Categories
ಮಾಹಿತಿ ಸಂಗ್ರಹ

ನಾಯಿಗಳು ವಾಹನದ ಹಿಂದೆ ಯಾಕೆ ಓಡುತ್ತವೆ ಅಂತ ನಿಮಗೆ ಗೊತ್ತ …. ಇಲ್ಲಿದೆ ವಿಚಿತ್ರ ಮಾಹಿತಿ …

ಮಾನವನಿಗೂ ಪ್ರಾಣಿಗಳಿಗೂ ವ್ಯತ್ಯಾಸವೇನು ಅಂದರೆ ಮನುಷ್ಯ ಸಂಘ ಜೀವಿ ಅವನು ಮಾತನಾಡುವ ತನ್ನ ನೋವುಗಳನ್ನು ವ್ಯಕ್ತಪಡಿಸುವಂತಹ ಶಕ್ತಿಯನ್ನು ಹೊಂದಿದ್ದಾನೆ ಆದ್ದರಿಂದಲೇ ಅವನನ್ನು ಸಂಘಜೀವಿ ಅಂತ ಕರೆಯುತ್ತಾರೆ ಆದರೆ ಪ್ರಾಣಿಗಳು ಮೂಕ ಜೀವಿಗಳು ಅವುಗಳಿಗೆ ಆಗುತ್ತಿರುವ ನೋವುಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ,

ನಿಯತ್ತಿಗೆ ಹೆಸರಾಗಿರುವ ಪ್ರಾಣಿ ಅಂದರೆ ಅದು ನಾಯಿ ಹೌದು ಸ್ನೇಹಿತರೆ ನಿಯತ್ತಿಗೆ ಹೆಸರುವಾಸಿ ಮತ್ತು ಮನುಷ್ಯನ ಜೊತೆ ಯಾವಾಗಲೂ ಇರುವಂತಹ ಏಕೈಕ ಪ್ರಾಣಿ ಎಂದರೆ ಅದು ನಾಯಿಗಳು ನಾಯಿಗಳಿಗೆ ಒಮ್ಮೆ ಊಟ ಹಾಕಿದರೆ ಸಾಕು ಆ ವ್ಯಕ್ತಿಯನ್ನು ಅದು ಎಂದಿಗೂ ಕೂಡ ತನ್ನ ಜೀವನದಲ್ಲಿ ಮರೆಯುವುದಿಲ್ಲ ಅಷ್ಟು ನಿಯತ್ತು ಇರುತ್ತದೆ.

ನಾಯಿಗಳಲ್ಲಿ ಮತ್ತು ಸ್ನೇಹಿತರೇ ನೀವು ಗಮನಿಸಿರುತ್ತೀರಿ ನಾಯಿಗಳು ಒಮ್ಮೊಮ್ಮೆ ವಾಹನಗಳ ಹಿಂದೆ ಓಡುತ್ತಾ ಇರುತ್ತದೆ ಇದಕ್ಕೆ ಬಹಳಷ್ಟು ಕಾರಣಗಳಿವೆ ಆದರೆ ನಾವು ಅಂದುಕೊಳ್ಳುವುದು ಅದು ಕಚ್ಚಲು ಬರುತ್ತಿದೆ ಅಂತ .

ಆ ಕಾರಣಗಳು ಏನು ಅಂದರೆ ನಾಯಿಗಳು ವಾಹನಗಳ ಹಿಂದೆ ಓಡುವುದಕ್ಕೆ ನಾಲ್ಕು ಕಾರಣಗಳಿವೆ ಅವೇನೆಂದರೆ ಸ್ನೇಹಿತರೇ ನಾಯಿಗಳು ಸಾಮಾನ್ಯವಾಗಿ ಕಾರುಗಳ ಅಥವಾ ಯಾವುದೇ ವಾಹನಗಳ ಮೇಲೆ ಮೂತ್ರ ವಿಸರ್ಜನೆ ಮಾಡುವುದನ್ನು ನೀವೆಲ್ಲರೂ ನೋಡಿರುತ್ತೀರಾ ಅಲ್ವಾ ಈ ರೀತಿಯಾಗಿ ಅವುಗಳು ತಮ್ಮ ಏರಿಯಾಗಳನ್ನು ಗುರುತು ಇಟ್ಟುಕೊಂಡಿರುತ್ತದೆ.

