Categories
ಮಾಹಿತಿ ಸಂಗ್ರಹ

ನಮಗೆ ಕನಸುಗಳು ಯಾಕೆ ಬೀಳುತ್ತವೆ ಅನ್ನೋದರ ಬಗ್ಗೆ ನಿಮಗೆ ಏನಾದ್ರು ಗೊತ್ತ …

ಕನಸುಗಳ ಬಗ್ಗೆ ನಿಮಗೆ ತಿಳಿಯದಂತಹ ಅಚ್ಚರಿ ಸಂಗತಿಗಳನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಹೌದು ಸ್ನೇಹಿತರೆ ಕನಸು ಎಂಬುದು ಎಲ್ಲರಿಗೂ ಕೂಡ ಬೀಳುವಂತಹ ಒಂದು ಸಾಮಾನ್ಯ ಅಂಶವಾಗಿದೆ.

ಇದು ಕೆಲವೊಮ್ಮೆ ಮನಸ್ಸಿನ ತುಮುಲವನ್ನು ಸೂಚಿಸಿದರೆ ಇನ್ನು ಕನಸುಗಳು ಕೆಲವರ ಭಾವನೆಯನ್ನು ಕೂಡ ಅಥವಾ ಏನೋ ಒಂದು ಸೂಚನೆಯನ್ನು ಕೂಡ ಕೊಡುತ್ತಿರುತ್ತದೆಯಂತೆ .

ಕನಸಿನ ಬಗ್ಗೆ ಹೇಳುವುದಾದರೆ ಕನಸು ಎಂಬುದು ನಾವು ಪ್ರತಿ ದಿನ ಏನನ್ನು ಎದುರಿಸುತ್ತಿರುತ್ತೆವೊ ಯಾರನ್ನು ನೋಡುತ್ತಿರುತ್ತೇವೆ ಅದೇ ನಮ್ಮ ಕನಸಿನಲ್ಲಿಯೂ ಕೂಡಾ ಬರುತ್ತದೆ.

ಇನ್ನು ಕುರುಡರ ವಿಷಯಕ್ಕೆ ಬಂದರೆ ಅವರು ಹುಟ್ಟಿನಿಂದಲೇ ಕುರುಡ ರಾಗಿದ್ದರೆ ಅವರ ಕನಸೇ ಬೇರೆ ರೀತಿಯಾಗಿರುತ್ತದೆ ಅದು ಹೇಗೆ ಇರುತ್ತದೆ ಅಂದರೆ ಅವರು ಶಬ್ದದಿಂದ ಅಥವಾ ವಾಸನೆಯ ರೂಪದಿಂದ ಸ್ಪರ್ಶದ ರೂಪದಲ್ಲಿ ಕನಸನ್ನು ಕಾಣುತ್ತಾರೆ .

ಹುಟ್ಟಿದ ಮೇಲೆ ವ್ಯಕ್ತಿ ಕುರುಡಾದರೆ ಅವರು ಕೂಡ ಸಾಮಾನ್ಯರಂತೆ ಕನಸನ್ನು ಕಾಣುತ್ತಾರೆ ಮತ್ತು ನೂರು ಪರ್ಸೆಂಟ್ ಅಲ್ಲಿ ಹನ್ನೆರಡು ಪರ್ಸೆಂಟ್ ಅಷ್ಟು ಜನರು ಕಾಣುವಂತಹ ಕನಸು ಬ್ಲಾಕ್ ಅಂಡ್ ವೈಟ್ ಆಗಿರುತ್ತದೆ ಅಂತ ಇದು ಸಾವಿರದ ಒಂಬೈನೂರ ಹದಿನಾಲ್ಕು ರಿಂದ ಸಾವಿರದ ಒಂಬೈನೂರ ಅರುವತ್ತು ರವರೆಗೂ ಈ ರೀತಿ ಇತ್ತು ಆ ನಂತರ ಈ ಒಂದು ಪರ್ಸೆಂಟೇಜ್ ೪.೪ ಪರ್ಸೆಂಟ್ಗೆ ಇಳಿಮುಖವಾಯಿತು ಇದಕ್ಕೆ ಕಾರಣವೇನು ಅಂತ ಹೇಳುವುದಾದರೆ ಎಲೆಕ್ಟ್ರಾನಿಕ್ ಐಟಮ್ಸ್ ಟಿ.ವಿ ಅನ್ವೇಷಣೆಯೇ ಕಾರಣ ಎಂದು ತಜ್ಞರು ಹೇಳುತ್ತಾರೆ.

