾವು ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ ಅಷ್ಟೇ ಅಲ್ಲ ಈ ಅನಾನಸ್ ಹಣ್ಣನ್ನು ತಿನ್ನುವುದರಿಂದ ಭವಿಷ್ಯದಲ್ಲಿ ಎದುರಾಗುವ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸುತ್ತದೆ ಈ ಅನಾನಸ್ ಹಣ್ಣು ಇದರ ಜೊತೆಗೆ ಅನಾನಸ್ ಹಣ್ಣನ್ನು ತಿನ್ನುವುದರಿಂದ ಅದರಲ್ಲಿರುವ ನೀರಿನ ಅಂಶ ನಿರ್ಜಲೀಕರಣವನ್ನು ದೂರ ಮಾಡುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚು ಮಾಡುತ್ತದೆ.

ಇದರಲ್ಲಿ ಇರುವಂತಹ ಉತ್ತಮ ಗುಣಮಟ್ಟದ ಖನಿಜಾಂಶಗಳು ರಕ್ತವನ್ನು ಕೂಡ ಸ್ವಚ್ಛ ಮಾಡುವುದರಲ್ಲಿ ಸಹಕಾರಿಯಾಗಿರುತ್ತದೆ ಆದಕಾರಣ ಈ ಅನಾನಸ್ ಹಣ್ಣನ್ನು ತಿನ್ನುವ ರೂಢಿಯನ್ನು ನೀವು ಕೂಡ ಮಾಡಿಕೊಳ್ಳಿ ಮತ್ತು ನೀವು ಅನಾನಸ್ ಹಣ್ಣನ್ನು ಕೇವಲ ರುಚಿಗಾಗಿ ಮಾತ್ರ ಸೇವಿಸಬೇಡಿ. ಇದರಿಂದ ನಿಮಗೆ ಉತ್ತಮ ಆರೋಗ್ಯ ಕೂಡ ಲಭಿಸುತ್ತದೆ ಇನ್ನೂ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದು ಮಾಹಿತಿಗೆ ಒಂದು ಲೈಕ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಮತ್ತು ಲೈಕ್ ಮಾಡಿ ಆರೋಗ್ಯದಿಂದಿರಿ ಧನ್ಯವಾದ.