ಹಾಗಾಗಿ ಇವುಗಳು ಆ ವಾಹನಗಳು ಏನಾದರೂ ಹೋಗುತ್ತಿದ್ದರೆ ಅದರ ಹಿಂದೆಯೇ ಓಡುತ್ತದೆ ಯಂತೆ .ಎರಡನೇ ಕಾರಣ ಏನೆಂದರೆ ಸ್ನೇಹಿತರೇ ನೀವುಗಳು ವಾಹನ ನಾಯಿ ಮರಿಗಳ ಮೇಲೆ ಅಥವಾ ನಾಯಿಗಳ ಮೇಲೆ ಹರಿಯುವುದನ್ನು ನೋಡಿರುತ್ತೀರಾ ಅಲ್ವಾ ಇದನ್ನು ಕಂಡ ನಾಯಿ ಮರಿಗಳ ತಾಯಿಯಾಗಲಿ ಅಥವಾ ಅದರ ಜೊತೆ ನಾಯಿಗಳ ಗಲಿ ಆ ಒಂದು ವಾಹನಗಳನ್ನು ಗುರುತಿನಲ್ಲಿ ಇಟ್ಟುಕೊಂಡಿರುತ್ತದೆ ಹೀಗೆ ಆ ತರಹದ ವಾಹನಗಳನ್ನು ನೋಡಿದಾಗ ಆ ವಾಹನಗಳ ಹಿಂದೆ ಓಡಿ ಹೋಗುತ್ತದೆ .

ಮೂರನೇ ಕಾರಣ ಏನೆಂದರೆ ಸ್ನೇಹಿತರ ನೀವೆಲ್ಲರೂ ನೋಡಿರುತ್ತೀರಾ ಹೆಚ್ಚಾಗಿ ನಾಯಿಗಳು ನಾಯಿ ಮರಿಗಳು ಕಾರುಗಳು ನಿಂತಿದ್ದರೆ ಅಥವಾ ದೊಡ್ಡ ದೊಡ್ಡ ವಾಹನಗಳು ನಿಂತಿದ್ದರೆ ಅದರ ಕೆಳಗೆ ಹೋಗಿ ಕುಳಿತಿರುತ್ತದೆ ಆ ಕ್ಷಣಕ್ಕೆ ಅದು ತನ್ನದೇ ಮನೆ ಎಂದ ಭಾವಿಸಿ ಇರುತ್ತದೆ ಹಾಗಾಗಿ ವಾಹನಗಳು ಹೋಗುವ ವೇಳೆ ನಾಯಿಗಳು ಅದರ ಹಿಂದೆ ಓಡಿ ಹೋಗುತ್ತದೆ .

ನಾಯಿಗಳು ಮತ್ತೊಂದು ಕಾರಣಕ್ಕೆ ವಾಹನಗಳ ಹಿಂದೆ ಓಡುತ್ತದೆ ಅದು ಯಾಕೆ ಅಂದರೆ ತನ್ನ ಯಜಮಾನನ ವಾಹನವು ಅದೇ ರೀತಿ ಇರುವುದರಿಂದ ತನ್ನ ಯಜಮಾನ ನದ್ದೇ ಕಾರು ಅಥವಾ ವಾಹನವೂ ಇರಬಹುದು ಎಂಬ ಕಾರಣಕ್ಕೋಸ್ಕರ ವಾಹನಗಳ ಹಿಂದೆ ಓಡುತ್ತದೆ . ಈ ನಾಲ್ಕು ಕಾರಣಗಳಿಂದಲೇ ನಾಯಿಗಳು ವಾಹನಗಳ ಹಿಂದೆ ಓಡುತ್ತವೆ .

ಈ ಒಂದು ನಾಯಿ ಜಾತಿ ತೋಳದ ಜಾತಿಗೆ ಸೇರಿದ ಪ್ರಾಣಿಯಾಗಿದೆ ಯಂತೆ ಆದ್ದರಿಂದಲೇ ಇವು ಬೇಟೆಯಾಡುವುದರಲ್ಲಿ ಮುಂದಿರುತ್ತದೆ ಈ ಒಂದು ಕಾರಣಕ್ಕೋಸ್ಕರ ವೂ ಕೂಡ ನಾಯಿಗಳು ವಾಹನಗಳ ಹಿಂದೆ ಓಡುತ್ತದೆ ಎಂದು ಹೇಳಬಹುದು .
ನಾಯಿಯ ಬಗ್ಗೆ ಮಾತನಾಡಬೇಕು ಅಂದರೆ ಸ್ನೇಹಿತರ ಇಂದಿನ ಕಾಲದಲ್ಲಿ ಎಷ್ಟೇ ಪ್ರೀತಿಯಿಂದ ಸಾಕಿ ಸಲುಹಿದ ವ್ಯಕ್ತಿಗಳೇ ನಮ್ಮ ಜೊತೆ ಇರುವುದಿಲ್ಲ ಆದರೆ ಪ್ರಾಣಿಗಳು ತನ್ನ ಒಡೆಯನ ನಾಯಿಗೆ ಎಷ್ಟೇ ಹೊಡೆದರೂ ಕೂಡ ಎಷ್ಟೇ ಕಷ್ಟ ಕೊಟ್ಟರೂ ಕೂಡ ಊಟ ಹಾಕಿರುವ ಒಂದು ಕಾರಣಕ್ಕೋಸ್ಕರ ತನ್ನ ಒಡೆಯನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಅಲ್ವಾ ಇಷ್ಟು ಚೆಂದ ಈ ನಾಯಿಯ ಬುದ್ದಿ .

Leave a Reply