Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ದೊಡ್ಡವರಿಗೂ ಮತ್ತು ಮಕ್ಕಳಿಗೂ ಆಗುವ ದೃಷ್ಟಿ ದೋಷಕ್ಕೆ ಪರಿಣಾಮಕಾರಿ ಪರಿಹಾರ ..! ಕಣ್ಣಾಸರೆ ತೆಗೆಯುವ ರೀತಿ

ಹೌದು ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತಿರುವ ಈ ಮಾಹಿತಿ ಅಂದರೆ ತುಂಬಾ ವಿಶೇಷವಾದ ಮತ್ತು ಉಪಯುಕ್ತಕರವಾದ ಮಾಹಿತಿ ಅಂತನೇ ಹೇಳಬಹುದು. ಅದೇನೆಂದರೆ ಕಣ್ಣು ದೃಷ್ಟಿ ಸಮಸ್ಯೆ ಹೌದು ಎಷ್ಟು ಮಂದಿ ಈ ಒಂದು ವಿಚಾರವನ್ನು ನಂಬುವುದಿಲ್ಲ. ಆದರೆ ಒಂದು ಗಾದೆ ಮಾತಿದೆ, ಮನುಷ್ಯನ ದೃಷ್ಟಿಗೆ ಕಲ್ಲು ಕೂಡ ಸಿಡಿಯುತ್ತದೆ ಎಂದು ಆದಕಾರಣ ಇಂದಿನ ಮಾಹಿತಿಯಲ್ಲಿ ಮಕ್ಕಳಿಗೆ ಆಗಲಿ ಅಥವಾ ದೊಡ್ಡವರಿಗೆ ಆಗಲಿ ಈ ಒಂದು ಕಣ್ಣಿನ ದೃಷ್ಟಿಯ ಸಮಸ್ಯೆ ಕಾಡುತ್ತದೆ.

ಅದಕ್ಕಾಗಿ ಮನೆಯಲ್ಲಿ ಹಿರಿಯರು ಹೇಗೆ ದೃಷ್ಟಿ ತೆಗೆದು ಹಾಕುತ್ತಿದ್ದರು ಅನ್ನುವ ಕೆಲವೊಂದು ವಿಚಾರಗಳು ನಮ್ಮ ಇಂದಿನ ಪೀಳಿಗೆಯವರಿಗೆ ತಿಳಿದಿಲ್ಲ. ಅದನ್ನು ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಈ ವಿಧಾನಗಳನ್ನು ಬಳಸಿ ನಮ್ಮ ಹಿರಿಯರು ದೃಷ್ಟಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿದ್ದರು ಮಕ್ಕಳಿಗೆಂದು ಬೇಗ ದೃಷ್ಟಿ ಆಗುತ್ತದೆ. ಅದನ್ನು ನಿರ್ಲಕ್ಷ ಮಾಡಿದರೆ ಮಕ್ಕಳಿಗೆ ಜ್ವರ ಬರುವ ಸಾಧ್ಯತೆ ಕೂಡ ಇರುತ್ತದೆ, ಮಕ್ಕಳಿಗೆ ದೃಷ್ಟಿ ಆದಾಗ ಮಕ್ಕಳು ತುಂಬಾ ಹಠ ಮಾಡುತ್ತಾರೆ ಇನ್ನು ಕೆಲ ಮಕ್ಕಳು ಊಟ ಮಾಡುವುದಿಲ್ಲ.

