Categories
ಭಕ್ತಿ ಮಾಹಿತಿ ಸಂಗ್ರಹ

ದೆವ್ವಗಳಿಂದ ಕಟ್ಟಲಾದ ಭಾರತದ ಏಕೈಕ ದೇವಸ್ಥಾನ ನಮ್ಮ ಬೆಂಗಳೂರಿನಲ್ಲಿ ಇದೆಯಂತೆ .. ಎಲ್ಲಿ ಅಂತ ಗೊತಾಗ್ಬೇಕಾ ..

ಹಿಂದೂ ಧರ್ಮ ಅಂದರೆ ಮೊದಲಿಗೆ ನೆನಪಿಗೆ ಬರೋದು ಮೂರು ಕೋಟಿ ದೇವರುಗಳು ಮತ್ತು ಭಾರತ ದೇಶ ಹಿಂದೂ ಸಂಪ್ರದಾಯದ ನೆಲೆಯಾಗಿದೆ ಇಲ್ಲಿ ಸಾಕಷ್ಟು ಸುಂದರವಾದ ದೇವಾಲಯಗಳನ್ನು ನೋಡಬಹುದು , ಈ ನೆಲದಲ್ಲಿ ಪುರಾತನ ದೇವಾಲಯಗಳು ಮತ್ತು ಸಾಕಷ್ಟು ಅಚ್ಚರಿಗಳನ್ನು ನಾವು ಇಲ್ಲಿ ನೋಡುತ್ತೇವೆ .

ಸಾಮಾನ್ಯವಾಗಿ ದೇವಾಲಯಗಳು ಅಂದರೆ ನಮಗೆ ದೇವರ ವಿಗ್ರಹಗಳು ಅಲ್ಲಿ ಇರುವಂತಹ ಶಿಲ್ಪಿ ಕಲೆಗಳು ಗೋಪುರಗಳು ನೆನಪಿಗೆ ಬರುತ್ತದೆ ಆದರೆ ನಾವು ಇಂದು ಹೇಳಲು ಹೊರಟಿರುವ ದೇವಾಲಯವು ಪ್ರೆತಗಳಿಂದ ಕಟ್ಟಲಾಗಿದೆ ಎಂದು ಇತಿಹಾಸ ಹೇಳುತ್ತದೆ ಈ ಒಂದು ದೇವಾಲಯ ಭಾರತ ದೇಶದಲ್ಲಿ ಅದು ಕರ್ನಾಟಕದಲ್ಲಿಯೇ ಇದೇ .

ಬೆಂಗಳೂರಿನ ಗ್ರಾಮಾಂತರದಲ್ಲಿ ಸಿಗುವಂತಹ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಮಧ್ಯದಲ್ಲಿ ಬೊಮ್ಮ ಅವರ ಎಂಬ ಊರು ಸಿಗುತ್ತದೆ ಆ ಒಂದು ಬೊಮ್ಮವಾರ ಊರಿನಲ್ಲಿ ಈ ದೇವಾಲಯವನ್ನು ಕಾಣಬಹುದು ಸ್ನೇಹಿತರೇ ಈ ಒಂದು ದೇವಾಲಯ ಪ್ರೇತ ಗಳಿಂದ ಕಟ್ಟಲಾಗಿದೆ.

ಮತ್ತು ಈ ದೇವಾಲಯದಲ್ಲಿ ಶಿವನ ವಿಗ್ರಹ ಇದೆ ಇದನ್ನು ಜನರು ಭಕ್ತಿಯಿಂದ ಪೂಜಿಸುತ್ತಾರೆ . ದೇವಾಲಯದ ಇತಿಹಾಸವನ್ನು ತಿಳಿಯುತ್ತಾ ಹೋದರೆ ಸುಮಾರು ಆರು ನೂರು ವರ್ಷಗಳ ಹಿಂದೆ ಆ ಊರಿನಲ್ಲಿ ಭೂತ ಪ್ರೇತಗಳು ಜನರಿಗೆ ಬಹಳ ತೊಂದರೆಯನ್ನು ಕೊಡುತ್ತಿದ್ದಂತೆ.

ಆಗ ಜನರನ್ನು ಭೂತ ಪ್ರೇತ ಗಳಿಂದ ಕಾಪಾಡಲು ಅಲ್ಲಿಯೇ ಇದ್ದ ಒಬ್ಬ ಮಾಂತ್ರಿಕ ಅವರ ಹೆಸರು ಉಚ್ಚಾಯ ಎಂಬುವವರು ಒಂದು ದೇವಾಲಯವನ್ನು ಕಟ್ಟಿಸಿದರಂತೆ .

