Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮಗೆ ಮೂತ್ರ ಉರಿ ಆಗುವ ಸಮಸ್ಸೆ ಇದ್ದರೆ ಈ ಉಪಾಯ ಮಾಡಿ ನೋಡಿ ..! ಎಲ್ಲ ನಿವಾರಣೆ ಆಗುತ್ತೆ ..!

ಹಿತ್ತಲ ಗಿಡದಿಂದ ಇಂದಿನ ಮಾಹಿತಿಯಲ್ಲಿ ಮನೆ ಮದ್ದನ್ನು ಮಾಡೊದನ್ನು ತಿಳಿಯೋಣ. ಈ ಮನೆಮದ್ದು ಯಾವುದಕ್ಕಾಗಿ ಅಂದರೆ ಉರಿಮೂತ್ರ ಸಮಸ್ಯೆಗೆ. ಹೌದು ಉರಿಮೂತ್ರ ಸಮಸ್ಯೆ ಎಂಬುದು ಸಾಕಷ್ಟು ಜನರಿಗೆ ಕಾಡುತ್ತಾ ಇರುತ್ತದೆ. ಅದಕ್ಕಾಗಿ ಮಾತ್ರೆಗಳ ಪ್ರಯೋಜನವನ್ನು ನೀವು ಮಾಡುತ್ತಾ ಬಂದರೆ ಈ ಉರಿಮೂತ್ರ ಸಮಸ್ಯೆ ಎಂಬುದು ಇನ್ನೂ ಹೆಚ್ಚುವ ಸಾಧ್ಯತೆ ಇರುತ್ತದೆ. ಆದಕಾರಣ ಉರಿಮೂತ್ರ ಸಮಸ್ಯೆಗೆ ಹಿತ್ತಲ ಗಿಡದಿಂದ ಒಂದು ಮದ್ದನ್ನು ಮಾಡಿ. ಇದಕ್ಕಾಗಿ ಬೇಕಾಗಿರುವುದು ಮುಂಡಿ ದಿಂಡು, ಹೌದು ಇದು ಕೂಡ ಹಿತ್ತಲಿನಲ್ಲಿ ಬೆಳೆಯುವ ಒಂದು ಗಿಡ ಆಗಿರುತ್ತದೆ. ಹಳ್ಳಿ ಮಂದಿಗೆ ಇದರ ಬಗ್ಗೆ ತಿಳಿದಿರುತ್ತದೆ. ಈ ಮುಂಡಿ ದಿಂಡು ಕೇವಲ ಉರಿಮೂತ್ರ ಸಮಸ್ಯೆಗೆ ಮಾತ್ರವಲ್ಲ ಶೀತದ ಸಮಸ್ಯೆಗೆ ಕೂಡ ಪರಿಹಾರವನ್ನು ನೀಡುತ್ತದೆ.

ಮುಂಡಿ ಹಿಂಡು ಇದನ್ನು ಮೊದಲು ತೆಗೆದು ಕೊಂಡು ಇದರ ಸಿಪ್ಪೆಯನ್ನು ತೆಗೆದು ಆ ದಿಂಡನ್ನು ಮಾತ್ರ ತೆಗೆದುಕೊಳ್ಳಬೇಕು. ಈ ದಿಂಡನ್ನು ಮೊದಲು ಸ್ವಚ್ಛಪಡಿಸಿ ಇಟ್ಟುಕೊಳ್ಳಿ ನಂತರ ಈ ದಿಂಡಿನ ಸಹಾಯದಿಂದ ನಾವು ಕಷಾಯವನ್ನು ಮಾಡಬೇಕು ಇದರ ಜೊತೆಗೆ ನಾವು ಬಳಕೆ ಮಾಡಬೇಕಾಗಿರುವುದು ಮೆಣಸಿನ ಕಾಳು. ಈ ಕರಿಮೆಣಸಿನಕಾಳು ಶೀತದ ಸಮಸ್ಯೆಗೆ ಬೇಗ ಪರಿಹಾರವನ್ನು ನೀಡುತ್ತದೆ. ಹೇಗೆಂದರೆ ಈ ಕರಿಮೆಣಸಿನ ಕಾಳಿನಲ್ಲಿರುವ ಪೋಷಕಾಂಶವು ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುವ ಮುಖಾಂತರ ಈ ಶೀತದ ಸಮಸ್ಯೆಯನ್ನು ಪರಿಹಾರ ಮಾಡುವುದರ ಜೊತೆಗೆ, ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ.

