Categories
ಮಾಹಿತಿ ಸಂಗ್ರಹ

ನಾಟಿ ಮಾಡಲ್ಲ ಕಳೆ ತೆಗೆಯಲ್ಲ ಗೊಬ್ಬರ ಹಾಕಲ್ಲ ಬೆಳೆ ಮಾತ್ರ ಸೂಪರ್ ಯಾವ ಟೆಕ್ನಿಕ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ …

ಸ್ನೇಹಿತರೇ ಈಗಿನ ಕಾಲದಲ್ಲಿ ಯಾರನ್ನು ನೋಡಿದರೂ ಕೂಡ ಹಳ್ಳಿಯ ಜೀವನವನ್ನು ತೊರೆದು ಸಿಟಿ ಜೀವನಕ್ಕೆ ಮರುಳಾಗಿ ಎಲ್ಲರೂ ಕೂಡ ನಗರವನ್ನು ಸೇರುತ್ತಿರುವುದನ್ನು ನಾವು ಕಾಣಬಹುದು ಅದಕ್ಕೆ ಪ್ರಮುಖವಾದ ಕಾರಣ ಹಳ್ಳಿ ಜೀವನ ಕಷ್ಟ ನಗರದಲ್ಲಾದರೆ ಸುಖವಾಗಿ ಜೀವನ ಮಾಡಬಹುದು .

ಹಳ್ಳಿಯಲ್ಲಾದರೆ ಕಷ್ಟಪಟ್ಟು ಎಷ್ಟು ದುಡಿದರೂ ಕೂಡ ಸರಿಯಾದ ಆದಾಯ ಬರುವುದಿಲ್ಲ ಎಂಬ ಕಾರಣಗಳು ಸಹ ಸಾಮಾನ್ಯವಾಗಿ ನಾವು ಕಾಣಬಹುದಾಗಿದೆ ಆದರೆ ಈಗಿನ ಕಾಲದಲ್ಲಿ ಕೆಲವೊಬ್ಬರು ಯುವಕರು ಸಿಟಿ ಜೀವನವನ್ನು ಬಿಟ್ಟು ಹಳ್ಳಿ ಜೀವನದ ಕಡೆ ಮತ್ತು ಕೃಷಿಯ ಕಡೆ ಮುಖ ಮಾಡುತ್ತಾರೆ.

ಅದಕ್ಕೆ ಒಂದು ಉತ್ತಮ ಉದಾಹರಣೆಯನ್ನು ನಾನು ಈ ದಿನ ನಿಮ್ಮ ಮುಂದೆ ಇಡುತ್ತಿದ್ದೇನೆ ಈ ವ್ಯಕ್ತಿಯ ಹೆಸರು ರಾಘವೇಂದ್ರ ಇವರು ಎಂಬಿಎ ಓದಿದ್ದರೂ ಸಹ ಒಳ್ಳೆಯ ಕೆಲಸ ಇದ್ದರೂ ಸಹ ಹಳ್ಳಿ ಜೀವನದತ್ತ ಮುಖ ಮಾಡುತ್ತಾರೆ ಅದಕ್ಕೆ ಪ್ರಮುಖ ಕಾರಣವೇನೆಂದರೆ ಸಹಜ ಕೃಷಿ ಹಾಗೆಂದರೆ ಏನು ಎಂದು ತಿಳಿದುಕೊಳ್ಳೋಣ .

ಸ್ನೇಹಿತರೇ ಸಾಮಾನ್ಯವಾಗಿ ಕಾಡುಗಳಲ್ಲಿ ಇರುವ ಹಣ್ಣುಗಳು ಬಹಳ ಸಿಹಿಯಾಗಿರುತ್ತದೆ ಆದರೆ ಅವುಗಳಿಗೆ ಯಾರೂ ಕೂಡ ಗೊಬ್ಬರ ನೀರು ಕೀಟನಾಶಕಗಳನ್ನು ಸಿಂಪಡಿಸುವುದಿಲ್ಲ ಆದರೂ ಕೂಡ ಬೇರೆ ಹಣ್ಣುಗಳಿಗೆ ಹೋಲಿಸಿದರೆ ಕಾಡುಗಳಲ್ಲಿ ಬೆಳೆಯುವಂತಹ ಸಹಜವಾಗಿ ಬೆಳೆಯುವಂತಹ ಹಣ್ಣುಗಳು ಬಹಳ ರುಚಿಯಾಗಿರುತ್ತದೆ .