ಆದಕಾರಣ ಇಂದಿನ ಪೀಳಿಗೆಯವರಿಗೆ ಸ್ವಲ್ಪ ಉಪಯುಕ್ತವಾಗಲಿ ಎಂದು ನಮ್ಮ ಹಿರಿಯರು ಹೇಗೆಲ್ಲ ದೃಷ್ಟಿಯನ್ನು ತೆಗೆಯುತ್ತಿದ್ದರು ಅನ್ನೋ ಕೆಲವೊಂದು ಮಾಹಿತಿಯನ್ನು ನೀಡುತ್ತೇವೆ. ಮೊದಲಿಗೆ ಕೆಂಪು ನೀರು. ಹೌದು ಕೆಂಪು ನೀರನ್ನು ಮಾಡಿಕೊಳ್ಳುವುದು ಬಹಳ ಸುಲಭ. ಒಂದು ತಟ್ಟೆಗೆ ನೀರನ್ನು ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಹಾಕಬೇಕು. ನಂತರ ನೀರಿಗೆ ಅಡುಗೆ ಅರಿಶಿಣವನ್ನು ಬೆರೆಸಿ ಅದಕ್ಕೆ ಸ್ವಲ್ಪ ಅಡಿಕೆ ಎಲೆಯ ಸುಣ್ಣವನ್ನು ಮಿಶ್ರಮಾಡಬೇಕು.

ಆಗ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ ಈ ನೀರನ್ನು ಬಳಸಿ ಮಕ್ಕಳಿಗೆ ದೃಷ್ಟಿಯನ್ನು ತೆಗೆಯಬೇಕು, ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಕೂಡ ದೃಷ್ಟಿಯನ್ನು ತೆಗೆಯಬಹುದು. ಮೊದಲಿಗೆ ಲೋಟವನ್ನು ತೆಗೆದುಕೊಂಡು ಅದಕ್ಕೆ ಒಂದಿಷ್ಟು ಕಾಗದಗಳನ್ನು ಹಾಕಬೇಕು ನಂತರ ಅದಕ್ಕೆ ಬೆಂಕಿಯನ್ನು ಹಚ್ಚಿ ಒಮ್ಮೆ ವ್ಯಕ್ತಿಗೆ ಮೇಲಿಂದ ಕೆಳಗೆ ದೃಷ್ಟಿಯನ್ನು ತೆಗೆಯಬೇಕು. ನಂತರ ಕೆಂಪು ನೀರನ್ನು ಬಳಸಿ ಮತ್ತೊಮ್ಮೆ ದೃಷ್ಟಿಯನ್ನು ತೆಗೆಯಬೇಕು.

ಎರಡನೆಯ ಪರಿಹಾರವೂ ತುಂಬಾ ಸುಲಭ ನೀವು ಮೊದಲ ರೀತಿಯಲ್ಲಿ ಒಂದು ತಂಬಿಗೆಯಲ್ಲಿ ನೀರನ್ನು ತೆಗೆದುಕೊಂಡು ಕೆಂಪು ನೀರನ್ನು ಮಾಡಿ ಅದನ್ನು ಕೂಡ ಮಕ್ಕಳಿಗೆ ಅಥವಾ ದೊಡ್ಡವರಿಗೆ ಮೇಲಿಂದ ಕೆಳಗೆ ನಿವಾಳಿಸಬೇಕು. ನಂತರ ಇದನ್ನು ಮೂರು ದಾರಿ ಕೂಡುವ ದಾರಿಗೆ ಎಸೆಯಬೇಕು ಈ ರೀತಿ ಮಾಡುವುದರಿಂದ ದೃಷ್ಟಿಯು ಬೇಗ ನಿವಾರಣೆಯಾಗುತ್ತದೆ. ಮತ್ತೊಂದು ಪರಿಹಾರ ಅಡುಗೆಮನೆಯಲ್ಲಿ ಪುಡಿ ಉಪ್ಪು ಇರುತ್ತದೆ. ಅದನ್ನು ಎಡಗೈಲಿ ತೆಗೆದುಕೊಂಡು ವ್ಯಕ್ತಿಗೆ ದೃಷ್ಟಿಯನ್ನು ತೆಗೆಯಬೇಕು ನಂತರ ಇದನ್ನು ಹರಿಯುವ ನೀರಿನಲ್ಲಿ ಬಿಡಬೇಕು ಅಥವಾ ಮನೆಯಲ್ಲಿಯೇ ನೀರಿನೊಳಗೆ ಹಾಕಿ ಕಲಸಿ ಅದನ್ನ ಚೆಲ್ಲಬೇಕು ಈ ರೀತಿ ಮಾಡುವುದರಿಂದ ಕೂಡ ದೃಷ್ಟಿ ಬೇಗ ನಿವಾರಣೆಯಾಗುತ್ತದೆ.

