Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಚರ್ಮ ಸುಂದರವಾಗಿ ಕಾಣಲು ಸಿಂಪಲ್ ಬ್ಯೂಟಿ ಸೂತ್ರನ ಫಾಲೋ ಮಾಡಿ..!

ವಿಟಮಿನ್ ಸಿ ಅಂಶ ಹೆಚ್ಚಾಗಿರುವಂತಹ ಪದಾರ್ಥಗಳನ್ನ ನೀವೇನದರೂ ಸೇವಿಸುತ್ತ ಬರುವುದರಿಂದ ನಿಮ್ಮ ಆರೋಗ್ಯದಲ್ಲಿ ಬಹಳ ಬದಲಾವಣೆ ಆಗುತ್ತದೆ. ಅಷ್ಟೇ ಅಲ್ಲದೆ ಈ ವಿಟಮಿನ್ ಸಿ ಅಂಶವನ್ನು ನಾವು ಹೇಗೆ ಸೇವಿಸಬೇಕು ಅಂದರೆ ಹಣ್ಣಿನ ಮುಖಾಂತರ ಸೇವಿಸಬೇಕು ಆಗಲೇ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಅಂಶಗಳು ದೊರೆಯುತ್ತದೆ. ಆರೋಗ್ಯ ಮಾತ್ರವಲ್ಲ ಚರ್ಮದ ಆರೋಗ್ಯವನ್ನು ಕೂಡ ವೃದ್ಧಿ ಮಾಡುವ,

ಅಂಶ ಈ ವಿಟಮಿನ್ ಸಿ ಅಂಶದಲ್ಲಿ ಇರುತ್ತದೆ. ಹಾಗಾದರೆ ವಿಟಮಿನ್ ಸಿ ಅಂಶ ಯಾವುದರಲ್ಲಿ ಇರುತ್ತದೆ ಅಂದರೆ ಕಿತ್ತಳೆ ಹಣ್ಣು ನಿಂಬೆ ಹಣ್ಣು ಮಾವಿನ ಹಣ್ಣು ಸೀಬೆಹಣ್ಣು ಈ ರೀತಿಯ ಹಣ್ಣುಗಳಲ್ಲಿ ಇರುತ್ತದೆ. ಇನ್ನು ಈ ವಿಟಮಿನ್ ಸಿ ಅಂಶ ಹೇರಳವಾಗಿ ಇರುವುದು ಬೆಟ್ಟದ ನೆಲ್ಲಿಕಾಯಿಯಲ್ಲಿ ಹೌದು ನೀವು ದಿನಕ್ಕೆ 1ಬೆಟ್ಟದ ನಲ್ಲಿಕಾಯಿ ಅಥವ ಸೀಬೆಹಣ್ಣಿನ ಸೇವನೆ ಮಾಡುತ್ತಾ ಬಂದರೆ ಸಾಕು ದಿನಕ್ಕೆ ಬೇಕಾಗುವಷ್ಟು ವಿಟಮಿನ್ ಸಿ ಅಂಶ ನಿಮ್ಮ ದೇಹಕ್ಕೆ ದೊರೆಯುತ್ತದೆ.

ಈ ವಿಟಮಿನ್ ಸಿ ಅಂಶ ಆ್ಯಂಟಿಆಕ್ಸಿಡೆಂಟ್ ಕೂಡ ಹೌದು ಮತ್ತು ಈ ವಿಟಮಿನ್ ಸಿ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇನ್ನು ನಮ್ಮ ದೇಹದಲ್ಲಿ ಬೇರೆ ರೀತಿಯ ವಿಟಾಮಿನ್ಸ್ ಗಳು ಅಂದರೆ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಡಿ ವಿಟಮಿನ್ ಕೆ ಇವೆಲ್ಲ ಕೂಡ ನಮ್ಮ ದೇಹದಲ್ಲಿ ಸ್ಟೋರ್ ಆಗುತ್ತದೆ, ಅಂದರೆ ನಮ್ಮ ದೇಹದಲ್ಲಿ ಸುಮಾರು ದಿನಗಳವರೆಗೂ ಸ್ಟೋರ್ ಆಗಿ ಇರುತ್ತದೆ. ಆದರೆ ಈ ವಿಟಮಿನ್ ಸಿ ಅಂಶವನ್ನು ಮಾತ್ರ ನಾವು ಪ್ರತಿದಿನ ನಮ್ಮ ದೇಹಕ್ಕೆ ನೀಡಬೇಕು ಇದು ನಮ್ಮ ದೇಹದಲ್ಲಿ ಸ್ಟೋರ್ ಆಗುವುದಿಲ್ಲ.