ಮತ್ತು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಈ ಕ್ರಮವನ್ನು ಅನುಸರಿಸಿದ ರಾಘವೇಂದ್ರ ಅವರು ತಮ್ಮ ಇಪ್ಪತ್ತೊಂದು ಎಕರೆ ಜಮೀನಿನಲ್ಲಿ ಹಲವಾರು ರೀತಿಯಾದಂತಹ ಹಣ್ಣುಗಳು ಅಂದರೆ ಸೀತಾಫಲ ಮಾವಿನ ಹಣ್ಣು ಹಲಸಿನ ಹಣ್ಣು ನೇರಳೆ ಹಣ್ಣು ಮತ್ತು ಸೌತೆಕಾಯಿ ಬದನೆಕಾಯಿ ಹೀರೇಕಾಯಿ ದ್ರಾಕ್ಷಿ ಈ ರೀತಿಯ ಅನೇಕ ಬೆಳೆಗಳನ್ನು ಬೆಳೆದಿದ್ದಾರೆ ಆದರೆ ಆ ಯಾವ ಬೆಳೆಗಳಿಗೂ ಕೂಡ ಇವರು ಗೊಬ್ಬರವನ್ನು ಹಾಕದೆ ಕೀಟನಾಶಕಗಳನ್ನು ಸಿಂಪಡಿಸದೆ .

ಮತ್ತು ಹೊಲಗಳನ್ನು ಸ್ವಚ ಮಾಡದೆ ಹಾಗೆ ಸಹಜವಾಗಿ ಕಾಡುಗಳಲ್ಲಿ ಮರಗಳು ಬೆಳೆಯುವ ರೀತಿಯಲ್ಲಿ ಬೆಳೆಸಿದ್ದಾರೆ ಅದರ ಜೊತೆಯಲ್ಲಿ ಅಲ್ಲಿನ ಬೀಜಗಳನ್ನು ಅವರೇ ಸ್ವತಃ ಹಣ್ಣುಗಳನ್ನು ತಿಂದು ಕರಗಿಸಿ ತಯಾರಿಸಿದ್ದಾರೆ ಈ ರೀತಿ ಮಾಡಿದಂತಹ ಬೀಜಗಳಿಂದ ಮರಗಳನ್ನು ಬೆಳೆಸಿದ್ದಾರೆ ಅಲ್ಲಿಯ ಫಲವು ಅತ್ಯುತ್ತಮವಾಗಿದೆ ಮತ್ತು ಅದಕ್ಕೆ ಸಿಗುವಂತಹ ಹಣವೂ ಕೂಡ ಉತ್ತಮವಾಗಿರುವುದನ್ನು ಗಮನಿಸಬಹುದಾಗಿದೆ.

ಅವರು ಬೆಳೆದಿರುವ ಈ ಬೆಳೆಗೆ ಯಾವುದೇ ರೀತಿಯ ದಂತಹ ಗೊಬ್ಬರಗಳನ್ನು ಕೂಡ ಅವರು ಇಂದಿಗೂ ಹಾಕುವುದಿಲ್ಲ ಎಂಬುದನ್ನು ಅತಿ ಮುಖ್ಯವಾಗಿ ನಾವು ಗಮನಿಸಬೇಕಾಗಿದೆ ಅದಲ್ಲದೇ ಅವರು ಬೆಳೆದಿರುವ ಭತ್ತ ಸುಮಾರು ಆರು ಅಡಿಯಷ್ಟು ಎತ್ತರವಾಗಿ ಬೆಳೆದಿದೆ .

ಅದಕ್ಕೆ ಯಾವುದೇ ರೀತಿಯಾದಂತಹ ಗೊಬ್ಬರ ನೀರಿನ ವ್ಯವಸ್ಥೆಯನ್ನು ಇವರು ಮಾಡಿರುವುದಿಲ್ಲ ಎಲ್ಲವನ್ನೂ ಕೂಡ ಸಹಜ ಕೃಷಿ ಮಾದರಿಯಲ್ಲಿ ಬೆಳೆದು ಉತ್ತಮ ಫಲವನ್ನು ಕೂಡ ಪಡೆಯುತ್ತಿದ್ದಾರೆ ಮತ್ತು ಒಳ್ಳೆಯ ಹಣವನ್ನು ಕೂಡ ಗಳಿಸುತ್ತಿದ್ದಾರೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ತಪ್ಪದೇ ನೋಡಿ ಮತ್ತು ಬೇರೆಯವರಿಗೂ ಈ ಸ್ಫೂರ್ತಿದಾಯಕ ವಾಗಿರುವ ಈ ವಿಷಯವನ್ನು ಶೇರ್ ಮಾಡಿ ಧನ್ಯವಾದಗಳು.