Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಕೂದಲು ನಿಮ್ಮ ಕಾಲಿನ ವರೆಗೂ ನೀವು ಬೇಡ ಅಂದ್ರು ಹುಲ್ಲಿನ ಹಾಗೆ ಬೆಳೆಯುತ್ತೆ ಇದನ್ನ ಹಚ್ಚಿದ್ರೆ …!

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿ ಅಲ್ಲಿ ತಿಳಿದುಕೊಳ್ಳೋಣ, ಹೇಗೆ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಹೇರ್ ಪ್ಯಾಕ್ ಮಾಡಿಕೊಳ್ಳುವುದು ಅಂತ, ಹೌದು ಈ ಹೇರ್ಪ್ಯಾಕ್ ಮಾಡಿಕೊಳ್ಳುವುದಕ್ಕಾಗಿ ನಾವು ಬಳಸುತ್ತಿರುವುದು ಕೇವಲ ಎರಡು ಪದಾರ್ಥ ಮಾತ್ರ, ಒಂದು ದಾಸವಾಳದ ಎಲೆಗಳು ಮತ್ತು ಮೆಂತೆ ಕಾಳು. ಈ ಎರಡೆ ಪದಾರ್ಥಗಳನ್ನು ಬಳಸಿ ನೀವು ಈ ಹೇರ್ ಪ್ಯಾಕ್ ಅನ್ನು ಮಾಡಿಕೊಳ್ಳಿ.

ಹಾಗೆ ಇದೇನು ಅಷ್ಟು ಖರ್ಚು ಮಾಡಿ ಕೊಂಡುಕೊಂಡು ಬರುವಂತಹ ಪದಾರ್ಥಗಳೆ ಅಲ್ಲ. ನೈಸರ್ಗಿಕವಾಗಿ ದೊರೆಯುವ ದಾಸವಾಳದ ಎಲೆ, ನೀವು ಬಿಳಿ ಹೂವಿನ ದಾಸವಾಳದ ಎಲೆ ಅನ್ನು ಆದರು ತೆಗೆದುಕೊಳ್ಳಿ ಅಥವಾ ಕೆಂಪು ಹೂವು ಬಿಡುವ ದಾಸವಾಳದ ಎಲೆಗಳನ್ನಾದರು ತೆಗೆದುಕೊಳ್ಳಿ, ಎರಡೂ ಕೂಡ ನಿಮ್ಮ ಕೂದಲುಗಳನ್ನು ಉತ್ತಮವಾಗಿ ಪೋಷಣೆ ಮಾಡುತ್ತದೆ.

ಮೊದಲಿಗೆ ದಾಸವಾಳದ ಎಲೆಗಳನ್ನು ಚೆನ್ನಾಗಿ ಸ್ವಚ್ಛ ಪಡಿಸಿ ನಂತರ ನೀವು ಈ ಹೇರ್ ಪ್ಯಾಕ್ ಅನ್ನ ಮಾಡುವುದಕ್ಕಾಗಿ, ಒಂದು ದಿನದ ಮುಂಚೆಯೆ ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಸಿ ಇಡಬೇಕು.ನೀವು ಈ ಹೇರ್ ಪ್ಯಾಕ್ ಹಾಕಿ ಎಂಟರಿಂದ ಹತ್ತು ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಎರಡು ಚಮಚ ಮೆಂತೆ ಕಾಳುಗಳನ್ನು ತೆಗೆದುಕೊಳ್ಳಿ.

ಈ ಹೇರ್ ಪ್ಯಾಕ್ ಮಾಡುವಾಗ ನೀವು ದಾಸವಾಳದ ಎಳೆಯೊಂದಿಗೆ ಮೆಂತೆಕಾಳುಗಳನ್ನು ತೆಗೆದುಕೊಳ್ಳಿ ಹಾಗೆ ಮೆಂತೆ ನೆನೆಸುತ್ತ ನೀರನ್ನೇ ಬಳಸಿ ಇದನ್ನು ಪೇಸ್ಟ್ ಮಾಡಿಕೊಳ್ಳಿ ಹೆಚ್ಚು ನೀರಾಗಿ ಪೇಸ್ಟ್ ಮಾಡಿಕೊಳ್ಳಬೇಡಿ, ಆದಷ್ಟು ಗಟ್ಟಿಯಾಗಿಯೇ ಕೂದಲಿನಲ್ಲಿ ಕೂರಬೇಕು ಆ ಹದದಲ್ಲಿ ಈ ಪ್ಯಾಕ್ ಅನ್ನ ಮಾಡಿಕೊಳ್ಳಿ.

