ದೇಹದಲ್ಲಿ ಹೆಚ್ಚಿನ ಸಕ್ಕರೆ ಪ್ರಮಾಣ ಇದ್ರೆ ಇದನ್ನ ಸರಿ ಪ್ರಮಾಣದಲ್ಲಿ ಸೇವಿಸಿ ಸಾಕು ಬಹು ಬೇಗ ಹತೋಟಿಗೆ ಬರುತ್ತದೆ…

172

ಈ ಮನೆ ಮದ್ದು, ನಿಮ್ಮ ಶುಗರ್ ಕಾಯಿಲೆಯನ್ನು ನಿಯಂತ್ರಣಕ್ಕೆ ತರುತ್ತದೆ ಹೌದು ಕೆಲವರಿಗಂತೂ ನಾನೂರು ಐನೂರು ಲೆವೆಲ್ ನಲ್ಲಿ ಆದರೆ ಅಡುಗೆ ಮನೆಯಲ್ಲಿಯೇ ಇಂಥದ್ದೊಂದು ಪ್ರಭಾವಶಾಲಿಯಾದ ಪದಾರ್ಥ ಇರುವಾಗ ಸಕ್ಕರೆ ಕಾಯಿಲೆಯನ್ನು ಯಾಕೆ ಜಾಸ್ತಿ ಮಾಡಿಕೊಳ್ತೀರಾ ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುತ್ತೀರಾ.

ಸಕ್ಕರೆ ಕಾಯಿಲೆ ಬಂದರೂ ಕೂಡ ಅದನ್ನು ಸುಲಭವಾಗಿ ಊಟದಲ್ಲಿ ಕಂಟ್ರೋಲ್ ಮಾಡುತ್ತಾ ಊಟದಲ್ಲಿ ಕೆಲವೊಂದು ಪದಾರ್ಥಗಳನ್ನು ಸೇರಿಸಿಕೊಳ್ಳುತ್ತಾ ಊಟದಲ್ಲಿ ಕೆಲವೊಂದು ಪದಾರ್ಥಗಳನ್ನು ಕಡಿಮೆ ಮಾಡುತ್ತಾ ಮತ್ತು ಕೆಲವೊಂದು ಪದಾರ್ಥಗಳನ್ನು ಪೂರ್ಣವಾಗಿ ತ್ಯಜಿಸುತ್ತಾ, ಹೀಗೆ ಆಹಾರ ಪದಾರ್ಥಗಳನ್ನು+ಮತ್ತು-ಮಾಡುತ್ತಾ ನಿಮ್ಮ ಈ ಡಯಾಬಿಟಿಸ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು ಹಾಗಾದರೆ ನಾವು ಈ ಮಾಹಿತಿಯಲ್ಲಿ ನಮಗೆ ತಿಳಿಸಲು ಹೊರಟಿರುವಂತಹ ಆ ಸೂಪರ್ ಮನೆಮದ್ದು ಯಾವುದು ಗೊತ್ತಾ ತುಂಬ ಸುಲಭವಾಗಿ ನಿಮ್ಮ ಕೈಗೆ ಸಿಗುತ್ತೆ ಕಷ್ಟಪಡಬೇಕಾಗಿಲ್ಲ.

ಹಾಗಾಗಿ ಸಕ್ಕರೆ ಕಾಯಿಲೆ ಬಂದರೆ ಯಾರೂ ಕೂಡ ಹೆದರಬೇಡಿ.ಹೌದು ಹೆದರಬೇಡಿ ಅಂತೀರಲ್ಲ ಸಕ್ಕರೆ ಕಾಯಿಲೆ ಬರುತ್ತಿದ್ದ ಹಾಗೆ ಬೇರೆ ತರದ ಅನಾರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತೆ ಅಂತಾ ನೀವು ಅಂದುಕೊಳ್ಳಬಹುದು ಆದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡುವುದು ತುಂಬಾ ಸುಲಭವಾಗಿದೆ ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಈ ಡಯಾಬಿಟೀಸ್ ಸಮಸ್ಯೆ ಎಂಬುದು ಸರ್ವೇಸಾಮಾನ್ಯ ಆಗಿಹೋಗಿದೆ ಕೇವಲ ಹಿರಿಯರಲ್ಲಿ ಮಾತ್ರವಲ್ಲ ಎಂದು ಕಿರಿಯರಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದೆ ಈ ಶುಗರ್.

