Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಅತ್ಯುತ್ತಮ ಆರೋಗ್ಯಕ್ಕೆ ಈ ಐದು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ..!

ದೇಹದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಈ ಕೆಲವೊಂದು ತರಕಾರಿಗಳನ್ನ ನೀವು ಕಡ್ಡಾಯವಾಗಿ ಸೇವಿಸಲೇಬೇಕಾಗುತ್ತದೆ. ಹೌದು ಹಾಗಾದರೆ ನಮಗೆ ಈ ಉತ್ಕರ್ಷಣ ನಿರೋಧಕ ಶಕ್ತಿ ಮತ್ತು ರೋಗನಿರೋಧಕ ಶಕ್ತಿ ಯಾಕೆ ಅವಶ್ಯಕ ಅನ್ನೊ ಒಂದು ಪ್ರಶ್ನೆಗೆ ಉತ್ತರವನ್ನು ನಾವು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.

ಇದರ ಜೊತೆಗೆ ನಾವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಸೇವಿಸಲೇಬೇಕಾದ ಕೆಲವೊಂದು ತರಕಾರಿಗಳನ್ನು ಕೂಡ ನಿಮಗೆ ತಿಳಿಸುತ್ತೇವೆ. ಈ ಕೆಲವೊಂದು ಆಹಾರಗಳನ್ನು ಮತ್ತು ತರಕಾರಿಗಳನ್ನು ನೀವು ಸೇವಿಸುತ್ತಾ ಬಂದರೆ ಸಾಕು ನಿಮಗೆ ಉತ್ತಮ ಆರೋಗ್ಯದೊಂದಿಗೆ ಉತ್ತಮ ಉತ್ಕರ್ಷಣ ನಿರೋಧಕ ಶಕ್ತಿ ಮತ್ತು ರೋಗನಿರೋಧಕ ಶಕ್ತಿ ಲಭಿಸುತ್ತದೆ.

ಬೆಳ್ಳುಳ್ಳಿ ಎಸಳು :
ಬೆಳ್ಳುಳ್ಳಿಯನ್ನು ನೀವು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಕೆ ಮಾಡಿರುತ್ತೀರ. ಆದರೆ ಪ್ರತಿದಿನ ನೀವು ಒಂದೆ ಒಂದು ಬೆಳ್ಳುಳ್ಳಿ ಎಸಳುಗಳನ್ನು ಹಸಿಯಾಗಿ ಸೇವಿಸಿ. ಇದರಿಂದ ನಿಮಗೆ ಒಳ್ಳೆಯ ಆರೋಗ್ಯ ಲಭಿಸುತ್ತದೆ. ಅಷ್ಟೇ ಅಲ್ಲದೆ ಈ ಬೆಳ್ಳುಳ್ಳಿಯನ್ನು ಮುಖ್ಯ ಔಷಧಿ ಅಂತ ಕೂಡ ಕರೀತಾರೆ. ಇದರಲ್ಲಿರುವ ಅಲೈಸಿನ್ ಎಂಬ ಉತ್ತಮವಾದ ಅಂಶ ಶುಗರ್ ಬರದೆ ಇರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ನಮ್ಮ ದೇಹದಲ್ಲಿರುವ ಎಲ್ ಡಿಎಲ್ ಕೊಲೆಸ್ಟ್ರಾಲ್ ಅಂಶವನ್ನು ಟ್ರೈಗ್ಲಿಸರೈಡ್ ಅಂಶವನ್ನು ಕಡಿಮೆ ಮಾಡಿ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ನಮಗೆ ನೀಡುತ್ತದೆ ಈ ಬೆಳ್ಳುಳ್ಳಿ.