ಮತ್ತೊಂದು ವಿಚಾರ ಏನು ಅಂದರೆ ಎಷ್ಟೋ ಜನರು ಮೆಂತೆಕಾಳುಗಳನ್ನು ಪೇಸ್ಟ್ ಮಾಡಿ ಕೂದಲಿಗೆ ಲೇಪಿಸಿ ಕೊಂಡಾಗ ಆ ಮೆಂತೆ ಕಾಳುಗಳ ಹೊಟ್ಟು ತಲೆಯಲ್ಲಿಯೇ ಕೋರುತ್ತದೆ ಅನ್ನೋ ಒಂದು ಕಂಪ್ಲೇಂಟನ್ನು ಹೇಳಿ ಕೇಳ್ತಾರೆ, ಆದರೆ ಈ ಪ್ಯಾಕಿಗೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ನೀವೇನಾದರೂ ಪ್ಯಾಕ್ ಹಾಕಿಕೊಂಡರೆ, ಇದರಿಂದ ಕೂದಲಿನಲ್ಲಿ ಹೊಟ್ಟು ಉಳಿಯುವುದಿಲ್ಲ. ನೀವು ಸ್ವಚ್ಛ ಪಡಿಸಿಕೊಂಡಾಗಲೆ, ಈ ಮೆಂತೆ ಕಾಳುಗಳ ಹೊಟ್ಟು ಸ್ವಚ್ಛವಾಗಿ ಬಿಡುತ್ತದೆ.

ಪರಿಣಾಮಕಾರಿಯಾದ ಫಲಿತಾಂಶಕ್ಕಾಗಿ ಈ ಹೇರ್ ಪ್ಯಾಕ್ ಅನ್ನು ನೀವು ವಾರದಲ್ಲಿ ಎರಡು ಬಾರಿ ಹಾಕಿಕೊಳ್ಳಬಹುದು. ಹಾಗೆ ನೀವು ವಾರದಲ್ಲಿ ಮೂರು ಬಾರಿಯಾದರೂ ಕೂದಲಿಗೆ ಎಣ್ಣೆಯನ್ನು ಅಂದರೆ ಕೊಬ್ಬರಿ ಎಣ್ಣೆಯನ್ನು ಬಳಸಿ ಹಾರೈಕೆ ಅನ್ನು ಮಾಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಯಾವುದೋ ಕೊಬ್ಬರಿ ಎಣ್ಣೆ ಬಳಸಿ ಕೂದಲುಗಳನ್ನು ಹಾರೈಕೆ ಮಾಡಬೇಡಿ ಇದರಿಂದ ಕೂದಲು ಉದುರುವ ಸಾಧ್ಯತೆ ಇನ್ನೂ ಹೆಚ್ಚಿರುತ್ತದೆ .

ಮತ್ತು ಕೂದಲಿಗೆ ಎಣ್ಣೆಯನ್ನೇ ಆಗಲಿ ಅಥವಾ ಹೇರ್ ಪ್ಯಾಕ್ ಅನ್ನೆ ಆಗಲಿ ಹಚ್ಚಿಕೊಳ್ಳುವಾಗ ಮೊದಲು ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ನಂತರ ಕೂದಲುಗಳಿಗೆ ಲೇಪಿಸಿಕೊಳ್ಳಿ ಹೆಚ್ಚು ಕೂದಲಿನ ಬುಡಕ್ಕೂ ಲೇಪಿಸಿಕೊಳ್ಳಬೇಕು ಅದೇ ರೀತಿಯಲ್ಲಿ ಕೂದಲಿನ ತುದಿಗೆ ಕೂಡ ಈ ಎಣ್ಣೆ ಆಗಲಿ ಹೇರ್ ಪ್ಯಾಕ್ ಆಗಲಿ ಹಚ್ಚಿಕೊಳ್ಳಬೇಕು.

ಇವನ್ನು ಮಾಹಿತಿ ನಿಮಗೆ ಉಪಯುಕ್ತವಾಗಿ ದಲ್ಲಿ ತಪ್ಪದೇ ಮಾಹಿತಿ ಲಾಕ್ ಮಾಡಿ ಹಾಗೂ ಶೇರ್ ಮಾಡಿ ಆದಷ್ಟು ಆರೋಗ್ಯಕ್ಕೆ ಆಗಲಿ ನಮ್ಮ ಸೌಂದರ್ಯ ವೃದ್ಧಿಗೆ ಆಗಲಿ ನೈಸರ್ಗಿಕವಾದ ಪದಾರ್ಥಗಳನ್ನೆ ಬಳಸಿ ಉತ್ತಮ ಜೀವನ ಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ ಎಲ್ಲರು ಆರೋಗ್ಯದಿಂದ ಇರಿ ಶುಭ ದಿನ ಧನ್ಯವಾದ.