ಶುಗರ್ ಬಂದಾಗ ಕೆಲವೊಂದು ಪದಾರ್ಥಗಳನ್ನು ತಿನ್ನುವುದಕ್ಕೆ ಹೆದರುತ್ತೇವೆ ಹಾಗಾಗಿ ಶುಗರ್ ಬಂದಾಗ ನಿಮಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ಒಂದೊಂದು ಬಾರಿ ತಿನ್ನಬೇಕು ಅಂದರೆ ಮೊದಲಿಗೆ ನೀವು ಪ್ರತಿದಿನ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು.ಇಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಬಂದರೆ ಇದು ಶ್ರೀಮಂತ ಕಾಯಿಲೆ ಜೀವನಪರ್ಯಂತ ಮಾತ್ರ ತೆಗೆದುಕೊಳ್ಳುತ್ತಲೇ ಈ ಸಮಸ್ಯೆಯನ್ನು ಮುಂದೂಡಬೇಕು ಎಂದು ಆಯಸ್ಸು ಕಡಿಮೆ ಅಂತೆಲ್ಲ ಭಾವಿಸುತ್ತಿದ್ದರು.

ಆದರೆ ಈ ದಿನಗಳಲ್ಲಿ ಸಕ್ಕರೆ ಕಾಯಿಲೆ ಬಂದರೆ ವೈದ್ಯರೇ ಏನೆಲ್ಲ ಮಾಡಬೇಕು ಏನನ್ನು ಮಾಡಬಾರದು ಅಂತಲೂ ಹೇಳುತ್ತಾರೆ ಹಾಗೆಯೇ ಸಾಕಷ್ಟು ಮಾಹಿತಿಗಳನ್ನು ಕೂಡಾ ನೀವು ಸೋಷಿಯಲ್ ಮೀಡಿಯಾಗಳ ಮೂಲಕ ಪಡೆದುಕೊಳ್ಳಬಹುದು.ಅಸಲಿಗೆ ಸಕ್ಕರೆ ಕಾಯಿಲೆ ಬಂತು ಅಂದಾಗ ನೀವು ಪಾಲಿಸಬೇಕಾದ ಮೊದಲ ಪದ್ಧತಿ ಏನೆಂದರೆ ಆಹಾರ ಪದ್ಧತಿಯಲ್ಲಿ ಆದಷ್ಟು ಕಾರ್ಬೊಹೈಡ್ರೇಟ್ ಅಂಶ ಮತ್ತು ಗ್ಲೂಕೋಸ್ ಅಂಶ ಹೆಚ್ಚು ಇರುವಂತಹ ಶುಗರ್ ಅಂಶ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿ.

ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಉತ್ತಮ ಮತ್ತು ಹೆಚ್ಚು ನೀರು ಕುಡಿಯುವುದು ಒಳ್ಳೆಯದು ಹಾಗೆ ತಪ್ಪದೇ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಕ್ ಮಾಡುವುದು ಅಗತ್ಯವಾಗಿದೆ ಹಾಗೂ ಅವಶ್ಯಕ ಕೂಡ.ಈ ಸಕ್ಕರೆ ಕಾಯಿಲೆ ಬಂದಾಗ ರಾತ್ರಿ ಸಮಯದಲ್ಲಿ ಈ ಪದ್ದತಿಯನ್ನ ಪಾಲಿಸಿ, ನಿಮಗೆ ಆಹಾರ ಸೇವಿಸಿದ ಬಳಿಕ ಮಲಗುವ ಮುಂಚೆ ಬೆಚ್ಚಗಿನ ಹಾಲಿಗೆ ಚಿಟಿಕೆಯಷ್ಟು ಅರಿಶಿಣ ಸೇರಿಸಿ ಕುಡಿಯಬೇಕು .

ಪರಿಹಾರ ಮಾಡಿದರೆ, ಎನೆಲ್ಲಾ ಲಾಭ ಸಿಗುತ್ತೆ ಅಂದರೆ ಅರಿಷಣ ಆ್ಯಂಟಿಬಯಾಟಿಕ್ ಆ್ಯಂಟಿಮೈಕ್ರೋಬಿಯಲ್ ಜತೆಗೆ ಇನ್ನಷ್ಟು ಉತ್ತಮ ಪೋಷಕಾಂಶಗಳನ್ನು ಹೊಂದಿರುವುದರಿಂದ ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.ಇದರ ಜೊತೆಗೆ ಮಧ್ಯಾಹ್ನದ ಸಮಯದಲ್ಲಿ ಅಥವಾ ಬೆಳಗಿನ ಸಮಯದಲ್ಲಿ ನೆನೆಸಿಟ್ಟ ಮೆಂತೆಕಾಳಿನ ನೀರು ಮತ್ತು ಮೆಂತೆ ಕಾಳನ್ನು ತಿನ್ನುವುದರಿಂದ ಬಹಳಷ್ಟು ಉತ್ತಮ ಲಾಭ ದೊರೆಯುತ್ತದೆ ಮತ್ತು ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ.