Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ತಲೆಯಲ್ಲಿ ಕೂದಲು ಉದುರಿ ಬೊಕ್ಕ ತಲೆ ಆಗುತ್ತದೆಯೇ …! ಇದನ್ನ ಬಳಸಿ ಹುಲ್ಲಿನ ಹಾಗೆ ಬೆಳೆಯುತ್ತೆ ..!

ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತಿರುವ ಈ ಮನೆ ಮದ್ದು ಕೂದಲಿಗೆ ಸಂಬಂಧಿಸಿದ್ದು. ಕೂದಲನ್ನು ಹಾರೈಕೆ ಮಾಡುವುದಕ್ಕೆ ಸಾಕಷ್ಟು ವಿಧಾನಗಳಿವೆ ಅದೇ ರೀತಿ ಇಂದಿನ ಮಾಹಿತಿಯಲ್ಲಿ ನಿಮಗೆ ನಿಮ್ಮ ಕೂದಲಿಗೆ ಒಪ್ಪುವಂತಹ ಸುಲಭವಾದ ಒಂದು ಪರಿಹಾರವನ್ನು ತಿಳಿಸಿ ಕೊಡುತ್ತೇವೆ. ಈ ಪರಿಹಾರದಿಂದ ಕೂದಲು ಉದುರುವ ಸಮಸ್ಯೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಈ ಕೂದಲು ಉದುರುವ ಸಮಸ್ಯೆಗೆ ಮಾಡ ಬಹುದಾದ ಈ ಮನೆ ಮದ್ದಿಗಾಗಿ ಬೇಕಾಗಿರುವುದು, ಮೆಂತ್ಯೆ ಕಾಳು ಕರಿಬೇವಿನ ಸೊಪ್ಪು ಮತ್ತು ಶುದ್ಧವಾದ ತೆಂಗಿನ ಎಣ್ಣೆ. ಈ ಮೂರೂ ಪದಾರ್ಥಗಳು ಕೂದಲಿಗೆ ಒಳ್ಳೆಯ ಪೋಷಣೆ ಮಾಡುತ್ತದೆ.

ಸಾಕಷ್ಟು ಮಾಹಿತಿಯಲ್ಲಿ ನೀವು ಈಗಾಗಲೆ ತಿಳಿದಿದ್ದೀರಾ ಮೆಂತ್ಯೆ ಕಾಳುಗಳನ್ನು ಕುರಿತು ಮತ್ತು ಈ ಕರಿಬೇವಿನ ಸೊಪ್ಪಿನ ಮಹತ್ವದ ಬಗ್ಗೆ. ಆದ ಕಾರಣ ನಾವು ಈ ದಿನ ಮಾಹಿತಿಯಲ್ಲಿ ಈ ಮನೆ ಮದ್ದಿಗಾಗಿ ಬಳಕೆ ಮಾಡುತ್ತಿರುವುದು ಮೆಂತ್ಯೆ ಕಾಳು ಮತ್ತು ಕರಿಬೇವಿನ ಸೊಪ್ಪನ್ನು. ಈ ಎರಡು ಪದಾರ್ಥಗಳು ಕೂದಲಿಗೆ ಒಳ್ಳೆಯ ಹಾರೈಕೆಯನ್ನು ಮಾಡುವ ಕಾರಣ ನಮ್ಮ ಕೂದಲಿನ ಪೋಷಣೆ ಮಾಡವುದಕ್ಕೆ ಈ 2ಪದಾರ್ಥಗಳು ಸಾಕು. ಇದೀಗ ಈ ಮನೆ ಮದ್ದನ್ನು ಮಾಡಿಕೊಳ್ಳುವ ವಿಧಾನವು ಹೀಗಿದೆ, ನಿಮ್ಮ ಕೂದಲಿಗೆ ಬೇಕಾಗಿರುವಷ್ಟು ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ ನಂತರ ಇದಕ್ಕೆ ಹತ್ತು ಕರಿಬೇವಿನ ಸೊಪ್ಪಿನ ಎಲೆಗಳನ್ನು ಮತ್ತು ಒಂದು ಚಮಚ ಮೆಂತೆ ಕಾಳುಗಳನ್ನು ಹಾಕಿ ಎಣ್ಣೆಯನ್ನು ಕುದಿಸಬೇಕು. ಎಷ್ಟು ಪ್ರಮಾಣದಲ್ಲಿ ಕುದಿಸಬೇಕು ಅಂದರೆ ಕರಿಬೇವಿನ ಸೊಪ್ಪು ಮತ್ತು ಮೆಂತ್ಯದ ಕಾಳುಗಳ ಬಣ್ಣ ಬದಲಾಗಬೇಕು ಅಷ್ಟು ಎಣ್ಣೆಯನ್ನು ಕುದಿಸಿ.

