Categories
ಮಾಹಿತಿ ಸಂಗ್ರಹ

ನಿಮಗೆ ಗೊತ್ತ.. ಯಾಕೆ ಎಲ್ಲ ದೇಶಗಳು ಹೆಚ್ಚಾಗಿ ಹಣವನ್ನ ಪ್ರಿಂಟ್ ಮಾಡುವುದಿಲ್ಲ.. ರೋಚಕ ಸುದ್ದಿ …

ಎಂದಾದರೂ ನೀವು ಯೋಚಿಸಿದ್ದೀರಾ ನಮ್ಮ ಭಾರತ ದೇಶದಲ್ಲಿ ಯಾಕೆ ಹೆಚ್ಚು ಹೆಚ್ಚು ಹಣವನ್ನು ಪ್ರಿಂಟ್ ಮಾಡಿ ಬಡವರಿಗೆ ಹಂಚಬಾರದು ಅಂತ ಹಾಗಾದರೆ ನೀವು ಯಾವಾಗಾದರೂ ಈ ರೀತಿ ನಿಮ್ಮನ್ನೇ ನೀವು ಪ್ರಶ್ನಿಸಿಕೊಂಡಿದ್ದಾರೆ ಅಥವಾ ನೀವು ಬೇರೆಯವರಿಗೆ ಈ ಒಂದು ಪ್ರಶ್ನೆಯನ್ನು ಕೇಳಿದರೆ ನಾವು ಈ ದಿನದ ಲೇಖನದಲ್ಲಿ ನಿಮಗೆ ನಮ್ಮಲ್ಲಿರುವಂತಹ ಸಂಶಯಕ್ಕೆ ಪರಿಹಾರವನ್ನು ನೀಡುತ್ತೇವೆ .

ಮನುಷ್ಯ ಅಂದ ಮೇಲೆ ಅವನ ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳು ಕಾಡುತ್ತಿರುತ್ತವೆ ಮತ್ತು ಬೇಡದೆ ಇರುವ ಪ್ರಶ್ನೆಗಳು ಕೆಲವೊಮ್ಮೆ ಆತನ ಮನಸ್ಸಿಗೆ ಬಂದರೆ ಇನ್ನು ಬೇಕಾಗಿರುವಂತಹ ಪ್ರಶ್ನೆಗಳು ಕೂಡ ಕೆಲವೊಮ್ಮೆ ಸಂಶಯಕ್ಕೆ ಬಂದಿರುತ್ತದೆ.

ಆದರೆ ಅವರ ಈ ಸಂಶಯಕ್ಕೆ ಉತ್ತರ ಮಾತ್ರ ದೊರೆತಿರುವುದಿಲ್ಲ ಅಂತಹ ಅನೇಕ ಪ್ರಶ್ನೆಗಳಲ್ಲಿ ಎಲ್ಲರಿಗೂ ಕೂಡ ಸಾಮಾನ್ಯವಾಗಿ ಸಂಶಯವಿರುವ ಪ್ರಶ್ನೆ ಎಂದರೆ ಅದು ಯಾಕೆ ಎಲ್ಲ ದೇಶಗಳು ಹೆಚ್ಚು ಹಣವನ್ನು ಪ್ರಿಂಟ್ ಮಾಡಿ ಬಡವರಿಗೆ ನೀಡಬಾರದು ಎಂದು .