ಆ ಒಂದು ದೇವಾಲಯವನ್ನು ಈ ಪ್ರೇತಗಳು ರಾತ್ರೋರಾತ್ರಿ ನೆಲಸಮ ಮಾಡಿ ಬಿಟ್ಟಿತಂತೆ, ಕೋಪಗೊಂಡ ಆ ಮಾಂತ್ರಿಕ ದೆವ್ವಗಳ ಕೂದಲನ್ನು ಕತ್ತರಿಸಿ ತಂದು ದೇವರ ಬಳಿ ಇಟ್ಟುಕೊಂಡಂತೆ ಆ ನಂತರ ಪ್ರೇತಗಳು ಹೆದರಿಕೊಂಡು ಆ ಮಾಂತ್ರಿಕನ ಬಳಿ ಹೋಗಿ ಬೇಡಿಕೊಂಡನಂತೆ .

ನಮ್ಮ ಕೂದಲನ್ನು ನಮಗೆ ವಾಪಸ್ಸು ಕೊಡು ಅಂತ ಆದರೆ ಅದಕ್ಕೆ ಆ ಮಾಂತ್ರಿಕ ಕೆಲವೊಂದು ಷರತ್ತುಗಳನ್ನು ಹಾಕುತ್ತಾರೆ ಆಗ ಪ್ರೇತಗಳು ಅದನ್ನು ಒಪ್ಪಿಕೊಂಡು ಈ ದೇವಾಲಯವನ್ನು ಕಟ್ಟುತ್ತವೆ .ಈ ದೇವಾಲಯದಲ್ಲಿ ಯಾವುದೇ ರೀತಿಯ ದೇವರ ವಿಗ್ರಹಗಳನ್ನು ನಾವು ಕಾಣುತ್ತಾ ಇರೋದಿಲ್ಲ ಬರೀ ಪ್ರೇತಗಳ ಕೆತ್ತನೆಗಳನ್ನು ವಿಗ್ರಹಗಳನ್ನೇ ನೋಡಬಹುದಾಗಿತ್ತು .

ಸುಮಾರು ಐವತ್ತು ವರ್ಷಗಳ ಹಿಂದೆ ಊರಿನಲ್ಲಿ ನೀರಿನ ಸಮಸ್ಯೆಯಾಗಿ ಆ ದೇವಾಲಯದ ಬಳಿ ಬೋರ್ವೆಲ್ ಕೊರೆಸಿದಾಗ ಎಂಟು ಅಡಿಯ ಶಿವಲಿಂಗವು ಸಿಗುತ್ತದೆ ಆಗ ಆ ಶಿವಲಿಂಗವನ್ನು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದರು ಆ ನಂತರ ಆ ದೇವಾಲಯಕ್ಕೆ ಸುಂದರೇಶ್ವರ ದೇವಾಲಯ ಅಂತ ಕರೆಯಲಾಗುತ್ತದೆ .

ಈ ದೇವಾಲಯದಲ್ಲಿ ನಾವು ಕೇವಲ ದೆವ್ವಗಳ ಕೆತ್ತನೆಯನ್ನು ವಿಗ್ರಹಗಳನ್ನು ನೋಡಬಹುದು ದೆವ್ವದಿಂದ ಕಟ್ಟಲಾಗಿದ್ದ ಈ ದೇವಾಲಯದಲ್ಲಿ ಯಾವುದೇ ರೀತಿಯ ದೇವರ ಕೆತ್ತನೆ ಯಾಗಲಿ ಅಥವಾ ಗೋಪುರಗಳು ಕಾಣಿಸುವುದಿಲ್ಲ ಇದೀಗ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಜನರು ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಮತ್ತು ದೆವ್ವ ಭೂತದ ಸಮಸ್ಯೆಗೆ ಇಲ್ಲಿ ಬಂದು ಬೇಡಿಕೊಂಡು ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಂಡು ಹೋಗುತ್ತಾರೆ .

ಈ ದೇವಾಲಯದ ಇತಿಹಾಸವನ್ನು ಕೇಳಿದರೆ ನಿಜಕ್ಕೂ ನಿಮಗೂ ಆಶ್ಚರ್ಯ ಆಗುತ್ತದೆ ಅಲ್ವಾ ಸ್ನೇಹಿತರ ಯಾವಾಗಾದರೂ ಒಮ್ಮೆ ಬೊಮ್ಮ ವರಕ್ಕೆ ಹೋದಾಗ ಈ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ . ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಇನ್ನೂ ಇಂತಹ ಹಲವಾರು ಅಚ್ಚರಿಯ ಕಥೆಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಧನ್ಯವಾದ .