ಇನ್ನು ಮುಖದ ಕಾಂತಿಯನ್ನು ಹೆಚ್ಚು ಮಾಡುವುದಕ್ಕೆ ಈ ವಿಟಮಿನ್ ಸಿ ಅಂಶವನ್ನು ಹೇಗೆ ಬಳಕೆ ಮಾಡುವುದು ಅಂದರೆ ಈ ವಿಟಮಿನ್ ಸಿ ಅಂಶವು ನಿಂಬೆಹಣ್ಣಿನ ರಸದಲ್ಲಿ ಇರುತ್ತದೆ. ಈ ನಿಂಬೆ ಹಣ್ಣಿನ ರಸವನ್ನು ಅರ್ಧ ಚಮಚ ತೆಗೆದುಕೊಳ್ಳಬೇಕು ನಂತರ ಅದಕ್ಕೆ ಅರ್ಧ ಚಮಚ ಬ್ರೌನ್ ಶುಗರ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಇದೀಗ ಇದನ್ನು ಮುಖ ಮತ್ತು ಕೈಕಾಲುಗಳಿಗೆ ಲೇಪನ ಮಾಡಿಕೊಂಡು ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು ಈ ಒಂದು ಪರಿಹಾರ ನಿಮ್ಮ ತ್ವಚೆಯನ್ನು ಆಳದಿಂದ ಕ್ಲೆನ್ಸ್ ಮಾಡುತ್ತದೆ. ಹೌದು ಮತ್ತು ತ್ವಚೆಯಲ್ಲಿರುವ ಬೇಡದಿರುವ ಕಲೆ ಮತ್ತು ದೂಳಿನ ಅಂಶವನ್ನು ತೆಗೆದು ಹಾಕಲು ಈ ಒಂದು ಪರಿಹಾರ ತುಂಬ ಉಪಯುಕ್ತಕಾರಿ ಆಗಿದೆ.

ಸಿ ಜೀವಸತ್ವ ೬ಆರೋಗ್ಯಕ್ಕೆ ಎಷ್ಟು ಅವಶ್ಯಕ ಆದರೆ ಮೊದಲೇ ಹೇಳಿದಂತೆ ಇದು ದೇಹಕ್ಕೆ ಬೇಕಾಗಿರುವಂತಹ ಅತ್ಯವಶ್ಯಕವಾದ ಆ್ಯಂಟಿಆಕ್ಸಿಡೆಂಟ್ ಕೂಡಾ ಆಗಿರುತ್ತದೆ ಮತ್ತು ವಿಟಮಿನ್ ಸಿ ಅಂಶ ರಕ್ತವನ್ನು ಶುದ್ಧೀಕರಿಸುತ್ತದೆ. ನಮ್ಮ ದೇಹದಲ್ಲಿರುವ ಪ್ರತಿಯೊಂದು ಜೀವಾಣುಗಳು ಉತ್ತಮವಾಗಿ ಕೆಲಸ ನಿರ್ವಹಿಸಲು ಈ ವಿಟಮಿನ್ ಸಿ ಅಂಶ ಅವಶ್ಯಕವಾಗಿತ್ತು. ನೀವು ಕೂಡ ಪ್ರತಿದಿನ ಸಿ ಜೀವಸತ್ವ ಇರುವ ಆಹಾರಗಳನ್ನು ಸೇವನೆ ಮಾಡುವುದನ್ನು ಮರೆಯದಿರಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಇನ್ನೂ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿ ಮತ್ತು ನಿಂಬೆ ಹಣ್ಣಿನ ಜ್ಯೂಸ್ ಕಿತ್ತಳೆ ಹಣ್ಣಿನ ಜ್ಯೂಸ್ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಅನ್ನು ಸೇವಿಸುವುದನ್ನು ಮರೆಯದಿರಿ.