ಒಮ್ಮೆ ಈ ರೀತಿ ಯೋಚಿಸುತ್ತಿದ್ದರೆ ನೀವು ಮತ್ತೊಂದು ರೀತಿಯಲ್ಲಿ ಯೋಚಿಸಿ ನೋಡಿ , ಭಾರತ ದೇಶ ಮಾತ್ರ ಅಲ್ಲ ಬೇರೆ ದೇಶಗಳು ಕೂಡ ಹೆಚ್ಚು ನೋಟುಗಳನ್ನು ಎಂದಿಗೂ ಕೂಡ ಪ್ರಿಂಟ್ ಮಾಡುವುದಿಲ್ಲ ಮತ್ತು ಇಡೀ ವಿಶ್ವದಲ್ಲಿ ಎರಡು ರಾಷ್ಟ್ರಗಳು ಹೆಚ್ಚು ನೋಟನ್ನು ಪ್ರಿಂಟ್ ಮಾಡಿ ಯಾವ ಪರಿಸ್ಥಿತಿಯನ್ನು ಅನುಭವಿಸಬೇಕಾಗಿತ್ತು ಅನ್ನುವುದನ್ನು ಕೂಡ ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ .

ನಮ್ಮ ದೇಶದಲ್ಲಿ ಹೆಚ್ಚು ಹಣವನ್ನು ಪ್ರಿಂಟ್ ಮಾಡಿ ಬಡವರಿಗೆ ಹಂಚಿದರೆ ಆಗ ರೂಪಾಯಿಯ ಮೌಲ್ಯ ಕಡಿಮೆಯಾಗುತ್ತದೆ ಅಂದರೆ ಹಣದುಬ್ಬರ ಅನ್ನು ಸಮಸ್ಯೆ ದೇಶದಲ್ಲಿ ತಲೆಯೆತ್ತಿ ನಿಲ್ಲುತ್ತದೆ ಆಗ ಪ್ರತಿ ವಸ್ತುಗಳ ಬೆಲೆಯೂ ಕೂಡ ಹೆಚ್ಚಾಗುತ್ತದೆ ಮತ್ತು ನೀವು ಒಂದು ಸೋಪನ್ನು ಕೊಂಡುಕೊಳ್ಳಲು ಕೂಡ ಹೆಚ್ಚು ಹಣವನ್ನು ನೀಡಬೇಕಾಗುತ್ತದೆ .

ಹೆಚ್ಚು ಹಣ ಇರುತ್ತದೆ ಬಿಡುವು ಹೆಚ್ಚು ಹಣವನ್ನು ಕೊಟ್ಟು ವಸ್ತುಗಳನ್ನು ಕೊಂಡುಕೊಳ್ಳಬಹುದು ಅನ್ನೋ ಒಂದು ಯೋಚನೆ ಮಾಡಿದರೆ , ಆಗ ಕೂಡ ಹಣದ ಮೌಲ್ಯ ಹೆಚ್ಚಾಗಿರುವ ಕಾರಣದಿಂದಾಗಿ ಮತ್ತೆ ಹಿಂದಿನ ಪರಿಸ್ಥಿತಿಯೇ ದೇಶದಲ್ಲಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .

ಆದ ಕಾರಣದಿಂದಾಗಿಯೇ ಯಾವುದೇ ದೇಶಗಳಲ್ಲಿಯೂ ಕೂಡ ಹೆಚ್ಚು ಹಣವನ್ನು ಪ್ರಿಂಟ್ ಮಾಡುವುದಿಲ್ಲ , ಇನ್ನು ಕೆಲವರು ನಮ್ಮ ಬಳಿ ಹೆಚ್ಚು ಹಣವಿದೆ ಎಂದು ಕೆಲಸ ಮಾಡದೆ ಸೋಂಬೇರಿಗಳು ಕೂಡ ಆಗಿಬಿಡುತ್ತಾರೆ ಆಗ ದೇಶಕ್ಕೆ ನಷ್ಟ ಉಂಟಾಗುವ ಸನ್ನಿವೇಶಗಳು ಹೆಚ್ಚಾಗುತ್ತದೆ .