ಮೊದಲಿಗೆ 1ಲೋಟ ನೀರನ್ನು ತೆಗೆದುಕೊಂಡು ಆ ನೀರಿಗೆ ಎ ದಿಂಡನ್ನು ಆಕೆ ಒಮ್ಮೆಲೆ ನೀರನ್ನು ಕುದಿಸಬೇಕು ನಂತರ ಕುಟ್ಟಾಣಿಯ ಸಹಾಯ ದಿಂದ ನಾಲ್ಕೈದು ಕರಿಮೆಣಸಿನ ಕಾಳಗಳನ್ನು ಕುಟ್ಟಿ ಪುಡಿ ಮಾಡಿ, ನಂತರ ಕುದಿಯುತ್ತ ಇರುವ ನೀರಿಗೆ ಹಾಕಿ ಮತ್ತೊಮ್ಮೆ ನೀರನ್ನು ಕುದಿಸಬೇಕು. ಒಂದು ಲೋಟ ನೀರು ಅರ್ಧ ಲೋಟ ಆಗುವ ವರೆಗೂ ಈ ನೀರನ್ನು ಕುದಿಸಬೇಕು. ನಂತರ ಕಷಾಯವನ್ನು ಶೋಧಿಸಿ ಈ ಕಷಾಯವನ್ನು ನೀವು ಬೆಳಗಿನ ಸಮಯದಲ್ಲಿ ಸೇವಿಸಬಹುದು ಅಥವಾ ಮಲಗುವ ಮುನ್ನ ಬೇಕಾದರೂ ಸೇವಿಸಿ ಮಲಗಬಹುದು. ಇದರ ಜೊತೆಗೆ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ ಮತ್ತು ನೀವು ಇದನ್ನು ರಾತ್ರಿ ಸಮಯದಲ್ಲಿ ಈ ಕಷಾಯವನ್ನು ಕುಡಿದರೆ ತುಂಬಾ ಪ್ರಯೋಜನಕಾರಿ ಬೇಗ ಉರಿಮೂತ್ರ ಸಮಸ್ಯೆ ಪರಿಹಾರ ಆಗುತ್ತದೆ.

ಈ ಪರಿಹಾರವನ್ನು ಮಾಡಿಕೊಳ್ಳುವುದರ ಜೊತೆಗೆ ದಿನಕ್ಕೆ ನಾಲ್ಕು ಲೀಟರ್ ನಷ್ಟು ನೀರನ್ನು ಸೇವಿಸಿ ಮತ್ತು ಉರಿಮೂತ್ರ ಸಮಸ್ಯೆ ಉಂಟಾದಾಗ ನೀರಿಗೆ ಜೀರಿಗೆ ಕಾಳು ಮತ್ತು ತುಳಸಿ ಎಲೆಗಳನ್ನು ಹಾಕಿ ಅರ್ಧ ಗಂಟೆಗಳ ಕಾಲ ಹಾಗೆ ನೆನೆಯಲು ಬಿಟ್ಟು, ನಂತರ ಈ ನೀರನ್ನು ದಿನದಲ್ಲಿ ಒಂದು ಸೇವಿಸುತ್ತಾ ಬನ್ನಿ ಇದರಿಂದ ದೇಹದಲ್ಲಿ ಇರುವ ಕಲ್ಮಶ ಹೊರಹೋಗಿ ಉರಿಮೂತ್ರ ಸಮಸ್ಯೆ ಪರಿಹಾರ ಆಗುತ್ತದೆ.

ಈ ರೀತಿಯಾಗಿ ಉರಿಮೂತ್ರ ಸಮಸ್ಯೆಗೆ ಈ ಒಂದು ಮನೆ ಮದ್ದನ್ನು ನೀವು ಮಾಡಿಕೊಳ್ಳಿ ಸಮಸ್ಯೆ ಬೇಗ ಪರಿಹಾರ ಆಗುತ್ತದೆ. ಪದೇಪದೇ ಉರಿಮೂತ್ರ ಸಮಸ್ಯೆ ಕಾಡುತ್ತಿದ್ದರೆ ನೀವು ಇದನ್ನು ವಾರಕ್ಕೆ ಒಮ್ಮೆ ಕುಡಿಯುತ್ತಲೆ ಇರಿ. ಇದರಿಂದ ಉರಿಮೂತ್ರ ಸಮಸ್ಯೆ ಮುಂದಿನ ದಿನಗಳಲ್ಲಿ ಎದುರಾಗುವುದಿಲ್ಲಾ. ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದ.