Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಕಾಲಿನಲ್ಲಿ ಯಾವಾಗಾದ್ರೂ ಹೀಗೆ ಆಗಿದೆಯೇ ಹಾಗಾದರೆ ಈ ಮನೆಮದ್ದು ಮಾಡಿ ನೋಡಿ ಸಾಕು ..!

ನಮಸ್ಕಾರ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಕಾಲಿನಲ್ಲಿ ಆಣಿ ಆಗಿರುವ ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತೇನೆ. ಕೆಲವರಿಗೆ ಆಣಿ ಅಂದರೆ ಗೊತ್ತಿರುವುದಿಲ್ಲಾ. ಆದರೆ ಆ ಸಮಸ್ಯೆ ಯಿಂದ ಬಳಲಿರುತ್ತಾರೆ. ಆ ಸಮಸ್ಯೆ ಯಾವುದು ಅಂದರೆ ಕಾಲಿನಲ್ಲಿ ಕೆಂಪು ಬಣ್ಣದ ಗಾಯದ ರೀತಿ ಆಗಿರುತ್ತದೆ ಇದು ಕಾಲಿಗೆ ಮುಳ್ಳು ಹೊಕ್ಕಿದರೆ ಹೇಗೆ ನೋವನ್ನು ನೀಡುತ್ತಾ ಇರುತ್ತದೆ ಚುಚ್ಚುತ್ತಲೆ ಇರುತ್ತದೆ ಅದೆ ರೀತಿಯಲ್ಲಿ ಅನುಭವವನ್ನು ನೀಡುತ್ತದೆ.

ಇದನ್ನು ನೀವು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ಆಪರೇಶನ್ ಮಾಡಿಸಿಕೊಳ್ಳಬೇಕು ಅಂತಹ ಒಂದು ಮಟ್ಟಕ್ಕೆ ತಲುಪುತ್ತದೆ. ಆದಕಾರಣ ನಿಮಗೆ ಕಾಲಿನಲ್ಲಿ ಗಾಯಗಳಾಗಿದ್ದು ಅದು ನಡೆಯುವಾಗ ಚುಚ್ಚುತ್ತಾ ಇದ್ದರೆ ತುಂಬ ನೋವನ್ನು ನೀಡುತ್ತಾ ಇದ್ದರೆ ಮತ್ತು ಒಂದೆಡೆ ಆಗಿ ಮತ್ತೊಂದು ಕಡೆ ಈಗ ಆಗುತ್ತಿದೆ ಅಂದರೆ ಅದನ್ನು ನಿರ್ಲಕ್ಷ್ಯ ಮಾಡದೆ ಇರುವುದೇ ಒಳ್ಳೆಯದು.

ಯಾಕೆಂದರೆ ಇದನ್ನು ನಿರ್ಲಕ್ಷ್ಯ ಮಾಡಿದ್ದೇ ಆದಲ್ಲಿ ಈ ಆಣಿ ಎಂಬುದು ಕಾಲಿನ ಪೂರ್ತಿ ಆಗುತ್ತದೆ. ಆದಕಾರಣ ಕೂಡಲೇ ಅದನ್ನು ಮನೆ ಮದ್ದಿನ ಮುಖಾಂತರ ಅಥವಾ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿ ಇರುತ್ತದೆ. ಈ ಆಣಿಗೆ ಮನೆ ಮದ್ದು ತಿಳಿಸಿಕೊಡುತ್ತೇವೆ ತುಂಬಾ ಸುಲಭವಾಗಿರುತ್ತದೆ ಒಮ್ಮೆ ಈ ಆಣಿ ಕಾಣಿಸಿಕೊಂಡರೆ ಅದಕ್ಕೆ ಕೂಡಲೇ ಪರಿಹಾರವನ್ನು ಮಾಡಿಬಿಡಿ. ಸಣ್ಣದಾಗಿ ಇದ್ದಾಗಲೆ ಯಾವುದೇ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು ಮತ್ತು ಆ ಸಮಸ್ಯೆಯು ಬೇಗ ಪರಿಹಾರ ಆಗುತ್ತದೆ. ಈಗ ಆಣಿಗೆ ಮನೆ ಮದ್ದು ಇದಕ್ಕಾಗಿ ಬೇಕಾಗಿರುವುದು ಹೆನ್ನಾ ಪೌಡರ್ ಅಂದರೆ ಮೆಹಂದಿ ಪುಡಿ. ನೀವು ಗ್ರಂಥಿಗೆ ಅಂಗಡಿಗೆ ಹೋಗಿ ಶುದ್ಧವಾದ ಈ ಮೆಹಂದಿ ಪುಡಿಯನ್ನು ತೆಗೆದುಕೊಳ್ಳಿ.

ನಂತರ ಬೇಕಾಗಿರುವುದು ಶುದ್ಧ ಅರಿಶಿನ ಅಥವಾ ಕಸ್ತೂರಿ ಹಳದಿಯನ್ನು ಬೇಕಾದರೆ ನೀವು ಬಳಸಬಹುದು ಈ 2ಪದಾರ್ಥಗಳನ್ನು ಯಾವ ಪ್ರಮಾಣದಲ್ಲಿ ತಗೆದು ಕೊಳ್ಳಬೇಕು ಅಂದರೆ 2ಚಮಚ ಮೆಹಂದಿ ಪುಡಿಗೆ ಅಂದರೆ ಹೆನ್ನಾ ಪುಡಿಗೆ ಒಂದು ಚಮಚ ಕಸ್ತೂರಿ ಹಳದಿಯನ್ನು ಬೆರೆಸಬೇಕು. ನಂತರ ಇದನ್ನು ಪೇಸ್ಟ್ ಮಾಡಿ, ಅಂದರೆ ನೀರನ್ನು ಬಳಸಿ ಪೇಸ್ಟ್ ಮಾಡಿ ಉಂಡೆ ರೀತಿ ಮಾಡಿ ಅದನ್ನು ಕಾಲಿನ ಭಾಗದಲ್ಲಿ ಅಣಿಯಾಗಿರುವ ಜಾಗಕ್ಕೆ ಇಟ್ಟು ಒಂದು ಪ್ಲಾಸ್ಟರ್ ಅನ್ನು ಹಾಕಿ.

ಯಾಕೆ ಅಂದರೆ ಗಾಯದ ಭಾಗದಲ್ಲಿ ಈ ಪೇಸ್ಟ್ ಅನ್ನು ಲೇಪನ ಮಾಡಿದಾಗ ಅದು ಒಣಗಿದ ಮೇಲೆ ಉದುರಿ ಹೋಗುವ ಸಾಧ್ಯತೆ ಇರುತ್ತದೆ. ಈ ಪ್ಲಾಸ್ಟರ್ ಹಾಕಿದರೆ ಅದು ಅಷ್ಟು ಬೇಗ ಉದುರುವುದಿಲ್ಲ. ಇನ್ನು ಈ ಪರಿಹಾರವನ್ನು ನೀವು ರಾತ್ರಿ ಸಮಯದಲ್ಲಿ ಮಾಡಿಕೊಂಡರೆ ತುಂಬಾ ಉತ್ತಮ. ಯಾಕೆಂದರೆ ರಾತ್ರಿ ಸಮಯದಲ್ಲಿ ಮಲಗಿರುವಾಗ ಅಷ್ಟೂ ಕಾಲಿಗೆ ಒತ್ತಡ ಇರುವುದಿಲ್ಲ ಮತ್ತು ನಡೆದಾಡುವುದಿಲ್ಲ ಕೂಡ. ಆದಕಾರಣ ನೀವು ಈ ಮನೆಮದ್ದನ್ನು ಈ ವಿಧಾನದಲ್ಲಿ ಬಳಸಿ ಅಂದರೆ ರಾತ್ರಿ ಸಮಯದಲ್ಲಿ ಬಳಸಿ ಬೆಳಿಗ್ಗೆ ಅದನ್ನು ಸ್ವಚ್ಛಗೊಳಿಸಿ ಇದೇ ರೀತಿ ನೀವು ಪ್ರತಿದಿನ ಮಾಡಿಕೊಂಡು ಬಂದದ್ದೇ ಆದಲ್ಲಿ ಆಣಿ ಅನ್ನುವ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ಇದಕ್ಕಾಗಿ ಚಿಕಿತ್ಸೆಯ ಅಗತ್ಯೆ ಬರುವುದಿಲ್ಲ.