Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮಗೆ ಆಗಾಗ ಎದೆ ಉರಿ ಬರುತ್ತಾ ಇದ್ರೆ ಹೀಗೆ ಮಾಡಿ ..! ತುಂಬಾ ಚೆನ್ನಾಗಿ ಸಮಾದಾನ ಆಗುತ್ತೆ..!

ನಮಸ್ಕಾರ ಪ್ರಿಯ ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನಾವು ಎದೆ ಉರಿ ಸಮಸ್ಯೆಯ ಪರಿಹಾರವನ್ನ ತಿಳಿಯೋಣ ನಾವು ಈಗಾಗಲೇ ಸಾಕಷ್ಟು ಮಾಹಿತಿಯಲ್ಲಿ ಎದೆ ಉರಿ ಸಮಸ್ಯೆ ಉಂಟಾಗುವುದಕ್ಕೆ ಕಾರಣವನ್ನು ಹೇಳಿದ್ದೇವೆ. ಹೌದು ಈ ಎದೆ ಉರಿ ಸಮಸ್ಯೆ ಉಂಟಾಗುವುದೇ ಅಸಿಡಿಟಿ ಸಮಸ್ಯೆಯಿಂದ ಯಾವಾಗ ನಮ್ಮ ದೇಹದಲ್ಲಿ ಅಸಿಡಿಟಿ ಹೆಚ್ಚಾಗುತ್ತದೆ ಅಂದರೆ ವಾಯುವಿನ ಸಮಸ್ಯೆ ಹೆಚ್ಚಾಗುತ್ತದೆ. ಆಗ ಎದೆ ಉರಿ ಸಮಸ್ಯೆ ಉಂಟಾಗುತ್ತದೆ ಅಥವಾ ಇನ್ನೂ ಕೆಲವೊಂದು ಬಾರಿ ಯಾವಾಗ ನಾವು ಹೆಚ್ಚಾಗಿ ಮಸಾಲಯುಕ್ತ ಪದಾರ್ಥಗಳ ಸೇವನೆ ಮಾಡಿರುತ್ತೇವೆ ಅಂತಹ ಒಂದು ಸಮಯದಲ್ಲಿಯೂ ಕೂಡ ಎದೆ ಉರಿ ಸಮಸ್ಯೆ ಉಂಟಾಗುತ್ತದೆ.

ಎದೆ ಉರಿ ಸಮಸ್ಯೆಯನ್ನು ಕೆಲವರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲಾ. ಈ ಎದೆ ಉರಿ ಸಮಸ್ಯೆ ಅನ್ನು ಹಾಗೆ ನಿರ್ಲಕ್ಷ್ಯ ಮಾಡಿ ಬಿಡುತ್ತಾರೆ. ಇನ್ನೂ ಕೆಲವೊಂದು ಬಾರಿ ಈ ಎದೆ ಉರಿ ಸಮಸ್ಯೆ ಹೆಚ್ಚಾಗಿ ಗಂಟಲು ಕೂಡ ಉರಿಯುವ ಅನುಭವ ಆಗುತ್ತದೆ. ಆಗ ನೀವು ತಕ್ಷಣವೇ ಮಾಡ ಬೇಕಾಗಿರುವ ಪರಿಹಾರ ಅಂದರೆ ಒಂದೆಡೆ ಕುಳಿತು ಹೊಟ್ಟೆ ತುಂಬ ನೀರನ್ನು ಕುಡಿಯಬೇಕು. ಹೌದು ಈ ರೀತಿ ಮಾಡುವುದರಿಂದ ಎದೆ ಉರಿ ಸಮಸ್ಯೆ ಸ್ವಲ್ಪ ಸ್ವಲ್ಪವಾಗಿ ಕಡಿಮೆ ಆಗುತ್ತಾ ಬರುತ್ತದೆ.