ಈ ಎಣ್ಣೆಯನ್ನು ಮಾಡಿದ ಅರ್ಧ ಗಂಟೆಯವರೆಗೂ ಈ ಎಣ್ಣೆಯನ್ನು ಶೋಧಿಸಬೇಡಿ. ನಂತರ ಇದನ್ನು ನೀವು ಶೋಧಿಸಿಕೊಳ್ಳಿ. ಇದೀಗ ಈ ಎಣ್ಣೆಯನ್ನು ಕೂದಲಿಗೆ ಲೇಪನ ಮಾಡಬೇಕು, ಹೇಗೆ ಲೇಪನ ಮಾಡಿ ಅಂದರೆ ನಿಮ್ಮ ಬೆರಳುಗಳ ಸಹಾಯದಿಂದ ಲೇಪನ ಮಾಡಿಕೊಳ್ಳುವುದು ಬೇಡ. ಇದರ ಬದಲು ಒಂದು ಹತ್ತಿಯ ಉಂಡೆ ಸಹಾಯದಿಂದ ನೀವು ಎಣ್ಣೆಯನ್ನು ತೆಗೆದುಕೊಂಡು, ಕೂದಲಿನ ಬುಡಕ್ಕೆ ಲೇಪನ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಪ್ರತಿ ಕೂದಲಿನ ಬುಡಕ್ಕೆ ಸಮ ಪ್ರಮಾಣದಲ್ಲಿ ಎಣ್ಣೆ ಲೇಪನ ಆಗುತ್ತದೆ ನಂತರ ಎಣ್ಣೆಯನ್ನು ಹಚ್ಚಿದ ಮೇಲೆ ಕೂದಲಿಗೆ ಲೇಪನ ಮಾಡಿ. ಎಣ್ಣೆಯನ್ನು ಹಚ್ಚಿದ ಐದು ನಿಮಿಷಗಳ ಬಳಿಕ ಒಂದೆರಡು ನಿಮಿಷಗಳ ವರೆಗೂ ಕೂದಲನ್ನು ಮಸಾಜ್ ಮಾಡಿಕೊಳ್ಳಬೇಕು.

ಈ ರೀತಿ ಮಾಡುವುದರಿಂದ ತಲೆಯ ಭಾಗದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆದು ಕೂದಲು ಬೆಳೆಯುವುದಕ್ಕೆ ಸಹಕಾರಿಯಾಗಿರುತ್ತದೆ. ಇದರಲ್ಲಿ ಬಳಸಿರುವ ಕರಿಬೇವಿನ ಸೊಪ್ಪು ಮತ್ತು ಮೆಂತೆ ಕಾಳುಗಳು ಕೂದಲನ್ನು ಮತ್ತೆ ಬೆಳೆಯುವ ಹಾಗೆ ಮಾಡುತ್ತದೆ. ಇದರ ಜತೆಗೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಈ ಪರಿಹಾರ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಆರೋಗ್ಯದಿಂದಿರಿ ಧನ್ಯವಾದ.