ಪಾಲಕ್ :
ಪಾಲಕ್ ಸೊಪ್ಪನ್ನು ನಾವು ಪ್ರತಿದಿನ ಸೇವಿಸಬೇಕು ಇದರಿಂದ ನಮ್ಮ ದೇಹಕ್ಕೆ ಬೀಟಾ ಕೆರೋಟಿನ್ ಲುಟೀನ್ ಇಂತಹ ಅನೇಕ ಉಪಯುಕ್ತ ಅಂಶಗಳು ದೊರೆಯುತ್ತವೆ, ಇದರಿಂದ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರ ಜೊತೆಗೆ ವಿಟಮಿನ್ ಎ ಕೂಡ ನಮಗೆ ಲಭಿಸುತ್ತದೆ ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಅಂಶ ಕೂಡ ಇದ್ದು ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಅಷ್ಟೇ ಅಲ್ಲ ಸುಮಾರು ಐವತ್ತಾರು ಪ್ರತಿಶತದಷ್ಟು ವಿಟಮಿನ್ ಎ ಅಂಶವನ್ನು ನಾವು ಪಾಲಕ್ ಸೊಪ್ಪಿನಿಂದ ಪಡೆದುಕೊಳ್ಳಬಹುದು.

ಬ್ರೊಕೋಲಿ :
ಈ ಕೋಸುಗಡ್ಡೆಯನ್ನು ತಿನ್ನುವುದ್ರಿಂದ ಆರೋಗ್ಯಕ್ಕೆ ಬಹಳ ಲಾಭವಿದೆ ಹೇಗೆ ಎಂದರೆ ನಾವು ಎ ಬ್ರೊಕೋಲಿ ಅನ್ನ ತಿನ್ನುವುದರಿಂದ ಇದರಲ್ಲಿ ಇರುವ ಎರಡು ಸಂಯುಕ್ತ ಅಂಶವು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಈ ಬ್ರಕೋಲಿಯಲ್ಲಿ ಸುಮಾರು ನೂರ ಹದಿನಾರು ಪ್ರತಿಶತದಷ್ಟು ವಿಟಮಿನ್ ಕೆ ಅಂಶ ನೂರ ಮೂವತ್ತ್ 5ಪ್ರತಿಶತದಷ್ಟು ವಿಟಮಿನ್ ಸಿ ಅಂಶ ಹಾಗೆ ಪ್ರೊಲೈಟ್ ಮತ್ತು ಪೊಟಾಶಿಯಂ ಅಂಶ ಕೂಡ ಬ್ರಕೋಲಿಯಲ್ಲಿದೆ. ಇದು ಆರೋಗ್ಯಕ್ಕೆ ಒಳ್ಳೆಯ ಲಾಭ ಇದರಿಂದ ದೊರೆಯುತ್ತದೆ.

ಹಸಿ ಬಟಾಣಿ :
ಇದರಲ್ಲಿ ಹೆಚ್ಚಿನಂಶದ ಕ್ಯಾಲೋರಿಯಿದ್ದು ಇದರ ಜೊತೆಗೆ ಕ್ಯಾನ್ಸರ್ ಅನ್ನು ವಿರೋಧಿಸುವ ಅಂಶ ಕೂಡ ಬಟಾಣಿ ಕಾಳಿನಲ್ಲಿ ಇದ್ದು ಉತ್ತಮವಾದ ನಾರಿನಂಶ ಕೂಡ ಇದೆ ಈ ಒಂದು ಬಟಾಣಿ ಕಾಳಿನಲ್ಲಿದೆ.

ಸಿಹಿ ಗೆಣಸು :
ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಬೀಟಾ ಕೆರೋಟಿನ್ ಫೈಬರ್ ಪ್ರೊಟೀನ್ ಪೊಟ್ಯಾಶಿಯಂ ವಿಟಮಿನ್ ಸಿ ಅಂಶ ಎಲ್ಲವೂ ಕೂಡ ಆಯಿತು ಇದು ಕೂಡ ಉತ್ತಮ ಆರೋಗ್ಯವನ್ನು ನಮಗೆ ನೀಡುತ್ತದೆ.

ಈ ದಿನ ತಿಳಿಸಿದಂತ ಕೆಲವೊಂದು ತರಕಾರಿಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಪ್ರತಿ ದಿನ ತಿನ್ನುವುದಕ್ಕೆ ಸಾಧ್ಯವಾಗಿಲ್ಲ ಅಂದರೂ ತಪ್ಪದೇ ಈ ತರಕಾರಿಗಳನ್ನು ಸೇವಿಸುವುದನ್ನು ಮಾತ್ರ ಮರೆಯದಿರಿ ಶುಭ ದಿನ.