ನಾವು ಕನಸು ಕಾಣುವಾಗ ನೋಡುವಂತಹ ಮುಖವೇ ನಮಗೆ ಬರುತ್ತದೆ ಮತ್ತು ಕನಸಿನಲ್ಲಿ ಕಂಡಂತಹ ಮುಖಗಳು ಕೂಡ ನಾವು ಯಾವಾಗಲೋ ಒಂದು ದಿನ ಅವರನ್ನು ನೋಡಿರುತ್ತೇವೆ ಅಂತಹವರೇ ಕನಸಿನಲ್ಲಿ ಬರುವುದು , ಆದ ಕಾರಣವೇ ಕನಸಿನಲ್ಲಿ ಬರುವವರ ಕ್ಯಾರೆಕ್ಟರ್ನ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ .

ಕನಸಿನ ಬಗ್ಗೆ ತಿಳಿದುಕೊಳ್ಳ ಬೇಕಾದಂತಹ ಮತ್ತೊಂದು ಅಚ್ಚರಿಯ ವಿಚಾರವೇನು ಅಂದರೆ ನಾವು ಕನಸು ಕಂಡಿದ್ದನ್ನು ಬೇಗಾನೆ ಮರೆತುಬಿಡುತ್ತೇವೆ ನಾವು ಕನಸು ಕಂಡ ತೊಂಬತ್ತು ಭಾಗದಷ್ಟು ಎದ್ದ ನಂತರ ಮರೆತಿರುತ್ತೇವೆ ಇನ್ನು ಎದ್ದು ಐದು ನಿಮಿಷಗಳ ನಂತರ ಆ ಕನಸಿನಲ್ಲಿ ಬಂದಂತಹ ವಿಚಾರವನ್ನೇ ಪೂರ್ತಿಯಾಗಿ ಮರೆತು ಬಿಡುತ್ತೇವೆ ಇದು ಕನಸಿನ ಒಂದು ಕ್ವಾಲಿಟಿ ಅಂತ ಹೇಳಬಹುದು .

ನಿಮ್ಮ ಕನಸಿನಲ್ಲಿ ಯಾರಾದರೂ ಪದೇ ಪದೇ ಕಾಣಿಸಿಕೊಳ್ಳುತ್ತಾ ಇದ್ದರೆ ನೀವು ಅವರನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಾ ಇದ್ದೀರಾ ಎಂದು ಅರ್ಥ ಅಥವಾ ಇದು ಮತ್ತೊಂದು ವಿಷಯವನ್ನು ಸೂಚಿಸುತ್ತದೆ ಅದೇನೆಂದರೆ ನೀವು ಯಾರನ್ನೂ ಮರೆಯಲು ಪ್ರಯತ್ನಿಸುತ್ತಾ ಇರುತ್ತೀರೋ ಅವರನ್ನು ನಿಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ .

ನಾವು ಕೆಲವೊಮ್ಮೆ ಉದ್ವೇಗದ ಕನಸುಗಳನ್ನು ಕೂಡ ಕಾಣುತ್ತೆವೆ ಆ ಕನಸುಗಳು ಏನು ಅಂತ ಹೇಳೋದಾದರೆ ಕೆಲವೊಮ್ಮೆ ಯಾರೋ ನಿಮ್ಮನ್ನು ಹೊಡೆದ ರೀತಿಯಲ್ಲಿ ಅಥವಾ ನಿಮ್ಮನ್ನು ಯಾರೂ ಬೆಟ್ಟದ ಮೇಲಿಂದ ತಳ್ಳಿದ ರೀತಿಯಲ್ಲಿ ನೀವು ಕೆಲವೊಮ್ಮೆ ಕನಸನ್ನು ಕಂಡಿರುತ್ತೀರಿ ಇದನ್ನು ಉದ್ವೇಗದ ಕನಸುಗಳು ಅಂತ ಕರೆಯಲಾಗುತ್ತದೆ ಇದು ನಿಮ್ಮ ಮನಸ್ಸಿನ ಭಯವನ್ನು ಅಥವಾ ಮದ್ವೆ ಕತೆಯನ್ನು ತಿಳಿಸಿ ಹೇಳುತ್ತದೆ .

ಇಷ್ಟೆಲ್ಲ ಕನಸಿನ ಬಗ್ಗೆ ಹೇಳಬಹುದಾದ ಅಂತಹ ಕೆಲವೊಂದು ಮಾಹಿತಿಗಳು ಸ್ನೇಹಿತರೇ ಇನ್ನು ಈ ತರಹದ ಹೆಚ್ಚಿನ ಇಂಟರೆಸ್ಟಿಂಗ್ ಫ್ಯಾಕ್ಟ್ ಗಳಿಗಾಗಿ ನಮ್ಮ ಪೇಜನ್ನು ತಪ್ಪದೇ ಲೈಕ್ ಮಾಡಿ ಮತ್ತು ಈ ಮಾಹಿತಿ ಇಷ್ಟವಾಗದಿದ್ದಲ್ಲಿ ತಪ್ಪದೇ ಶೇರ್ ಮಾಡಿ .