2009 ರಲ್ಲಿ ಜಿಂಬಾಬ್ವೆ ದೇಶವು ತನ್ನ ದೇಶದಲ್ಲಿ ಹೆಚ್ಚು ಹಣವನ್ನು ಪ್ರಿಂಟ್ ಮಾಡಿ ತನ್ನ ದೇಶದ ಸಿಟಿಜನ್ಸ್ ಗಳಿಗೆ ಹಂಚಿದಾಗ ದೊಡ್ಡ ನಷ್ಟವನ್ನು ಈ ದೇಶ ಅನುಭವಿಸಬೇಕಾಯಿತು . ಜನರು ಹಣವನ್ನೇನೂ ಹೆಚ್ಚು ಹೆಚ್ಚಾಗಿ ಪಡೆದುಕೊಂಡರು ಆದರೆ ಒಂದು ಚಾಕ್ಲೆಟ್ ಕೊಂಡುಕೊಳ್ಳಲು ಕೂಡ ಚೀಲದಲ್ಲಿ ಹಣವನ್ನು ತೆಗೆದುಕೊಂಡು ಹೋಗಬೇಕಾಗೊ ಪರಿಸ್ಥಿತಿ ಬಂದುಬಿಟ್ಟಿತ್ತು .

ಈ ಪರಿಸ್ಥಿತಿಯಲ್ಲಿ ಜಿಂಬಾಬ್ವೆ ದೇಶವು ಇನ್ನೂ ಹೆಚ್ಚು ಹೆಚ್ಚು ಕರೆನ್ಸಿಯನ್ನು ಪ್ರಿಂಟ್ ಮಾಡೋ ಅವಶ್ಯಕತೆ ಉಂಟಾಯಿತು , ಅಂದಿನ ಪರಿಸ್ಥಿತಿಯಲ್ಲಿ ಮತ್ತು ಆ ವರ್ಷದಲ್ಲಿ ಜಿಂಬಾಬ್ವೆ ದೇಶವು ಟ್ರಿಲಿಯನ್ ಡಾಲರ್ಸ್ ಅಷ್ಟು ನೋಟನ್ನು ಪ್ರಿಂಟ್ ಮಾಡಬೇಕಾಯಿತು .
2014 ನೇ ಇಸವಿಯಲ್ಲಿ ಭಾರತದ ರೂಪಾಯಿಯ ಮೌಲ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು ಐದು ಪರ್ಸೆಂಟ್ ಅಷ್ಟು ಇತ್ತು ಮತ್ತು ಅದರ ಮುಂದಿನ ವರ್ಷ ರೂಪಾಯಿಯ ಮೊತ್ತ ಸುಮಾರು ಒಂದು ರಷ್ಟು ಇಳಿಕೆಯಾಗಿತ್ತು .

ಈ ರೀತಿ ಏರ್ ಇಳಿಕೆಯಾದರೆ ಯಾವುದೇ ಸಮಸ್ಯೆಯೂ ದೇಶದಲ್ಲಿ ಉಂಟಾಗುವುದಿಲ್ಲ ಆದರೆ ಹೆಚ್ಚು ಹಣವನ್ನು ಪ್ರಿಂಟ್ ಮಾಡಿ ಜನರಿಗೆ ನೀಡಿದರೆ ಹಣದುಬ್ಬರ ಸಮಸ್ಯೆಯೂ ದೇಶದಲ್ಲಿ ಹೆಚ್ಚಾಗಿ ಜನರು ಮತ್ತು ಇದರ ಜೊತೆಗೆ ಸರ್ಕಾರವೂ ಕೂಡ ಹೆಚ್ಚು ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗುವ ಪರಿಸ್ಥಿತಿ ಬಂದುಬಿಡುತ್ತದೆ . ಈ ಕಾರಣದಿಂದಾಗಿಯೇ ಯಾವುದೇ ದೇಶಗಳಲ್ಲಾಗಲಿ ಹೆಚ್ಚು ಹೆಚ್ಚು ಹಣವನ್ನು ಪ್ರಿಂಟ್ ಮಾಡಲು ದೇಶದ ಸರ್ಕಾರ ಮುಂದಾಗುವುದಿಲ್ಲ .