ಮತ್ತೊಂದು ಪರಿಹಾರ ಅಂದರೆ ಮನೆಯಲ್ಲಿ ದೃಷ್ಟಿ ತೆಗೆಯುವ ಕಡ್ಡಿಗಳಿದ್ದರೆ ತುಂಬಾ ಸುಲಭ. ಅದನ್ನು ಬಳಸಿ ಮಕ್ಕಳಿಗೆ ಮೂರು ಸುತ್ತು ಸುತ್ತಿಸಿ, ಅದನ್ನು ಬೆಂಕಿ ಹಚ್ಚಿ ಸುಡಬೇಕು ಈ ರೀತಿ ಮಾಡುವುದರಿಂದ ದೃಷ್ಟಿ ಕಳೆಯುತ್ತದೆ. ಮತ್ತೊಂದು ವಿಧಾನ ಅಂದರೆ ದೀಪ ಹಚ್ಚುವ ಬತ್ತಿಯನ್ನು ನೀವು ತೆಗೆದುಕೊಳ್ಳಬೇಕು ಅದನ್ನು ಎಣ್ಣೆಯಲ್ಲಿ ನೆನೆಸಿ ಇಡಬೇಕು. ನಂತರ ನೀವು ಆ ಬತ್ತಿಯನ್ನು ಬಳಸಿ ದೃಷ್ಟಿ ತಗೆಯಬೇಕು ಅಂದರೆ ವ್ಯಕ್ತಿಗೆ ಅಥವಾ ಮಗುವಿಗೆ ನಿವಾಳಿಸಿ ಅದನ್ನುಮನೆಯಿಂದ ಆಚೆ ಬಂದು ಒಂದು ಇಕ್ಕಳದ ಸಹಾಯದಿಂದ ಬತ್ತಿಯನ್ನು ಇಟ್ಟುಕೊಂಡು ಅದನ್ನು ಸುಡಬೇಕು. ಹತ್ತಿ ಹೇಗೆ ಸುಡುತ್ತದೆ ಅದೇ ರೀತಿಯಲ್ಲಿ ವ್ಯಕ್ತಿಯ ದೃಷ್ಟಿ ಕೂಡ ನಾಶವಾಗುತ್ತದೆ ಅನ್ನುವುದು ನಂಬಿಕೆ.

ಈ ರೀತಿ ನಮ್ಮ ಹಿರಿಯರು ಕೆಲವೊಂದು ಪದ್ಧತಿಗಳನ್ನು ಬಳಸಿ ಮನುಷ್ಯನ ಕಣ್ಣು ದೃಷ್ಟಿಯ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು. ನಿಮಗೂ ಕೂಡ ಆಗಾಗ ದೃಷ್ಟಿ ಆಗುತ್ತಿದೆ ಎಂದರೆ ನೀವು ಈ ಕೆಲವೊಂದು ಪರಿಹಾರಗಳನ್ನು ಬಳಸಿ ದೃಷ್ಟಿಯನ್ನು ತೆಗೆಸಿಕೊಳ್ಳಿ. ದೃಷ್ಟಿ ಆಗಿರುವುದನ್ನು ಹೇಗೆ ಕಂಡುಹಿಡಿಯುವುದು ಅಂದರೆ ಕೆಲವರಿಗೆ ಊಟ ಸೇರದಿರುವುದು ತಲೆಬಾರ ತಲೆಸುತ್ತು ಆಯಸ್ಸಾ ಆಗುವುದು, ಹೀಗೆಲ್ಲ ಆಗುತ್ತಿರುತ್ತದೆ. ಈ ರೀತಿ ದೃಷ್ಟಿ ತೆಗೆಯಿರಿ ದೃಷ್ಟಿ ತೆಗೆಯುವುದಕ್ಕೆ ಭಾನುವಾರ ಗುರುವಾರ ಶನಿವಾರ ಒಳ್ಳೆಯ ದಿವಸ ಆಗಿರುತ್ತದೆ.