ಎದೆ ಉರಿ ಸಮಸ್ಯೆ ಉಂಟಾದಾಗ ತಕ್ಷಣವೇ ಮಾಡಿಕೊಳ್ಳಬಹುದಾದ ಪರಿಹಾರ ಅಂದರೆ ಕಲ್ಲುಸಕ್ಕರೆಯನ್ನು ತಿನ್ನುವುದು ಹೌದು ಕಲ್ಲುಸಕ್ಕರೆಯನ್ನು ಬಾಯಿಗೆ ಹಾಕಿ ಅದರ ರಸವನ್ನು ಚಪ್ಪರಿಸಬೇಕು ಕೂಡಲೆ ಜಗಿದು ನುಂಗುವುದಕ್ಕಿಂತ ಅದರ ರಸವನ್ನು ಅಂದರೆ ಕಲ್ಲುಸಕ್ಕರೆ ಅನ್ನು ಚಪ್ಪರಿಸ ಬೇಕು. ಈ ರೀತಿ ಮಾಡುವುದರಿಂದ ನಮ್ಮ ಬಾಯಿ ಅಲ್ಲಿ ಉಂಟಾಗುವ ಲಾಲಾರಸ ಹೊಟ್ಟೆಗೆ ಸೇರಿ ಅಸಿಡಿಟಿ ಸಮಸ್ಯೆ ಅನ್ನು ಕಡಿಮೆ ಮಾಡುತ್ತ ಬರುತ್ತದೆ.

ನೀವು ಆಚೆ ಇದ್ದರೆ ಅಲ್ಲಿ ಎಳನೀರು ದೊರೆತರೆ ಆ ಎಳನೀರನ್ನು ಕೂಡ ಸೇವಿಸಬಹುದು ಇನ್ನೂ ಮನೆಯಲ್ಲಿದ್ದರೆ ಜೀರಿಗೆ ನೀರನ್ನು ಮಾಡಿ ಕುಡಿಯ ಬಹುದು ಅಥವಾ ಒಂದು ಲೋಟ ಹಾಲಿಗೆ ಒಂದು ಚಮಚ ಧನಿಯಾ ಬೀಜವನ್ನು ಹುರಿದು ಪುಡಿ ಮಾಡಿ ಅದನ್ನು ಹಾಲಿಗೆ ಹಾಕಿ ಕುಡಿಯುವುದರಿಂದ ಎದೆ ಉರಿ ಕಡಿಮೆ ಆಗುತ್ತದೆ. ಎದೆ ಉರಿ ತುಂಬಾ ಆಗುತ್ತಿದೆ ಅನ್ನುವವರು ಒಂದು ಲೋಟ ಎಳನೀರಿಗೆ ಕೊತ್ತಂಬರಿ ಸೊಪ್ಪಿನ ರಸವನ್ನು ಮಿಶ್ರ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಇದರಿಂದ ಎದೆ ಉರಿ ಸಮಸ್ಯೆ ಹೊಟ್ಟೆ ಉರಿ ಸಮಸ್ಯೆ ಬೇಗ ಪರಿಹರ ಆಗುತ್ತಾ ಬರುತ್ತದೆ.

ಎದೆ ಉರಿ ಸಮಸ್ಯೆ ಕಾಡುತ್ತಾ ಇದೆ ಎಂದು ಅದಕ್ಕಾಗಿ ಹೆಚ್ಚು ಮಾತ್ರೆಯನ್ನು ಸೇವನೆಮಾಡುವ ರೂಢಿ ಮಾಡಿಕೊಳ್ಳಬೇಡಿ ಅದೆಷ್ಟೋ ಮನೆಮದ್ದನ್ನು ಪಾಲಿಸಿ ಇದರಿಂದ ಎದೆ ನೋವಿನ ಸಮಸ್ಯೆ ಪರಿಣಾಮಕಾರಿಯಾಗಿ ಪರಿಹಾರ ಆಗುತ್ತದೆ. ಆದರೆ ನೀವು ಈ ಎದೆ ಉರಿ ಸಮಸ್ಯೆ ಬಂದಾಗ ತಕ್ಷಣವೇ ಮಾಡಬೇಕಾಗಿರುವ ಕೆಲವೊಂದು ವಿಚಾರವನ್ನು ತಿಳಿದಿರಬೇಕು ಅಷ್ಟೆ. ಎದೆ ಉರಿ ಅಂದ ಕೂಡಲೆ ಜೀರಿಗೆಯನ್ನು ಬಾಯಿಗೆ ಹಾಕಿ ಅದರ ರಸವನ್ನು ನುಂಗಬೇಕು ಅಥವಾ ಕಲ್ಲುಸಕ್ಕರೆಯನ್ನು ತಿನ್ನುವುದು ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಎದೆ ಉರಿ ಸಮಸ್ಯೆಯಿಂದ ಬೇಗ ಶಮನವನ್ನು ಪಡೆದುಕೊಳ್ಳಬಹುದು.